ಹಿಂದೂ ಸಂಪ್ರದಾಯದಲ್ಲಿ ಮದುವೆಗೆ ಒಂದು ವಿಶೇಷವಾದ ಸ್ಥಾನವಿದೆ. ಮತ್ತು ಮದುವೆಯಾದ ಹೆಣ್ಣು ಮಗಳಿಗೂ ಕೂಡ ಅಷ್ಟೇ ಒಂದು ಮರ್ಯಾದೆ, ಗೌರವ ನಮ್ಮ ಸಮಾಜದಲ್ಲಿ ಸಿಗುತ್ತದೆ. ಮದುವೆಯಾದಂತಹ ಹೆಣ್ಣು ತನ್ನ ಕೊರಳಿಗೆ ಹಾಕಿಕೊಳ್ಳುವಂತಹ ಮಂಗಳ ಸೂತ್ರಕ್ಕೆ ಕೂಡ ಅಷ್ಟೇ ಬೆಲೆ ಇದೆ. ಮತ್ತು ಇದನ್ನು ಅತ್ಯಂತ ಪರಿಶುದ್ಧವಾದದ್ದು ಅಂತ ಕೂಡ ಕರೆಯಲಾಗುತ್ತದೆ.

ಹಾಗಾದರೆ ಮಂಗಳ ಸೂತ್ರದಲ್ಲಿ ಇರುವಂತಹ ಕರಿಮಣಿ, ಹವಳ, ಮುತ್ತು ಈ ಎಲ್ಲದರ ವಿಶೇಷತೆಗಳನ್ನು ತಿಳಿದುಕೊಳ್ಳುವುದರ ಜೊತೆಗೆ ತಾಳಿಯಲ್ಲಿ ಇರುವಂತಹ ಈ ರತ್ನಗಳು ಗಂಡನ ಆಯಸ್ಸನ್ನು ಹೆಚ್ಚು ಮಾಡುವುದರಲ್ಲಿ ಹೇಗೆ ಪಾತ್ರವನ್ನು ವಹಿಸುತ್ತದೆ ಅನ್ನೋದನ್ನು ಕೂಡ ತಿಳಿಯೋಣ. ಮಂಗಲ ಸೂತ್ರವನ್ನು ತಾಳಿ, ಕಂಠಿ ಅಂತೆಲ್ಲಾ ಕರೆಯುತ್ತಾರೆ. ಮತ್ತು ಮಂಗಳ ಸೂತ್ರದಲ್ಲಿ ಇರುವಂತಹ ಕರಿಮಣಿಯ ಮಹತ್ವ ಏನು ಅನ್ನೋದಾದರೆ ಈ ಒಂದು ಕರಿಮಣಿ ಮದುವೆಯಂತಹ ಹೆಣ್ಣು ಹಾಕಿಕೊಳ್ಳುವುದರಿಂದ ಆಕೆಯ ಮೇಲೆ ಪರಪುರುಷರ ಕೆಟ್ಟ ದೃಷ್ಟಿ ಬೀಳದ ಹಾಗೆ ಇದು ಕಾಪಾಡುತ್ತದೆ. ಮತ್ತು ಈ ಒಂದು ಕರಿಮಣಿಯ ತಾಳಿ ಎದೆಯ ಭಾಗಕ್ಕೆ ಹತ್ತಿರವಾಗಿರುವುದರಿಂದ ಇದು ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿ ಇಡುವುದರ ಜೊತೆಗೆ ಎದೆ ಹಾಲನ್ನು ಕೆಡದೆ ಇರುವ ಹಾಗೆ ಕರಿಮಣಿ ಕಾಪಾಡುತ್ತದೆ.

ಮಂಗಳಸೂತ್ರದಲ್ಲಿ ಕರಿಮಣಿಯನ್ನು ಹೊರತುಪಡಿಸಿ ಹವಳ ಮತ್ತು ಮುತ್ತು ಅನ್ನು ಕೂಡ ಪೊಣಿಸಿರುತ್ತಾರೆ. ಈ ರೀತಿ ಹವಳ, ಕುಜ ಗ್ರಹವನ್ನು ಸೂಚಿಸುತ್ತದೆ ಮತ್ತು ಮದುವೆಯಾದ ಹೆಣ್ಣುಮಕ್ಕಳಿಗೆ ಅತ್ಯಗತ್ಯವಾಗಿರುವ ಕ್ರಿಯಾಶೀಲ ತತ್ತ್ವವನ್ನು ಮತ್ತು ದೇಹದಲ್ಲಿ ಶಕ್ತಿಯನ್ನು ಇದು ವೃದ್ಧಿಸೋದಕ್ಕೆ ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿಯೇ ಮದುವೆಯಾಗುವ ಸಂದರ್ಭದಲ್ಲಿ ಹುಡುಗ ಮತ್ತು ಹುಡುಗಿಗೆ ಕುಜದೋಷವು ಕಾಡಬಾರದು ಅನ್ನೊ ಕಾರಣಕ್ಕಾಗಿ ಇದರ ಬಗ್ಗೆ ಹೆಚ್ಚಾಗಿ ಗಮನವನ್ನು ಹರಿಸುತ್ತಾರೆ.

ಮತ್ತು ಕುಜದೋಷದಿಂದ ಗಂಡ ಮತ್ತು ಹೆಂಡತಿಯ ನಡುವೆ ವಿರಸ ಉಂಟಾಗಬಾರದು ಅನ್ನೋ ಕಾರಣಕ್ಕಾಗಿ ಈ ಒಂದು ಕುಜದೋಷದ ನಿವಾರಣೆಗಾಗಿಯೇ ಮಂಗಳಸೂತ್ರದಲ್ಲಿ ಮಂಗಳನ ರತ್ನವಾಗಿರುವಂತಹ ಹವಳವನ್ನು ಹಾಕಲಾಗಿರುತ್ತದೆ. ಮಂಗಳಸೂತ್ರದಲ್ಲಿ ಇರುವಂತಹ ಮುತ್ತು ಚಂದ್ರನನ್ನು ಹೋಲುತ್ತದೆ ಮತ್ತು ಚಂದ್ರನು ಐಷಾರಾಮಿ ರಸಿಕತೆಯನ್ನು ಸೂಚಿಸುತ್ತಾನೆ ಮತ್ತು ಚಂದ್ರನ ಸುತ್ತ ಇಪ್ಪತ್ತ್ ಏಳು ನಕ್ಷತ್ರಗಳು ಇರುತ್ತದೆ.

ಈ ಇಪ್ಪತ್ತೇಳು ಅನ್ನೋ ಸಂಖ್ಯೆ ಹೆಣ್ಣು ತನ್ನ ಜೀವನದಲ್ಲಿ ಬರುವಂತಹ ಇಪ್ಪತ್ತೆಂಟು ದಿನದ ಋತುಚಕ್ರವನ್ನು ಸೂಚಿಸುತ್ತದೆ. ಈ ರೀತಿ ಹೆಣ್ಣು ತನ್ನ ಮಂಗಳಸೂತ್ರದಲ್ಲಿ ಮುತ್ತನ್ನು ಕಾಣಿಸಿಕೊಳ್ಳುವುದರಿಂದ ಆಕೆಯ ಋತುಚಕ್ರ ಯಾವುದೇ ಸಮಸ್ಯೆ ಇಲ್ಲದೆ ಇರುವ ಹಾಗೆ ಮಾಡುತ್ತದೆ ಮತ್ತು ರಕ್ತಸ್ರಾವ ಗರ್ಭಸ್ರಾವ ಅನ್ನೋ ಒಂದು ಸಮಸ್ಯೆಯಿಂದ ಹೆಣ್ಣನ್ನು ದೂರವಿಡುತ್ತದೆ ಈ ಒಂದು ಮುತ್ತು. ಈ ಎಲ್ಲ ಕಾರಣಗಳಿಂದಾಗಿಯೇ ಮಂಗಳಸೂತ್ರದಲ್ಲಿ ಕರಿಮಣಿ ಅವಳ ಮುತ್ತನ್ನು ಕಾಣಿಸುತ್ತಾರೆ ಮತ್ತು ಇದು ಗಂಡನ ಶ್ರೇಯಸ್ಸಿಗೂ ಕೂಡ ಕಾರಣವಾಗಿರುತ್ತದೆ. ಆದ ಕಾರಣದಿಂದಾಗಿಯೇ ಹಿಂದಿನ ಕಾಲದಿಂದಲು ಮಂಗಳ ಸೂತ್ರಕ್ಕೆ ಅದರದೇ ಆದಂತಹ ಒಂದು ವೈಶಿಷ್ಟತೆ ಇದೆ.

“ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •