ನಮ್ಮ ರಾಜ್ಯ ಸರ್ಕಾರ ದಿನದಿಂದ ದಿನಕ್ಕೆ ಹೊಸ ಹೊಸ ನಿಯಮವನ್ನ ಜಾಲಿಗೆ ತರುತ್ತಲೇ ಇದೆ ಎಂದು ಹೇಳಬಹುದು, ಸರ್ಕಾರ ಜನರ ಹಿತಾಸಕ್ತಿಯನ್ನ ಗಮನದಲ್ಲಿ ಇರಿಸಿಕೊಂಡು ಹೊಸ ಹೊಸ ನಿಯಮ ಮತ್ತು ಬದಲಾವಣೆಗಳನ್ನ ಜಾರಿಗೆ ತರುತ್ತಲೇ ಇರುತ್ತದೆ. ಇನ್ನು ರಾಜ್ಯದಲ್ಲಿ ಮೋಟಾರು ವಾಹನ ನಿಯಮಗಳಿಗೆ ಸಂಬಂಧಪಟ್ಟಂತೆ ಹಲವು ನಿಯಮ ಮತ್ತು ಮಾರ್ಗಸೂಚಿಗಳನ್ನ ಈಗಾಗಲೇ ಜಾರಿಗೆ ತಂದಿರುವುದು ನಿಮಗೆಲ್ಲ ತಿಳಿದೇ ಇದೆ. ಇನ್ನು ಮೋಟಾರು ವಾಹನ ನಿಯಮಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆಗಿಂದಾಗೆ ಬದಲಾವಣೆಗಳನ್ನ ಜಾರಿಗೆ ತರುತ್ತಲೇ ಇರುತ್ತದೆ ಎಂದು ಹೇಳಬಹುದು.

ಇನ್ನು ಈಗ ಮೋಟಾರು ವಾಹನಗಳ ನಿಯಮಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಈಗ ಹೊಸದ ಒಂದು ಯೋಜನೆಯನ್ನ ಜಾರಿಗೆ ತಂದಿದ್ದು ಈ ನಿಯಮವನ್ನ ಕಡ್ಡಾಯವಾಗಿ ಎಲ್ಲರೂ ತಿಳಿದುಕೊಳಬೇಕು ಮತ್ತು ಇಲ್ಲವಾದರೆ ಭಾರಿ ಪ್ರಮಾಣದ ದಂಡವನ್ನ ಭರಿಸಬೇಕಾಗುತ್ತದೆ. ಹೌದು ರಾಜ್ಯ ಸರ್ಕಾರವು ದ್ವಿಚಕ್ರ ವಾಹನಗಳ ನಿಯಮದಲ್ಲಿ ಒಂದು ಮಹತ್ತರವಾದ ನಿಯಮವನ್ನ ಜಾರಿ ಮಾಡಿದ್ದು ಈ ನಿಯಮವನ್ನ ಅವಶ್ಯಕವಾಗಿ ಎಲ್ಲರೂ ತಿಳಿದುಕೊಳ್ಳಬೇಕು ಎಂದು ಹೇಳಬಹುದು. ಹಾಗಾದರೆ ದ್ವಿಚಕ್ರ ವಾಹನದ ಮೇಲೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಆ ನಿಯಮ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಿಯಮದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

license-canceled

ಹೌದು ಕರ್ನಾಟಕ ರಾಜ್ಯ ಸರ್ಕಾರವು ದ್ವಿಚಕ್ರ ವಾಹನದ ಸಂಚಾರ ನಿಯಮದಲ್ಲಿ ದೊಡ್ಡ ಬದಲಾವಣೆಯನ್ನ ಮಾಡಿದ್ದು ಪೋಷಕರು ಅಥವಾ ಯಾವುದೇ ವ್ಯಕ್ತಿಯಾಗಲಿ ತಮ್ಮ ಮಕ್ಕಳನ್ನ ವಾಹನದಲ್ಲಿ ಕೂರಿಸಿಕೊಂಡು ಹೋಗಬೇಕು ಅಂದರೆ ಆ ಮಕ್ಕಳಿಗೆ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಹಾಕಲೇಬೇಕು. ಹೌದು ನಾಲ್ಕು ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಕ್ಕಳು ಕೂಡ ವಾಹನದಲ್ಲಿ ಹೋಗುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು ಮತ್ತು ಹೆಲ್ಮೆಟ್ ಧರಿಸದೇ ಇದ್ದರೆ ವಾಹನ ಚಾಲನೆ ಮಾಡುವವರು ಭಾರಿ ಪ್ರಮಾಣದ ದಂಡವನ್ನ ವಿಧಿಸಬೇಕು.

ಇನ್ನು ಮಕ್ಕಳಿಗೆ ಹೆಲ್ಮೆಟ್ ಧರಿಸದೇ ವಾಹನವನ್ನ ಚಾಲನೆ ಮಾಡಿದರೆ ವಾಹನ ಚಾಲಕನ ವಾಹನ ಪರವಾನಿಗೆ ಪತ್ರವನ್ನ ಮೂರೂ ತಿಂಗಳ ತನಕ ರದ್ದು ಮಾಡಲಾಗುತ್ತದೆ. ಈ ಹಿಂದೆ ವಾಹನದ ಹಿಂದೆ ಕುರುವ ಮಕ್ಕಳು ಹೆಲ್ಮೆಟ್ ಧರಿಸುವ ಅವಶ್ಯಕೆತೆ ಇರಲಿಲ್ಲ, ಆದರೆ ದೇಶದಲ್ಲಿ ಅಪಘಾತಗಳ ಸಂಖ್ಯೆ ಜಾಸ್ತಿ ಆಗುತ್ತಿರುವ ಹಿನ್ನಲೆಯಲ್ಲಿ ಸುಪ್ರೀಮ್ ಕೋರ್ಟ್ ಆದೇಶವನ್ನ ಹೊರಡಿಸಿದ್ದು ಸದ್ಯ ಕರ್ನಾಟಕ ರಾಜ್ಯ ಸರ್ಕಾರ ಕೂಡ ಕೋರ್ಟಿನ ಆದೇಶದಂತೆ ವಾಹನಗಳ ಸಂಚಾರ ನಿಯಮದಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯನ್ನ ಮಾಡಿದೆ ಎಂದು ಹೇಳಬಹುದು.

ಇನ್ನು ಈ ನಿಯಮ ನಿನ್ನೆಯಿಂದಲೇ ಜಾರಿಗೆ ಬಂದಿದ್ದು ಜನರು ವಾಹನ ಚಾಲನೆ ಮಾಡುವಾಗ ಆದಷ್ಟು ಈ ನಿಯಮವನ್ನ ಗಮನದಲ್ಲಿ ಇರಿಸಿಕೊಂಡು ವಾಹನವನ್ನ ಚಾಲನೆ ಮಾಡಬೇಕಾಗಿದೆ. ಏನೇ ಆಗಲಿ ವಾಹನ ಸಂಚಾರದಲ್ಲಿ ನಿಯಮಗಳಲ್ಲಿ ಆಗುತ್ತಿರುವ ಬದಲಾವಣೆಗಳು ಜನರ ಒಳ್ಳೆಯದಕ್ಕೆ ಆಗಿದ್ದು ಈ ನಿಯಮಗಳಿಗೆ ತಲೆಬಾಗುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಕೂಡ ಆಗಿದೆ. ಸ್ನೇಹಿತರೆ ವಾಹನ ಸಂಚಾರ ನಿಯಮದಲ್ಲಿ ಆದ ಈ ಬಲಾವಣೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •