ಕೀರ್ತಿ ವಿಷ್ಣುವರ್ಧನ್.. ಬಹುಶಃ ಅದೆಷ್ಟೋ ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಇದ್ದರೂ ಸಹ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರಲಿಲ್ಲ.. ಸಾಹಸಸಿಂಹನ ಬಹಳಷ್ಟು ಸಿನಿಮಾಗಳಿಗೆ ಕೀರ್ತೀ ವಿಷ್ಣುವರ್ಧನ್ ಅವರು ಜೊತೆಯಾಗಿ ನಿಂತಿದ್ದರು ಎಂಬ ವಿಚಾರವೇ ಬಹುತೇಕರಿಗೆ ತಿಳಿದಿರಲಿಲ್ಲ.. ಆದರೀಗ ಅವರ ಸಾಧನೆಯನ್ನು ಗುರುತಿಸಿ ರಾಷ್ಟ್ರ ಮಟ್ಟದ ಪ್ರಶಸ್ತಿ ಲಭಿಸಿದೆ..ಹೌದು, ಅತ್ತ ಕನ್ನಡ ಕಿರುತೆರೆಯಲ್ಲಿ ಅನಿರುದ್ಧ್ ಅವರು ಸೆನ್ಸೇಷನಲ್ ಹೀರೋ ಆದರೆ.. ಇತ್ತ ಅನಿರುದ್ಧ್ ಅವರ ಮಡದಿ ಕೀರ್ತಿ ವಿಷ್ಣುವರ್ಧನ್ ಅವರು ತಮ್ಮದೇ ಆದ ಹಾದಿಯಲ್ಲಿ ಸದ್ದಿಲ್ಲದೇ ಸಾಧನೆ ಮಾಡುತಲಿದ್ದಾರೆ..

Lion

ಹೌದು ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರನ್ನು ನೆನಪಿಸಿಕೊಂಡ ತಕ್ಷಣ ಅವರ ವಿಭಿನ್ನವಾದ ಡ್ರೆಸ್ ಕೂಡ ನೆನಪಾಗುತ್ತದೆ.. ಅವರ ಸ್ಟೈಲಿಷ್ ವಸ್ತ್ರಗಳನ್ನು ನೋಡಿ ವಿಷ್ಣುಗೆ ವಿಷ್ಣುವೇ ಸಾಟಿ ಎನಿಸಿದ್ದೂ ಉಂಟು.. ಆದರೆ ವಿಷ್ಣುವರ್ಧನ್ ಅವರ ಆ ರೀತಿಯ ವಿಭಿನ್ನ ವಸ್ತ್ರಾಲಂಕಾರದ ಹಿಂದೆ ಇದ್ದ ಕಾಣದ ಕೈ ಬೇರೆ ಯಾರದ್ದೂ ಅಲ್ಲ ಅದು ಕೀರ್ತಿ ವಿಷ್ಣುವರ್ಧನ್ ಅವರದ್ದೇ.. ಹೌದು ಅಪ್ಪನ 75 ಕ್ಕೂ ಹೆಚ್ಚು ಸಿನಿಮಾಗಳಿಗೆ ವಸ್ತ್ರಾಲಂಕಾರ ಮಾಡಿ ಆ ಸಮಯದಲ್ಲಿ ವಿಷ್ಣುವರ್ಧನ್ ಅವರ ವಸ್ತ್ರಗಳ ಶೈಲಿ ಟ್ರೆಂಡ್ ಆಗುವಂತೆ ಮಾಡಿದ್ದ ಕೀರ್ತಿ ಅವರಿಗೆ ಅವರ ಸಾಧನೆ ಗುರುತಿಸಿ ರಾಷ್ಟ್ರೀಯ ಪತ್ರಿಕಾ ಸಮಿತಿಯ ವತಿಯಿಂದ ರಾಷ್ಟ್ರೀಯ ಮಹಿಳಾ ಸಾಧಕಿ ಪ್ರಶಸ್ತಿ ಲಭಿಸಿದೆ..

Lion

ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಮೋಜುಗಾರ ಸೊಗಸುಗಾರ ಸಿನಿಮಾ ಮೂಲಕ ತಮ್ಮ ವೃತ್ತಿ ಆರಂಭಿಸಿದ ಕೀರ್ತಿ ವಿಷ್ಣುವರ್ಧನ್ ಅವರು ಹಿಂತಿರುಗಿ ನೋಡಿದ್ದೇ ಇಲ್ಲ.. ಸೂರಪ್ಪ, ಯಜಮಾನ, ಕೋಟಿಗೊಬ್ಬ, ಆಪ್ತಮಿತ್ರ ಹೀಗೆ ವಿಷ್ಣುವರ್ಧನ್ ಅವರ ಟ್ರೆಂಡ್ ಸೆಟರ್ ಲುಕ್ ನ ಹಿಂದೆ ಇದ್ದ ಕೀರ್ತಿ ವಿಷ್ಣುವರ್ಧನ್ ಅವರು ಸದ್ಯ ಇದೀಗ ಜೊತೆಜೊತೆಯಲಿ ಧಾರಾವಾಹಿಯಲ್ಲಿಯೂ ಅನಿರುದ್ಧ್ ಅವರಿಗೆ ವಸ್ತ್ರ ವಿನ್ಯಾಸ ಮಾಡುತ್ತಿದ್ದು ಕುಟುಂಬದ ಜೊತೆಗೆ ತಮ್ಮ ವೃತ್ತಿ ಜೀವನದಲ್ಲಿಯೂ ಬ್ಯುಸಿ ಆಗಿದ್ದಾರೆ..Lion

ಇನ್ನು ಈ ಬಗ್ಗೆ ಸಂತೋಷ ಹಂಚಿಕೊಂಡಿರುವ ಅನಿರುದ್ಧ್ ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. “ಶುಭೋದಯ.. ತಮ್ಮೆಲ್ಲರ ಜೊತೆ ಹಂಚಿಕೊಳ್ಳೋದ್ದಕ್ಕೆ ಹೆಮ್ಮೆ ಆಗ್ತಿದೆ… ನನ್ನ ಅರ್ಧಾಂಗಿಯಾಗಿರೋ ಶ್ರೀಮತಿ ಕೀರ್ತಿ ಅವರಿಗೆ ವಸ್ತ್ರಾಲಂಕಾರಕ್ಕಾಗಿ ನೆನ್ನೆ ರಾಷ್ಟ್ರೀಯ ಪತ್ರಿಕಾ ಸಮಿತಿಯವತಿಯಿಂದ “ರಾಷ್ಟ್ರೀಯ ಮಹಿಳಾ ಸಾಧಕೀಯರ ಪ್ರಶಸ್ತಿ” ದೊರಕಿದೆ… ತಮ್ಮೇಲ್ಲರ ಪ್ರೀತಿ ಆಶೀರ್ವಾದ ಶ್ರೀಮತಿ ಕೀರ್ತಿ ಅವರ ಮೇಲೆ ಸದಾ ಇರಲಿ..” ಎಂದು ಬರೆದು ಪೋಸ್ಟ್ ಮಾಡುವ ಮೂಲಕ ಮಡದಿಯ ಸಾಧನೆಯ ಬಗ್ಗೆ ಸಂತೋಷ ಹಂಚಿಕೊಂಡಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •