ಸಾಮಾನ್ಯವಾಗಿ ನಟಿಯರು ತಮ್ಮ ಗ್ಲಾಮರಸ್ ಆಗಿರೋ ಫೋಟೋ ಗಳನ್ನು ಹಾಗೂ ವಿಧವಿಧವಾದ ಕಡೆಗಳಲ್ಲಿ, ವಿಭಿನ್ನವಾಗಿ ಡ್ರೆಸ್ ತೊಟ್ಟು, ಹೊಸ ಹೊಸ ಸ್ಟೈಲ್ ನಲ್ಲಿ ಮಾಡಿಸಿದ ಫೋಟೋ ಶೂಟ್ ಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಾ ಇರುತ್ತಾರೆ. ಅವರ ವಿತೌಟ್ ಮೇಕಪ್ ಫೋಟೋಗಳು ನಮಗೆ ಕಾಣೋದು ಅಪರೂಪ ಅಥವಾ ಅತಿ ವಿರಳ ಎಂದೇ ನಾವು ಹೇಳಬಹುದು. ಆದರೆ ಸ್ಯಾಂಡಲ್ ವುಡ್ ನ ಗೂಗ್ಲಿ ಸಿನಿಮಾ ಮೂಲಕ ಭರ್ಜರಿ ಯಶಸ್ಸನ್ನು ಪಡೆದ ನಟಿ ಕೃತಿ ಕರಬಂಧ ತನ್ನ ಒಂದು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಶಾ ಕ್ ನೀಡಿದ್ದಾರೆ.

ನಟಿ ಕೃತಿ ಕರಬಂಧ ಕನ್ನಡಕ್ಕಿಂತ ಪರಭಾಷೆಯಲ್ಲೇ ಸ್ವಲ್ಪ ಹೆಚ್ಚು ಬ್ಯುಸಿಯಾಗಿರುವ ಕಾರಣ ಕನ್ನಡದಿಂದ ಸ್ವಲ್ಪ ಅಂತರ ಕಾಯ್ದುಕೊಂಡಿರುವ ನಟಿ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ಅನಿಲ್ ಕಪೂರ್ ಜೊತೆ ನಟಿಸಿದ ಹೌಸ್ ಫುಲ್ -4 ಸಿನಿಮಾದ ಯಶಸ್ಸು ಕೃತಿ ಗೆ ಒಂದು ಸಂತಸವನ್ನು ನೀಡಿದೆ. ಪ್ರಸ್ತುತ ಕೃತಿ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದು ಈ ವೇಳೆ ಅವರು ತಮ್ಮ ಫೋಟೋ ಒಂದನ್ನು ಹಂಚಿಕೊಂಡು, ತನಗೆ ಮಲೇರಿಯಾ ಆಗಿದೆ ಎಂಬ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೇ ಸೊರಗಿ ಹೋದ ಮುಖದ ಪೋಸ್ಟ್ ಮಾಡಿ ಇದು ನನ್ನ ಮಲೇರಿಯಾ ಮುಖ ಎಂದು ಬರೆದುಕೊಂಡಿದ್ದಾರೆ.

Kriti-Kharbanda

ನನ್ನ ಬಗ್ಗೆ ಅನೇಕರು ಚಿಂತೆಗೀಡಾಗಿದ್ದೀರಿ ನಾನೀಗ ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿದ್ದೇನೆ. ಲಾಕ್ ಡೌನ್ ನಿಂದಾದ ಅಡೆ ತಡೆಗಳಿಂದ ನಾನು ತಾಳ್ಮೆ ಯನ್ನು ಕಲಿತಿದ್ದೇನೆ. ಶೀಘ್ರದಲ್ಲೇ ಇನ್ನಷ್ಟು ಸುಧಾರಿಸಿಕೊಳ್ಳಲಿದ್ದೇನೆ ಎಂದು ಕೃತಿ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಮಲೇರಿಯಾ ಕಾರಣದಿಂದ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ಅವರು ಮನೆಯಲ್ಲೇ ಬೋರ್ ಆಗುತ್ತಿದ್ದು ಫನ್ನಿ ಮೀಮ್ಸ್ ಶೇರ್ ಮಾಡಿ ಎಂದು ಮನವಿಯನ್ನು ಕೂಡಾ ಮಾಡಿದ್ದಾರೆ. ಇನ್ನು ಅವರ ಅಭಿಮಾನಿಗಳು ಕೂಡಾ ಕೃತಿ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •