70 ಹಾಗೂ 80 ರ ದಶಕದಲ್ಲಿ ಕನ್ನಡ ತಾರೆಯರು ನಮ್ಮ ಕನ್ನಡ ಚಿತ್ರರಂಗವನ್ನು ಆಳಿ ಪ್ರೆಕ್ಷಕರ ಮನಸ್ಸಿನಲ್ಲಿ ಹಸಿರಾಗಿದ್ದಾರೆ ಎಂದೇ ಹೇಳಬಹುದು. ಆ ಕಾಲದಲ್ಲಿ ಚಿತ್ರದ ನಾಯಕರಿಗೆ ಸಿಗುವ ತೂಕ ನಾಯಕಿಯರಿಗೂ ಕೂಡ ಸಿಗತ್ತಿತ್ತು. ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾಕ್ಕೆ ವಿಭಿನ್ನವಾದ ಪಾತ್ರಗಳನ್ನು ಆಯ್ದುಕೊಂಡು ಚಿತ್ರರಂಗವನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುವಲ್ಲಿ ಅದೆಷ್ಟೋ ನಟಿಯರು ಯಶಸ್ವಿಯಾಗಿದ್ದಾರೆ.ಆದರೆ ಇದೀಗ ಕಾಲ ಬದಲಾಗಿದೆ ಹಾಗೂ ಚಿತ್ರರಂಗ ಕೂಡ ಬದಲಾಗಿ ಬಿಟ್ಟಿದೆ. ನಾಯಕಿಗಿಂತ ನಾಯಕರದ್ದೇ ಇದೀಗ ಚಿತ್ರರಂಗದಲ್ಲಿ ಹವಾ ಜೋರಾಗಿದೆ ಎಂದರೆ ತಪ್ಪಾಗಲಾದರು.

 

 

ಕೆಲವೊಂದು ನಟಿಯರು ಮೂರ್ನಾಲ್ಕು ಸಿನಿಮಾದಲ್ಲಿ ಅಭಿನಯಿಸಿ ನಂತರ ಚಿತ್ರರಂಗದಿಂದ ದೂರವಾದರೆ, ಇನ್ನು ಕೆಲವರು ಮಾಡಿದ ಒಂದೇ ಸಿನಿಮಾದಿಂದ ದೊಡ್ಡ ಮಟ್ಟದಲ್ಲಿಯೇ ಜನಪ್ರಿಯತೆ ಕಂಡುಕೊಂಡು ಕರ್ನಾಟದ ಕ್ರಶ್ ಆಗಿ, ಪಡ್ಡೆ ಹುಡುಗರ ನಿದ್ದೇ ಗಡೆಸುವ ಪೋರಿಯಾಗಿದ್ದಾರೆ. ಸಾಮಾನ್ಯವಾಗಿ ಅಭಿಮಾನಿಗಳು ನಟಿಯರ ಸಂಭಾವನೆ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳುವುದಿಲ್ಲ. ಬೇಡಿಕೆ ಇದ್ದವರಿಗೆ ಮಾತ್ರ ಚಿತ್ರರಂಗದಲ್ಲಿ ಸಂಭಾವನೆ ಹೆಚ್ಚು ಕೊಡಲಾಗುತ್ತದೆ ಎಂಬುದು ವಾಸ್ತವ! ಹಾಗದರೆ ಚಂದನವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಾಯಕಿ ನಟಿ ಯಾರು ? ಹಾಗೂ ಅವರು ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ? ಈ ವಿಚಾರವನ್ನು ತಿಳಿದುಕೊಳ್ಳಲು ಮುಂದೇ ಓದಿ..

 

 

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ `ಕಿರಿಕ್ ಪಾರ್ಟಿ’ ಎಂಬ ಚಿತ್ರದ ಮೂಲಕ ತಮ್ಮ ನಟನಾ ಜೀವನವನ್ನು ಪ್ರಾರಂಭಿಸಿದ ರಶ್ಮಿಕಾ ಮಂದಣ್ಣ ಅವರು ತದನಂತರ ಕರುನಾಡ ಕ್ರಶ್ ಆಗಿ, ಕೇವಲ ಒಂದೇ ಒಂದು ಸಿನಿಮಾದ ಅಭಿನಯದಿಂದಲೇ ತಮ್ಮ ಹೆಸರನ್ನು ಮುಗಿಲೆತ್ತರಕ್ಕೆ ಏರಿಸಿಕೊಂಡರು. ನಂತರ ಸ್ಯಾಂಡಲ್ ವುಡ್ ನ ಸ್ಟಾರ್ ನಟರ ಜೊತೆ ಅಭಿನಯಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡ ಇವರು, ಕನ್ನಡ ಚಿತ್ರರಂಗದದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಮಣಿಯಾಗಿದ್ದಾರೆ.

 

 

ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಿರತರಾಗಿರುವ ರಶ್ಮಿಕಾ, ಕನ್ನಡ ಸಿನಿಮಾ ಮಾಡುವದು ತೀರಾ ಅಂತಾನೇ ಹೇಳಬಹುದು. ಇನ್ನು ಗಾಂಧಿನಗರದ ಪಂಡಿತರ ಲೆಕ್ಕಾಚಾರದ ಪ್ರಕಾರ, ರಶ್ಮಿಕಾ ಅವರು ಕನ್ನಡ ಕನ್ನಡದಲ್ಲಿ ಬರೋಬ್ಬರಿ 65 ಲಕ್ಷ ರೂ ಸಂಭಾವನೆ ಪಡೆದುಕೊಳ್ಳುತ್ತಾರೆ. ಪರಭಾಷೆಯಲ್ಲಿ ಇವರ ಸಂಭಾವನೆ ಇದಕ್ಕಿಂತ ಒಂದು ಪಟ್ಟು ಹೆಚ್ಚಿದೆ ಅಂತಾನೇ ಹೇಳಬಹುದು. ಸದ್ಯ ಇದೀಗ ಸಾಕಷ್ಟು ವರ್ಷಗಳಿಂದ ಕನ್ನಡದ ಬಹು ಬೇಡಿಕಿಯನ್ನು ಉಳಿಸಿಕೊಂಡು ಬಂದಿರುವ ಏಕೈಕ ನಟಿ ಎಂದರೆ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು,

 

ವರ್ಷದಲ್ಲಿ ಮೂರ ರಿಂದ ನಾಲ್ಕು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಗುಳಿಕೆನ್ನೆ ಸುಂದರಿ, ಒಂದು ಕಾಲದಲ್ಲಿ ಕ್ರೇಜಿಕ್ವೀನ್ ರಕ್ಷಿತಾ ಹಾಗೂ ಮೋಹಕ ತಾರೆ ರಮ್ಯಾ ತರಹದ ಟ್ರೆಂಡ್ ಸೆಟ್ ಮಾಡಿದ್ದಾರೆ. ಇನ್ನು ಗುಳಿ ಕೆನ್ನೆ ಸುಂದರಿಯ ಸಂಭಾವನೆಯನ್ನು ನೋಡುವುದಾದರೆ ಒಂದು ಸಿನಿಮಾಗೆ 45 ರಿಂದ 50 ಲಕ್ಷದವರೆಗೂ ಪಡೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ.

 

 

 

ಟಾಲಿವುಡ್ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡುವ ಮೂಲಕ ತಮ್ಮ ಸಿನಿ ಜೀವನವನ್ನು ಪ್ರಾರಂಭಿಸಿದ ನಟಿ ಶಾನ್ವಿ ಶ್ರೀವಾತ್ಸವ್ ಅವರು, ಇದೀಗ ಕನ್ನಡ ಚಿತ್ರರಂಗದಲ್ಲಿ ನೆಲೆಯೂರಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಒಂದು ಅಥವಾ ಎರಡು ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಶಾನ್ವಿ ಅವರು ಮೂಲಗಳ ಪ್ರಕಾರ 25 ರಿಂದ 30 ಲಕ್ಷರೂ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ.

 

 

ಪ್ರಯೋಗಾತ್ಮಕ ಸಿನಿಮಾ ಉರ್ವಿ ಯಲ್ಲಿ ಅಭಿನಯಿಸುವುದರ ಮೂಲಕ ಸಿನಿ ಜೀವನವನ್ನು ಪ್ರಾರಂಭಿಸಿದ ನಟಿ ಶ್ರದ್ಧಾ ಶ್ರೀನಾಥ್ ಅವರು ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಸಾಕಷ್ಟು ಬ್ಯೂಸಿಯಾಗಿದ್ದರೆ. ಕನ್ನಡದಲ್ಲಿ ಅಲ್ಲೋಂದು ಇಲ್ಲೊಂದು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಈ ನಟಿ, ಸೆಲೆಕ್ಟೆಡ್ ಸಿನಿಮಾಗಳನ್ನು ಮಾತ್ರ ಒಪ್ಪಿಕೊಳ್ಳುತ್ತಾರೆ. ಕನ್ನಡದಲ್ಲಿ 20 ಲಕ್ಷ ಸಂಭಾವನೆ ಪಡೆಯುವ ಶ್ರಧ್ದಾ, ಪರ ಭಾಷೆಯಲ್ಲಿ ಇದಕ್ಕಿಂತ ಹೆಚ್ಚು ತೆಗೆದುಕೊಳ್ಳುತ್ತಾರೆ ಎಂದೇ ಹೇಳಲಾಗುತ್ತದೆ.

 

ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ನಟಿ ಆಶಿಕಾ ರಂಗನಾಥ್ ಅವರಿಗೆ ಬೇಡಿಕೆ ಹೆಚ್ಚಿದ್ದು, ಮುಗುಳುನಗೆ, ರ್ಯಾಂಭೋ 2, ತಾಯಿಗೆ ತಕ್ಕ ಮಗ ಅಂತಹ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿರುವ ಅವರು , ಒಂದು ಸಿನಿಮಾಗೆ 15 ಲಕ್ಷದವರೆಗೂ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •