ನಟ ನಿರ್ದೇಶಕ ನಿರ್ಮಾಪಕ ಕಿಚ್ಚ ಸುದೀಪ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇಪ್ಪತ್ತೈದು ವರ್ಷ ಕಳೆದಿದ್ದು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದಾರೆ.. ಇದೇ ಸಮಯದಲ್ಲಿ ಸುದೀಪ್ ಅವರ ಮುಂದಿನ ಸಿನಿಮಾ ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಕೂಡ ಬಿಡುಗಡೆ ಮಾಡಿದ್ದು ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದ ಮೇಲೆ ಲಾಂಚ್ ಮಾಡಲಾಗಿದೆ.. ಮೂರು ನಿಮಿಷಗಳ ಕಾಲ ಕಿಚ್ಚ ಸುದೀಪ್ ಅವರ ಫೋಟೋ ಬುರ್ಜ್ ಖಲೀಫಾದ ಮೇಲೆ ರಾರಾಜಿಸಿದ್ದು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ.. ಆದರೆ ಈ ಮೂರು ನಿಮಿಷದ ಫೋಟೋ ಡಿಸ್ಪ್ಲೇ ಮಾಡಲು ಕೊಟ್ಟ ಹಣವೆಷ್ಟು ಎಂಬುದು ತಿಳಿದರೆ ನಿಜಕ್ಕೂ ಶಕ್ ಆಗೋದು ಖಂಡಿತ..

kichcha-Sudeep

ಈ ಹಿಂದೆಯೂ ಸಹ ಸಾಕಷ್ಟು ಸೆಲಿಬ್ರೆಟಿಗಳ ಹುಟ್ಟುಹಬ್ಬಕ್ಕೆ.. ಹಾಗೂ ದೇಶ ವಿದೇಶದ ವಿವಿಧ ಆಚರಣೆಗಳ ಕುರಿತ ಫೋಟೋಗಳನ್ನು ಬುರ್ಜ್ ಖಲೀಫಾದ ಮೇಲೆ ಬಿಡುಗಡೆ ಮಾಡಲಾಗಿತ್ತು.. ಆದರೆ ಇದೇ ಮೊದಲ ಬಾರಿಗೆ ಕನ್ನಡದ ಸಿನಿಮಾವೊಂದರ ಪೋಸ್ಟರ್ ಅನ್ನು ಬುರ್ಜ್ ಖಲೀಫಾದ ಮೇಲೆ ಬಿಡುಗಡೆ ಮಾಡಿದ್ದು ಕನ್ನಡದ ಸಿನಿಮಾ ಅಭಿಮಾನಿಗಳು ಸಂತೋಷಪಟ್ಟಿದ್ದಾರೆ..

ಹೌದು ಕಿಚ್ಚ ಸುದೀಪ್ ಅವರು ಅಭಿನಯದ ಫ್ಯಾಂಟಮ್ ಸಿನಿಮಾದ ಹೆಸರನ್ನು ಬದಲಿಸಿದ್ದು. ಹೆಸರು ಬದಲಾವಣೆಯನ್ನು ವಿಶೇಷವಾಗಿ ತಿಳಿಸಬೇಕೆಂದು ಈ ರೀತಿ‌ ಮಾಡಲಾಗಿದೆ.. ಇಂದಿಗೆ ಸುದೀಒ ಅವರು ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಕಳೆದಿದ್ದು ಈ ದಿನವನ್ನು ಮತ್ತಷ್ಟು ಸ್ಮರಣೀಯವನ್ನಾಗಿಸಬೇಕೆಂದು ಈ ರೀತಿ ಮಾಡಿದ್ದಾರೆ..

kichcha-Sudeep

ವಿಶ್ವದ ಅತಿ ಎತ್ತರದ ಕಟ್ಟಡವಾಗಿರುವ ಬುರ್ಜ್ ಖಲೀಫಾದ ಮೇಲೆ ವಿಕ್ರಾಂತ್ ರೋಣ ರಾರಾಜಿಸಿದ್ದು ಎರಡು ಸಾವಿರ ಅಡಿಯ ಕಿಚ್ಚ ಸುದೀಒ ಅವರ ಪೋಸ್ಟರ್ ಅನ್ನು ಡಿಸ್ಪ್ಲೇ ಮಾಡಲಾಗಿದೆ..

ಎರಡು ಸಾವಿರ ಅಡಿಯ ಕಟ್ಟಡದ ಮೇಲೆ ಮೂರು ನಿಮಿಷಗಳ ಕಾಲ ಕಿಚ್ಚ ಸುದೀಪ್ ಅವರ ಕಟೌಟ್​ ಅನ್ನು ಪ್ರಸಾರ ಮಾಡಿದ್ದು ಕಿಚ್ಚನ ಅಭಿಮಾನಿಗಳು ಹಾಗೂ ಸಿನಿಮಾ ಪ್ರಿಯರು ಕಣ್ತುಂಬಿಕೊಂಡಿದ್ದಾರೆ.. ಇನ್ನು ಈ ಅದ್ಭುತ ಕ್ಷಣಕ್ಕೆ ಅಂದರೆ ಮೂರು ನಿಮಿಷದ ಫೋಟೋ ಡಿಸ್ಪ್ಲೇ ಮಾಡಲು ಬರೋಬ್ಬರಿ ಎಪ್ಪತ್ತು ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂದು ತಿಳಿದು ಬಂದಿದೆ..

kichcha-Sudeep

ಇನ್ನು ಈ ಅದ್ಭುತ ಕ್ಷಣವನ್ನು ಕಿಚ್ಚ ಸುದೀಪ್ ಅವರ ತಂಡ ಒಂದೂವರೆ ಕಿಲೋಮೀಟರ್ ದೂರದಿಂದ ಒಟ್ಟು ಆರು ಕ್ಯಾಮೆರಾಗಳಲ್ಲಿ ಚಿತ್ರೀಕರಣ ಮಾಡಲಾಗಿದೆ‌‌.. ಅಷ್ಟೇ ಅಲ್ಲದೇ ಸುದೀಲ್ ಅವರ ಸಿನಿಮಾ ಜರ್ನಿಗೆ 25 ವರ್ಷ ಕಳೆದ ಕಾರಣ ಬುರ್ಜ್ ಖಲೀಫಾದ ಮೇಲೆ ಚಿಕ್ಕದಾಗಿ ಸುದೀಪ್​ರ 25 ವರ್ಷಗಳ ಸಿನಿ ಜರ್ನಿಯ ಪರಿಚಯವನ್ನೂ ಸಹ ಬಿತ್ತರಿಸಲಾಗಿದೆ.. ಇನ್ನು ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು ರಂಗೀತರಂಗ ಸಿನಿಮಾ ನಿರ್ದೇಶಕ ಅನುಪ್ ಭಂಡಾರಿ‌ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಬಹಳಷ್ಟು ಕುತೂಹಲ ಮೂಡಿಸಿದೆ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •