ಬಾಲಿವುಡ್ ನಟಿ ಕತ್ರೀನಾ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೂ, ಅವರ ಜೊತೆಗೆ ಅವರ ಅಂಗರಕ್ಷಕ ಸಹ ಇರುತ್ತಾರೆ. ಈಗಾಗಲೇ ನಾವು ಬಹಳಷ್ಟು ಸೆಲೆಬ್ರಿಟಿಗಳ ಅಂಗರಕ್ಷಕರ ಬಗ್ಗೆ ಹಾಗೂ ಅವರು ಪಡೆಯುತ್ತಿರುವ ಸಂಬಳದ ಬಗ್ಗೆ ಮಾಹಿತಿ ನೀಡಿದ್ದೇವೆ. ಈಗ ಕತ್ರೀನಾ ಅಂಗರಕ್ಷನ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಅಂದಹಾಗೆ ಕತ್ರೀನಾ ಅಂಗರಕ್ಷಕನ ಹೆಸರು ದೀಪಕ್ ಸಿಂಗ್. ನಾವು ಪ್ರತಿ ಇವೆಂಟ್’ನಲ್ಲೂ ಕತ್ರಿನಾ ಕೈಫ್ ಜೊತೆಗೆ  ದೀಪಕ್ ಸಿಂಗ್ ನೆರಳಿನಂತೆ ಇರುವುದನ್ನು ಕಾಣಬಹುದು. ಹಾಗೆಯೇ ಅವರಿಗೆ ಸದಾ ಬೆಂಗಾವಲಾಗಿ ಇರುವುದನ್ನು ನೋಡಬಹುದು.ಅಂದಹಾಗೆ ಕತ್ರಿನಾ ತಮ್ಮ ಅಂಗರಕ್ಷಕ ದೀಪಕ್ ಸಿಂಗ್‌ಗೆ ಪ್ರತಿವರ್ಷ ಸುಮಾರು ಒಂದು ಕೋಟಿ ರೂಪಾಯಿಗಳನ್ನು ಸಂಬಳವಾಗಿ ನೀಡುತ್ತಾರೆ.

ವಿಶೇಷವೆಂದರೆ, ದೀಪಕ್ ಸಿಂಗ್ ಈ ಹಿಂದೆ ಶಾರೂಖ್ ಖಾನ್ ಅವರ ವೈಯಕ್ತಿಕ ಅಂಗರಕ್ಷಕರಾಗಿದ್ದರು. ಹಾಗೆಯೇ ಮಾಧುರಿ ದೀಕ್ಷಿತ್, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಇತರ ಅನೇಕ ಸೂಪರ್‌ಸ್ಟಾರ್‌ಗಳಿಗೆ ಸಮ್ಮೇಳನ ಅಥವಾ ಚಲನಚಿತ್ರ ಪ್ರಚಾರದ ಸಮಯದಲ್ಲಿ ರಕ್ಷಣೆಗೆ ನಿಂತಿರುವುದನ್ನು ನೀವು ಗಮನಿಸಬಹುದು.  ಕತ್ರಿನಾ ಕೈಫ್ ಅವರ ಅಂಗರಕ್ಷಕ ದೀಪಕ್ ಅವರನ್ನು ಬಾಲಿವುಡ್ ನ ಅತ್ಯಂತ ಸುಂದರವಾದ ಅಂಗರಕ್ಷಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.

ಕತ್ರಿನಾ ಕೈಫ್ ಜೊತೆಗಿರುವ ದೀಪಕ್ ಸಿಂಗ್ ಅವರ ಅನೇಕ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.   ದೀಪಕ್ ತಮ್ಮದೇ ಆದ ಸೆಕ್ಯುರಿಟಿ ಗಾರ್ಡ್ ಏಜೆನ್ಸಿಯನ್ನು ಹೊಂದಿದ್ದಾರೆ.  ಬಹುತೇಕರು ದೀಪಕ್’ರನ್ನು ತಕ್ಷಣ ನೋಡಿದರೆ ಈತ ಮಾಡೆಲ್ ಇರಬಹುದು ಎಂದು ಭಾವಿಸುತ್ತಾರೆ. ಏಕೆಂದರೆ ಅವರಿಗೆ ಮಾಡೆಲ್’ಗೆ ಇರಬೇಕಾದ ಅಂಗಸೌಷ್ಠವ, ಎತ್ತರ, ರೂಪ ಇದೆ.

katrina-kaifs-bodyguard

ಸಂದರ್ಶನವೊಂದರಲ್ಲಿ ದೀಪಕ್ ಸಿಂಗ್ “ನಾನು ಕ್ರಿಕೆಟಿಗನಾಗಬೇಕೆಂಬ ಕನಸಿನೊಂದಿಗೆ 1999 ರಲ್ಲಿ ಮುಂಬೈಗೆ ಬಂದೆ. ಚಂದ್ರಕಾಂತ್ ಪಂಡಿತ್ ಅವರ ಬಳಿ ತರಬೇತಿ ಪಡೆದೆ. ದುರದೃಷ್ಟವಶಾತ್, ನಾನು ಕಾಲೇಜು ಮಟ್ಟದ ಕ್ರಿಕೆಟ್‌’ನಲ್ಲಿ ಮಾತ್ರ ಆಡುತ್ತಿದ್ದೆ. ದೊಡ್ಡ ಲೀಗ್‌’ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. 5 ವರ್ಷಗಳ ಕಾಲ ತರಬೇತಿ ಪಡೆದರೂ, ಸಾಧಿಸಲು ಸಾಧ್ಯವಾಗಲಿಲ್ಲ” ಎಂದು ತಿಳಿಸಿದ್ದಾರೆ.

ಆ ನಂತರ ದೀಪಕ್ ಅವರ ಅಕ್ಕನ ಗಂಡ, ನಟ ರೋನಿತ್ ರಾಯ್ ಅವರು ದೀಪಕ್ ಅವರಿಗೆ ಅಂಗರಕ್ಷನಾಗಲು ಸಲಹೆ ನೀಡಿದ್ದಾರೆ. ಆದ್ದರಿಂದ 2004 ರಲ್ಲಿ ದೀಪಕ್ ಪದವಿ ಮುಗಿದ ನಂತರ ಭದ್ರತಾ ಕಂಪನಿಯಾದ ಏಸ್ ಸೆಕ್ಯುರಿಟಿಗೆ ಸೇರಿಕೊಂಡರು. ಆ ನಂತರ ಈ ಕ್ಷೇತ್ರಕ್ಕೆ ಬರಲು ದೀಪಕ್‌’ಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಬಹುಬೇಗ ದೀಪಕ್ ಖ್ಯಾತ ಸೆಲೆಬ್ರಿಟಿಗಳ ಅಂಗರಕ್ಷನಾಗಿ ಕಾರ್ಯನಿರ್ವಹಿಸಿದರು. ಆಗ್ರಾದಲ್ಲಿ ಚಿತ್ರೀಕರಿಸಲಾದ ಹಾಲಿವುಡ್ ಚಿತ್ರ ‘ದಿ ಫಾಲ್’ ಗಾಗಿ ಭದ್ರತೆಯನ್ನು ನಿಭಾಯಿಸಲು ಅವರಿಗೆ ಅವಕಾಶ ಸಿಕ್ಕಿತು. ಅನೇಕ ಚಲನಚಿತ್ರ ನಿರ್ಮಾಪಕರು, ವಿನ್ಯಾಸಕರು, ನೃತ್ಯ ನಿರ್ದೇಶಕರು ಮತ್ತು ನಟರು ದೀಪಕ್’ಗೆ ಚಿತ್ರದಲ್ಲಿ ನಟಿಸುವಂತೆ ಹೇಳಿದ್ದಾರೆ. ಆದರೆ ಅವರಿಗೆ ಸಿನಿ ಕ್ಷೇತ್ರದ ಬಗ್ಗೆ ಆಸಕ್ತಿಯಿಲ್ಲ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!