ನೀವು ಬೆಂಗಳೂರಿನಲ್ಲಿದ್ದು, ಅಲ್ಲಿ ಕೆಲವು ಶಾಂತ ವಾತವರಣವಿರುವ ಸ್ಥಳಗಳನ್ನು ಹುಡುಕುತ್ತಿದ್ದರೆ, ನೀವು ಈ ಕೆರೆಗಳಿಗೆ ಭೇಟಿ ಕೊಡಬಹುದು. ಬೋಟಿಂಗ್, ಪಕ್ಷಿ ವೀಕ್ಷಣೆ ಮತ್ತು ಛಾಯಾಗ್ರಹಣವನ್ನು ಆನಂದಿಸಲು ಬಯಸಿದರೆ ಬೆಂಗಳೂರಿನಲ್ಲಿರುವ ಈ ಕೆರೆಗಳು ಪರ್ ಫೆಕ್ಟ್ ಪ್ಲೇಸ್. ಬೆಂಗಳೂರಿನಲ್ಲಿ ಅನೇಕ ಕೆರೆಗಳಿವೆ. ಒಂದು ಎರಡು, ಮೂರು ಅಲ್ಲ ಅದಕ್ಕಿಂತ ಹೆಚ್ಚು. ಒಂದು ಕಾಲದಲ್ಲಿ ಬೆಂಗಳೂರು ನಗರದಲ್ಲಿ ಅನೇಕ ಕೆರೆಗಳು ಇದ್ದರಿಂದ ಇದನ್ನು ‘ಸಿಟಿ ಆಫ್ ಲೇಕ್ಸ್’ ಎಂದು ಕರೆಯಲಾಗುತ್ತಿತ್ತು.

lake

ಪ್ರಸ್ತುತ ಎಲ್ಲಾ ಕೆರೆಗಳನ್ನು ನಿರ್ವಹಿಸಲಾಗದಿದ್ದರೂ, ಅವುಗಳಲ್ಲಿ ಹಲವು ಸರ್ಕಾರಿ ಅಥವಾ ಸರ್ಕಾರೇತರ ಸಂಸ್ಥೆಗಳಿಂದ ನಿರ್ವಹಿಸಲ್ಪಡುತ್ತಿವೆ. ಈ ಕೆರೆಗಳು ಕುಟುಂಬ ಅಥವಾ ಸ್ನೇಹಿತರೊಂದಿಗೆ ಪಿಕ್ನಿಕ್ ಆನಂದಿಸಲು ಮತ್ತು ಅವರೊಂದಿಗೆ ಉತ್ತಮ ಸಮಯವನ್ನು ಕಳೆಯಲು ಸೂಕ್ತವಾದ ಸ್ಥಳಗಳಾಗಿವೆ. ಇಲ್ಲಿ ನೀವು ಬೋಟಿಂಗ್‌ ಜೊತೆಗೆ ಪಕ್ಷಿಗಳನ್ನು ನೋಡಬಹುದು. ಶಾಂತಿಯುತ ವಾತಾವರಣದಲ್ಲಿ ಪ್ರಕೃತಿಯ ಕೆಲವು ಸುಂದರ ಚಿತ್ರಗಳನ್ನು ಕ್ಲಿಕ್ ಮಾಡಬಹುದು. ಆದ್ದರಿಂದ, ಇಂದು ಈ ಲೇಖನದಲ್ಲಿ, ಬೆಂಗಳೂರಿನ ಕೆಲವು ಸುಂದರವಾದ ಕೆರೆಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.

lake

ಹಲಸೂರು ಕೆರೆ ಬೆಂಗಳೂರಿನ ಎಂಜಿ ರಸ್ತೆ ಬಳಿಯಿರುವ ಹಲಸೂರು ಪ್ರದೇಶದಲ್ಲಿದೆ. ಇದು ಬೆಂಗಳೂರಿನ ಅತಿದೊಡ್ಡ ಕೆರೆಗಳಲ್ಲಿ ಒಂದಾಗಿದೆ. ಇದನ್ನು ಹಲಸೂರು ಲೇಕ್ ಎಂದೂ ಕರೆಯುತ್ತಾರೆ. ಇದು 123 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಪ್ರಕೃತಿ ಪ್ರಿಯರು ಈ ಕರೆಯನ್ನು ಒಮ್ಮೆಯಾದರೂ ನೋಡಲೇಬೇಕು. ಈ ಪ್ರದೇಶದ ಅತಿದೊಡ್ಡ ಮತ್ತು ಹಳೆಯ ಕರೆಗಳಲ್ಲಿರುವ ಒಂದಾಗಿರುವ ಬೆಂಗಳೂರಿನ ಹಲಸೂರು ಕೆರೆಯು ಹಚ್ಚ ಹಸಿರಿನಿಂದ ಕೂಡಿದೆ. ಇಲ್ಲಿ ವಿಶ್ರಾಂತಿ ಪಡೆಯುವುದರ ಜೊತೆಗೆ ಬೋಟಿಂಗ್, ಕುಟುಂಬ ಮತ್ತು ಸ್ನೇಹಿತರೊಂದಿಗೆ ಚಾರಣವನ್ನು ಆನಂದಿಸಬಹುದು. ಇದಲ್ಲದೆ, ಬೆಂಗಳೂರಿನ ಹಲಸೂರು ಸರೋವರಕ್ಕೆ ಭೇಟಿ ನೀಡಿದಾಗ, ನೀವು ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್ ಮತ್ತು ಇಂದಿರನಗರದಂತಹ ಅನೇಕ ಸ್ಥಳಗಳಿಗೆ ಭೇಟಿ ನೀಡಬಹುದು.

ಹೆಬ್ಬಾಳ ಕೆರೆ

ಹೆಬ್ಬಾಳ ಕೆರೆಯು ಬೆಂಗಳೂರಿನಲ್ಲಿರುವ ಮತ್ತೊಂದು ಅದ್ಭುತ ಸ್ಥಳವಾಗಿದೆ. ಇದು ಹೆಚ್ಚಿನ ಸಂಖ್ಯೆಯ ಜನರನ್ನು ಆಕರ್ಷಿಸುತ್ತದೆ. 150 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಹೆಬ್ಬಾಳ ಕೆರೆಯಲ್ಲಿ ವಿವಿಧ ಜಾತಿಯ ವಲಸೆ ಹಕ್ಕಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯಬಹುದು. ಛಾಯಗ್ರಾಹಕರು ಪ್ರಕೃತಿಯ ದೃಶ್ಯಗಳನ್ನು ಸೆರೆಹಿಡಿಯಬೇಕೆಂದರೆ ಇದು ಉತ್ತಮ ಸ್ಥಳವಾಗಿದೆ. ಇದರೊಂದಿಗೆ ಸೂರ್ಯಾಸ್ತ ಮತ್ತು ಸೂರ್ಯೋದಯದ ಅದ್ಭುತ ನೋಟವನ್ನು ನಾವಿಲ್ಲಿ ಆನಂದಿಸಬಹುದು.

lake

ಲಾಲ್ ಬಾಗ್ ಕೆರೆ

ಲಾಲ್ ಬಾಗ್ ಕೆರೆ ಬಟಾನಿಕಲ್ ಗಾರ್ಡನ್ ಒಳಗೆ ಇದೆ. ಇದು ಬೆಂಗಳೂರಿನ ಅತ್ಯುತ್ತಮ ಕೆರೆಯೆಂದು ಪರಿಗಣಿಸಲಾಗಿದೆ. ಹಚ್ಚ ಹಸಿರಿನ ಮರಗಳು ಮತ್ತು ಹೂವುಗಳು ಇರುವುದರಿಂದ ಈ ಸ್ಥಳವು ಛಾಯಾಗ್ರಹಣಕ್ಕೆ ಅತ್ಯುತ್ತಮವಾಗಿದೆ. ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಲಾಲ್ ಬಾಗ್ ಕೆರೆಯು ಪಕ್ಷಿ ವೀಕ್ಷಕರಿಗೆ ಅತ್ಯುತ್ತಮ ತಾಣವಾಗಿದೆ. ಏಕೆಂದರೆ ಈ ಸ್ಥಳಕ್ಕೆ ಅನೇಕ ವಲಸೆ ಹಕ್ಕಿಗಳು ಭೇಟಿ ನೀಡುತ್ತವೆ.

lake

ಅಗರ ಕೆರೆ

ಅಗರ ಕೆರೆಯು ಬೆಂಗಳೂರಿನಲ್ಲಿ ಉತ್ತಮವಾಗಿ ನಿರ್ವಹಿಸಲ್ಪಟ್ಟ ಕೆರೆಗಳಲ್ಲಿ ಒಂದಾಗಿದೆ. ಇದು 100 ಎಕರೆಯಲ್ಲಿ ವ್ಯಾಪಿಸಿದ್ದು, ಕೆರೆಯ ಸುತ್ತಲೂ ಜಾಗಿಂಗ್ ಟ್ರ್ಯಾಕ್ ಇದೆ. ಈ ಸ್ಥಳದ ಪ್ರಕೃತಿ ಸೌಂದರ್ಯವು ಎಂಥವರನ್ನು ಮೋಡಿಮಾಡುತ್ತದೆ. ಪ್ರವಾಸಿಗರು ಇಲ್ಲಿಗೆ ಬಂದು ಪ್ರಕೃತಿಯನ್ನು ಆನಂದಿಸುತ್ತಾರೆ. ಈ ಕೆರೆಯನ್ನು ವಿವಿಧ ಸಂಸ್ಥೆಗಳು ನಿರ್ವಹಿಸುತ್ತಿವೆ. ರಾತ್ರಿ ಸಮಯದಲ್ಲಿ ಸುತ್ತಮುತ್ತಲಿನ ಬೀದಿ ದೀಪಗಳನ್ನು ಪ್ರತಿಬಿಂಬಿಸುವಾಗ ಕೆರೆಯು ಮತ್ತಷ್ಟು ಸುಂದರವಾಗಿ ಕಾಣುತ್ತದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •