ಚಾಣುಕ್ಯರ ನೀತಿಯನ್ನು ನಾವು ಕೇಳಿರುತ್ತೇವೆ ಇವರು ಹೇಳಿರುವ ಮಾತುಗಳನ್ನು ನಾವು ಪಾಲಿಸುತ್ತಾ ಬಂದಲ್ಲಿ ನಮ್ಮ ಜೀವನದಲ್ಲಿ ದೊಡ್ಡ ವ್ಯಕ್ತಿ ಆಗುವುದರಲ್ಲಿ ಸಂಶಯವೇ ಇಲ್ಲ ಹಾಗೆ ಚಾಣಕ್ಯರು ಸಾಕಷ್ಟು ವಿಚಾರಗಳ ಬಗ್ಗೆ ಜನರಿಗೆ ತಿಳಿಸಿ ಹೇಳಿದ್ದು ಇವರ ಪ್ರತಿಯೊಂದು ಮಾತಿಗೂ ಕೂಡ ತೂಕವಿದೆ ಇವರ ಮಾತನ್ನು ಪಾಲಿಸುವುದರಿಂದ ನಾವು ನಮ್ಮ ಜೀವನದಲ್ಲಿ ನಮ್ಮ ಗುರಿಯನ್ನು ಬೇಗನೆ ತಲುಪಬಹುದು.

ಹಾಗಾದರೆ ಚಾಣಕ್ಯರು ಹೇಳಿರುವ ಹಾಗೆ ಜನರು ಆ ಮೂರು ವಿಚಾರಗಳಲ್ಲಿ ಜನರು ನಾಚಿಕೆಯನ್ನು ಬಿಟ್ಟರೆ ಮಾತ್ರ ಜೀವನದಲ್ಲಿ ಉದ್ಧಾರವಾಗುತ್ತಾರೆ ಎಂದು ಹೇಳಿದ್ದಾರೆ. ಈ ಮಾಹಿತಿಯನ್ನು ಕುರಿತು ಹೆಚ್ಚಿನ ವಿಚಾರವನ್ನು ನಾನು ನಿಮಗೆ ತಿಳಿಸುತ್ತೇನೆ ತಪ್ಪದೇ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಹಾಗೂ ನೀವು ಕೂಡ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ.

ಊಟದ ವಿಚಾರದಲ್ಲಿ :
ಹೌದು ವ್ಯಕ್ತಿ ತನ್ನ ಜೀವನದಲ್ಲಿ ಯಾವತ್ತಿಗೂ ಕೂಡ ಅನ್ನದ ವಿಚಾರದಲ್ಲಿ ನಾಚಿಕೆ ಮಾಡಬಾರದು ಅನ್ನವನ್ನು ಪರಬ್ರಹ್ಮ ಸ್ವರೂಪ ಎಂದು ಹೇಳುತ್ತಾರೆ ವ್ಯಕ್ತಿ ತನಗೆ ಹಸಿವಾದಾಗ ಅನ್ನವನ್ನು ಕೇಳಿ ಪಡೆಯದೆ ಇದ್ದಾಗ ಅದು ಅನ್ನಕ್ಕೆ ಅವಮಾನ ಮಾಡಿದಂತಾಗುತ್ತದೆ ಹಾಗೇ ಹಸಿದು ಬಂದಾಗ ಅವರು ಊಟಕ್ಕೆ ಕರೆದರೆ ಅದನ್ನು ನಾಚಿಕೆ ಮಾಡಿ ಊಟ ಬೇಡ .ಎಂದರೆ ಆ ವ್ಯಕ್ತಿ ಊಟವಿಲ್ಲದೇ ಹಸಿವಿನಿಂದ ಸಾಯಬೇಕಾಗುತ್ತದೆ ಆದ ಕಾರಣ ವ್ಯಕ್ತಿ ಯಾವತ್ತಿಗೂ ಕೂಡ ಊಟದ ವಿಚಾರದಲ್ಲಿ ನಾಚಿಕೆ ಮಾಡಬಾರದು ಈ ರೀತಿ ನಾಚಿಕೆ ಮಾಡಿದರೆ ಆತ ಹಸಿವಿನಿಂದಲೇ ಬಳಲಬೇಕಾಗುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ ಆದ ಕಾರಣ ಜೀವನದಲ್ಲಿ ಎಂದಿಗೂ ಕೂಡ ಊಟದ ವಿಚಾರದಲ್ಲಿ ನಾಚಿಕೆ ಮಾಡಿ ಅನ್ನಕ್ಕೆ ಅವಮಾನ ಮಾಡಬೇಡಿ.

ತಿಳಿಯದೇ ಇರುವ ವಿಚಾರವನ್ನು ಕೇಳುವುದಕ್ಕೆ :
ಮನುಷ್ಯ ಜೀವನದಲ್ಲಿ ಎಷ್ಟೇ ಕಲಿತರೂ ಇನ್ನೂ ಕಲಿಯುವುದಕ್ಕೆ ಅನೇಕ ವಿಚಾರಗಳು ಇರುತ್ತದೆ ಆದ ಕಾರಣ ಬೇರೆಯವರಿಂದ ನಾವು ಕಲಿಯಬೇಕೆಂದರೆ ಅದನ್ನು ನಾಚಿಕೆ ಮಾಡಿ ಸುಮ್ಮನಿರಬಾರದು ಆ ವಿಚಾರವನ್ನು ಕೇಳುವುದರಲ್ಲಿ ನಾವು ನಾಚಿಕೆ ಬಿಟ್ಟು ಕೇಳುವುದರಿಂದ ಇನ್ನೂ ಹೆಚ್ಚು ತಿಳಿದುಕೊಳ್ಳುತ್ತೇವೆ .

ಇನ್ನು ಜ್ಞಾನಿಗಳಾಗುತ್ತೇವೆ ಆದ ಕಾರಣ ಯಾವುದೇ ಹೊಸ ವಿಚಾರವನ್ನು ತಿಳಿಯುವ ವಿಚಾರದಲ್ಲಿ ನಾಚಿಕೆ ಬಿಟ್ಟು ವಿಚಾರವನ್ನು ತಿಳಿಯಿರಿ ಆಗ ನೀವು ಜೀವನದಲ್ಲಿ ಮುಂದೆ ಬರುತ್ತೀರಾ ಮತ್ತು ನಿಮ್ಮ ಜೀವನದಲ್ಲಿ ಯಾವುದೇ ಸಂಶಯವಿದ್ದರೂ ಆ ವಿಚಾರವನ್ನು ಕುರಿತು ಸಂಶಯವನ್ನು ಪರಿಹಾರಿಸಿಕೊಳ್ಳುವುದರಲ್ಲಿ ಕೂಡ ನಾಚಿಕೆ ಮಾಡಿಕೊಳ್ಳಬೇಡಿ, ಇದರಿಂದ ನಿಮ್ಮ ಜೀವನದಲ್ಲಿ ಸಂಶಯವೂ ಉಳಿದು ನೀವು ಆ ವಿಷಯವನ್ನೇ ಯೋಚಿಸುತ್ತಾ ಸಮಯ ವ್ಯರ್ಥ ಮಾಡಿಕೊಳ್ಳುತ್ತಿರ ಹೊರತು ಬೇರೆ ಯಾವ ಪ್ರಯೋಜನವನ್ನು ನೀವು ಪಡೆಯುವುದಿಲ್ಲ.

ನಿಮ್ಮ ಹಣವನ್ನು ಕೇಳುವ ವಿಚಾರದಲ್ಲಿ:
ವ್ಯಕ್ತಿ ತನ್ನ ಜೀವನದಲ್ಲಿ ಕಷ್ಟಪಡಬೇಕು ಕಷ್ಟಪಟ್ಟು ಹಣವನ್ನು ಸಂಪಾದಿಸಬೇಕು ಆ ರೀತಿ ಕಷ್ಟಪಟ್ಟ ಹಣವೂ ನಮ್ಮನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ ಹಾಗೆ ನಾವು ದುಡಿದ ಹಣವನ್ನು ಬೇರೆಯವರಿಗೆ ನೀಡಿದಾಗ ಅದನ್ನು ನಾವು ಮತ್ತೆ ಹಿಂಪಡೆಯಲು ಕೇಳಲು ನಾಚಿಕೊಳ್ಳಬಾರದು,

ಯಾಕೆ ಅಂದರೆ ನಾವು ದುಡಿದ ಹಣವನ್ನು ಬೇರೆ ಅವರಿಗೆ ಕೊಟ್ಟಾಗ ಅದನ್ನು ಮತ್ತೆ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಅದು ನಾವು ಕಷ್ಟಪಟ್ಟು ದುಡಿದ ಹಣ ನೀವು ಅದನ್ನು ವಾಪಸ್ಸು ಕೇಳುವುದರಲ್ಲಿ ನಾಚಿ ಕೊಂಡರೆ ನೀವು ನಿಮ್ಮ ಜೀವನದಲ್ಲಿ ಬಡವರಾಗಿಯೇ ಇರುತ್ತೀರಾ. ನೀವು ಕಷ್ಟಪಟ್ಟ ಹಣವನ್ನು ಮತ್ತೆ ಕೇಳುವ ವಿಚಾರದಲ್ಲಿ ಯಾವತ್ತೂ ನಾಚಿಕೊಳ್ಳಬೇಡಿ ಎಂದು ಚಾಣುಕ್ಯರು ಹೇಳಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •