ಗೂಗ್ಲಿ ಸಿನಿಮಾದ ನಾಯಕಿ ಕೃತಿ ಕರಬಂಧ ಅವರು ಈಗಾಗಲೇ ಬಾಲಿವುಡ್ ನಟನ ಜೊತೆ ಪ್ರೀತಿಯಲ್ಲಿದ್ದಾರೆ. ಆದರೆ ಅವರು ಮದುವೆಯಾಗೋದು ಯಾವಾಗ? ಎಂಬ ಪ್ರಶ್ನೆಗೆ ಕೃತಿ ಕರಬಂಧ ಅವರೇ ಉತ್ತರ ನೀಡಿದ್ದಾರೆ. ಹಾಗೂ ತಮ್ಮ ಗೆಳೆಯನ ಹುಟ್ಟುಹಬ್ಬದ ದಿನ ಕೃತಿ ಒಂದು ರೊಮ್ಯಾಂಟಿಕ್ ಫೋಟೋವನ್ನು ಸಹ ಶೇರ್ ಮಾಡಿಕೊಂಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ನಟನೆಯ ಗೂಗ್ಲಿ ಸಿನಿಮಾದ ನಟಿ ಕೃತಿ ಕರಬಂಧ ಅವರು ಬಾಲಿವುಡ್ ನಟ ಪುಲ್ಕಿಟ್ ಸಾಮ್ರಾಟ್‌ರನ್ನು ಪ್ರೀತಿ ಮಾಡುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಈ ಜೋಡಿ ಪ್ರೀತಿಯಲ್ಲಿ ಬಿದ್ದು ಎರಡು ವರ್ಷಗಳಾಗುತ್ತ ಬಂತು. ಹಾಗಾದರೆ ಮದುವೆ ಯಾವಾಗ? ಎಂಬ ಪ್ರಶ್ನೆಗೆ ಬೆಂಗಳೂರು ಮಿರರ್‌ ಗೆ ಕೃತಿ ಉತ್ತರ ನೀಡಿದ್ದಾರೆ. ಪುಲ್ಕಿಟ್ ತುಂಬ ಪ್ರಾಮಾಣಿಕ, ಸತ್ಯವಂತ. ಅವರನ್ನು ಅವರು ತುಂಬ ಪ್ರೀತಿಸುತ್ತಾರೆ. ಒಂದೂವರೆ ವರ್ಷಗಳಿಂದ ನಾವು ಡೇಟ್ ಮಾಡುತ್ತಿದ್ದೇವೆ, ಮದುವೆ ಬಗ್ಗೆ ಇನ್ನೂ ಏನೂ ಚರ್ಚೆ ಮಾಡಿಲ್ಲ. ಶೀಘ್ರವಾಗಿ ಮದುವೆ ಆಗಬೇಕು ಎನ್ನುವ ಪ್ಲ್ಯಾನ್ ಕೂಡ ಇಲ್ಲ. ನಾವು ನಮ್ಮ ವೃತ್ತಿಯ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದೇವೆ. ಮದುವೆ ಎನ್ನುವುದು ದೂರದ ಮಾತು ಎಂದು ಕೃತಿ ಹೇಳಿದ್ದಾರೆ. ಅನೀಸ್‌ ಬಜ್ಮಿ ನಿರ್ದೇಶನದ ಪಾಗಲ್‌ಪಂತಿ ಸಿನಿಮಾದಲ್ಲಿ ಪುಲ್ಕಿತ್ ಸಾಮ್ರಾಟ್‌ ಮತ್ತು ಕೃತಿ ಖರಬಂಧ ಒಟ್ಟಿಗೆ ನಟಿಸಿದ್ದರು. ಆಗಲೇ ಇವರಿಬ್ಬರಿಗೆ ಸ್ನೇಹ ಬೆಳೆದು, ಪ್ರೀತಿಯಲ್ಲಿ ಬಿದ್ದಿದ್ದರು. ಆಮೇಲೆ ಈ ವಿಚಾರವನ್ನು ಕೃತಿ, ಪುಲ್ಕಿತ್ 2019ರ ನವೆಂಬರ್‌ನಲ್ಲಿ ಹೊರಹಾಕಿದ್ದರು. ಪುಲ್ಕಿಟ್ ಹಾಗೂ ಕೃತಿ ಈಗಾಗಲೇ ಸಾಕಷ್ಟು ಹಾಲಿಡೇ ಎಂಜಾಯ್ ಮಾಡಿದ್ದಾರೆ.

ಕೃತಿ ಕರಬಂಧ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಮಾಡಲಾಗಿತ್ತು. ಕೃತಿ ಕರಬಂಧ ಬರ್ತಡೇಗೆ ಸೋಶಿಯಲ್ ಮೀಡಿಯಾದಲ್ಲಿ ಕೃತಿ ಫೋಟೋ ಹಾಕಿ, ಹೇ ಹುಡುಗಿ, ಹುಟ್ಟುಹಬ್ಬದ ಶುಭಾಶಯಗಳು, ನಿನ್ನ ಜೊತೆಗೆ ಜೀವನ ಮಜವಾಗಿದೆ. ಡಾನ್ಸ್ ಮಾಡೋಣ, ಬಾಲ್ಕನಿ ಡೇಟ್ ಮಾಡೋಣ, ಉತ್ತಮ ಆಹಾರ ಸೇವಿಸೋಣ ಎಂದು ಬರೆದು ಶುಭಾಶಯ ಹೇಳಿದ್ದಾರೆ. ಇನ್ನು ಕೃತಿ ಕರಬಂಧ ಅವರ ಮುಖದಲ್ಲಿ ಪುಲ್ಕಿಟ್ ಸದಾ ನಗು ತರಿಸಲು ಪ್ರಯತ್ನಪಡುತ್ತಾರೆ ಎಂದು ಕೃತಿ ಕರಬಂಧ ಹೇಳಿದ್ದಾರೆ. ಲಾಕ್‌ಡೌನ್ ಟೈಮ್‌ನಲ್ಲಿ ಒಂದೇ ಮನೆಯಲ್ಲಿಯೇ ಇವರಿಬ್ಬರು ಕಾಲ ಕಳೆದಿದ್ದರು. ಅದರ ಜೊತೆಗೆ ಪುಲ್ಕಿತ್ ಜೊತೆಗೆ ಕೃತಿ ವೀರೆ ಕೆ ವೆಡ್ಡಿಂಗ್, ಪಾಗಲ್ ಪಂಥಿ ಚಿತ್ರ ಮಾಡಿದ್ದರು.

ಇನ್ನು ತಮ್ಮ ಗೆಳೆಯ ಪುಲ್ಕಿಟ್ ಹುಟ್ಟುಹಬ್ಬಕ್ಕೆ ಶುಭ ಕೋರಿ ಫೋಟೋ ಹಂಚಿಕೊಂಡ ಕೃತಿ, ಬಾಲಿವುಡ್ ನಟ ಪುಲ್ಕಿಟ್ ಸಾಮ್ರಾಟ್ ಡಿಸೆಂಬರ್ 29 ರಂದು ತಮ್ಮ 37 ನೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇನ್ಸ್ತಾಗ್ರಾಂ ನಲ್ಲಿ ತನ್ನ ಗೆಳೆಯನಿಗೆ ಕಿಸ್ ಮಾಡುತ್ತಿರುವ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಕೃತಿ ಮತ್ತೆ ನೀನು ಒಂದು ವರ್ಷ ಚಿಕ್ಕವನಾದಂತೆ ಕಾಣುತ್ತೀಯ ನೀನು ಕೋಟಿಗೊಬ್ಬ ನಿನ್ನ ಹಾಗೆ ಬೇರೆ ಯಾರೂ ಇರಲು ಸಾಧ್ಯವಿಲ್ಲ ಐ ಲವ್ ಯು ಬೇಬಿ ಎಂದು ಬರೆದು ವಿಶ್ ಮಾಡಿದ್ದಾರೆ ಕೃತಿ. ಇತ್ತ ಪುಲ್ಕಿಟ್ ಸಾಮ್ರಾಟ್ ಸಾಮ್ರಾಟ್ ಕೂಡಾ ಬರ್ತಡೇ ಸೂಟ್ ಹಾಕಿರುವ ಫೋಟೋ ಶೇರ್ ಮಾಡಿಕೊಂಡು ಸಂಭ್ರಮಿಸಿದ್ದಾರೆ. ಚಿರಂಜೀವಿ ಸರ್ಜಾ ಅಭಿನಯದ ಚಿರು ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಕೃತಿ ತನ್ನ ಮೊದಲ ಸಿನಿಮಾದಲ್ಲೇ ನಿರ್ದೇಶಕರ ಮೆಚ್ಚಿನ ನಾಯಕಿ ಆದರು. ನಂತರದ ದಿನಗಳಲ್ಲಿ ಶಿವರಾಜಕುಮಾರ್ , ಯಶ್ ಸೇರಿದಂತೆ ಮುಂತಾದ ಸ್ಟಾರ್ ನಟರ ಜೊತೆಗೆ ಅಭಿನಯಿಸಿದ್ದಾರೆ. ಹಿಂದಿಯಲ್ಲಿ ಕೂಡಾ ಶಾದಿ ಮೆ ಜರೂರ್ ಆನ ಮತ್ತು ಹೌಸ್ಫುಲ್ ಸಿನಿಮಾದಲ್ಲಿ ಕೂಡಾ ಕೃತಿ ನಟಿಸಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •