ಸೀಮೆಎಣ್ಣೆ ವಿತರಣೆ:ಮಾಹಿತಿ ನೋಡಿ…

Home
ಸೀಮೆಎಣ್ಣೆ ವಿತರಣೆ:

ರಾಜ್ಯಾದ್ಯಂತ ಏಕರೂಪದ ಸೀಮೆಎಣ್ಣೆ ವಿತರಣಾ ದರವನ್ನು ಜಾರಿಗೊಳಿಸಲಾಗಿದೆ. ಪ್ರಸ್ತುತ ಅನಿಲ ರಹಿತ ಆದ್ಯತಾ ಮತ್ತು ಅಂತ್ಯೋದಯ ಪಡಿತರ ಚೀಟಿಗಳಿಗೆ ಪ್ರತಿ ಮಾಹೆ 3 ಲೀಟರ್ನಂತೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮ ಪಂಚಾಯತಿಗಳಲ್ಲಿ ನೋಂದಣಿಗೊಂಡಿರುವ ಅನಿಲ ಸಂಪರ್ಕ ಹೊಂದಿರುವ ಯಾವುದೇ ವರ್ಗದ ಪಡಿತರ ಚೀಟಿದಾರರಿಗೆ ಒಂದು ಲೀಟರ್ ಸೀಮೆಎಣ್ಣೆಯನ್ನು ಪ್ರತಿ ಲೀಟರ್ಗೆ ರೂ.35/-ರ ದರದಲ್ಲಿ ವಿತರಿಸಲಾಗುತ್ತಿದೆ.ಕರೊನಾ ಇಲ್ಲದಿದ್ದರೂ ಸೀಮೆಎಣ್ಣೆ ಕುಡಿದ ಯುವಕ! ಸಾಯಲು ಅಲ್ಲ, ಬದುಕಲು... ಮುಂದೆ  ಆಗಿದ್ದೆಲ್ಲವೂ ಅವಾಂತರ –

ಪ್ರಸ್ತುತ ಕೇಂದ್ರ ಸರ್ಕಾರದಿಂದ ವಿಶೇಷ ಉದ್ದೇಶಗಳಾದ ಜಾತ್ರೆ, ಪ್ರವಾಹ, ಮೀನುಗಾರಿಕೆ ಇತ್ಯಾದಿಗಳಿಗೆ ಹಂಚಿಕೆ ನೀಡಲಾಗುವ ಸಹಾಯಧನ ರಹಿತ ದರದಲ್ಲಿ ಖರೀದಿಸಬೇಕಾದ ಸೀಮೆಎಣ್ಣೆಯನ್ನು ಮೀನುಗಾರಿಕಾ ಉದ್ದೇಶಕ್ಕಾಗಿ ಜಿಲ್ಲಾಧಿಕಾರಿಗಳು ನೀಡುವ ಪರ್ಮಿಟ್ನ ಆಧಾರದ ಮೇಲೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಹಂಚಿಕೆ ನೀಡಲಾಗುತ್ತಿದೆ. ಪ್ರತಿ ದೋಣಿಗೆ 300 ಲೀ.ನಂತೆ ಪ್ರತಿ ಮಾಹೆ 1355 ಕೆ.ಎಲ್ ಸೀಮೆಎಣ್ಣೆಯನ್ನು ಮೀನುಗಾರಿಕಾ ಋತುವಿನಲ್ಲಿ ನೀಡಲಾಗುತ್ತಿದೆ.ಕರೊನಾ ಇಲ್ಲದಿದ್ದರೂ ಸೀಮೆಎಣ್ಣೆ ಕುಡಿದ ಯುವಕ! ಸಾಯಲು ಅಲ್ಲ, ಬದುಕಲು... ಮುಂದೆ  ಆಗಿದ್ದೆಲ್ಲವೂ ಅವಾಂತರ –

ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು ಅನೌಪಚಾರಿಕ ಪಡಿತರ ಪ್ರದೇಶಗಳಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ನಗರ ಪ್ರದೇಶಗಳಲ್ಲಿ ಪಡಿತರ ಸೀಮೆಎಣ್ಣೆ ವಿತರಣೆಯನ್ನು ಸ್ಥಗಿತಗೊಳಿಸಿ ಸೀಮೆಎಣ್ಣೆ ಮುಕ್ತ ಪ್ರದೇಶಗಳನ್ನಾಗಿ ಪರಿವರ್ತಿಸಲಾಗಿದೆ.

 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...