ಕೀರ್ತಿ

ಫೇಸ್ಬುಕ್ನಲ್ಲಿ ಮಾಡಿದ ಒಂದೇ ಒಂದು ಕಾಮೆಂಟ್ ಇಂದ ಕಿರಿಕ್ ಕೀರ್ತಿ,ಪತ್ನಿಯ ಜೀವನ ಏನಾಗಿದೆ ಗೊತ್ತಾ.??

Home Kannada News/ಸುದ್ದಿಗಳು

ನಮಸ್ಕಾರ ಸ್ನೇಹಿತರೇ, ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುವುದು ಒಂದು ಕಾಯಕದ ರೀತಿ ಹಾಗೆ ಹೋಗಿಬಿಟ್ಟಿದೆ. ಸೆಲೆಬ್ರಿಟಿಗಳು ಏನು ಮಾಡಿದರೂ ಸಹ ಅದರಲ್ಲಿ ಒಂದು ತಪ್ಪು ಹುಡುಕಿ ಕಮೆಂಟ್ ಮಾಡುತ್ತಾರೆ.ಅದರಿಂದ ಅವರಿಗೆ ಏನು ಸಿಗುತ್ತದೆ ಗೊತ್ತಿಲ್ಲ. ಇಂಥದ್ದೇ ಘಟನೆ ಈಗ ಮತ್ತೊಮ್ಮೆ ನಡೆದಿದೆ. ಬಿಗ್ ಬಾಸ್ ಕನ್ನಡ ಸೀಸನ್ ನಾಲ್ಕರ ರನ್ನರ್-ಅಪ್ ಆರ್ಜೆ ನ್ಯೂಸ್ ಲೀಡರ್ ಸೋಶಿಯಲ್ ಮೀಡಿಯಾದ ಇನ್ಫ್ಲುಎನ್ಸರ್ ಆಗಿರುವ ಕಿರಿಕ್ ಕೀರ್ತಿ ಅವರ ಹೆಂಡತಿಯ ಒಂದು ಫೋಟೋ ಗೆ ಇತ್ತೀಚಿಗೆ ಒಬ್ಬ ನೆಟ್ಟಿಗ ಹಾಕಿದ್ದ ಕಾಮೆಂಟ್ ನಿಂದಾಗಿ ಏನೆಲ್ಲಾ ಆಗಿದೆ ಗೊತ್ತಾ.

ಇದನ್ನು ಸ್ವತಹಾ ಕೀರ್ತಿ ಅವರೆ ಅಂಚಿ ಕೊಂಡಿದ್ದಾರೆ,ಈ ಫೋಟೋದ ಹಿಂದೆ ಒಂದು ಕಥೆ ಇದೆ. ಬಹಳ ಬೇಸರದಿಂದ ಇದನ್ನು ಶೇರ್ ಮಾಡುತ್ತಿದ್ದೇನೆ.ಇತ್ತೀಚೆಗೆ ನನ್ನ ಮಡದಿಯ ಜೊತೆ ಕೆಲವೊಂದಿಷ್ಟು ಫೋಟೋಗಳನ್ನು ಸೇರಿ ಮಾಡಿದ್ದೆ ಆ ಫೋಟೋಗಳಿಗೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದರು. ಅದರಲ್ಲಿ ಕೆಲವೊಬ್ಬರು ಅವಳನ್ನು ವಿಧವೆ ಎಂದು ಕರೆದಿದ್ದರು.ಆ ಕಾಮೆಂಟ್ ನನ್ನ ಅತ್ತೆ-ಮಾವನಿಗೆ ತುಂಬಾ ನೋವನ್ನುಂಟು ಮಾಡಿತ್ತು. ಅವತ್ತು ಆ ಫೋಟೋದಲ್ಲಿ ತಾಳಿ ಇರಲಿಲ್ಲ ಆದ ಕಾರಣಕ್ಕೆ ತುಂಬಾ ಜನ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು.ಆ ಕಾಮೆಂಟ್ ನಿಂದಾಗಿ ಅವರ ಅಪ್ಪ ಅಮ್ಮ ಅವಳ ಜೊತೆ ಮಾತನಾಡುವುದನ್ನು ಬಿಟ್ಟಿದ್ದರು.

ಯಾಕಮ್ಮ ಈಗೆಲ್ಲ ಮಾತಾಡ್ತಾರೆ ಅಂತ ಕಣ್ಣೀರು ಹಾಕಿದರು.15 ದಿನದಿಂದ ನನ್ನ ಅತ್ತೆ ಮಾವ ನನ್ನ ಮಡದಿ ಜೊತೆ ಮಾತನಾಡಿರಲಅತ್ತೆ ದಿನವೂ ನೊಂದುಕೊಳ್ಳುತ್ತಿದ್ದರು 15 ದಿನಗಳ ನಂತರ ಇವತ್ತು ಅವರು ಗೌರಿಹಬ್ಬ ಎಂದು ಮನೆಗೆ ಬಂದಾಗ ನನ್ನ ಮಡದೀ ಕಣ್ಣೀರು ಹಾಕಿದಳು.ಬಿಕ್ಕಿ ಬಿಕ್ಕಿ ಅತ್ತು ಅಪ್ಪ-ಅಮ್ಮನನ್ನು ತಬ್ಬಿ ಗಳಗಳನೆ ಕಣ್ಣೀರು ಹಾಕಿದಳು.ಒಂದು ಕಾಮೆಂಟ್ ಏನೆಲ್ಲ ಮಾಡಿಬಿಡ್ತು. ಅದ್ಯಾವ ಖುಷಿಗೆ ಕಾಮೆಂಟ್ ಮಾಡುತ್ತಾರೋ ಗೊತ್ತಿಲ್ಲ, ಒಂದು ಕಾಮೆಂಟ್ ಏನೆಲ್ಲ ಮಾಡಬಹುದು ಯೋಚಿಸಿ.

ಸೋಶಿಯಲ್ ಮೀಡಿಯಾ ನಾ ವಿಕೃತ ಸಂತೋಷಕ್ಕೆ ಬಳಸಬೇಡಿ ನನ್ನ ಮೇಲಿನ ಕೋಪ ನನ್ನ ಮೇಲೆ ಇರಲಿ ಕುಟುಂಬದವರ ಮೇಲೆ ಬೇಡ.ಒಂದು ಕೆಟ್ಟ ಕಾಮೆಂಟ್ ನಿಂದ ಎಷ್ಟು ಸಂಸಾರಗಳು ಹಾಳಾಗಿದೆ ಹಾಗಾಗಿಯೇ ಫೇಸ್ಬುಕ್ನಲ್ಲಿ ಕಾಮೆಂಟ್ ಆಪ್ಷನ್ ಡಿಲೀಟ್ ಮಾಡಿಬಿಟ್ಟೆ.ಬೇರೆಯವರ ವಿಕೃತಿಗೆ ನಾವ್ಯಾಕೆ ನೋವು ತಿನ್ನಬೇಕು. ಕೈಮುಗಿದು ಕೇಳುತ್ತೇನೆ ಪ್ಲೀಸ್ ಯಾರನ್ನು ನೋಯಿಸಬೇಡಿ ಇಷ್ಟವಿಲ್ಲ ಎಂದರೆ ಅನ್ ಫಾಲೋ ಮಾಡಿ ಕೆಟ್ಟದಾಗಿ ಯಾರಿಗೂ ಯಾವತ್ತೂ ಕಾಮೆಂಟ್ ಮಾಡಬೇಡಿ. ಕಣ್ಣೀರಿನಲ್ಲಿ ಟೈಪ್ ಮಾಡುತ್ತಿದ್ದೇನೆ ಅಲ್ಲಿರುವ ನನ್ನ ಮಗನ ಸಂತೋಷ ಈ ದಿನವೇ ನನ್ನ ಸ್ವರ್ಗ ಧನ್ಯವಾದ ತಪ್ಪಿದ್ದರೆ ಕ್ಷಮೆ ಇರಲಿ ನಿಮ್ಮ ಕಿರಿಕ್ ಕೀರ್ತಿ ಎಂದು ಬರೆದುಕೊಂಡಿದ್ದಾರೆ ಕಿರಿಕ್ ಕೀರ್ತಿ ಅವರು…
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...