ಕುಡಿತ ಎನ್ನುವುದು ಬಹಳ ಕೆಟ್ಟ ಚಾಳಿ, ಹೆಣ್ಣು ಮಕ್ಕಳು ದೇವರನ್ನು ತಮಗೆ ಕು ಡು ಕ ಗಂಡ ಮಾತ್ರ ಬೇಡ ಎಂದು ಬೇಡಿಕೊಳ್ಳುವುದು ಕೂಡಾ ವಾಸ್ತವ. ಕುಡಿತದಿಂದ ಅದೆಷ್ಟೋ ಜನರ‌ ಜೀವನ ಕೂಡಾ ಬೀದಿಗೆ ಬಂದಿದೆ ಎಂದರೆ ಅದು ಸುಳ್ಳಲ್ಲ. ಕುಡಿದ ಮೇಲೆ ಮನುಷ್ಯ ತನ್ನ ಮೇಲೆ ತಾನು ಹತೋಟಿಯನ್ನು ಕಳೆದುಕೊಂಡು ಬಿಡುತ್ತಾನೆ. ತಾನು ಏನು ಮಾಡುತ್ತಿರುವೆ ಎನ್ನುವ ಪರಿಜ್ಞಾನ ಕೂಡಾ ಇರುವುದಿಲ್ಲ. ವಿಶೇಷ ಎಂದರೆ ಕೆಲವೊಮ್ಮೆ ಕುಡಿದ ವ್ಯಕ್ತಿಯು ತನ್ನಲ್ಲಿ ಯಾವುದೋ ವಿಶೇಷವಾದ ಶಕ್ತಿ ಬಂದಿದೆಯೇನೋ ಎನ್ನುವಂತೆ ವರ್ತಿಸುವುದು ಕೂಡಾ ಗಮನಿಸಿರಬಹುದು. ಅವರನ್ನು ನಿಯಂತ್ರಣ ಮಾಡುವುದು ಕೂಡಾ ಕಷ್ಟವಾದಂತೆ ಕಂಡು ಬರುತ್ತದೆ. ಕುಡಿತದ ಅಮಲಿನಲ್ಲಿ ತೇಲುವ ವ್ಯಕ್ತಿಗೆ ತನ್ನ ಮೇಲೆ ತನಗೇ ನಿಯಂತ್ರಣ ಇರುವುದಿಲ್ಲ. ಕಂಡ ಕಂಡ ಕಡೆ ಹೋಗಿ, ಬಾಯಿಗೆ ಬಂದಿದ್ದೆಲ್ಲಾ ಮಾತನಾಡುವ ಮಂದಿಗೆ ಕಡಿಮೆಯೇನಿಲ್ಲ ಎನ್ನಬಹುದು. ಮಾರನೆಯ ದಿನ ಅವರನ್ನು ಅವರ ಮತ್ತು ಇಳಿದ ಮೇಲೆ ಅವರು ಮಾಡಿದ ಕೆಲಸಗಳ ಬಗ್ಗೆ ಹೇಳಿದರೂ ಅವರು ನಂಬುವುದಿಲ್ಲ.

ಕೆಲವೊಮ್ಮೆ ಕುಡಿದ ಮತ್ತಿನಲ್ಲಿ ಕೆಲವರು ಮಾಡುವ ಕೆಲಸಗಳು ಅಥವಾ ಅವರ ವರ್ತನೆಯು ಊಹೆಗೂ ಮೀರಿದ್ದಾಗಿರುತ್ತದೆ. ಆದರೆ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ವೀಡಿಯೋ ಭರ್ಜರಿ ವೈರಲ್ ಆಗುತ್ತಿದ್ದು ಇದರಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬನು ಮಾಡಿದ ಕೆಲಸ ನೋಡಿ ಒಂದು ಕ್ಷಣ ಪ್ರತಿಯೊಬ್ಬರೂ ಕೂಡಾ ದಿಗ್ಭ್ರಮೆಪಡುವಂತಾಗಿದೆ. ಆದರೆ ಅನಂತರ ಈ ವೀಡಿಯೋ ದಲ್ಲಿನ ಘಟನೆ ನೋಡಿದಾಗ ನಗುವುದು ಖಂಡಿತವಾದರೂ ಒಂದು ವೇಳೆ ಆಗಬಾರದ್ದು ಆಗಿದ್ದರೆ ಅಥವಾ ನಡೆದು ಹೋಗಿದ್ದರೆ ನಗುವಿನ ಬದಲಾಗಿ ನಮ್ಮ ಮುಖದ ಮೇಲೊಂದು ಭ ಯ ಹಾಗೂ ಆ ತಂ ಕದ ಭಾವನೆ ಖಂಡಿತ ಮೂಡುತ್ತಿತ್ತು ಎಂದೇ ಹೇಳಬಹುದು.

ವೈರಲ್ ವೀಡಿಯೋ ಒಂದು ಕ್ಷಣ ನಮಗೆ ಭ ಯವನ್ನು ಹುಟ್ಟಿಸುವುದು ಖಚಿತ‌. ಇಷ್ಟಕ್ಕೂ ಕುಡಿತದ ಅಮಲಿನಲ್ಲಿ ವ್ಯಕ್ತಿ ಮಾಡಿದ್ದಾದರೂ ಏನು ಎಂದು ನೋಡುವುದಾದರೆ ಕಾಡಿನ ಒಂದು ನಿರ್ಜನವಾದ ಭಾಗದಲ್ಲಿ ಮೂರು ಸಿಂಹಗಳು ಯಾವುದೋ ಪ್ರಾಣಿಯನ್ನು ಬೇ ಟೆಯಾಡಿ ಅದನ್ನು ತಿನ್ನುತ್ತಿರುವುದನ್ನು ನಾವು ಗಮನಿಸಬಹುದು. ಆದರೆ ಅವು ತಿನ್ನುವ ಕಾರ್ಯದಲ್ಲಿ ತೊಡಗಿರುವಾಗಲೇ ಆ ಸ್ಥಳಕ್ಕೆ ಚೆನ್ನಾಗಿ ಕುಡಿದು ಅಮಲೇರಿಸಿಕೊಂಡ ವ್ಯಕ್ತಿಯೊಬ್ಬನು ಬಂದು, ಮಾಂ ಸ ತಿನ್ನುವುದರಲ್ಲಿ ತೊಡಗಿರುವ ಸಿಂಹಗಳನ್ನು ಬೀದಿ ನಾಯಿಗಳನ್ನು ಕರೆಯುವಂತೆ ಸೀಟಿ ಹೊಡೆದು ಕರೆದಿದ್ದಾನೆ.

ಸಿಂಹಗಳಿಗೆ ಆತನು ತೊಂದರೆ ಕೊಡುತ್ತಿರುವುದು ಹಿಡಿಸಿಲ್ಲ. ಅದಕ್ಕೆ ಒಂದು ಸಿಂಹ ಮೇಲೆದ್ದು ತಮ್ಮ ಕೆಲಸಕ್ಕೆ ಅಡ್ಡಿಯುಂಟು ಮಾಡುತ್ತಿದ್ದ ಆ ಕುಡುಕನನ್ನು ಅಲ್ಲಿಂದ ಓಡಿಸಲು ಎದ್ದು ಘರ್ಜನೆ ಮಾಡುತ್ತಾ ಆತನ ಮೇಲೆ ಆ ಕ್ರ ಮಣ ಮಾಡುವ ಹಾಗೆ ಬಂದಿದೆ‌. ಆದರೆ ಅಮಲಿನಲ್ಲಿದ್ದ ವ್ಯಕ್ತಿ ಭ ಯ ಪಡದೇ ತಾನು ಅರಚುತ್ತಾ ಸಿಂಹದ ಕಡೆಗೆ ಅಡಿಯಿಟ್ಟಿದ್ದಾನೆ‌. ಸಿಂಹ ಕೂಡಾ ಒಂದು ಕ್ಷಣ ಶಾ ಕ್ ಆಗಿದೆ‌. ಅದು ಆತನ ಮೇಲೆ ಆ ಕ್ರ ಮಣ ಮಾಡುವ ಬದಲು ಆತನ ಅರಚಾಟ , ಕೂಗಾಟ, ಬೈಗುಳ ಕೇಳಲಾಗದೆ ಹೋಗುತ್ತಿದೆಯೇನೋ ಎನ್ನುವಂತೆ ಅಲ್ಲಿಂದ ಕಾಲ್ಕಿತ್ತಿದೆ‌. ಅದು ಹೋಗಿದ್ದು ನೋಡಿ ಉಳಿದೆರಡು ಸಿಂಹಗಳು ಕೂಡಾ ಜಾಗ ಖಾಲಿ ಮಾಡಿವೆ.

ಹೀಗೆ ಕುಡಿತದ ಅಮಲಿನಲ್ಲಿ ಸಿಂಹಗಳನ್ನೇ ಓಡಿಸಿದ ವ್ಯಕ್ತಿಯ ಈ ವೀಡಿಯೋವನ್ನು ಈಗಾಗಲೇ 97 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದರೆ, ಒಂದು ಲಕ್ಷಕ್ಕಿಂತ ಅಧಿಕ ಮಂದಿ ಮೆಚ್ಚುಗೆಗಳನ್ನು ಸೂಚಿಸಿದ್ದು, ಮೂರು ಸಾವಿರಕ್ಕಿಂತ ಅಧಿಮ ಮಂದಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಕಾಮೆಂಟ್ ಗಳಲ್ಲಿ ಕೂಡಾ ಚಿತ್ರ ವಿಚಿತ್ರವಾದ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು ಸಿಂಹಗಳು ಕೂಡಾ ಮಾರಾಟವಾಗಿವೆ, ಇದರ ಮೇಲೆ ಸಿಬಿಐ ತನಿಖೆ ಆಗಬೇಕು ಎಂದಿದ್ದಾರೆ. ಇನ್ನೊಬ್ಬರು ಇದು ನಮ್ಮ ದೇಶದ ಕುಡುಕರ ತಾಕತ್ತು ಎಂದಿದ್ದಾರೆ. ಇನ್ನೂ ಕೆಲವರು ಸಿಂಹ ಕ್ಕೆ ಹೊಟ್ಟೆ ತುಂಬಿದ್ದರಿಂದ ಸುಮ್ಮನಾಗಿದೆ ಎಂದಿದ್ದಾರೆ. ಒಟ್ಟಾರೆ ಈ ವೀಡಿಯೋ ನೋಡುಗರು ಸಿಕ್ಕಾಪಟ್ಟೆ ನಗುವಂತೆ ಮಾಡಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •