ಕೊಪ್ಪಳ ಜಿಲ್ಲೆಯಲ್ಲಿ ಭಾರತೀಯ ಸೇನೆಗೆ ಆಯ್ಕೆಯಾದ ಇಬ್ಬರು ಯುವತಿಯರು.!

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಹೆಣ್ಣು ಮಕ್ಕಳು ಯಾವುದೇ ಕೆಲಸಕ್ಕೂ ಕಮ್ಮಿ ಇಲ್ಲ ಅನ್ನೋದಕ್ಕೆ ಈ ಇಬ್ಬರು ಯುವತಿಯರೆ ಸಾಕ್ಷಿ.. ಯಾಕೆಂದರೆ ಕೊಪ್ಪಳ ಜಿಲ್ಲೆಯ ಬಿಳೇಕಲ್ ತಾಲ್ಲೂಕಿನಲ್ಲಿ ವಾಸಿಸುತ್ತಿರುವ ರೇಷ್ಮಾ ಮಹೇಶ್ ಗೌಡ ಹಾಗೂ ವೀಣಾ ದೇವಪ್ಪ ಗೌಡ ಇಬ್ಬರು ಬಿಎಸ್ಎಫ್​​ಗೆ ಸೇನೆಗೆ ಆಯ್ಕೆಯಾಗಿದ್ದಾರೆ.. ಭಾರತೀಯ ಸೇನೆಯಲ್ಲಿ ಸೇರಬೇಕು ದೇಶ ಸೇವೆ ಮಾಡಬೇಕು ಎಂದು ಎಷ್ಟೋ ಜನ ಯುವಕ ಯುವತಿಯರು ನಾನಾ ರೀತಿಯಲ್ಲಿ ಕಷ್ಟಗಳನ್ನು ಎದುರಿಸತ್ತಿರುತ್ತಾರೆ..

Koppal

ಅದರು ಕೂಡ ಎಷ್ಟೋ ಜನರಿಗೆ ದೇಶಕ್ಕಾಗಿ ಸೇವೆ ಸಲ್ಲಿಸುವ ಅವಕಾಶ ಅವರಿಗೆ ಸಿಗುವುದಿಲ್ಲ.. ಇನ್ನೂ ಭಾರತೀಯ ಸೇನೆಯ ಹೆಸರು ಕೆಳಿದರೆ ಸಾಕು ಎಂಥವರಿಗೂ ಒಂದು ಕ್ಷಣ ಮೈ ರೋಮಾಂಚನ ಆಗುತ್ತದೆ.. ಆದರೆ ಸ್ನೇಹಿತರೆ ನಾವು ದೇಶದವನ್ನು ಆಳುವ ರಾಜಕಾರಣಿಗಳಿಗೆ ಗೌರವ ಕೋಡುತ್ತೇವೋ ಏನೋ ಗೊತ್ತಿಲ್ಲ.. ಆದರೆ ನಮಗೆ ದೇಶಕ್ಕಾಗಿ ಸೇವೆ ಮಾಡುವ ಅವಕಾಶ ಸಿಗದಿದ್ದರೂ ದೇಶಕ್ಕಾಗಿ ಹಗಲು ರಾತ್ರಿ ಎನ್ನದೇ ಸೇನೆಯಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುವ ಪ್ರತಿಯೊಬ್ಬ ಸೈನಿಕರಿಗೆ ಗೌರವವನ್ನು ಸಲ್ಲಿಸುತ್ತೇವೇ..

ಇದೀಗ ಕೊಪ್ಪಳ ಜಿಲ್ಲೆಯ ಬಿಳೇಕಲ್ ತಾಲ್ಲೂಕಿನಲ್ಲಿ ವಾಸಿಸುತ್ತಿದ್ದ ಒಂದೇ ಕುಟುಂಬ ಇಬ್ಬರು ಯುವತಿಯರು ಭಾರತೀಯ ಬಿಎಸ್ಎಫ್​​ಗೆ ಸೇನೆಗೆ ಆಯ್ಕೆಯಾಗಿದ್ದಾರೆ.. ಇಬ್ಬರು ಯುವತಿಯರು ಸೇನೆಗೆ ತೆರಳುವಾಗ ಅವರ ಕುಟುಂಬದವರು ಹಾಗು ಊರಿನ ಗ್ರಾಮಸ್ಥರು ಯುವತಿಯರನ್ನು ಅಭಿಮಾನದಿಂದ ಅವರಿಗೆ ಆರತಿ ಮಾಡಿ ಸೇನೆಗೆ ಕಳುಹಿಸುತ್ತಿರುವ ವೀಡಿಯೋ ಈಗಾಗಲೇ ಸೋಶಿಯಲ್ ಮೀಡಿಯಾದಂಲ್ಲಿ ಸಕ್ಕತ್ ವೈರಲ್ ಆಗಿದೆ.. ಈ ಇಬ್ಬರು ಯುವತಿಯರು ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಟೆಕನಪುರದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ, ಅಲ್ಲದೆ ಇವರಿಬ್ಬರೂ ಕೂಡ ಸಹೋದರ ಸಂಬಂಧಿಗಳು ಅನ್ನೊದು ಮತ್ತೊಂದು ವಿಶೇಷ.. ಸ್ನೇಹಿತರೆ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •