ಕವಿತಾ ಗೌಡ ಮೊದಲಾದರೆ ಚಿನ್ನು ಪಾತ್ರದಾರಿಯಾಗಿ ತನ್ನ ಇನ್ನೊಸೆನ್ಸ್, ಒಳ್ಳೆತನಗಳ ಮೂಲಕ ಜನರ ಮಾತಲ್ಲಿ ಕಾಣಿಸಿಕೊಳ್ತಿದ್ರು. ‘ಲಕ್ಷ್ಮೀ ಬಾರಮ್ಮ’ ಎಂಬ ವಿಶಿಷ್ಟ ಕಥಾಹಂದರವುಳ್ಳ ಸೀರಿಯಲ್ ಟಿ ಆರ್ ಪಿಯಲ್ಲೂ ಮುಂದಿತ್ತು. ಜನ ಚಿನ್ನು ಪಾತ್ರಕ್ಕೆ ಯಾವ ಪರಿ ಮುಗಿ ಬೀಳ್ತಿದ್ರು ಅಂದ್ರೆ ಆಕೆಯನ್ನು ಮನೆ ಮಗಳ ಥರವೇ ನೋಡ್ತಿದ್ರು. ಆಕೆಗೆ ನೋವಾದ್ರೆ ತಾವೂ ಹನಿಗಣ್ಣಾಗ್ತಿದ್ರು.

ಕವಿತಾ ಗೌಡ

ಆಕೆ ತನ್ನ ಬದುಕನ್ನೆಲ್ಲ ಒತ್ತಟ್ಟಿಗಿಟ್ಟು ಪತಿ ಚಂದನ್ ಹಾಗೂ ಬೊಂಬೆಯ ಮದುವೆಗಾಗಿ ಹಂಬಲಿಸೋದನ್ನು ಕಂಡು ಮರುಗುತ್ತಿದ್ದರು. ಹೀಗೆ ಜನರ ಭಾವನೆಗಳ ಮೇಲೆ ಆಟ ಆಡಿದ ಈ ಸೀರಿಯಲ್ ಗೆ ಚಂದನ್ ಪಾತ್ರಧಾರಿಗಳು ಬದಲಾದ್ರು. ಚಿನ್ನು ಪಾತ್ರಧಾರಿಗಳೂ ಬದಲಾದರು. ಆದರೆ ಜನರ ಮನಸ್ಸಲ್ಲಿ ಇಂದಿಗೂ ಇರೋದು ಧಾರಾವಾಹಿ ಆರಂಭದ ವೇಳೆಗಿದ್ದ ಚಿನ್ನು ಪಾತ್ರಧಾರಿ ಕವಿತಾ ಗೌಡ ಹಾಗೂ ಚಂದನ್ ಪಾತ್ರಧಾರಿ ಚಂದನ್.

ಯಾವಾಗ ಈ ಸೀರಿಯಲ್ ಸಾವಾಸ ಬಿಟ್ಟು ಸಿನಿಮಾ, ಮತ್ತೊಂದು ಅಂತ ಸಾಹಸಕ್ಕಿಳಿದ ಕವಿತಾ ಗೌಡ ಗ್ರಾಫ್ ಮೇಲಿಂದ ಕೆಳಗಿಳಿಯತೊಡಗಿತು. ಚಿನ್ನು ಪಾತ್ರದಿಂದ ಮುಗ್ಧ ಹುಡುಗಿಯಾಗಿ ಗುರುತಿಸಿಕೊಂಡಿದ್ದ ಈಕೆ, ಈಗ ಅಹಂಕಾರದ ಹೇಳಿಕೆಗಳು, ಕೊಬ್ಬಿನ ಮಾತುಗಳಿಂದ ನೆಗೆಟಿವ್ ಇಮೇಜ್ ಬೆಳೆಸಿಕೊಳ್ಳತೊಡಗಿದಳು. ಅದರಲ್ಲೂ ಇತ್ತೀಚೆಗೆ ಪೂಜೆ ಮಾಡಿಸ್ಕೊಂಡ್ಲು. ಇಷ್ಟಾದರೂ ಈಕೆ ಜನರ ಭಾವನೆಗಳಿಗೆ ಬೆಲೆ ಕೊಡಲಿಲ್ಲ. ಬದಲಾಗಿ ಮೇಲಿಂದ ಮೇಲೆ ಇಂಥಾ ಫೋಟೋಗಳನ್ನೇ ಹಾಕುತ್ತಾ ಅವರ ಸಿಟ್ಟು ಹೆಚ್ಚಿಸಿದಳು. ಒಂದು ಕಾಲದಲ್ಲಿ ತನ್ನನ್ನು ಮನೆಮಗಳಂತೆ ಕಂಡ ಜನ ಕಣ್ಣಲ್ಲೇ ವಿಲನ್ ಆದ್ಲು.

ಕವಿತಾ ಗೌಡ

ಕವಿತಾ ಗೌಡಗೆ ಈಗ ಸೀರಿಯಲ್ ಗಳಲ್ಲೆಲ್ಲೂ ಅವಕಾಶ ಇಲ್ಲ. ಸಣ್ಣಪುಟ್ಟ ಸಿನಿಮಾಗಳಲ್ಲಿ ಅವಕಾಶ ಇದ್ದರೂ ಅದು ಫೇಮ್ ತರುವ ಹಾಗಿಲ್ಲ. ಜೊತೆಗೆ ಒಂದಿಷ್ಟು ಜಾಹೀರಾತುಗಳಲ್ಲಿ ಈಕೆ ಕಾಣಿಸಿಕೊಳ್ಳುತ್ತಿದ್ದಾಳೆ. ಇದಕ್ಕಾಗಿ ಫೊಟೋಶೂಟ್ ಮಾಡಿಸಿಕೊಂಡು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿದ್ದಾಳೆ. ಹಾಗಿದ್ರೆ ಕವಿತಾ ಕೆರಿಯರ್ ಮುಗೀತಾ ಬಂತಾ ಅಂತ ಜನ ಮಾತಾಡಿಕೊಳ್ತಿದ್ದಾರೆ. ಚಂದನ್ ಜೊತೆಗೆ ಈಕೆಗೆ ಅಫೇರ್ ಇದ್ದ ಹಾಗಿದೆ, ಸೋ, ಬೇಗ ಮದುವೆ ಆಗಿ ಸೆಟಲ್ ಆಗಿ ಬಿಡಮ್ಮಾ ಅಂತ ಜನರೀಗ ಪುಕ್ಸಟ್ಟೆ ಸಲಹೆ ಕೊಡ್ತಿದ್ದಾರೆ.

ವೈಷ್ಣವಿ ಗೌಡ

‘ಅಗ್ನಿಸಾಕ್ಷಿ’ ಸೀರಿಯಲ್ ನ ವೈಷ್ಣವಿಯೂ ಆ ಬಳಿಕ ಮತ್ಯಾವ ಸೀರಿಯಲ್ ನಲ್ಲೂ ಕಾಣಿಸಿಕೊಂಡಿಲ್ಲ. ಸಿನಿಮಾ ಈಕೆಯ ಕೈ ಹಿಡೀಲಿಲ್ಲ. ಆದರೆ ಈ ಸುಂದರಿ ಕವಿತಾಳಂತೆ ನೆಗೆಟಿವ್ ಇಮೇಜ್ ಬೆಳೆಸಿಕೊಳ್ಳಲಿಲ್ಲ. ಹೀಗಾಗಿ ಈಕೆಯನ್ನು ಜನ ಅಕ್ಕರೆಯಿಂದ ನೋಡ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಅಗ್ನಿಸಾಕ್ಷಿಯ ಗ್ರೂಪ್ ಫೊಟೋವೊಂದು ಮೊನ್ನೆಯಿಂದ ವೈರಲ್ ಆಗ್ತಿದೆ.

ಮತ್ತೆ ಅಗ್ನಿಸಾಕ್ಷಿ ಬರುತ್ತಾ ಅಂತ ಜನ ಎಕ್ಸೈಟ್ ಆಗಿ ಪ್ರಶ್ನಿಸುತ್ತಿದ್ದಾರೆ. ಅವರಿಗೆ ಮತ್ತೆ ಸನ್ನಿಧಿಯನ್ನು ನೋಡಲು ಆಸೆ ಇದ್ದಂತಿದೆ. ಜೊತೆಗೆ ವೈಷ್ಣವಿಯ ಇನ್ನೊಂದು ಪ್ರೋಗ್ರಾಂ ಅಥವಾ ಸೀರಿಯಲ್ ಬಂದರೂ ನೋಡ್ತೀವಿ ಅಂತ ಹೇಳ್ತಿದ್ದಾರೆ. ಆದರೆ ಒಮ್ಮೆ ಅಗ್ನಿಸಾಕ್ಷಿಯ ಸನ್ನಿಧಿಯಾಗಿ ರಿಜಿಸ್ಟರ್ ಆದ ವೈಷ್ಣವಿಗೆ ಬೇರೆ ಸೀರಿಯಲ್‌ಗಳಲ್ಲಿ ಅವಕಾಶ ಸಿಗೋ ಸಾಧ್ಯತೆ ಕಡಿಮೆ. ಸಿನಿಮಾದಲ್ಲೂ ಇನ್ನು ಮಿಂಚೋದು ಕಷ್ಟವಿದೆ.

ವೈಷ್ಣವಿ ಗೌಡ

ವೈಷ್ಣವಿ ಗೌಡ ಕೈಯಲ್ಲಿ ಸದ್ಯಕ್ಕೆ ಒಂದಿಷ್ಟು ಜಾಹೀರಾತುಗಳಿವೆ. ಜೊತೆಗೆ ಈಕೆಗೆ ಮನೆಯಲ್ಲೂ ಅನುಕೂಲಗಳಿರುವ ಕಾರಣ ಸಮಸ್ಯೆ ಇಲ್ಲ. ಹೀಗಾಗಿಯೋ ಏನೋ, ಮುಳಿಯ ಚಿನ್ನಾಭರಣ ಮಳಿಗೆ ಜಾಹೀರಾತು, ಮತ್ತೊಂದಿಷ್ಟು ಜಾಹೀರಾತುಗಳ ಬಳಿಕ, ತಾನಾಯ್ತು, ತನ್ನ ಯೋಗ ಆಯ್ತು, ಭರತನಾಟ್ಯ ಆಯ್ತು ಅಂತ ಈ ನಟಿ ಕೂಲ್ ಆಗಿದ್ದಾರೆ. ಅಮೂಲ್ಯ ಅಂಥವ್ರನ್ನು ಬಿಟ್ರೆ ಹೆಚ್ಚು ಫ್ರೆಂಡ್ಸೂ ಇಲ್ಲದ ಈ ಸೈಲೆಂಟ್ ಹುಡುಗಿಗೆ ತನ್ನ ಕೆರಿಯರ್ ಗ್ರಾಫ್ ಇಳೀತಿರೋದರ ಬಗ್ಗೆ ಹೆಚ್ಚಿನ ಚಿಂತೆ ಇದ್ದಂತಿಲ್ಲ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •