ನಮಸ್ಕಾರ ಸ್ನೇಹಿತರೇ,ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದ ಎಲ್ಲ ಭಾಷೆಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿರುವ ಹಿರಿಯ ನಟಿ ಲಕ್ಷ್ಮಿ ಅವರ ಬಾಳಲ್ಲಿ ವಿಧಿ ಆಟವಾಡಿದೆ.ಯಾವ ಹೆಣ್ಣಾದರೂ ಸಹ ತಮ್ಮ ಜೀವನದಲ್ಲಿ ಸುಖ ಶಾಂತಿ ಸಿಗಲಿ ಎಂಬ ಕನಸನ್ನು ಇಟ್ಟುಕೊಂಡಿರುತ್ತಾರೆ. ಜೀವನದ ಕೆಟ್ಟ ಪರಿಸ್ಥಿತಿಗಳು ಕೈಜಾರಿ ಹೋದಾಗ ಕಾಲದ ಜೊತೆ ಹೆಜ್ಜೆ ಹಾಕಬೇಕಾಗುತ್ತದೆ.ಹಾಗೆಯೇ ನಟಿ ಲಕ್ಷ್ಮಿ ಅವರ ಜೀವನ ಕೂಡ, ಅವರು ಒಟ್ಟು ಮೂರು ಮದುವೆಯಾಗಿದ್ದಾರೆ.ಇದಕ್ಕೆ ನಿಜವಾದ ಕಾರಣ ಏನೆಂದು ಹೆಳುತ್ತೇವೆ ನೋಡಿ.

ಪಂಚಭಾಷಾ ನಟಿ ಲಕ್ಷ್ಮಿಯವರು ತುಳಿದುಬಂದ ಆದಿಯನ್ನು ನೋಡಿದರೆ ಎಲ್ಲರಿಗೂ ಸಹ ಅಯ್ಯೋ ಪಾಪ ಅನಿಸುತ್ತದೆ. ಆಗ ಸುಮ್ಮನೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಲಕ್ಷ್ಮಿಯವರಿಗೆ ಅವರ ಕುಟುಂಬದವರು ಭಾಸ್ಕರ್ ಎಂಬುವವರಿಗೆ ಮದುವೆ ಮಾಡಿಸುತ್ತಾರೆ.1970 ರ ವೇಳೆ ಲಕ್ಷ್ಮಿಯವರಿಗೆ ಐಶ್ವರ್ಯ ಎಂಬ ಮಗಳು ಕೂಡ ಹುಟ್ಟುತ್ತಾಳೆ.ಆದರೆ ಕಾಲ ಕಳೆದಂತೆ ಅವರ ಸಂಸಾರದಲ್ಲಿ ಜಗಳ ಶುರುವಾಗಿ ದಿವೋರ್ಸ್ ಮೂಲಕ ಅಂತ್ಯವಾಗುತ್ತದೆ.ಭಾಸ್ಕರ್ ಅವರೊಡನೆ ವಿಚ್ಛೇದನ ವಾದ-ವಿವಾದ ಒಂದೆರಡು ವರ್ಷಗಳ ಬಳಿಕ ಮೋಹನ್ ಎಂಬವರನ್ನು ಪ್ರೀತಿಸಿ ನಟಿ ಲಕ್ಷ್ಮೀ ಅವರು ಎರಡನೇ ಮದುವೆಯನ್ನು ಆಗುತ್ತಾರೆ.

ಆದರೆ ಆ ಸಂಬಂಧ ಸಹ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ಮೋಹನ್ ಅವರು ಸಹ ಲಕ್ಷ್ಮಿ ಅವರೊಂದಿಗೆ ದೂರವಾಗಿ ಬಿಡುತ್ತಾರೆ. ಅನಂತರ 1988 ರಲ್ಲಿ ನಟ ಮತ್ತು ನಿರ್ದೇಶಕರಾದ ಕೆಎಸ್ ಶಿವಚಂದ್ರ ಅವರಿಗೆ ಮನಿಸು ಅಂತಹ ನಟಿ ಲಕ್ಷ್ಮಿ ಅವರೊಂದಿಗೆ ಮದುವೆಯಾಗುತ್ತಾರೆ. ಮದುವೆ ವಯಸ್ಸಿಗೆ ಬಂದಿರುವ ಮಗಳನ್ನು ಎದುರಿಗಿಟ್ಟುಕೊಂಡು ಮತ್ತೊಂದು ಮದುವೆ ಇವರಿಗೆ ಏಕೆ ಬೇಕಿತ್ತು ಎಂದು ಕೆಲವರು ಇವರ ಬೆನ್ನಹಿಂದೆಯೇ ಮಾತನಾಡಿಕೊಳ್ಳುತ್ತಿದ್ದರಂತೆ. ಲಕ್ಷ್ಮಿ ಅವರು ಮೂರನೇ ಮದುವೆ ಮಾಡಿಕೊಂಡಿದ್ದಕ್ಕೆ ಸ್ವತಹ ಲಕ್ಷ್ಮಿ ಅವರ ಮಗಳು ಐಶ್ವರ್ಯ ಅವರು ಕೆಎಸ್ ಶಿವಚಂದ್ರ ಅವರನ್ನು ಸರ್ ಎಂದು ಕರೆಯುತ್ತಿದ್ದರು,ಆದರೆ ಕೆಲವು ದಿನಗಳ ನಂತರ ಇವರನ್ನು ನಾನು ಹೇಗೆ ಅಪ್ಪ ಎಂದು ಸ್ವೀಕರಿಸಲಿ ಎಂದು ಲಕ್ಷ್ಮಿಯವರನ್ನು ಕೇಳಲು ಶುರು ಮಾಡುತ್ತಾಳೆ.

ಮಗಳು ಐಶ್ವರ್ಯ ಸಹ ತಾಯಿಯನ್ನು ವಿರೋಧಿಸಿ ಮುಸ್ಲಿಮ್ ಹುಡುಗನನ್ನು ಪ್ರೀತಿಸಿ ತನ್ನ ತಾಯಿ ಲಕ್ಷ್ಮಿಯವರಿಗೆ ಹೇಳದೆ ಮದುವೆ ಮಾಡಿಕೊಂಡು ಬಿಡ್ತಾರೆ. ಇನ್ನು ಹೆತ್ತ ಮಗಳನ್ನು ದೂರಮಾಡಿಕೊಂಡು ತನ್ನ ಬದುಕಿನಲ್ಲಿ ಸಾಕಷ್ಟು ಏಳುಬೀಳುಗಳನ್ನ ಕಂಡಿರುವ ಲಕ್ಷ್ಮಿಯವರು ಜೀವನದಲ್ಲಿ ಅನುಭವಿಸಿದ ನೋವುಗಳು ಕಡಿಮೆಯೇನಲ್ಲ. ಮದುವೆಯ ವಿಚಾರದಲ್ಲಿ ಸಮಾಜದಿಂದ ನೋವನ್ನು ಅನುಭವಿಸಿದರು ಸಹಕಷ್ಟದಲ್ಲಿರುವವರಿಗೆ ಸಹಾಯ ಮಾಡಿಕೊಂಡು ಸುಖವಾದ ಜೀವನವನ್ನು ನಡೆಸುತ್ತಿದ್ದಾರೆ…..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •