ಒಂದು ಬಾರಿ ಒಬ್ಬ ರಾಜ ಕುದುರೆಯ ಮೇಲೆ ಸವಾರಿ ಮಾಡುತ್ತಾ ಊರಿನೊಳಗೆ ಬಂದು ಒಂದು ಮನೆಯ ಹತ್ತಿರ ನಿಂತುಕೊಂಡ. ಆ ಮನೆಯ ಒಡತಿ ಗಂಡನಿಗೆ ಊಟವನ್ನು ಬಡಿಸುತ್ತಿದ್ದಳು. ಇನ್ನೂ ಆ ಮನೆಯ ಒಡತಿ ತುಂಬಾ ಸುಂದರವಾಗಿದ್ದ ಕಾರಣ ರಾಜನಿಗೆ ಈ ಹೆಣ್ಣಿನ ಮೇಲೆ ಕಣ್ಣು ಬೀಳುತ್ತದೆ.  ತದನಂತರ ಆಶ್ಚರ್ಯಗೊಂಡು ತನ್ನ ರಾಜ್ಯದಲ್ಲಿ ಇಂತಹ ಚೆಲುವೆಯನ್ನ ಇದುವರೆಗೂ ನೋಡೇ ಇಲ್ಲ ಎಂದುಕೊಳ್ಳುತ್ತಾನೆ. ಇನ್ನೂ ಈ ಸುಂದರ ಮಹಿಳೆಯ ಗಂಡ ಊಟ ಮುಗಿಸಿಕೊಂಡು ತನ್ನ ವ್ಯವಹಾರಕ್ಕೆ ಹೊರಗೆ ಹೋದ ನಂತರ ಬಾಗಿಲು ಹಾಕಿಕೊಂಡು ಈ ಮಹಿಳೆ ಒಳಗೆ ಇರುತ್ತಾಳೆ.

king-history

ಇದಾದ ನಂತರ ರಾಜ ಮನೆಯ ಹತ್ತಿರ ಬಂದು ಬಾಗಿಲನ್ನು ಬಡಿಯುತ್ತಾನೆ. ಆಕೆ ಬಂದು ಬಾಗಿಲನ್ನು ತೆರೆದು ನೋಡಿದಾಗ ರಾಜ ಇದ್ದುದ್ದನ್ನು ನೋಡಿ ಆಶ್ಚರ್ಯ ಪಡುತ್ತಾಳೆ. ನಂತರ ಮನೆಯ ಒಳಗೆ ಕರೆದು ಆಸನದ ಮೇಲೆ ರಾಜನನ್ನು ಕೂರಲು ಹೇಳುತ್ತಾಳೆ. ಆಗ ರಾಜನು ತನ್ನ ಬಗ್ಗೆ ಎಲ್ಲವನ್ನೂ ಹೇಳಿಕೊಳ್ಳುತ್ತಾ, ನೀನು ನನ್ನ ಹೆಂಡತಿಯಾಗಬೇಕೆಂದು ಆ ಮಹಿಳೆಗೆ ಹೇಳುತ್ತಾನೆ. ಒಂದು ವೇಳೆ ನೀನು ಒಪ್ಪಿದರೆ ರಾಣಿಯ ಸ್ಥಾನ ಕೂಡ ಕೊಡಲಾಗುತ್ತದೆ ಎಂದು ಹೇಳುತ್ತಾ‌ನೆ. ಅವಳು ಗುಣವಂತೆ ಮತ್ತು ಸಂಸ್ಕಾರ ಹೊಂದಿರುವಂತಹ ಮಹಿಳೆ ಆಗಿದ್ದ ಕಾರಣ ರಾಜನಿಗೆ ಹೀಗೆ ಹೇಳುತ್ತಾಳೆ.

king-history

ಮಹಾರಾಜ ನಿಮ್ಮ ಆಸೆಯನ್ನ ನೆರವೇರಿಸುತ್ತೇನೆ, ನೀವು ದಣಿದು ಬಂದಿದ್ದೀರಾ ನಿಮಗೆ ದೇಹದ ಹಸಿವು ಮತ್ತು ಮನಸಿನ ಹಸಿವು ಆಗಿದೆ ನೀವು ಬೇಗನೆ ಕೈ ಕಾಲು ತೊಳೆದುಕೊಂಡು ಬನ್ನಿ. ನನ್ನ ಗಂಡ ಈಗಷ್ಟೇ ಈ ಬಾಳೆ ಎಲೆಯಲ್ಲಿ ಊಟ ಮಾಡಿ ಹೋಗಿದ್ದಾನೆ ನೀವು ಇದೇ ಎಲೆಯಲ್ಲಿ ಕುಳಿತುಕೊಂಡು ಊಟ ಮಾಡಿ. ನಿಮಗೆ ತೃಪ್ತಿಯಾಗುವಷ್ಟು ಬಡಿಸುತ್ತೇನೆ ಆಮೇಲೆ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ರಾಜನಿಗೆ ಹೇಳುತ್ತಾಳೆ. ಅದಕ್ಕೆ ರಾಜ ಹೇಳುತ್ತಾನೆ ನಾನು ಈ ರಾಜ್ಯದ ಮಹಾರಾಜ ನಿನ್ನ ಗಂಡ ಊಟ ಮಾಡಿದ ಈ ಬಾಳೆ ಎಲೆಯನ್ನು ಎಂಜಲು ಮಾಡಿದ್ದಾನೆ. ಈ ಎಂಜಲು ಎಲೆಯಲ್ಲಿ ನಾನು ಹೇಗೆ ಊಟ ಮಾಡಲಿ ಎಂದು ಕೇಳುತ್ತಾನೆ.

ಆಗ ಈ ಮಹಿಳೆ ಹೇಳುತ್ತಾಳೆ! ಮಹಾರಾಜ ನನ್ನ ಗಂಡ ಈ ದೇಹವನ್ನು ಎಂಜಲು ಮಾಡಿಲ್ಲವೇ, ಈ ದೇಹವನ್ನು ಪ್ರೀತಿಸಲು ಎಂಜಲು ಅಡ್ಡ ಬರಲಿಲ್ಲ ಅಂದಮೇಲೆ ಊಟ ಮಾಡಲು ಎಂಜಲು ಹೇಗೆ ಅಡ್ಡ ಬರುತ್ತದೆ ಎಂದು ಹೇಳುತ್ತಾಳೆ. ಆಗ ರಾಜನಿಗೆ ತನ್ನ ತಪ್ಪಿನ ಬಗ್ಗೆ ಅರಿವಾಗುತ್ತದೆ. ನಂತರ ಆ ಮಹಿಳೆಯ ಹತ್ತಿರ ಕ್ಷಮಾಪಣೆ ಕೇಳಿ ಅರಮನೆಗೆ ಹೊರಟು ಹೋಗುತ್ತಾನೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •