ರಾಜ್ಯದಲ್ಲಿ ಬಡಜನರಿಗಾಗಿ ಮತ್ತು ಬಡಜನರ ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯ ಸರ್ಕಾರ ಈಗಾಗಲೇ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ ಮತ್ತು ಈಗಲೂ ಕೂಡ ಹಲವು ಯೋಜನೆಗಳನ್ನ ಜಾರಿಗೆ ತರುತ್ತಲೇ ಇದೆ. ಇನ್ನು ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯ ಕಾರ್ಮಿಕರು ಇದ್ದು ರಾಜ್ಯದ ಎಲ್ಲಾ ಕಾರ್ಮಿಕರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಈಗ ಹೊಸ ಯೋಜನೆಯನ್ನ ಜಾರಿಗೆ ತರಲು ನಿರ್ಧಾರವನ್ನ ಮಾಡಿದೆ. ಹೌದು ಈಗ ರಾಜ್ಯದಲ್ಲಿ ಕಾರ್ಮಿಕ ಕಾರ್ಡ್ ಹೊಂದಿರುವ ಎಲ್ಲರಿಗೂ ರಾಜ್ಯ ಸರ್ಕಾರ ಈಗ ಬಂಪರ್ ಸಿಹಿಸುದ್ದಿಯನ್ನ ನೀಡಿದ್ದು ಕಾರ್ಮಿಕ ಕಾರ್ಡ್ ಹೊಂದಿರುವ ಎಲ್ಲಾ ಈ ಮಾಹಿತಿಯನ್ನ ತಪ್ಪದೆ ತಿಳಿದುಕೊಳ್ಳಿ.

ಹಾಗಾದರೆ ಕಾರ್ಮಿಕ ಕಾರ್ಡ್ ಹೊಂದಿದವರಿಗೆ ಬಂದಿರುವ ಆ ಸಿಹಿ ಸುದ್ದಿ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯನ್ನ ಕಾರ್ಮಿಕ ಕಾರ್ಡ್ ಹೊಂದಿರುವ ಎಲ್ಲರಿಗೂ ತಲುಪಿಸಿ. ಹೌದು ರಾಜ್ಯದಲ್ಲಿ ಕಾರ್ಮಿಕ ಕಾರ್ಡ್ ಮಾಡಿಸಿಕೊಂಡವರಿಗೆ ಸರ್ಕಾರದಿಂದ ವಿವಿಧ ಸೌಲಭ್ಯಗಳನ್ನ ನೀಡಲಾಗುತ್ತಿದ್ದು ಈ ಸೌಲಭ್ಯಗಳನ್ನ ಫಲಾನುಭವಿಗಳು ಪಡೆಯಬಹುದಾಗಿದೆ. ಹೌದು ರಾಜ್ಯ ಕಾರ್ಮಿಕ ಇಲಾಖೆಯ ವತಿಯಿಂದ ರಾಜ್ಯದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಡ್ ಹೊಂದಿದವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನ್ಯೂಟ್ರಿಷಿಯನ್ ಕಿಟ್, ಸ್ಕೂಲ್ ಕಿಟ್ ಹಾಗು ಕಂಪ್ಯೂಟರ್ ಗಳ ವಿತರಣೆ ಮಾಡಲಾಗುತ್ತಿದ್ದು ಕಾರ್ಮಿಕ ಕಾರ್ಡ್ ಹೊಂದಿದವರು ಇದೆ ನವೆಂಬರ್ 10 ನೇ ತಾರೀಕಿನ ಒಳಗಾಗಿ ಅರ್ಜಿಯನ್ನ ಸಲ್ಲಿಸಿ ಈ ಸೌಲಭ್ಯವನ್ನ ಪಡೆಯಬಹುದಾಗಿದೆ.

ಹೌದು ಕಾರ್ಮಿಕ ಕಾರ್ಡ್ ಹೊಂದಿರುವ ಮಕ್ಕಳ ಉನ್ನತವಾದ ಶಿಕ್ಷಣವನ್ನ ಪಡೆಯುತ್ತಿದ್ದರೆ, ಆದರೆ ಡಿಪ್ಲೋಮ, ITI, ಯಾವುದೇ ಡಿಗ್ರಿ ಅಥವಾ ಸ್ನಾತಕೋತ್ತರ ಪದವಿ ವಿಧ್ಯಾಭ್ಯಾಸವನ್ನ ಮಾಡುತ್ತಿದ್ದರೆ ಆ ಮಕ್ಕಳಿಗೆ ಉಚಿತವಾಗಿ ಲ್ಯಾಪ್ ಟಾಪ್ ಗಳನ್ನ ನೀಡಲಾಗುತ್ತಿದೆ. ಇನ್ನು ಅದೇ ರೀತಿಯಲ್ಲಿ ಕಾರ್ಮಿಕ ಕಾರ್ಡ್ ಹೊಂದಿದವರ ಮಕ್ಕಳು 3 ವರ್ಷದ ಒಳಗಿನವರು ಆಗಿದ್ದರೆ ಆ ಮಕ್ಕಳಿಗೆ ನ್ಯೂಟ್ರಿಷಿಯನ್ ಕಿಟ್ ನೀಡಲಾಗುತ್ತದೆ ಮತ್ತು 1 ನೇ ತರಗತಿಯಿಂದ 5 ನೇ ತರಗತಿಯ ಮಕ್ಕಳಿಗೆ ಸ್ಕೂಲ್ ಕಿಟ್ ನೀಡಲಾಗುತ್ತದೆ.

ಇನ್ನು ಕಾರ್ಮಿಕ ಕಾರ್ಡ್ ಹೊಂದಿದವರ ಮಕ್ಕಳ 9 ನೇ ತರಗತಿಯಿಂದ 12 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಆ ಮಕ್ಕಳಿಗೆ ಸ್ಕೂಲ್ ಕಿಟ್ ಮತ್ತು ಕಂಪ್ಯೂಟರ್ ಅನ್ನು ನೀಡಲಾಗುತ್ತದೆ, ಆದರೆ ಡಿಪ್ಲೋಮ, ITI, ಪದವಿ ಮತ್ತು ಸ್ನಾತಕೋತ್ತರ ಪದವಿ ವಿಧ್ಯಾಭ್ಯಾಸ ಮಾಡುತ್ತಿರುವವರಿಗೆ ಲ್ಯಾಪ್ ಟಾಪ್ ಮಾತ್ರ ನೀಡಲಾಗುತ್ತದೆ. ಇನ್ನು ಈ ಎಲ್ಲಾ ಸೌಲಭ್ಯಗಳನ್ನ ಕೇವಲ ಕಾರ್ಮಿಕ ಕಾರ್ಡ್ ಹೊಂದಿದವರ ಮಕ್ಕಳಿಗೆ ಮಾತ್ರ ನೀಡಲಾಗುತ್ತದೆ, ಇನ್ನು ಕಾರ್ಮಿಕ ಕಾರ್ಡುಗಳನ್ನ ಹೊಂದಿದವರು ನಿಮ್ಮ ಜಿಲ್ಲೆಯ ಅಥವಾ ನಿಮ್ಮ ತಾಲೂಕಿನ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಇಲಾಖೆಯ ಕಚೇರಿಯಲ್ಲಿ ಅಂದರೆ ಕಾರ್ಮಿಕ ಇಲಾಖೆಯಲ್ಲಿ ಇದೆ ನವೆಂಬರ್ 10 ನೇ ತಾರೀಕಿನ ಒಳಗಾಗಿ ಅರ್ಜಿಯನ್ನ ಸಲ್ಲಿಸಿ ಯೋಜನೆಯ ಲಾಭವನ್ನ ಪಡೆಯಬಹುದಾಗಿದೆ.

ಇನ್ನು ಅರ್ಜಿಯನ್ನ ಸಲ್ಲಿಸುವಾಗ ನಿಮ್ಮ ಕಾರ್ಮಿಕ ಕಾರ್ಡ್, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಎರಡು ಭಾವ ಚಿತ್ರ ಮತ್ತು ಅದರ ಜೊತೆಗೆ ನಿಮ್ಮ ಮಕ್ಕಳು ಪ್ರಸ್ತುತವಾಗಿ ಅಭ್ಯಾಸ ಮಾಡುತ್ತರುವ ಶಾಲೆಯ ದೃಡೀಕರಣ ಪ್ರತಿಯನ್ನ ಲಗತ್ತಿಸಿ ಅರ್ಜಿಯನ್ನ ಭರ್ತಿ ಮಾಡಿ ಇಲಾಖೆಯಲ್ಲಿ ಕೊಟ್ಟು ಬರಬೇಕು. ಸ್ನೇಹಿತರೆ ಈ ಮಾಹಿತಿಯನ್ನ ನಿಮ ಮನೆಯಲ್ಲಿ ಯಾರಾದರೂ ಕಾರ್ಮಿಕ ಕಾರ್ಡ್ ಮಾಡಿಸಿಕೊಂಡವರು ಇದ್ದರೆ ಅಥವಾ ನಿಮಗೆ ತಿಳಿದಿರುವವರು ಕಾರ್ಮಿಕ ಕಾರ್ಡ್ ಮಾಡಿಸಿಕೊಂಡಿದ್ದರೆ ಈ ಮಾಹಿತಿಯನ್ನ ಅವರಿಗೆ ತಪ್ಪದೆ ತಲುಪಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •