ವಿಜಯ್ ಪತ್ನಿ ಕೀರ್ತಿ

ದುನಿಯಾ ವಿಜಯ್ ಪತ್ನಿ ಕೀರ್ತಿಯವರ ವರ್ಕೌಟ್ ವಿಡಿಯೊ ವೈರಲ್…

Home

ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ ಗೆ ವಿಶೇಷ ಮಹತ್ವವನ್ನು ನೀಡಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಕೊರೊನಾ ಹಾಗೂ ಅದರ ನಂತರದ ಕಾಲದಲ್ಲಿ ಜನರು ಹಿಂದೆಂದಿಗಿಂತಲೂ ಹೆಚ್ಚು ಮಹತ್ವವನ್ನು ಆರೋಗ್ಯದ ಕಡೆಗೆ ನೀಡುತ್ತಿದ್ದಾರೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ದೈಹಿಕ ವ್ಯಾಯಾಮ ಮತ್ತು ಉತ್ತಮ ಆರೋಗ್ಯ ಮೊದಲ ಮದ್ದು ಎನ್ನುವ ಜಾಗೃತಿ ಮೂಡಿದ ಹಿನ್ನೆಲೆಯಲ್ಲಿ ಜನರು ಯೋಗ, ವ್ಯಾಯಾಮ ಹಾಗೂ ಜಿಮ್ ಗಳಲ್ಲಿ ವರ್ಕೌಟ್ ಮಾಡುವ ಕಡೆಗೂ ಗಮನವನ್ನು ಹರಿಸುತ್ತಿದ್ದಾರೆ.

ಬಹಳಷ್ಟು ಜನರು ತಮ್ಮ ಮನೆಗಳಲ್ಲಿ, ಜಿಮ್ ಗಳಲ್ಲಿ ದೇಹವನ್ನು ದಂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆರೋಗ್ಯವೇ ಮಹಾಭಾಗ್ಯ ಎನ್ನುವುದು ಜನರ ಮೊದಲ ಆದ್ಯತೆಯಾಗಿದೆ.  ಸೆಲೆಬ್ರಿಟಿಗಳು ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಇದ್ದಾರೆ. ಬಾಲಿವುಡ್ ನಿಂದ ಹಿಡಿದು ಟಾಲಿವುಡ್ ವರೆಗೆ ಅನೇಕ ಜನ ಸೆಲೆಬ್ರಿಟಿಗಳು ಜನರಿಗೆ ಫಿಟ್ನೆಸ್ ಕುರಿತಾಗಿ ಪಾಠ ಮಾಡುವ ಕಾಯಕವನ್ನು ಮಾಡುತ್ತಿದ್ದಾರೆ.

ತಾವು ಜಿಮ್ ನಲ್ಲಿ ವರ್ಕೌಟ್ ಮಾಡುವ ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳು ಹಾಗೂ ನೆಟ್ಟಿಗರಿಗೆ ಪ್ರೇರಣೆ ಹಾಗೂ ಪ್ರೋತ್ಸಾಹ ವನ್ನು ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಅಂತಹುದೇ ಒಂದು ಪ್ರಯತ್ನವನ್ನು ಈಗ ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಅವರ ಪತ್ನಿ ಕೀರ್ತಿ ಅವರು ಸಹಾ ಮಾಡಿದ್ದು, ಅವರ ವರ್ಕೌಟ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದುನಿಯಾ ವಿಜಿ ಸಂಗಾತಿ ಕೀರ್ತಿ ಗೌಡ ಯಾರು?

ದುನಿಯಾ ವಿಜಯ್ ಅವರ ಪತ್ನಿ ಕೀರ್ತಿ ಪಟ್ಟಾಡಿ ಅವರು ವೀಡಿಯೋವನ್ನು ಶೇರ್ ಮಾಡಿಕೊಂಡಿರುವ ವೀಡಿಯೋವನ್ನು ನೋಡಿದಾಗ ಅವರು ಫುಲ್ ಆ್ಯಕ್ಟೀವ್ ಆಗಿ ವರ್ಕೌಟ್ ಮಾಡುತ್ತಿರುವುದನ್ನು ನಾವು ನೋಡಬಹುದು. ಕೀರ್ತಿ ಅವರು ಜಿಮ್ ನಲ್ಲಿ ಭಿನ್ನ, ವಿಭಿನ್ನವಾದ ಎಕ್ಸೈಸ್ ಮಾಡುತ್ತಿರುವುದನ್ನು ನಾವು ನೋಡಬಹುದಾಗಿದೆ.

ಅವರು ಜಿಮ್ ನಲ್ಲಿ ದೇಹ ದಂಡಿಸುವುದನ್ನು ನೋಡಿದಾಗ ಅವರು ಈಗಾಗಲೇ ಬಹಳ ಅಭ್ಯಾಸ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಕೀರ್ತಿ ಪಟ್ಟಾಡಿ ಅವರ ವರ್ಕೌಟ್ ಅನ್ನು ನೋಡಿ ನೆಟ್ಟಿಗರು ಸಹಾ ಮೆಚ್ಚುಗೆಯನ್ನು ನೀಡಿದ್ದಾರೆ. ಸ್ಟಾರ್ ಗಳು ಹಾಗೂ ಸೆಲೆಬ್ರಿಟಿಗಳು ಶೇರ್ ಮಾಡುವ ಫಿಟ್ನೆಸ್ ವೀಡಿಯೋಗಳು ಸಹಜವಾಗಿಯೇ ಎಲ್ಲರ ಗಮನವನ್ನು ಸೆಳೆಯುತ್ತದೆ.

ಈ ಹಿಂದೆ ಕೂಡಾ ನಟ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಅವರು ಶೇರ್ ಮಾಡಿಕೊಂಡ ಫಿಟ್ನೆಸ್ ವೀಡಿಯೋಗಳು ಸಹಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಹಳಷ್ಟು ಜನರು ಅವರ ವೀಡಿಯೋಗಳಿಗೆ ಮೆಚ್ಚುಗೆಯನ್ನು ನೀಡಿದ್ದಾರೆ‌. ಈಗ ಆ ಸಾಲಿಗೆ ದುನಿಯಾ ವಿಜಯ್ ಅವರ ಪತ್ನಿ ಕೀರ್ತಿ ಅವರು ಕೂಡಾ ಸೇರ್ಪಡೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಕೀರ್ತಿ ಅವರ ಫಿಟ್ನೆಸ್ ವೀಡಿಯೋಗಳು ಕೂಡಾ ಜನರ ಮೆಚ್ಚುಗೆ ಗಳಿಸುವುದರಲ್ಲಿ ಅನುಮಾನವಿಲ್ಲ.

ಆ ವಿಡಿಯೊ ಕೆಳಗಿದೆ ನೋಡಿ…
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...