ಕೆಜಿಎಫ್ ಚಿತ್ರದ ಮೂಲಕ ಇಡೀ ದೇಶದಾದ್ಯಂತ ಖ್ಯಾತರಾದವರು ರಾಕಿಂಗ್ ಸ್ಟಾರ್ ಯಶ್. ಇನ್ನು ಈಗ ಕೆಜಿಎಫ್ ಚಾಪ್ಟರ್ ಭಾಗ 2 ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ ಕೋಟ್ಯಂತರ ಅಭಿಮಾನಿಗಳು. ಈಗಾಗಲೇ ಕೆಜಿಎಫ್ ೨ ನ ಪ್ರಚಾರದ ಕೆಲಸಗಳು ಶುರುವಾಗಿದ್ದು, ಇದು ಕೂಡ ಭಾರತೀಯ ಸಿನಿಮಾರಂಗದಲ್ಲಿ ದೊಡ್ಡ ದಾಖಲೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಯಶ್ ಅವರು ಎರಡು ವರ್ಷಗಳ ಹಿಂದೆಯೇ ಹಾಸನದ ತಿಮ್ಮೇನಹಳ್ಳಿ ಎಂಬ ಗ್ರಾಮದಲ್ಲಿ ಜಮೀನನ್ನ ಖರೀದಿ ಮಾಡಿದ್ದರು. ಈಗ ಅದೇ ಜಮೀನಿನ ವಿಚಾರವಾಗಿ ಯಶ್ ಅವರ ತಂದೆ ತಾಯಿ ಮತ್ತು ಊರಿನ ಗ್ರಾಮಸ್ಥರ ನಡುವೆ ಜ’ಗಳ ನಡೆದಿರುವ ಘಟನೆ ನಡೆದಿದೆ.

Land

ತಮ್ಮ ಜಮೀನಿನಲ್ಲಿ ಕೆಲಸ ಮಾಡಿಸುವ ಸಲುವಾಗಿ ಯಶ್ ಅವರ ತಂದೆ ತಾಯಿಯಾದ ಅರುಣ್ ಕುಮಾರ್ ಮತ್ತು ಪುಷ್ಪ ಅವರು ಅಲ್ಲೇ ಉಳಿದುಕೊಂಡಿದ್ದರು. ಈಗ ಅದೇ ಜಮೀನಿಗೆ ರಸ್ತೆ ನಿರ್ಮಿಸಲು ವಿಚಾರವಾಗಿ ಆ ಊರಿನ ಗ್ರಾಮಸ್ಥರು ಮತ್ತು ಯಶ್ ಅವರ ತಂದೆ ತಾಯಿ ನಡುವೆ ಜಗಳ ಶುರುವಾಗಿದ್ದು, ರಸ್ತೆ ಮಾಡದಂತೆ ಸ್ಥಳೀಯ ಗ್ರಾಮಸ್ಥರು ತಡೆದಿದ್ದಾರೆ. ಇದೆ ವೇಳೆ ಯಶ್ ತಂದೆ ತಾಯಿ ಹಾಗೂ ಅವರ ಜೊತೆಗಿದ್ದ ಯಶ್ ಅಭಿಮಾನಿಗಳು ಹಾಗೂ ಊರಿನವರ ನಡುವೆ ಕಿ’ತ್ತಾಟ ಶುರುವಾಗಿದ್ದು ಕೈ ಕೈ ಮಿ’ಲಾಯಿಸುವ ಹಂತಕ್ಕೆ ಹೋಗಿದೆ.

Land

ಇನ್ನು ಈ ಜಗಳ ಗಂಭೀರ ರೂಪ ತಾಳುತ್ತಿದ್ದಂತೆ ಯಾರೋ ಸ್ಥಳೀಯ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದು, ಅಲ್ಲಿಗೆ ಪೋಲೀಸರ ಆಗಮನವಾದ ಬಳಿಕ ಇಬ್ಬರ ನಡುವೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ಕಿತ್ತಾಟದ ಫೋಟೋಗಳು ಸೋಷಿಯಲ್ ಮಿಡಿಯುಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಪರ ವಿರೋಧದ ಚರ್ಚೆಗಳು ಶುರುವಾಗಿವೆ. ನಟ ಯಶ್ ಅವರಿಗೆ ಈ ವಿಷಯ ತಿಳಿದಿದೆ ಎನ್ನಲಾಗಿದ್ದು ಇನ್ನು ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಲಾಗಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •