ತಂದೆ/ತಾಯಿಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಪಾಲು ಸಿಗುತ್ತದೆಯೆ? ಕಾನೂನು ಏನು ಹೇಳುತ್ತದೆ?

Home Kannada News/ಸುದ್ದಿಗಳು ಸರ್ಕಾರೀ ಉಚಿತ ಯೋಜನೆಗಳು

ನಮ್ಮ ಅತ್ತೆಯವರ ಹೆಸರಿನಲ್ಲಿ ಅವರ ಸ್ವಯಾರ್ಜಿತ ಆಸ್ತಿ ಒಂದು ಇದೆ. ಅವರಿಗೆ ಇಬ್ಬರು ಮಕ್ಕಳು. ಒಬ್ಬ ಗಂಡು ಮಗ( ನನ್ನ ಯಜಮಾನರು) ಮತ್ತು ಒಬ್ಬ ಹೆಣ್ಣು ಮಗಳು. ಹೆಣ್ಣು ಮಗಳಿಗೆ ಮದುವೆಯಾಗಿ ತುಂಬಾ ಆಸ್ತಿಗಳು ಇವೆ. ಆದರೂ ಮನೆಯಲ್ಲಿ ಪಾಲು ಕೇಳುತ್ತಿದ್ದಾರೆ. ದುಡ್ಡು ಕೊಡುತ್ತೇವೆ ಎಂದರೆ ಒಪ್ಪುತ್ತಿಲ್ಲ. ತಾಯಿಯ ಆಸ್ತಿಯಲ್ಲಿ ಹೆಣ್ಣು ಮಗಳಿಗೂ ಭಾಗ ಇದೆಯೇ? ಅವರು ಕೋರ್ಟಿಗೆ ಹೋದರೆ ನಾವು ಭಾಗ ಕೊಡಲೇ ಬೇಕಾಗುತ್ತದೆಯೇ?

 

 

ಉತ್ತರ: ನಿಮ್ಮ ಅತ್ತೆ ಬದುಕಿದ್ದಾರೆಯೇ ಇಲ್ಲವೇ ಎನ್ನುವುದನ್ನು ನೀವು ತಿಳಿಸಿಲ್ಲ. ಒಂದು ವೇಳೆ ನಿಮ್ಮ ಅತ್ತೆ ಬದುಕಿದ್ದರೆ, ಅವರು ಬದುಕಿರುವವರೆಗೆ, ಅವರ ಆಸ್ತಿಯಲ್ಲಿ ನಿಮ್ಮ ಯಜಮಾನರಿಗೂ , ಅಥವಾ ಅವರ ತಂಗಿಗೂ ಯಾರಿಗೂ ಭಾಗ ಕೇಳುವ ಅಧಿಕಾರ ಇರುವುದಿಲ್ಲ.

 

 

ನಿಮ್ಮ ಅತ್ತೆ ತನ್ನ ಸ್ವಯಾರ್ಜಿತ ಆಸ್ತಿಯನ್ನು ಯಾರಿಗೆ ಬೇಕಾದರೂ , ಹೇಗೆ ಬೇಕಾದರೂ ಪರಭಾರೆ ಮಾಡಬಹುದು. ಒಂದು ವೇಳೆ ನಿಮ್ಮ ಅತ್ತೆ ತೀರಿಕೊಂಡಿದ್ದರೆ, ನಿಮ್ಮ ಅತ್ತೆಯ ಸ್ವಯಾರ್ಜಿತ ಆಸ್ತಿ, ಅವರ ಗಂಡನಿಗೆ( ನಿಮ್ಮ ಮಾವನಿಗೆ) , ಮತ್ತು ನಿಮ್ಮ ಅತ್ತೆಯ ಇಬ್ಬರು ಮಕ್ಕಳಿಗೂ ತಲಾ ಮೂರನೇ ಒಂದು ಭಾಗವಾಗಿ ಬರುತ್ತದೆ. ಒಂದು ವೇಳೆ ನಿಮ್ಮ ಮಾವನವರೂ ತೀರಿಕೊಂಡಿದ್ದರೆ, ನಿಮ್ಮ ಯಜಮಾನರಿಗೂ , ಅವರ ತಂಗಿಗೂ ಸಮಭಾಗ ಇರುತ್ತದೆ. ಅವರು ಕೋರ್ಟಿಗೆ ಹೋದರೆ , ಭಾಗ ಕೊಡಲೇ ಬೇಕಾಗುತ್ತದೆ. ನೀವು ಹಿರಿಯರನ್ನು ಕರೆಯಿಸಿ ಮಾತಾಡಿ ರಾಜಿ ಮಾಡಿಕೊಳ್ಳುವುದು ಒಳ್ಳೆಯದು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...