ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ನಂಬರ್ 1 ಧಾರಾವಾಹಿಗಳಲ್ಲಿ ಒಂದು ಪುಟ್ಟಗೌರಿ ಮದುವೆ. ಕೆ.ಎಸ್.ರಾಮ್ ಜಿ ಈ ಧಾರಾವಾಹಿಯ ನಿರ್ದೇಶಕರಾಗಿದ್ದರು. 2012 ರಲ್ಲಿ ಆರಂಭವಾದ ಪುಟ್ಟಗೌರಿ ಮದುವೆ ಧಾರಾವಾಹಿ, ಈಗ ಮಂಗಳಗೌರಿ ಮದುವೆ ಹೆಸರಿನಲ್ಲಿ ಬೇರೆ ಕಲಾವಿದರೊಂದಿಗೆ ಮುಂದುವರೆಯುತ್ತಿದೆ. ಮೂಲತಃ ಇದು ಕಲರ್ಸ್ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಾಲಿಕಾ ವಧು ಧಾರಾವಾಹಿಯ ಕನ್ನಡ ರಿಮೇಕ್ ಆಗಿತ್ತು. ಬಾ-ಲ್ಯವಿವಾಹ ಆಗುವ ಗೌರಿ ಎನ್ನುವ ಹುಡುಗಿಯ ಬದುಕಿನಲ್ಲಿ ಏನೆಲ್ಲಾ ನಡೆಯಲಿದೆ ಎಂಬುದೇ ಈ ಧಾರಾವಾಹಿಯ ಕಥೆ. ಇಂದು ಕಿರುತೆರೆಯ ಟಾಪ್ ಸ್ಟಾರ್ ಗಳಾಗಿರುವ ಗಟ್ಟಿಮೇಳ ಧಾರಾವಹಿ ಖ್ಯಾತಿಯ ವೇದಾಂತ್ ಮತ್ತು ಕನ್ನಡತಿ ಧಾರಾವಾಹಿ ಖ್ಯಾತಿಯ ಭುವಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ. ಈ ಧಾರಾವಾಹಿಯಲ್ಲಿ ಗೌರಿ ಚಿಕ್ಕವಳಾಗಿದ್ದಾಗ, ಪುಟ್ಟಗೌರಿಯ ಪಾತ್ರ ನಿರ್ವಹಿಸಿದ್ದ ಮುದ್ದು ಪುಟ್ಟ ಹುಡುಗಿ ನಿಮಗೆ ನೆನಪಿದ್ದಾಳಾ? ಆ ಹುಡುಗಿಯ ಹೆಸರೇನು? ಈಗ ಆಕೆ ಹೇಗಿದ್ದಾಳೆ? ಏನು ಮಾಡುತ್ತಿದ್ದಾಳೆ ಗೊತ್ತಾ? ತಿಳಿಯಲು ಮುಂದೆ ಓದಿ..

ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಪುಟ್ಟಗೌರಿಯ ಬಾಲ್ಯದ ಪಾತ್ರ ನಿರ್ವಹಿಸಿದ್ದ ಬಾಲ ಕಲಾವಿದೆಯ ಹೆಸರು ಸಾನ್ಯಾ ಅಯ್ಯರ್. ಇವರು ಹುಟ್ಟಿದ್ದು 2000 ಇಸವಿಯ ಸೆಪ್ಟೆಂಬರ್ 21 ರಂದು, ಈಗ ಇವರಿಗೆ 20 ವರ್ಷ ವಯಸ್ಸು. ಸಾನ್ಯಾ ಅಯ್ಯರ್ ಅವರ ತಂದೆ ಸುದೇಶ್, ಇವರು ಕಿರುಯೆರೆಯಲ್ಲಿ ಡೈರೆಕ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ತಾಯಿ ದೀಪಾ ಅಯ್ಯರ್ ಕೂಡ ಕಿರುತೆರೆ ನಟಿ. ಇವರ ಚಿಕ್ಕಮ್ಮ ರೂಪ ಆಯ್ಯರ್ ಮತ್ತು ಶಿಲ್ಪಾ ಅಯ್ಯರ್ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಬಹಳ ಹೆಸರು ಮಾಡಿರುವವರು. ಬಾಲಕಲಾವಿದೆಯಾಗಿ ಹಲವಾರು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ ಸಾನ್ಯಾ ಅಯ್ಯರ್. ಇವರು ಶಾಲಾ ಶಿಕ್ಷಣ ಮುಗಿಸಿದ್ದು ಬೆಂಗಳೂರಿನ ಪದ್ಮನಾಭನಗರದ ಕಾರ್ಮೆಲ್ ಸ್ಕೂಲ್ ನಲ್ಲಿ.

2010 ರಲ್ಲಿ ದೀಪಾ ಅಯ್ಯರ್ ಅವರು ನಿರ್ದೇಶಿಸಿದ ಮುಖಪುಟ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದರು ಸಾನ್ಯಾ, ಈ ಸಿನಿಮಾ ಅವಾರ್ಡ್ ಗಳನ್ನು ಗೆದ್ದಿತ್ತು. ನಂತರ 2012 ರಲ್ಲಿ 7ನೇ ತರಗತಿ ಓದುವಾಗ ಪುತ್ಯಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿ ಬಹಳ ಜನಪ್ರಿಯತೆ ಪಡೆದರು ಸಾನ್ಯಾ ಆಯ್ಯರ್. ಪುಟ್ಟಗೌರಿ ಮದುವೆ ನಂತರ ಇವರು ಹೆಚ್ಚಾಗಿ ಸಿನಿಮಾ ಅಥವಾ ಧಾರಾವಾಹಿಯಲ್ಲಿ ಕಾಣಿಸಿಕೊಂಡಿಲ್ಲ. ಪ್ರಸ್ತುತ ಸಾನ್ಯಾ ಅಯ್ಯರ್ ಜರ್ನಲಿಸಂ ವಿಷಯದಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು ಸಾನ್ಯಾ ಅಯ್ಯರ್. ಜೊತೆಗೆ ಸೂಪರ್ ಮಿನಿಟ್ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಸಾನ್ಯಾ ಅಯ್ಯರ್ ತಮ್ಮ ಹೊಸ ಹೊಸ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ. ಈಗ ಇವರನ್ನು ನೋಡಿದರೆ ಯಾವ ಗ್ಲಾಮರೆಸ್ ಹೀರೋಯಿನ್ ಗಿಂತಲೂ ಇವರು ಕಮ್ಮಿ ಇಲ್ಲ ಎನ್ನಿಸುತ್ತದೆ. ಪುಟ್ಟಗೌರಿ ಧಾರಾವಾಹಿಯ ಪುಟ್ಟ ಹುಡುಗಿ ಈಗ ಬೆಳೆದು ದೊಡ್ಡವಳಾಗಿದ್ದಾಗಿ ಅಂದದ ಹುಡುಗಿಯಾಗಿದ್ದಾಳೆ. ಸಾನ್ಯಾ ಅಯ್ಯರ್ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈ-ರಲ್ ಆಗುತ್ತವೆ. ಇತ್ತೀಚೆಗೆ ದೀಪಾ ಅಯ್ಯರ್ ಪ್ರೊಡಕ್ಷನ್ಸ್ ಎಂದು ಇವರ ತಾಯಿ ಹೆಸರಿನಲ್ಲಿ ಹೊಸದಾದ ಪ್ರೊಡಕ್ಷನ್ ಕಂಪನಿಯೊಂದನ್ನು ಆರಂಭಿಸಲಾಗಿದೆ.

ಈ ಕಂಪನಿ ಮೂಲಕ ಆದ್ಯಂತರ ಎನ್ನುವ ಕಿರುಚಿತ್ರವನ್ನು ನಿರ್ಮಾಣ ಮಾಡಿದ್ದು, ಸಾನ್ಯಾ ಕೂಡ ಇದರಲ್ಲಿ ನಟಿಸಿದ್ದಾರೆ. ಆದಷ್ಟು ಬೇಗ ಬೆಳ್ಳಿತೆರೆಗೆ ಎಂಟ್ರಿ ಕೊಡಲಿದ್ದಾರೆ ಸಾನ್ಯಾ. ಇವರ ಲೈಫ್ ನ ಅಪ್ಡೇಟ್ ಗಳ ಕುರಿತು ಸಾನ್ಯಾ ಅಯ್ಯರ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೋಡಬಹುದು. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ ಬೇರೆ ಎಲ್ಲಾ ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ನಂಬರ್ 1 ಧಾರಾವಾಹಿಗಳಲ್ಲಿ ಒಂದು ಪುಟ್ಟಗೌರಿ ಮದುವೆ. ಕೆ.ಎಸ್.ರಾಮ್ ಜಿ ಈ ಧಾರಾವಾಹಿಯ ನಿರ್ದೇಶಕರಾಗಿದ್ದರು. 2012 ರಲ್ಲಿ ಆರಂಭವಾದ ಪುಟ್ಟಗೌರಿ ಮದುವೆ ಧಾರಾವಾಹಿ, ಈಗ ಮಂಗಳಗೌರಿ ಮದುವೆ ಹೆಸರಿನಲ್ಲಿ ಬೇರೆ ಕಲಾವಿದರೊಂದಿಗೆ ಮುಂದುವರೆಯುತ್ತಿದೆ. ಮೂಲತಃ ಇದು ಕಲರ್ಸ್ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಾಲಿಕಾ ವಧು ಧಾರಾವಾಹಿಯ ಕನ್ನಡ ರಿಮೇಕ್ ಆಗಿತ್ತು. ಬಾ-ಲ್ಯವಿವಾಹ ಆಗುವ ಗೌರಿ ಎನ್ನುವ ಹುಡುಗಿಯ ಬದುಕಿನಲ್ಲಿ ಏನೆಲ್ಲಾ ನಡೆಯಲಿದೆ ಎಂಬುದೇ ಈ ಧಾರಾವಾಹಿಯ ಕಥೆ. ಇಂದು ಕಿರುತೆರೆಯ ಟಾಪ್ ಸ್ಟಾರ್ ಗಳಾಗಿರುವ ಗಟ್ಟಿಮೇಳ ಧಾರಾವಹಿ ಖ್ಯಾತಿಯ ವೇದಾಂತ್ ಮತ್ತು ಕನ್ನಡತಿ ಧಾರಾವಾಹಿ ಖ್ಯಾತಿಯ ಭುವಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •