Lalitha-Jewelery

ಎಲ್ಲರೂ ಟ್ರೋಲ್ ಮಾಡುತ್ತಿರುವ ಈ ಲಲಿತಾ ಜ್ಯೂವೆಲರಿ ಈ ಅಂಕಲ್ ಬಗ್ಗೆ ಗೊತ್ತಾ

Home

ನೀವೆಲ್ಲಾ ಟಿವಿಯಲ್ಲಿ ಬರುವ ಜಾಹೀರಾತುಗಳನ್ನು ನೋಡಿದ್ದೀರ. ಎಲ್ಲ ಬರುವ ಜಾಹೀರಾತುಗಳು ಒಂದೇ ತರ ಇದ್ರೆ ಅವುಗಳ ಮಧ್ಯೆ ಈ ಒಂದು ಜಾಹೀರಾತು ಮಾತ್ರ ತುಸು ವಿಭಿನ್ನ. ಆ ಜಾಹೀರಾತಿನಲ್ಲಿ ಒಂದು ದೊಡ್ಡ ಸಂಸ್ಥೆಯ ಚೇರ್ಮನ್ ಒಬ್ಬ ತಾನೇ ಬಂದು ಆತನ ಕಂಪನಿ ಸೇವೆಯನ್ನು ತಾನೆ ಪ್ರಮೋಟ್ ಮಾಡುತ್ತಾನೆ.ಅವರೇ ಲಲಿತಾ ಜ್ಯುವೆಲರ್ ಸದ್ಯದಲ್ಲಿ ಎಂ ಡಿ ಮತ್ತು ಚೇರ್ಮನ್ ಆಗಿರುವ ಕಿರಣ್ ಕುಮಾರ್ ಅವರು. ಈ ಲಲಿತಾ ಜ್ಯುವೆಲರ್ ಮುಖ್ಯಸ್ಥರಾಗಿ ಜಾಹೀರಾತು ಪದೇಪದೇ ಟಿವಿಯಲ್ಲಿ ಕಾಣಿಸುತ್ತದೆ.

ಈ ಜಾಹೀರಾತು ಡಿಸೈನ್ ಅದರಲ್ಲಿ ಮಾತನಾಡುವ ಮುಖ್ಯಸ್ಥರ ನುಡಿಗಳು ಯಾರಿಗೆ ಆಗಲಿ ನಿಜವೇ ಇರಬಹುದು ಅನಿಸುವಷ್ಟು ನೈಜ್ಯವಾಗಿ ಭಾಸವಾಗುತ್ತದೆ. ಈ ಜಾಹೀರಾತು ಹಲವು ಕಡೆ ಟೀಕೆ ಹಾಗೂ ತಮಾಷೆ ಗಳಿಗೂ ಸಹ ಬಳಕೆ ಆಗುತ್ತಿದೆ. ಆದರೆ ಈ ಜ್ಯುವೆಲರ್ ಹಾಗೂ ಅವರ ಚೇರ್ಮನ್ ಬಗ್ಗೆ ತಿಳಿದುಕೊಂಡರೆ ನಿಮ್ಮ ಅಭಿಪ್ರಾಯ ಬದಲಾಗುತ್ತದೆ. ಯಾಕೆಂದರೆ ಇವತ್ತು ಸಾಕಷ್ಟು ಜ್ಯುವೆಲರ್ ಸಂಸ್ಥೆಗಳು ಇವೆ. ದಿನದಿನಕ್ಕೂ ಇವೆಲ್ಲರ ನಡುವೆ ತೀವ್ರ ಸ್ಪರ್ಧೆ ಏರ್ಪಡುತ್ತಿದೆ.ಅಂತದ್ರಲ್ಲಿ ಇವುಗಳನೆಲ್ಲ ಮೀರಿ ಇದೇ ಉದ್ಯಮದಲ್ಲಿ ಹೊಸಬರನ್ನು ಗುರುತಿಸಿ ಮೇಲೆ ಬರುವುದು ಅಷ್ಟು ಸುಲಭದ ಮಾತಲ್ಲ.ಇವತ್ತು ಜ್ಯುವೆಲರ್ ಚೇರ್ಮನ್ ಅವರ ಬಗ್ಗೆ ಇರುವ ಕೆಲವು ಸಂಗತಿಗಳನ್ನು ನಾವು ನಿಮಗೆ ತಿಳಿಸುತ್ತೇವೆ.

ನಿಮ್ಮ ಮನೆಯಲ್ಲಿ ಟಿವಿಯಲ್ಲಿ ಬರುವ ಪದೇಪದೇ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಈ ವ್ಯಕ್ತಿಯ ಹೆಸರು ಕಿರಣ್ ಕುಮಾರ್ ಇವರ ಪೂರ್ವಿಕರು ರಾಜಸ್ಥಾನದವರು. ಅಲ್ಲಿಂದ ಚಿನ್ನ-ಬೆಳ್ಳಿ ತಯಾರಿಕೆ ವ್ಯಾಪಾರ ಸಲುವಾಗಿ ಇವರು ಆಂಧ್ರದ ಜಿಲ್ಲೆಯ ನೆಲ್ಲೂರುಗೆ ವಲಸೆ ಬಂದರು.ಕಿರಣ್ ಕುಮಾರ್ ಹುಟ್ಟಿದ್ದೇ ಆಂಧ್ರ ಹಾಗೂ ತಮಿಳುನಾಡಿನಲ್ಲಿ ಮಧ್ಯೆ ಇರುವ ನೆಲ್ಲೂರಲ್ಲಿ ಇವರ ಕುಲ ಕಸುಬು ಚಿನ್ನ ಬೆಳ್ಳಿ ಮುಂತಾದ ಅಮೂಲ್ಯ ವಸ್ತುಗಳ ತಯಾರಿ ಹಾಗೂ ಮಾರಾಟ.ಇತರೆ ಮರವಾಡಿ ಹಾಗೆ ಅನುಕೂಲಸ್ಥರು ಆಗಿರಲಿಲ್ಲ. ಕಿರಣ್ ಕುಮಾರ್ ಬಾಲ್ಯ ಕಡು ಕಷ್ಟದಲ್ಲಿ ಕೂಡಿತ್ತು. ಅವರಿಗೆ ಸೂಕ್ತ ವಿದ್ಯಾಭ್ಯಾಸವು ಕೂಡ ಸಿಗಲಿಲ್ಲ. ಚಿಕ್ಕವರಿದ್ದಾಗ ವಿಧಿಯಿಲ್ಲದೆ ಜೀವನಕ್ಕಾಗಿ ಕೆಲಸಕ್ಕೆ ಮೊರೆ ಹೋಗಬೇಕಾಗಿತ್ತು.

ಕೆಲಸವನ್ನು ಮಾಡುವ ಹಾಗೂ ಇಚ್ಛೆ ಇದ್ರೂ ಕೂಡ ಅವರನ್ನು ನಂಬಿ ಕೆಲಸವನ್ನು ಕೊಡುವುದಕ್ಕೆ ಪ್ರಾರಂಭದಲ್ಲಿ ಅಲ್ಲಿ ಯಾರು ಸಹ ಇರಲಿಲ್ಲ. ವ್ಯಾಪಾರ ಕುಟುಂಬದಿಂದ ಮೇಲೆ ಬಂದ ಕಿರಣ್ ಅವರಿಗೆ ಇನ್ನೊಬ್ಬರ ಕೆಳಗೆ ದುಡಿಯಲು ಮನಸ್ಸಿರಲಿಲ್ಲ ಆದರೂ ಸ್ವಂತ ದುಡಿಮೆಯ ಮಾಡುವವರೆಗೂ ಕೆಲಸ ಮಾಡಬೇಕಿತ್ತು.ಕಿರಣ್ ಕುಮಾರ್ ಕೆಲವು ಕಡೆ ಚಿಕ್ಕ ಪುಟ್ಟ ಕೆಲಸಗಳಲ್ಲಿ ನಿರಂತರವಾಗಿದ್ದರೂ ಸಹ ಅವರ ಮನಸ್ಸಲ್ಲಿ ಸ್ವಂತ ಉದ್ಯಮವನ್ನು ಆರಂಭಿಸುವುದಕ್ಕೆ ಆಸೆ ಇತ್ತು. ಆದರೆ ವ್ಯಾಪಾರವನ್ನು ಮಾಡೋಣ ಅಂದ್ರೆ ಅದಕ್ಕೆ ಬೇಕಾಗುವ ಬಂಡವಾಳ ತಮ್ಮ ಬಳಿ ಇರಲಿಲ್ಲ. ಸೂಕ್ತ ವಿದ್ಯಾಭ್ಯಾಸವು ಇರಲಿಲ್ಲ ಆಗಲೇ ಅವರು ಕಠಿಣ ನಿರ್ಧಾರಕ್ಕೆ ಸಿದ್ಧರಾಗಿದ್ದರು. ಮಗನ ಬಯಕೆ ಕಂಡ ಅವರ ತಾಯಿ ಮಗನ ಆಸೆಯಂತೆ ನೆರವೇರಲು ಮುಂದಾದರು.ಅವರು ಯಾರ ಬಳಿ ಸಾಲವನ್ನು ಕೇಳಲಿಲ್ಲ.

ಕಿರಣ್ ಅವರ ತಾಯಿಯ ಬಳಿ ಕೆಲವು ಬಂಗಾರ ಬಳೆಗಳಿಂದ ಅದರಲ್ಲಿ ಸಿಗುವ ಹಣದಿಂದ ಒಂದು ಬಂಗಾರದ ಅಂಗಡಿ ತೆರೆಯುವಂತೆ ಹೇಳಿದರು.ಕೂಡಲೆ ಕಿರಣ್ ಆ ಬಳೆಗಳನ್ನು ಮಾರಿ ಅದರಿಂದ ಬಂದ ಹಣದಿಂದ ದೂರದ ಚೆನ್ನೈನಲ್ಲಿ ಒಂದು ಚಿಕ್ಕ ಬಂಗಾರದ ಅಂಗಡಿಯನ್ನು ತೆರೆದರು. ಉಳಿದ ಒಡವೆಗಳನ್ನು ಕರಗಿಸಿ ತಮಗೆ ಬೇಕಾದ ಹಾಗೆ ಡಿಸೈನ್ ಮಾಡಿ ಅವುಗಳಿಗೆ ಆಕಾರ ಕೊಟ್ಟು ಮಾರಾಟ ಮಾಡಲು ಶುರುಮಾಡಿದರು. ಇದು ನೆಲ್ಲೂರು ಹಾಗೂ ತುಂಬಾ ನಿರೀಕ್ಷೆ ತಕ್ಕಂತೆ ಮಾರಾಟವಾದವು. ಆಗ ಚೆನ್ನೈನಲ್ಲಿ ಇದ್ದ ಲಲಿತಾ ಜ್ಯುವೆಲರ್ ಮೂಲ ಸಂಸ್ಥಾಪಕರ ಬಳಿ ಬಂದು ರಚಿಸಿದ್ದ ಡಿಸೈನ್ ಗಳನ್ನು ತೋರಿಸುತ್ತಾರೆ.ತಾವು ಕೈಯಿಂದ ಮಾಡಿದ ಡಿಸೈನ್ ಗಳು ಅಂದಿನ ಲಲಿತಾ ಜ್ಯುವೆಲರ್ ಮಾಲೀಕರನ್ನು ಆಕರ್ಷಿಸುತ್ತದೆ.ಇದೆ ಮಾದರಿಯ ಡಿಸೈನ್ ಗಳಿಗಾಗಿ ಮೇಲಿಂದ ಮೇಲೆ ಆರ್ಡರ್ ಬರುತ್ತದೆ.ಲಲಿತಾ ಜ್ಯುವೆಲರ್ ಮಾಲಿಕರಿಂದ ಪ್ರೋತ್ಸಾಹದಿಂದ ಉತ್ಸಾಹಿಕರಾದ ಕಿರಣ್ ಅವರು ದಿನ 18 ಗಂಟೆ ಶ್ರಮಿಸಿ ಹೊಸ ಹೊಸ ಡಿಸೈನ್ ಗಳನ್ನು ರಚಿಸಲು ಮುಂದಾಗುತ್ತಾರೆ. ಹೀಗೆ ರಚಿಸಿದ ಡಿಸೈನ್ ಗಳನ್ನು ಲಲಿತಾ ಸಂಸ್ಥೆಗೆ ಕಿರಣ್ ಮಾರುತ್ತಿದ್ದರು.

ಅಲ್ಲಿಂದ ಜನ ಮುಗಿಬಿದ್ದು ಖರೀದಿ ಮಾಡುವುದಕ್ಕೆ ಆರಂಭಿಸಿದರು.ಈ ಸಂಸ್ಥೆಯ ಟರ್ನವರ್ ಏರಿಕೆ ಯಾಗುತ್ತ ಬಂತು.ಕಿರಣ್ ಅವರು ಸ್ವತಹ ಅಲ್ಲಿಗೆ ಬರುತ್ತಿದ್ದ ಆರ್ಡರ್ ಗಳನ್ನು ತೆಗೆದುಕೊಂಡು ತಕ್ಕಂತೆ ಡಿಸೈನ್ಸ್ ರಚಿಸಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವುದಕ್ಕೆ ಶುರುಮಾಡಿದರು.1983 ರಲ್ಲಿ ಕಿರಣ್ ಕುಮಾರ್ ತಮ್ಮ ಕನಸಿನ ಮೊದಲ ಬಂಗಾರದ ಅಂಗಡಿ ತೆರೆದು ನಂತರ ಅಲ್ಲಿ ತಯಾರಾಗುವಂತಹ ತಮ್ಮ ಡಿಸೈನ್ ಒಡವೆಗಳನ್ನು ಚೆನ್ನೈನಲ್ಲಿ ಈ ಮೊದಲೆ ಸ್ಥಾಪಿತವಾಗಿದ್ದ ಲಲಿತಾ ಸಂಸ್ಥೆಗೆ ಮಾರುತ್ತಿದ್ದರು. ನಂತರ ಅವರೇ ಆರ್ಡರ್ ಪಡೆದು ಗ್ರಾಹಕರಿಗೆ ತಲುಪಿಸುತ್ತಿದ್ದರು.ಇದರಿಂದ ತಮ್ಮ ಅಂಗಡಿಯ ವ್ಯವಹಾರ ದಿನೇದಿನೆ ಏರುತ್ತಿತ್ತು.1999 ರಲ್ಲಿ ಲಲಿತಾ ಜ್ಯುವೆಲರಿ ನಷ್ಟಕ್ಕೆ ಒಳಗಾಗಿ ಅದರ ಶಾಖೆಗಳನ್ನು ಕೆಲವು ಕಡೆ ಮುಚ್ಚಲಾಯಿತು. ತನಗೆ ಅನ್ನ ಕೊಟ್ಟ ಸಂಸ್ಥೆಯೊಂದಕ್ಕೆ ಒದಗಿದ ಇಂತಹ ದುಸ್ಥಿತಿ ಕಂಡು ಬೇಸರಗೊಂಡು ಕಿರಣ್ ಕುಮಾರ್ ಅದರ ಒಡೆತನವನ್ನು ತಾವೇ ತೆಗೆದುಕೊಂಡು ಮುಂದೆ ನಡೆಸಿದರು.

Lalitha-Jewelery

ಇನ್ನೇನು ನೆಲ ಕಚ್ಚುವ ಮಟ್ಟಕ್ಕೆ ಬಂದಿದ್ದ ಲಲಿತಾ ಜ್ಯುವೆಲರ್ ಸಂಸ್ಥೆಯನ್ನು ತಮ್ಮ ಪ್ರತಿಭವಂತಿಕೆಯಿಂದ ಗುಣಮಟ್ಟದ ವ್ಯವಹಾರ ವಿಧಾನಗಳಿಂದ ಮರು ಚೇತರಿಸಿಕೊಳ್ಳುವಂತೆ ಮಾಡಿದರು ಕಿರಣ್.ಸುಮಾರು 20 ವರ್ಷಗಳಿಂದ ಅವರದೇ ನಿಯಂತ್ರಣದಲ್ಲಿರುವ ಲಲಿತಾ ಇಂದು ದೇಶದಾದ್ಯಂತ ಒಟ್ಟು 15 ಶಾಖೆಗಳನ್ನು ಒಳಗೊಂಡು ಲಾಭದಿಂದ ನಡೆಯುತ್ತಿದೆ.ಸಣ್ಣ ಮಟ್ಟದಿಂದ ಶುರುವಾದ ಲಲಿತಾ ಜ್ಯುವೆಲರ್ ವರ್ಷಕ್ಕೆ ಹತ್ತು ಸಾವಿರ ಕೋಟಿ ಅಧಿಕ ಲಾಭದಿಂದ ನಡೆಯುತ್ತಿದೆ ಅಂದರೆ ಇದಕ್ಕೆ ಕಾರಣ ಕಿರಣ್ ಕುಮಾರ್ ಯಶಸ್ವಿ ಉದ್ಯಮಿಯ ಪ್ರಾಮಾಣಿಕ ಹಾಗೂ ಜನ ಸ್ನೇಹವೇ ಕಾರಣ. ಸಾಮಾನ್ಯವಾಗಿ ಇಂದು ಯಾವುದೇ ರೀತಿಯ ಉದ್ಯಮವನ್ನು ನಡೆಸುವುದಕ್ಕೆ ಮುಂದಾದರೆ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ತೆರೆಯುತ್ತಾರೆ ವಿನಃ ಗ್ರಾಹಕರ ಒಳಿತಾಗಲ್ಲ. ಚಿನ್ನ-ಬೆಳ್ಳಿ ವ್ಯಾಪಾರಿಗಳು ಕೇಳುವ ಆಗಿಲ್ಲ ಲಾಭವಿಲ್ಲದೇ ಯಾರೂ ಸಹ ಧರ್ಮಕ್ಕೆ ಹಾಗೂ ಈ ಉದ್ಯಮಕ್ಕೆ ಕಾಲಿಡುವುದಿಲ್ಲ ಅಂಥವರಲ್ಲಿ ಇವರ ವರ್ಗಕ್ಕೆ ಸೇರಿದ ಕಿರಣ್ ಅವರು ಮಾತ್ರ ಹೇಗೆ ಸ್ಪೆಷಲ್ ಆಗಿ ಬೆಳೆದರು ಅವರದ್ದು ಲಾಭದ ವ್ಯವಹಾರ ಅಲ್ಲವೇ. ಅವರೇನು ಉಚಿತವಾಗಿ ಚಿನ್ನವನ್ನು ಮಾರುವುದಿಲ್ಲ ಎಂದು ನಿಮಗೆ ಅನಿಸಬಹುದು. ಆದರೆ ಲಲಿತಾ ಮುಖ್ಯಸ್ಥರಾದ ಕಿರಣ್ ತಿಳಿಯದೆ ಇರುವ ಕೆಲವೊಂದು ವಿಷಯಗಳು ಇದೆ. ನಾವು ಪ್ರತಿ ಜ್ಯುವೆಲರ್ ಅಲ್ಲಿ ನೋಡುವ ಮಾಲೀಕರು ವಂಶ ಪರಂಪರೆಯಾಗಿ ಅದೇ ಕೆಲಸದಲ್ಲಿ ಗುರುತಿಸಿಕೊಂಡು ಆಗರ್ಭ ಶ್ರೀಮಂತರಾಗಿ ಇರುತ್ತಾರೆ.

ಶ್ರೀಮಂತಿಕೆಯಲ್ಲಿ ಹುಟ್ಟಿ ಈ ವಿಹಾರಕ್ಕೆ ಪ್ರವೇಶ ಪಡೆಯುವ ಅವರಿಗೆ ನಿಜವಾದ ಕಷ್ಟದ ಬೆಲೆ ಹಾಗೂ ಬಡವನ ಆದಾಯದ ಬಗ್ಗೆ ಕಾಳಜಿ ಇರುವುದಿಲ್ಲ. ಏನೋ ಒಂದು ಹೇಳಿ ಗ್ರಾಹಕರನ್ನು ಮರಳು ಮಾಡಿ ತಮಗೆ ಬೇಕಾದ ಲಾಭವನ್ನು ಪಡೆದುಕೊಳ್ಳುತ್ತಾರೆ. ಆದರೆ ಕಿರಣ್ ಕುಮಾರ್ ಅವರು ಹುಟ್ಟು ಶ್ರೀಮಂತರಲ್ಲ ಆರಂಭದಲ್ಲಿ ತಿಳಿಸಿದಂತೆ ಅವರು ಸಾಲ ಮಾಡಿ ಈ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದವರು.ತಾಯಿಯ ಒಡವೆಯನ್ನು ಮಾರಿ ಉದ್ಯಮವನ್ನು ಶುರು ಮಾಡಿದವರು. ನಾನು ಆರನೇ ವಯಸ್ಸಿನಲ್ಲಿ ಇದ್ದಾಗಲೇ ನನಗೆ ನನ್ನ ಕುಟುಂಬದ ಕಷ್ಟದ ಅರಿವುವಾಗಿತ್ತು. ಒಂದು ಹೊತ್ತಿನ ಊಟಕ್ಕೆ ಅಲ್ಲಿ ಸೈಕಲ್ ಹೊಡೆಯಬೇಕಿತ್ತು.ಎಲ್ಲ ಕಷ್ಟಗಳ ನಡುವೆ ನನಗೆ ಉತ್ತಮ ವಿದ್ಯಾಭ್ಯಾಸ ಹಾಗೂ ಒಂದು ಹೊತ್ತು ಊಟ ಹಾಕಲು ನಮ್ಮ ಪೋಷಕರಿಗೆ ಸಾಧ್ಯವಾಗುತ್ತಿರಲಿಲ್ಲ.ಅಂತಹ ತುರ್ತು ಸಂದರ್ಭಗಳಲ್ಲಿ ಚಿಕ್ಕಪುಟ್ಟ ಕೂಲಿ ಮಾಡಿ ನಾನು ಸಂಪಾದನೆ ಮಾಡುತ್ತಿದ್ದೆ.

ಟೀನೇಜಿಗೆ ಬಂದಾಗ ತಾಯಿಯ ಒಡವೆಗಳನ್ನು ಮಾರಿ ಬಂಗಾರದ ಅಂಗಡಿಯನ್ನು ತೆಗೆದೆ. ಕುಲಕಸುಬಿನ ಬಲದಿಂದ ಎರಡು ವರ್ಷದಲ್ಲಿ ಚಿನ್ನ ಮಾರಾಟದ ಬಗ್ಗೆ ಬೇಕಾದಷ್ಟು ಜ್ಞಾನ ಹಾಗೂ ಅನುಭವವು ಸಿಕ್ಕಿತು. ನಾನು ಅವತ್ತು ಗಳಿಸಿದ್ದ ಒಂದೊಂದು ರೂಪಾಯಿಯ ನನ್ನ ಬೆವರಿನ ಅರಿವು ಚೆನ್ನಾಗಿಯೇ ಆಗಿತ್ತು. ಒಬ್ಬ ಬಡವ ಆ ಕಾಲದಲ್ಲಿ ಒಂದು ರೂಪಾಯಿ ಗಳಿಸುವುದಕ್ಕೆ ಎಷ್ಟು ಕಷ್ಟ ಪಡಬೇಕು ಅಂತ ನಾನು ತಿಳಿದುಕೊಂಡೆ. ಹಾಗಾಗಿ ಇತರೆ ಚಿನ್ನ ವ್ಯಾಪಾರಿಗಳಿಗಿಂತ ಹೆಚ್ಚು ಹಾಗೂ ಬಹಳ ಹತ್ತಿರದಿಂದ ಒಬ್ಬ ಬಡವನ ಕಷ್ಟ ಹೇಗೆ ಅಂತ ಚೆನ್ನಾಗಿ ಗೊತ್ತು. ನನ್ನ ಬಳಿ ಬರುವ ಬಡವರ ಕಷ್ಟದ ಆದಾಯವನ್ನು ನಾನು ಸ್ವಾರ್ಥಕ್ಕೆ ಬಳಸಿಕೊಳ್ಳಲು ನನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ ಹಾಗಾಗಿ ಅವರು ಗಳಿಸಿದ ಹಣಕ್ಕೆ ಸೂಕ್ತವಾಗಿ ಬೆಲೆಯನ್ನು ನಿಗದಿ ಮಾಡಿ ಅವರಿಗೆ ಬೇಕಾದಷ್ಟು ಚಿನ್ನ ಸಿಗುವ ಹಾಗೆ ದರ ನಿಗದಿ ಮಾಡಿದ್ದೇನೆ.

ಬಡವ ಹಣ ವ್ಯರ್ಥವಾಗಿ ವ್ಯಯವಾಗಬಾರದು. ಪ್ರತಿಯೊಬ್ಬ ಸಾಧಾರಣ ವ್ಯಕ್ತಿಗೆ ಚಿನ್ನ ಸುಲಭದ ಬೆಲೆಗೆ ಕೈ ಸಿಗಬೇಕು. ಇದು ನನ್ನ ಗುರಿ ಎನ್ನುವ ಕಿರಣ್ ಅವರ ನುಡಿಗಳು ಸಾಕು. ಇವತ್ತು ಕಿರಣ್ ಕುಮಾರ್ ಅವರು ಸಾವಿರಾರು ಕೋಟಿ ಟರ್ನವರ್ ನಡೆಸುತ್ತಿದ್ದರು ಅವರು ಪೂರ್ವಶ್ರಮ ಜೀವನವನ್ನು ಅವರು ಮರೆತಿಲ್ಲ. ಆ ಕಷ್ಟವನ್ನು ಯಾವ ಗ್ರಾಹಕರು ಸಹ ಎದುರಿಸಬಾರದು ಎಂದು ಬಯಸುವವರು ಹಾಗೂ ಗ್ರಾಹಕರು ಒಪ್ಪುವ ಬೆಲೆಗೆ ವ್ಯವಹಾರವನ್ನು ಮಾಡುತ್ತಿದ್ದಾರೆ. ಹೀಗಾಗಿ ಇತರೆ ಸಂಸ್ಥೆಗಳಿಗಿಂತ ಲಲಿತಾ ಸಂಸ್ಥೆಯಲ್ಲಿ ಬೆಲೆ ಉತ್ತಮವಾಗಿದೆ.ರಾಜಸ್ಥಾನ ಮೂಲದ ಕಿರಣ್ ಅವರಿಗೆ ಬದುಕು ಹಾಗೂ ನೆಲೆ ಕಲ್ಪಿಸಿದ್ದು ದಕ್ಷಿಣಭಾರತ. ಆದರೂ ಹುಟ್ಟೂರನ್ನು ಮರೆಯದ ಕಿರಣ್ ರಾಜಸ್ಥಾನ್ ಸುತ್ತಾ ತಮ್ಮ ಸ್ವಂತ ಶಾಲೆಗಳನ್ನು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಿದ್ದಾರೆ.ಹೆಚ್ಚು ಓದದೇ ಇರುವ ಕಿರಣ್ ಕುಮಾರ್ ಅವರಿಗೆ ವಿದ್ಯೆ ಇಲ್ಲದ ಜೀವನ ಎಷ್ಟು ಭಯಂಕರ ಹಾಗೂ ಅತಂತ್ರ ಎಂದು ಚೆನ್ನಾಗಿ ಗೊತ್ತು. ನಾನು ಚಿಕ್ಕವನಾಗಿದ್ದಾಗ ನೆಲ್ಲೂರಿನಲ್ಲಿ ಸುತ್ತಮುತ್ತ ಪ್ರಸಿದ್ಧಗೊಂಡಿದೆ ಚಿನ್ನದ ವ್ಯಾಪಾರ ಬಗ್ಗೆ ತಿಳಿಯಿತು. ಅಲ್ಲಿ ಆಗ ಅವರು ಚಿನ್ನ ಮಾರಾಟಕ್ಕೆ ವಿದ್ಯೆಯ ಅವಶ್ಯಕತೆ ಇರಲಿಲ್ಲ.ಆದರೆ ಇವಾಗ ವಿದ್ಯೆಯಿಲ್ಲದವನು ಕಸಕ್ಕಿಂತ ಕಡೆ ಹಾಗಾಗಿ ಶಾಲೆಗಳನ್ನು ತೆರೆದಿರುವ ಕಿರಣ್ ಅಸಾಹಾಯಕ ವಿದ್ಯಾರ್ಥಿಗಳಿಗೆ ವಿದ್ಯೆ ಸಹಾಯವಾಗಲಿ ಎಂದು ತಮ್ಮ ಸ್ವಂತ ಖರ್ಚಿನಲ್ಲಿ ಶಾಲೆಯನ್ನು ತೆರೆದು ವಿದ್ಯಾದಾನವನ್ನು ಮಾಡುತ್ತಿದ್ದಾರೆ. ಹೀಗೆ ಬಡತನದಲ್ಲಿ ಹುಟ್ಟಿ ಇವತ್ತು ಸಾವಿರಾರು ಕೋಟಿ ವಹಿವಾಟು ನಡೆಸುತ್ತಿರುವ ಕಿರಣ್ ಕುಮಾರ್ ಅವರ ಜೀವನ ನಿಜಕ್ಕೂ ಸ್ಪೂರ್ತಿದಾಯಕ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...