ದೇಶದಲ್ಲಿ ಬರೀ ಕೊರೊನ ಸಂಕಟ ಅಷ್ಟೇ ಅಲ್ಲ, ಲಾಕ್ ಡೌನ್ ಕಾರಣದಿಂದ ಅನೇಕರ ವ್ಯವಹಾರ ನಿಂತು ಬಿಟ್ಟಿದೆ. ದಿನಗೂಲಿಯ ಕೆಲಸ ಮಾಡುವವರ ಪರಿಸ್ಥಿತಿ ಹೇಳತೀರದಾಗಿದೆ. ಸಮಾಜದ ಕೆಲವು ಘಟಕದ ಜನರು ದಿನಂಪ್ರತಿ ಕೆಲಸ ಮಾಡಿದರೇನೇ ರಾತ್ರಿ ಊಟ ಸಿಗುವದು ಇಲ್ಲವಾದರೆ ಇಲ್ಲ. ಇದರಲ್ಲಿ ಯಾವುದೋ ಕಾರಣದಿಂದ ವೇ-’ಶ್ಯಾ ವ್ಯವಸಾಯಕ್ಕೆ ಇಳಿದ ಸೆ’-ಕ್ಸ್ ವರ್ಕರ್ಸ್ ಗಳ ಜೀವನವು ಸಹ ಲಾಕ್ ಡೌನ್ ನಲ್ಲಿ ತುಂಬಾನೇ ದುರಂತ ಕಥೆಯಾಗಿದೆ. ಇವರಿಗೆ ಲಾಕ್ ಡೌನ್ ಸಂದರ್ಭದಲ್ಲಿ ಗ್ರಾಹಕರಿಲ್ಲದೆ ಉಪವಾಸ ಬೀಳುವ ಪರಿಸ್ಥಿತಿ ಬಂದಿದೆ. ಕೈಯಲ್ಲಿ ಹಣವಿಲ್ಲದೆ ಜೀವನ ಕಳೆಯಬೇಕಾದರೆ ದಿನವೊಂದು ಬೆಟ್ಟದಷ್ಟಾಗುತ್ತಿದೆ.

ಸಂಬಳದ ಆಸೆಯಲ್ಲಿ ವೇ-ಶ್ಯೆಯರ ಮಕ್ಕಳು.

ಒಬ್ಬಳು (ಹೆಸರು ಬೇಡ) ತನ್ನ ವ್ಯಥೆಯನ್ನು ಈ ರೀತಿ ಹೇಳುತ್ತಾಳೆ, ‘ನಮ್ಮ ವೃತ್ತಿ ಹೇಗಿದೆ ಎಂದರೆ, ದಿನಾಲು ಗಳಿಸಿದ ನಂತರವೇ ನಮಗೆ ಊಟ ದೊರೆಯುವದು. ನಮ್ಮ ಮನೆಯಲ್ಲಿ ಯಾರಿಗೂ ಗೊತ್ತಿಲ್ಲ, ನಾನು ಈ ರೀತಿಯ ಕೆಲಸವನ್ನು ಮಾಡುವದು. ನಾನು ದಿನಾಲು ಆಫೀಸ್ ಕೆಲಸಕ್ಕೆ ಹೋಗುತ್ತೇನೆಂದು ತಿಳಿದಿದ್ದಾರೆ. ಸರಕಾರ ಲಾಕ್ ಡೌನ್ ನಲ್ಲಿ ಯಾರ ಸಂಬಳವನ್ನು ನಿಲ್ಲಿಸಬೇಡಿ, ಎಂದು ಘೋಷಣೆ ಮಾಡಿತು. ಆಗ ಮನೆಯವರೆಲ್ಲರಿಗೂ, ನಾವು ಕೆಲಸಕ್ಕೆ ಹೋಗಲಿಲ್ಲವೆಂದರೂ ಸಂಬಳ ಮಾತ್ರ ಬಂದೆ ಬರುತ್ತದೆಂದು ತಿಳಿದರು.

ನಮ್ಮ ಮಕ್ಕಳು ಸಹಿತ ತೊಂದರೆಯಲ್ಲಿದ್ದಾರೆ. ಅವರು ದಿನಾಲು ಕೇಳುತ್ತಾರೆ ಅಮ್ಮ ನಿನ್ನ ಸಂಬಳ ಯಾವಾಗ ಬರುತ್ತೆ ಅಂತ. ಅವರಿಗೆ ನಾನು ಏನಂತ ಉತ್ತರ ಕೊಡಲಿ, ನಿನ್ನ ಅಮ್ಮ ಒಬ್ಬಳು ಸೆ-’ಕ್ಸ್ ವ’-ರ್ಕರ್ ಇದ್ದಾಳೆ ಅಂತಾನಾ? ನನ್ನ ಗಂಡ ಕುಡುಕನಿದ್ದಾನೆ. ಮನೆಯ ಬೇಕು ಬೇಡಗಳು ಆತನಿಗೆ ಏನೂ ಸಂಬಂಧವೇ ಇಲ್ಲ. ಹೀಗಾದಾಗ ನಾನು ಮಕ್ಕಳಿಗೆ ತಿನ್ನಲಿಕ್ಕೆ ಏನು ಕೊಡಲಿ. ಎಷ್ಟು ಅಂತ ಭಿಕ್ಷೆ ಬೇಡಬೇಕು. ಈ ಎಲ್ಲ ಕಷ್ಟಗಳಿಂದಾಗಿ ನಾನು ಅಸಹಾಯಕಳಾಗಿ ಈ ವೃತ್ತಿಯಲ್ಲಿ ಇಳಿದಿದ್ದೇನೆ. ಆದರೆ ಕೊರೊನ ಕಾರಣದಿಂದಾಗಿ ಇಲ್ಲಿಯೂ ಕೆಲಸವಿಲ್ಲ. ಕೆಲಸವಿಲ್ಲ ಅಂದರೆ ಹಣವಿಲ್ಲ.

ತನ್ನ ಕೆಲಸದಲ್ಲಿ ಬಂದ ತೊಡಕುಗಳ ಬಗ್ಗೆ ಹೇಳುತ್ತಾ, ಜನರಲ್ಲಿ ಕೊರೊನದ ಬಗ್ಗೆ ಭೀತಿ ನಿರ್ಮಾಣವಾಗಿದೆ. ನನಗೆ ಅನ್ನಿಸುವ ಮಟ್ಟಿಗೆ ಮುಂದಿನ 6-7 ತಿಂಗಳುಗಳ ವರೆಗೆ ನಮ್ಮ ಕಡೆಗೆ ಗ್ರಾಹಕರು ಬರುವದಿಲ್ಲ. ಇದೇ ಹೆದರಿಕೆ ನಮಗೂ ಇದೆ, ನಮ್ಮ ಕಡೆಗೆ ಬರುವ ವ್ಯಕ್ತಿ ಯಾರು ಎಲ್ಲಿಂದ ಬರುತ್ತಾನೆ ಎಂಬುದು ಗೊತ್ತಾಗುವದಿಲ್ಲ. ಈ ಸಮಸ್ಯೆ ಬರೀ ಒಬ್ಬಳದಲ್ಲ, ಎಷ್ಟೋ ಸೆ’-ಕ್ಸ್ ವರ್ಕರ್ಸ್ ಮಹಿಳೆಯರ ನೋವಿದೆ. ಅದರಲ್ಲಿ ಮೇಲಿಂದ ಮೇಲೆ ಲಾಕ್ ಡೌನ್ ಮತ್ತೆ ಜಾರಿಯಲ್ಲಿ ತರುವ ಸುದ್ದಿಯಿಂದ ಇಂಥವರ ತೊಂದರೆ ಮತ್ತಷ್ಟು ಹೆಚ್ಚಿಸಿದೆ.

ಲಾಕ್ ಡೌನ್ ಹುಟ್ಟು ಹಾಕಿತು ತುತ್ತು ಅನ್ನಕ್ಕಾಗಿ ಹೋರಾಡುವಂಥ ಭೀಕರತೆ.

ಮಹಿಳಾ ಹಾಗೂ ಬಾಲಕಲ್ಯಾಣ ಸಚಿವಾಲಯದ ರಿಪೋರ್ಟ್ ಪ್ರಕಾರ ದೇಶದಲ್ಲಿ ಸುಮಾರು 30 ಲಕ್ಷ ಸೆ-’ಕ್ಸ್ ವ’ರ್ಕರ್ಸ್ಗಗಳಿದ್ದಾರೆ. ಇನ್ನು ಹ್ಯು-ಮನ್ ರೈ-ಟ್ಸ್ ವಾಚ್ ಪ್ರಕಾರ ದೇಶದಲ್ಲಿ ಸುಮಾರು 2 ಕೋಟಿ ಮಹಿಳೆಯರು ಈ ಕೆಲಸವನ್ನು ಮಾಡುತ್ತಾರಂತೆ. ಇನ್ನೊಬ್ಬಳು ಸೆ-’ಕ್ಸ್ ವ-’ರ್ಕರ್ ಹೇಳುವ ಹಾಗೆ ಲಾಕ್ ಡೌನ್ ಬೇಗ ಓಪನ್ ಆಗಲಿಲ್ಲವೆಂದರೆ ನಮ್ಮ ಪರಿಸ್ಥಿತಿ ದುಃಖ, ನೋವು ಆ ದೇವರೇ ಬಲ್ಲ. ಸರಕಾರ ಒಂದೇ ರಾತ್ರಿಯಲ್ಲಿ ಲಾಕ್ ಡೌನ್ ಮಾಡಿತು, ಹೀಗಾಗಿ ನಮಗೆ ಭವಿಷ್ಯದ ಬಗ್ಗೆ ಏನಾದರೂ ತಯಾರಿ ಮಾಡಿಕೊಳ್ಳಲು ಸಮಯವು ಸಹ ಸಿಗಲಿಲ್ಲ.

ಸಮಾಜದ ಈ ಘಟಕ ದೇಶದಲ್ಲಿ ವಾಸಿಸುತ್ತಿದ್ದರೂ ಇವರ ಸಹಾಯಕ್ಕೆ ಸಂಬಂಧಿಸಿದ ಅನೇಕ ಯೋಜನೆಗಳು ಇವರಿಗೆ ತಲುಪುವದಿಲ್ಲ. ಈ ಕೆಲಸ ಮಾಡುವ ಸಾವಿರಾರು ಮಹಿಳೆಯರು ರೇಷನ್ ಕಾರ್ಡ್ ಇಲ್ಲದ ಕಾರಣದಿಂದಾಗಿ ಆಹಾರ ಸಾಮಗ್ರಿಯಿಂದ ವಂಚಿತರಾಗಿದ್ದಾರೆ. ಇವರ ಹಣ ಗಳಿಸುವ ಮಾರ್ಗವೇ ಈ ಲಾಕ್ ಡೌನ್ ನಲ್ಲಿ ಪರಿಪೂರ್ಣವಾಗಿ ನಿಂತು ಹೋಗಿದೆ. ಈ ವೃತ್ತಿಯಲ್ಲಿ ಕೆಲಸ ಮಾಡುವ ಅನೇಕ ಮಹಿಳೆಯರು ಹೆಚ್ ಆಯ್ ವಿ ಸೋಂಕಿತರಾಗಿದ್ದಾರೆ. ಇವರ ಹತ್ತಿರ ಆಸ್ಪತ್ರೆಗೆ ಹೋಗಲು ಹಣವಿಲ್ಲ.

ಕೋಲಾರದವಳೊಬ್ಬಳ ಸಮಸ್ಯೆ ಕೇಳಿ. ಇವರಿರುವ ಸ್ಥಳದಲ್ಲಿ ಮೂರು ಸಾವಿರ ಸೆ-’ಕ್ಸ್ ವರ್ಕ-ರ್ಸ್ ಗಳಿದ್ದಾರೆ. ಇದರಲ್ಲಿ 80 ಪ್ರತಿಶತ ಸ್ಟ್ರೀ-ಟ್ ಬೇಸ್ಡ್ ಮತ್ತು 20 ಪ್ರತಿಶತ ಹೋಮ್ ಬೇಸ್ಡ್ ಇದ್ದಾರೆ. ಲಾಕ್ ಡೌನ್ ನಲ್ಲಿ ಎಲ್ಲಕ್ಕಿಂತ ಹೆಚ್ಚು ಸ್ಟ್ರೀಟ್ ಬೇಸ್ಡ್ ನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ತೊಂದರೆಯಾಗಿದೆ. ಕೆಲವೊಂದು ಸಲ ಇವರಿಗೆ ಒಂದು ಹೊತ್ತಿನ ಊಟಕ್ಕೂ ಗತಿ ಇರುವದಿಲ್ಲ. ಸರಕಾರ ಇವರ ಕಡೆಗೆ ಇನ್ನು ಗಮನ ಹರಿಸಿಲ್ಲ.

ತುಂಬಾ ಚರ್ಚೆಯಲ್ಲಿರುವ ಈ ರೆಡ್ ಲೈಟ್ ಏರಿಯಾಗಳು.

ದೇಶದಲ್ಲಿ ಬಹಳಷ್ಟು ರೆಡ್ ಲೈಟ್ ಏರಿಯಾಗಳು ತುಂಬಾ ಚರ್ಚೆಯಲ್ಲಿರುತ್ತವೆ. ಇದರಲ್ಲಿ ಏಷಿಯಾ ಖಂಡದಲ್ಲೇ ಅತೀ ದೊಡ್ಡದಾದದ್ದು ಕೋಲ್ಕತಾದ ಪ್ರಸಿದ್ಧ ‘ಸೋ-ನಾಗಾಚಿ’. ಇಲ್ಲಿ ಸರಿ ಸುಮಾರು 3 ಲಕ್ಷ ಮಹಿಳೆಯರು ಈ ಕೆಲಸಕ್ಕೆ ಹೊಂದಿಕೊಂಡಿದ್ದಾರೆ. 2 ನೇ ಸ್ಥಾನದಲ್ಲಿ ಮುಂಬಯಿಯ ಕಾಮಾಠಿಪುರಾ ಇದೆ. ಇಲ್ಲಿ 2 ಲಕ್ಷಕ್ಕೂ ಹೆಚ್ಚು ಸೆ’-ಕ್ಸ್ ವ-ರ್ಕರ್ಸ್ ಗಳಿದ್ದಾರೆ. ಇದರ ನಂತರ ದೆಹಲಿಯ ಜಿ ಬಿ ರೋಡ್, ಆಗ್ರಾದ ಕಾಶ್ಮೀರಿ ಮಾರ್ಕೆಟ್, ಗ್ವಾಲಿಯರ್ ದ ರೇಶಮ್ ಪುರಾ, ಹಾಗೂ ಪುಣೆಯ ಬುಧವಾರ ಪೇಠ ಇವು ಬಹಳೇ ಚರ್ಚೆಯಲ್ಲಿರುತ್ತವೆ.

 

ಆಲ್ ಇಂಡಿಯಾ ನೆಟ್ವರ್ಕ್ ಆಫ್ ಸೆ’-ಕ್ಸ್ ವ’ರ್ಕರ್ ಸಂಘಟನೆಗೆ ಕೆಲಸ ಮಾಡುವ ಕುಸುಮ್ ಳು ಮಹಿಳೆಯರ ಹಕ್ಕು ಮತ್ತು ಅಧಿಕಾರಕ್ಕಾಗಿ ಹೋರಾಟ ಮಾಡುತ್ತಾಳೆ. ಇವರು ಹೇಳುವ ಪ್ರಕಾರ ಹೋಮ್ ಬೇಸ್ಡ್ ವ-ರ್ಕರ್ಸ್ ಗಳಿಗೆ ಬಹಳ ತೊಂದರೆಯಾಗುತ್ತದೆ. ದೆಹಲಿಯ ಜಿ ಬಿ ರೋಡ್ ನಲ್ಲಿ ಕೆಲವು ಸೇವಾ-ಭಾವಿ ಸಂಘ ಸಂಸ್ಥೆಗಳು ಅವರಲ್ಲಿಗೆ ಹೋಗಿ ಸಹಾಯ ಹಸ್ತ ಚಾಚಿದ್ದಾರೆ. ಆದರೆ ಈ ಮಹಿಳೆಯರ ಬಗ್ಗೆ ಯಾರೂ ಗಮನ ಹರಿಸುವದಿಲ್ಲ. ಮತ್ತು ಗಮನ ಹರಿಸಲು ಇಷ್ಟವೂ ಪಡುವದಿಲ್ಲ. ಇಲ್ಲಿ ಬರೀ ಒಂದು ಕಾಲನಿಯ ವಿಚಾರ ಮಾಡಿದರೆ ಇಲ್ಲಿ 500 ಜನ ಮಹಿಳೆಯರು ಸೆ’ಕ್ಸ್ ವರ್ಕರ್ ಕೆಲಸ ಮಾಡುತ್ತಾರೆ.

ಈ ವ್ಯಾಪಾರದಲ್ಲಿಯೂ ಮೂರು ಪ್ರಕಾರಗಳಿವೆ. ಒಂದು ಬ್ರೋಥಲ್, ಎರಡನೆಯದು ಹೋಮ್ ಬೇಸ್ಡ್, ಇದರಲ್ಲಿ ಮಹಿಳೆ ತನ್ನ ಗ್ರಾಹಕನನ್ನು ಸ್ವತಃ ಆಯ್ಕೆ ಮಾಡುತ್ತಾಳೆ. ಇನ್ನು ಮೂರನೇಯದು ಸ್ಟ್ರೀಟ್ ಬೇಸ್ಡ್ ಅಥವಾ ಬ್ರೋಕರ್ ಬೇಸ್ಡ್. ಇದರಲ್ಲಿ ದಲ್ಲಾಳಿಯ ಮುಖಾಂತರ ಕೆಲಸ ಮಾಡುವದು. ಕುಸುಮ್ ಹೇಳುವ ಪ್ರಕಾರ ಇವರ ಈ ಸಂಘಟನೆ ಎಷ್ಟು ಸಾಧ್ಯ ಅಷ್ಟು ಇವರಿಗೆ ಆಹಾರ ಸಾಮಗ್ರಿ ಒದಗಿಸುವ ಪ್ರಯತ್ನ ಮಾಡುತ್ತಿದೆ. ಈ ಆಹಾರ ಎಷ್ಟು ದಿನಗಳ ವರೆಗೆ ಹೋಗುತ್ತದೆ ಗೊತ್ತಿಲ್ಲ. ಕೆಲವು ಮಹಿಳೆಯರು ಬಾಡಿಗೆಯ ಕೊಠಡಿಯಲ್ಲಿ ಇರುತ್ತಾರೆ. ಸದ್ಯಕ್ಕೆ ಅವರ ಹತ್ತಿರ ಬಾಡಿಗೆ ತುಂಬಲು ಸಹ ಹಣವಿಲ್ಲ.

ಕುಸುಮ್ ಳ ಈ ಸಂಘಟನೆ ದೇಶದ 16 ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ಸಂಘಟನೆಯ ಸಚಿವೆ ಸುಲ್ತಾನಾ ಬೇಗಂ ಹೇಳುವ ಪ್ರಕಾರ ಈ ವ್ಯವಸಾಯದಲ್ಲಿ 60-70 ಪ್ರತಿಶತ ಕುಟುಂಬದ ಸದಸ್ಯರಿಗೆ ಗೊತ್ತೇ ಇಲ್ಲವಂತೆ, ಇವರು ಯಾವ ಕೆಲಸ ಮಾಡುತ್ತಾರೆಂದು. ಪರಿವಾರದವರಿಗೆ ಇಷ್ಟು ಗೊತ್ತು, ಇವಳು ಎಲ್ಲಿ ಕೆಲಸ ಮಾಡುತ್ತಾಳೆ ಅಲ್ಲಿ ಹಣ ಸಿಕ್ಕೇ ಸಿಗುತ್ತದೆ. ಆದರೆ ಈಗ ಪರಿಸ್ಥಿತಿ ಬೇರೆ ಇದೆ. ಬರುವ ಹಣ ಬರುತ್ತಿಲ್ಲ ಹೀಗಾಗಿ ಕಷ್ಟಗಳು ಹೆಚ್ಚುತ್ತಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಿಕ್ಕಟ್ಟಿನ ಸ್ಥಿತಿ ಎದುರಾಗಲಿದೆ!

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •