ಗಂಡ ಹೆಂಡತಿ ದೂರ ಆದ ಮೇಲೆ ಅದರಿಂದ ಮಕ್ಕಳು ಯಾವ ರೀತಿಯ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂಬುದಕ್ಕೆ ನಟಿ ಲಕ್ಷ್ಮಿಯವರ ಕಥೆಯೇ ಒಂದು ಉದಾಹರಣೆ. 1969ರಲ್ಲಿ ಮದುವೆಯಾದ ನಟಿ ಲಕ್ಷ್ಮಿಯವರು ಕೇವಲ ನಾಲ್ಕು ವರ್ಷಕ್ಕೆ ಮೊದಲನೇ ಗಂಡ ಭಾಸ್ಕರ್ ಅವರಿಗೆ ವಿಚ್ಛೇದನ ಕೊಟ್ಟು ತನ್ನ ಮಗಳು ಐಶ್ವರ್ಯಳನ್ನು ಕರೆದುಕೊಂಡು ಮದ್ರಾಸಿಗೆ ಬಂದು ಬಿಟ್ಟರು. ಮಗಳನ್ನು ತನ್ನ ಬಳಿ ಇರಿಸಿಕೊಂಡು ಪ್ರೀತಿಯಿಂದ ಸಾಕಿದರು. ಆದರೆ ಯಾವತ್ತೂ ಮಗಳಿಗೆ ತನ್ನ ತಂದೆಯನ್ನು ತೋರಿಸಲಿಲ್ಲ. ಕೊನೆಗೆ ಫೋಟೋದಲ್ಲೂ ಕೂಡ ಇವರೇ ನಿನಗೆ ಜನ್ಮ ಕೊಟ್ಟ ತಂದೆ ಎಂದು ಹೇಳಲಿಲ್ಲ.

 

 

ನಟಿ ಲಕ್ಷ್ಮಿಯವರ ಮಗಳು ಐಶ್ವರ್ಯಗೆ 19 ವರ್ಷ ಆದಾಗ ಕನ್ನಡ ಸಿನಿಮಾ ಹೊಸ ಕಾವ್ಯದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಆಗ ಪತ್ರಕರ್ತನೊಬ್ಬ ನಿಮ್ಮ ತಂದೆ ಯಾರು ಎಂದು ನಿಮಗೆ ಗೊತ್ತೇ? ಎಂದು ಪ್ರಶ್ನಿಸಿದರು. ತನ್ನ ತಂದೆ ಯಾರು ಎಂದು ಗೊತ್ತಿಲ್ಲದ ಐಶ್ವರ್ಯ ಕನಿಷ್ಠ ಅವರ ಮುಖ ಆದರೂ ಒಮ್ಮೆ ನೋಡಬೇಕು ಎಂದುಕೊಂಡರು.

 

 

ಕೆಲವು ದಿನಗಳ ನಂತರ ಐಶ್ವರ್ಯಗೆ ಒಂದು ಪತ್ರ ಬಂತು. ಅದರಲ್ಲಿದ್ದ ಪದಗಳು ಐಶ್ವರ್ಯಾಗೆ ಹೊಸ ಚೇತನ ನೀಡಿತ್ತು. ನಿಮ್ಮ ತಂದೆ ಇನ್ಶೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಹೆಸರು ಭಾಸ್ಕರ್. ನಾನು ಅವರ ಅಸಿಸ್ಟೆಂಟ್. ನಿಮ್ಮ ತಂದೆ ತುಂಬಾ ಒಳ್ಳೆಯವರು ಈ ಪತ್ರದಲ್ಲಿ ನಿಮ್ಮ ತಂದೆಯ ಫೋನ್ ನಂಬರ್ ಇದೆ. ನೀವು ಮತ್ತು ನಿಮ್ಮ ತಂದೆ ಒಂದಾದರೇ ನಾನು ತುಂಬಾ ಸಂತೋಷ ಪಡುತ್ತೇನೆ ಎಂದು ಪತ್ರದಲ್ಲಿ ಬರೆಯಲಾಗಿತ್ತು. ಐಶ್ವರ್ಯ ಪತ್ರದಲ್ಲಿದ್ದ ಫೋನ್ ನಂಬರ್ ಗೆ ಕಾಲ್ ಮಾಡಿದರು.

 

 

ಆ ಕಡೆ ಫೋನ್ ರಿಸೀವ್ ಮಾಡಿದ ತಂದೆ ಭಾಸ್ಕರ್ ರವರು ಹಲೋ ಎಂದರು. 19 ವರ್ಷಗಳ ನಂತರ ತಂದೆಯ ಮೊದಲ ಮಾತು ಕೇಳಿದ ಐಶ್ವರ್ಯ ಕಣ್ಣಲ್ಲಿ ನೀರು ಬರುತ್ತಿತ್ತು. ನೀವೇನಾ ನನ್ನ ತಂದೆ ಎಂದು ಕೇಳಿದರು ಐಶ್ವರ್ಯ. ಹೌದಮ್ಮ ನಾನೇ ನಿನ್ನ ತಂದೆ ಎಂದು ಆ ಕಡೆಯಿಂದ ಉತ್ತರ ಬಂತು. ಮತ್ತೆ ಯಾಕೆ ಇಷ್ಟು ವರ್ಷ ನನ್ನನ್ನು ನೋಡಲು ನೀವು ಒಂದು ಬಾರಿಯು ಬರಲಿಲ್ಲ ಎಂದು ಪ್ರಶ್ನಿಸಿದರು ಐಶ್ವರ್ಯ.

 

 

ಅದಕ್ಕೆ ಉತ್ತರಿಸಿದ ತಂದೆ ಭಾಸ್ಕರ್ ನನ್ನ ಹಾಗೂ ನಿಮ್ಮ ತಾಯಿಯ ಮದ್ಯ ಹಲವಾರು ವಿಭೇದಗಳು ಇದ್ದಿದ್ದು ನಿಜ. ಆದರೆ ನಿಮ್ಮ ತಾಯಿ ತುಂಬಾ ಕಷ್ಟಪಟ್ಟು ನಿನಗೆ ಜನ್ಮಕೊಟ್ಟಳು. ಹಾಗಾಗಿ ನಿಮ್ಮಿಬ್ಬರ ಮಧ್ಯೆ ನಾನು ಬಂದು ನಿನ್ನನ್ನು ನಿಮ್ಮ ತಾಯಿಯಿಂದ ದೂರ ಮಾಡುವುದು ನನಗೆ ಇಷ್ಟ ಇರಲಿಲ್ಲ. ನೀನು ಯಾವತ್ತಾದರೂ ನನ್ನನ್ನು ಹುಡುಕಿಕೊಂಡು ಬರಬಹುದು ಎಂದು ನಾನು ಕಾಯುತ್ತಿದ್ದೇನೆ. ಹಾಗಾಗಿ ನಿನ್ನ ನೆನಪಲ್ಲೆ ಬದುಕುತ್ತಿದ್ದೇನೆ. ನಿನ್ನನ್ನು ನನ್ನಷ್ಟು ಪ್ರೀತಿಸುವವರು ಈ ಪ್ರಪಂಚದಲ್ಲಿ ಯಾರೂ ಇರುವುದಿಲ್ಲ ಎಂದರು ತಂದೆ ಭಾಸ್ಕರ್. ತಂದೆಯ ಮಮಕಾರದ ಮಾತುಗಳನ್ನು ಕೇಳಿದ ಐಶ್ವರ್ಯ ಗಳಗಳನೆ ಅಳತೊಡಗಿದರು. ನಂತರ ಒಂದು ದಿನ ತಂದೆಯನ್ನು ಭೇಟಿಯಾದ ಐಶ್ವರ್ಯಗೆ ಆಶ್ಚರ್ಯ.

 

 

ಯಾಕೆಂದರೆ ವಿಚ್ಛೇದನದ ನಂತರ ತಂದೆ ಯಾರನ್ನು ಮದುವೆಯಾಗಿರಲಿಲ್ಲ. ಒಂಟಿಯಾಗಿ ಬದುಕುತ್ತಿದ್ದರು ಹಾಗೂ ಐಶ್ವರ್ಯ ನೋಡುವುದಕ್ಕೆ ಅವರ ತಂದೆಯ ಹಾಗೆಯೇ ಇದ್ದರು.ಹೀಗೆ ತಂದೆ-ತಾಯಿಯ ಜಗಳಗಳಿಂದ ಸರಿಯಾಗಿ ಪೋಷಕರ ಪ್ರೀತಿಯನ್ನು ಪಡೆಯಲಾಗದೆ ಅದೆಷ್ಟೋ ಮಕ್ಕಳು ಪ್ರತಿದಿನ ಕಣ್ಣೀರಿನಲ್ಲಿ ಜೀವನ ನಡೆಸುತ್ತಿರುತ್ತಾರೆ. ನಿಮ್ಮಿಬ್ಬರ ಇಗೋ ಮತ್ತು ಜಗಳಗಳಿಂದ ಮಕ್ಕಳನ್ನು ಪ್ರೀತಿಯಿಂದ ವಂಚಿತರನ್ನಾಗಿ ಮಾಡಬೇಡಿ ಎನ್ನುವುದೇ ನನ್ನ ಆಶಯ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •