ಕಾಲು ಜಾರಿ ಬಿದ್ದು

ಅತ್ತ ಪ್ರಿಯಕರ ಕಾಲು ಜಾರಿ ಬಿದ್ದು ಜೀವ ಕಳೆದುಕೊಳ್ಳುತ್ತಿದ್ದಂತೆ ಈಕೆ ಮಾಡಿರುವ ಕೆಲಸ ನೋಡಿ,ಮಗಳನ್ನು ನೋಡಿ ಬೆಚ್ಚಿಬಿದ್ದ ಅಪ್ಪ ಅಮ್ಮ..

Home

ವಯಸ್ಸು ಅನ್ನೋದು ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೈ ಸ್ಕೂಲ್ ಕಾಲಿಡುತ್ತಿದ್ದಂತೆ ಮಕ್ಕಳು ಪ್ರೀತಿ ಪ್ರೇಮ ಅಂತ ಆಕರ್ಷಿತರಾಗೋದು ನಿಜಕ್ಕೂ ಆತಂಕವನ್ನುಂಟು ಮಾಡುವ ವಿಚಾರವಾಗಿದೆ.. ಆದರೆ ಅದು ಕೇವಲ ಆಕರ್ಷಣೆ ಮಾತ್ರ ಅನ್ನೋದು ಅವರಿಗೆ ತಿಳಿಯದೆ ಸಾಕಷ್ಟು ತಪ್ಪು ಗಳು ತಪ್ಪು ನಿರ್ಧಾರಗಳು ತಪ್ಪು ಘಟನೆಗಳು ನಡೆದು ಹೋಗುತ್ತದೆ.. ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು ಹದಿನೆಂಟು ತುಂಬುವ ಮುನ್ನವೇ ಆದ ಪ್ರೀತಿ ಇದೀಗ ಒಂದು ಕುಟುಂಬವೇ ಕಣ್ಣೀರಿಡುವಂತೆ ಮಾಡಿದೆ.. ಹೌದು ಈಕೆಯ ಹೆಸರು ಶೃತಿ ವಯಸ್ಸಿನ್ನು ಕೇವಲ ಹದಿನೆಂಟು.. ಕಲಬುರುಗಿಯ ನಿವಾಸಿ.. ಕಳೆದ ವರ್ಷವಷ್ಟೇ ಪಿಯುಸಿ ಮೆಟ್ಟಿಲೇರಿದ್ದಳು..

ಆದರೆ ಅದಾಗಲೇ ವಯಸ್ಸಿನ ಆಕರ್ಷಣೆಗೆ ಬಿದ್ದು ಜೀವನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು.. ಕಳೆದ ಒಂದು ವರ್ಷದಿಂದ ಇಬ್ಬರೂ ಸಹ ಪ್ರೀತಿಸುತ್ತಿದ್ದರು.. ಮುಂದೆ ಮದುವೆ ಮಾಡಿಕೊಳ್ಳುವ ನಿರ್ಧಾರವನ್ನೂ ಸಹ ಅದಾಗಲೇ ಮಾಡಿಕೊಂಡಿದ್ದರಂತೆ.. ಆದರೆ ವಿಧಿಯ ನಿರ್ಣಯ ಬೇರೆಯೇ ಆಗಿತ್ತು.. ಹೌದು ಅವರಿಬ್ಬರು ತಮ್ಮ ಪ್ರೀತಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದರೋ ಏನೋ.. ಆದರೆ ಆ ಹುಡುಗ ಮಾತ್ರ ತನ್ನ ಪ್ರೀತಿಯನ್ನು ಅರ್ಧಕ್ಕೆ ಬಿಟ್ಟು ಬಾರದ ಲೋಕಕ್ಕೆ ಹೊರಟು ಹೋದ.. ಹೌದು ಕೆಲ ದಿನಗಳ ಹಿಂದೆ ಆ ಹುಡುಗ ಕಾಲು ಜಾರಿ ಬಿದ್ದು ಜೀವ ಕಳೆದುಕೊಂಡಿದ್ದ.. ಈ ವಿಚಾರ ತಿಳಿದಾಗಿನಿಂದ ಶೃತಿ ಬಹಳ ಮಂಕಾಗಿ ಹೋಗಿದ್ದಳು..

ಆಇತ್ತ ಶೃತಿ ಮನೆಯವರಿಗೂ ಸಹ ಈ ವಿಚಾರ ತಿಳಿಯಿತು.. ಮಗಳ ಮನಸ್ಸಿಗೆ ಇಂತಹ ಸಮಯದಲ್ಲಿ ನೋವು ಕೊಡಬಾರದೆಂದು ತಿಳುವಳಿಕೆಯಿಂದ ನಡೆದುಕೊಂಡ ಶೃತಿ ಅವರ ತಂದೆ ತಾಯಿ ಆಕೆಯನ್ನು ಸಂತೈಸಿದ್ದಾರೆ ಎನ್ನಲಾಗಿದೆ.. ಆದರೂ ಸಹ ಪ್ರಿಯಕರನ ಅಗಲಿಕೆಯ ನೋವಿನಿಂದ ಹೊರಬಾರಲೇ ಇಲ್ಲ ಶೃತಿ.. ಜೀವನದ ಬಗ್ಗೆ ಆಕೆಯ ತಂದೆ ತಾಯಿಯ ಬಗ್ಗೆ ಆಲೋಚಿಸಲೇ ಇಲ್ಲ.. ಈ ನೋವು ಮತ್ತಷ್ಟು ಜಾಸ್ತಿಯಾಗಿ ಕೆಲ ದಿನಗಳಿಂದ ಊಟವನ್ನೂ ಸಹ ಬಿಟ್ಟಿದ್ದಳಂತೆ.. ಆದರೆ ಇದನ್ನೆಲ್ಲಾ ನೋಡಿದ ಶೃತಿಯ ತಂದೆ ತಾಯಿ ಮಗಳನ್ನು ಹೀಗೆ ನೋವಿನಲ್ಲಿ ಬಿಟ್ಟರೆ ಮಗಳನ್ನು ಕಳೆದುಕೊಳ್ಳಬೇಕಾಗಬಹಿದೆಂದು ಆಕೆಗೆ ಮದುವೆ ಮಾಡಿ ಹೊಸ ಜೀವನ ಶುರು ಮಾಡಿದರೆ ಹಳೆಯದನ್ನೆಲ್ಲಾ ಮರೆಯಬಹುದೆಂದು ತೀರ್ಮಾನೊಸಿದರು..

ಸಂಬಂಧಿಕರ ಹುಡುಗನೊಬ್ಬನ ಜೊತೆ ಶೃತಿ ಮದುವೆ ಮಾಡಲು ತೀರ್ಮಾನಿಸಿದರು.. ಆದರೆ ಇದರಿಂದ ಕೋಪಗೊಂಡ ಶೃತಿ ಮನೆಯವರ ಜೊತೆ ಜಗಳ ಮಾಡಿದ್ದಾಳೆ.. ಅಷ್ಟೇ ಅಲ್ಲದೇ ಅಪ್ಪ ಅಮ್ಮ ತನಗೆ ಒಳ್ಳೆಯದನ್ನೇ ಬಯಸುತ್ತಿದ್ದಾರೆ ಎಂದು ಆಲೋಚಿಸದೇ ಅವರ ಮೇಲೆಯೇ ಕೋಪಗೊಂಡು ಮಾತು ಬಿಟ್ಟಳು.. ಅಷ್ಟಕ್ಕೆ ಸಾಲದೆಂಬಂತೆ ಕೊನೆಗೆ ದುಡುಕಿನ ನಿರ್ಧಾರ ಮಾಡಿಯೇ ಬಿಟ್ಟಳು.. ಹೌದು ಶೃತಿ ತನ್ನ ಮೇಲೆ ಜೀವವನ್ನೇ ಇಟ್ಟುಕೊಂಡಿದ್ದ ಅಪ್ಪ ಅಮ್ಮನ ಬಗ್ಗೆ ಸ್ವಲ್ಪವೂ ಆಲೋಚನೆ ಮಾಡದೇ ಜೀವ ಕಳೆದುಕೊಳ್ಳುವ ನಿರ್ಧಾರ ಮಾಡಿಬಿಟ್ಟಳು.. ಹೌದು ನಿನ್ನೆ ಸಂಜೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತನ್ನ ರೂಮಿನಲ್ಲಿಯೇ ಜೀವ ಕಳೆದುಕೊಂಡು ಬಿಟ್ಟಿದ್ದಾಳೆ.. ಇತ್ತ ಮನೆಗೆ ಬಂದು ನೋಡಿದಾಗ ಅಪ್ಪ ಅಮ್ಮ ಅಕ್ಷರಶಃ ಮಗಳು ಇದ್ದ ಸ್ಥಿತಿಯನ್ನು ನೋಡಿ ಕುಸಿದು ಬಿದ್ದಿದ್ದಾರೆ..

ಯಾವ ಮಗಳ ಭವಿಷ್ಯದ ಬಗ್ಗೆ ಸದಾ ಆಲೋಚನೆ ಮಾಡುತ್ತಿದ್ದರೋ ಯಾವ ಮಗಳ ಮೇಲೆ ತಮ್ಮ ಜೀವವನ್ನೇ ಇಟ್ಟುಕೊಂಡಿದ್ದರೋ ಅದೇ ಮಗಳು ಇಲ್ಲದ ಪ್ರಿಯಕರನಿಗಾಗಿ ಇರುವ ಅಪ್ಪ ಅಮ್ಮನ ಬಗ್ಗೆ ಆಲೋಚಿಸದೇ ದುಡುಕಿನ ನಿರ್ಧಾರ ಮಾಡಿ ಹೋಗಿಬಿಟ್ಟಿದ್ದಳು.. ಅವರಿಬ್ಬರೇನೋ ಪ್ರೀತಿ ಮಾಡಿದರು.. ಆತ ಅಕಾಲಿಕವಾಗಿ ಅಗಲಿದ.. ಈಕೆ ಆತನಿಗಾಗಿ ಹೋದಳು.. ಆದರೆ ಆಕೆಯ ತಂದೆ ತಾಯಿ ಏನು ತಪ್ಪು ಮಾಡಿದ್ದರು.. ನಿಜಕ್ಕೂ ಇತ್ತೀಚಿನ ದಿನಗಳಲ್ಲಿ‌ ಮಕ್ಕಳು ಜೀವ ಕೊಟ್ಟ ಅಪ್ಪ ಅಮ್ಮನ ಬಗ್ಗೆ ಆಲೋಚನೆ ಮಾಡುವುದಕ್ಕಿಂತ ಬೇರೆ ಆಲೋಚನೆಗಳೇ ಹೆಚ್ಚಾದಂತೆ ಕಾಣುತ್ತಿದೆ.. ನಿಜಕ್ಕೂ ಮಕ್ಕಳೇ ಅರ್ಥ ಮಾಡಿಕೊಳ್ಳಬೇಕಷ್ಟೇ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...