ದೇಶದಲ್ಲಿ ಕರೋನ ಅನ್ನುವ ಮಹಾಮಾರಿ ಕಾಣಿಸಿಕೊಂಡ ನಂತರ ಏನೇನು ಅವಾಂತರಗಳು ಸೃಷ್ಟಿ ಆಗಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ದೇಶದಲ್ಲಿ ಅದೆಷ್ಟೋ ಜೀವಗಳು ಕರೋನ ಮಹಾಮಾರಿಯಿಂದ ಹೋದವು ಎಂದು ಹೇಳಬಹುದು ಮತ್ತು ಲಕ್ಷ ಲಕ್ಷ ಜನರು ಕರೋನ ಮಹಾಮಾರಿಯ ಕಾರಣ ತಮ್ಮ ಜೀವವನ್ನೆ ಕಳೆದುಕೊಂಡರು ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಜನರು ಕೈಯಲ್ಲಿ ಹಣ ಇಲ್ಲದೆ ಪರದಾಡುವ ಪರಿಸ್ಥಿತಿಗೆ ಬರುವಂತೆ ಮಾಡಿದೆ ಈ ಕರೋನ ಮಹಾಮಾರಿ.

ಇನ್ನು ದೇಶದಲ್ಲಿ ಕರೋನ ಮಹಾಮಾರಿ ಬಂದನಂತರ ಅನೇಕ ಯೋಜನೆಗಳನ್ನ ಜಾರಿಗೆ ತರಲಾಗಿದ್ದು ಅನೇಕ ಜನರು ಈ ಯೋಜನೆಗಳ ಲಾಭವನ್ನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು.ಇನ್ನು ರಾಜ್ಯದಲ್ಲಿ ಇರುವ ಕಟ್ಟಡ ಕಾರ್ಮಿಕರಿಗೆ ಹಲವು ಸಿಹಿ ಸುದ್ದಿಯನ್ನ ಸರ್ಕಾರ ಈಗಾಗಲೇ ನೀಡಿರುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಅನೇಕ ಕ್ಷೇತ್ರದಲ್ಲಿ ಕಟ್ಟಡ ಕಾರ್ಮಿಕರಿಗೆ ರಿಯಾಯಿತಿಯನ್ನ ನೀಡಲಾಗಿರುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಕಾರ ಆಗಿದೆ ಎಂದು ಹೇಳಬಹುದು.

ಇನ್ನು ಈಗ ಮತ್ತೆ ಕಟ್ಟಡ ಕಾರ್ಮಿಕರಿಗೆ ರಾಜ್ಯ ಸಾರಿಗೆ ಇಲಾಖೆಯಿಂದ ಬಂಪರ್ ಗುಡ್ ನ್ಯೂಸ್ ಬಂದಿದ್ದು ಇದು ಕಾರ್ಮಿಕರ ಖುಷಿಗೆ ಕಾರಣವಾಗಿದೆ ಎಂದು ಹೇಳಬಹುದು. ಹಾಗಾದರೆ ಏನದು ಸಿಹಿಸುದ್ದಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ರಾಜ್ಯ ಕಟ್ಟಡ ಕಾರ್ಮಿಕರಿಗೆ ರಾಜ್ಯ ಕೆಎಸ್ ಆರ್ ಟಿಸಿ ಕಡೆಯಿಂದ ಬಂಪರ್ ಆಫರ್ ಬಂದಿದೆ ಎಂದು ಹೇಳಬಹುದು. ಹೌದು ರಾಜ್ಯದಲ್ಲಿ ಇರುವ 23 ಲಕ್ಷ ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಬಸ್ ಪಾಸ್ ವಿತರಣೆ ಮಾಡಲು ಈಗ ತೀರ್ಮಾನವನ್ನ ಕೈಗೊಳ್ಳಲಾಗಿದೆ ಎಂದು ಕೆಎಸ್ ಆರ್ ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ ಹೇಳಿದ್ದಾರೆ. ಹೊಳಲ್ಕೆರೆ ಪಟ್ಟಣದಲ್ಲಿ ಕಾರ್ಮಿಕ ಇಲಾಖೆ ಆಯೋಜಿಸಿದ್ದ ಆಹಾರ ಕಿಟ್ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು ರಾಜ್ಯದ 23 ಲಕ್ಷ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿತರಿಸಲು ನಿರ್ಧರಿಸಲಾಗಿದ್ದು, ಇನ್ನು 2,3 ತಿಂಗಳಲ್ಲಿ ಬಸ್ ಪಾಸ್ ವಿತರಿಸಲಾಗುವುದು ಎಂದು ಹೇಳಿದ್ದಾರೆ.

ರಾಜ್ಯದ ಕಾರ್ಮಿಕರಿಗೆ ಉಚಿತ ಬಸ್ ವಿತರಣೆ ಮಾಡಿದರೆ ಅವರಿಗೆ ಬೇರೆ ದೂರ ಊರಿಗೆ ಹೋಗಿ ಕೆಲಸವನ್ನ ಮಾಡಲು ಬಹಳ ಅನುಕೂಲ ಆಗುತ್ತದೆ ಮತ್ತು ಅವರ ಹಣ ಕೂಡ ಉಳಿಯುತ್ತದೆ ಮತ್ತು ಇದು ಅವರ ಆರ್ಥಿಕ ಸಂಕಷ್ಟವನ್ನ ಸ್ವಲ್ಪ ಮಟ್ಟಿಗೆ ನಿವಾರಣೆ ಮಾಡಲಿದೆ ಅನ್ನುವ ಕಾರಣಕ್ಕೆ ರಾಜ್ಯದಲ್ಲಿ ಈ ಯೋಜನೆಯನ್ನ ಜಾರಿಗೆ ತರಲು ತೀರ್ಮಾನವನ್ನ ಕೈಗೊಳ್ಳಲಾಗಿದೆ ಎಂದು ಹೇಳಬಹುದು.

ಈ ಯೋಜನೆ ಮುಂದಿನ ಎರಡು ಮೂರೂ ತಿಂಗಳಲ್ಲಿ ಜಾರಿಗೆ ಬರಲಿದ್ದು ಈ ಯೋಜನೆಗೆ ಹೇಗೆ ಅರ್ಜಿಯನ್ನ ಸಲ್ಲಿಸಬೇಕು ಅನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ ಎಂದು ಹೇಳಬಹುದು. ಕಟ್ಟಡ ಕಾರ್ಮಿಕರು ಈ ಬಸ್ ಪಾಸ್ ಮಾಡಿಸಿಕೊಂಡು ದೂರ ಊರುಗಳಿಗೆ ಕೆಲಸಕ್ಕಾಗಿ ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಬಹುದಾಗಿದೆ. ಸ್ನೇಹಿತರೆ ಈ ಮಾಹಿತಿಯನ್ನ ರಾಜ್ಯದ ಎಲ್ಲಾ ಕಟ್ಟಡ ಕಾರ್ಮಿಕರಿಗೆ ತಲುಪಿಸಿ ಮತ್ತು ಈ ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •