ಕನ್ನಡ ಪ್ರಾಥಮಿಕ ಶಾಲೆಯಿಂದ ಹಿಡಿದು ಇವತ್ತಿನವರೆಗೆ ಒಂದೇ ಕಡೆ ಇರುವ ಏಕೈಕ ಜೋಡಿ!ಇಂಟ್ರೆಸ್ಟಿಂಗ್ ಸ್ಟೋರಿ…

Home Kannada News/ಸುದ್ದಿಗಳು

ಪತ್ನಿಯೇ ಮನೆಯ ಯಜಮಾನಿ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ, ಆದರೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಐಪಿಎಸ್ ಅಧಿಕಾರಿ ಅಂಕುರ್ ಅಗ್ರವಾಲ್ ಅವರ ಪತ್ನಿ ವೃಂದಾ ಶುಕ್ಲಾ ಕಚೇರಿಯಲ್ಲಿ ಕೂಡ ಅವರ ಬಾಸ್ ಆಗಿದ್ದಾರೆ. ಅಂಕುಲ್ ಅಗರ್ವಾಲ್ ಮತ್ತು ವೃಂದಾ ಶುಕ್ಲಾ ಅವರ ಕಥೆ ಚಲನಚಿತ್ರದಂತಿದೆ. ಇಬ್ಬರೂ ಬಾಲ್ಯದ ಸ್ನೇಹಿತರು ಮತ್ತು ಒಟ್ಟಿಗೆ ಅಧ್ಯಯನ ಮಾಡಿದರು. ಇದರ ನಂತರ ಇಬ್ಬರೂ ಐಪಿಎಸ್ ಅಧಿಕಾರಿಗಳಾದರು ಮತ್ತು ನಂತರ 2019 ರಲ್ಲಿ ವಿವಾಹವಾದರು. ಅವರ ಜೀವನವೇ ಒಂದು ರೋಚಕ ಹಾಗೂ ರೊಮಾಂಟಿಕ್ ಕಥಾಹಂದರ. ಇವರನ್ನು ಅತ್ಯಂತ ಯಶ್ವಸ್ವಿ ಕ್ಲಾಸ್ಮೆಟ್ಸ್ ಹಾಗೂ ಪ್ರೇಮಿಗಳು ಹಾಗೂ ದಂಪತಿಗಳು ಅಂದರೆ ತಪ್ಪೇನಲ್ಲ.

ವೃಂದಾ ಮತ್ತು ಅಕುರ್ ನೋಯ್ಡಾದಲ್ಲಿ ಪೋಸ್ಟ್ :
ಗೌತಮ್ ಬುದ್ಧ ನಗರ (ನೋಯ್ಡಾ) ಜಿಲ್ಲೆಯಲ್ಲಿ ಪೊಲೀಸ್ ಆಯುಕ್ತರ ಸಿಸ್ಟಂ ಜಾರಿಗೊಳಿಸಿದ ನಂತರ, ವೃಂದಾ ಶುಕ್ಲಾ ಅವರನ್ನು ಉಪ ಪೊಲೀಸ್ ಆಯುಕ್ತರನ್ನಾಗಿ (ಡಿಸಿಪಿ) ಗೌತಮ್ ಬುಧ್ ನಗರಕ್ಕೆ ನೇಮಿಸಲಾಯಿತು. ಅದೇ ಸಮಯದಲ್ಲಿ ಅಂಕುರ್ ಅಗರವಾಲ್ ಅವರನ್ನು ಹೆಚ್ಚುವರಿ ಪೊಲೀಸ್ ಉಪ ಆಯುಕ್ತರನ್ನಾಗಿ ನೇಮಿಸಲಾಯಿತು. ಈ ಮೂಲಕ ಪತಿಗಿಂತ ಪತ್ನಿಗೆ ಹೆಚ್ಚು ಅಧಿಕಾರ ಸಿಕ್ಕಿದೆ, ಪತಿಯ ಬಾಸ್ ಕೂಡ ಹೌದು!

ಇಬ್ಬರೂ ಬಾಲ್ಯದಲ್ಲಿ ಒಟ್ಟಿಗೆ ಓದಿದ್ದರು :
ಐಎಎನ್ಎಸ್ ವರದಿಯ ಪ್ರಕಾರ, ಅಂಕುರ್ ಅಗ್ರವಾಲ್ ಮತ್ತು ವೃಂದಾ ಶುಕ್ಲಾ ಹರಿಯಾಣದ ಅಂಬಾಲದ ನಿವಾಸಿಗಳು ಮತ್ತು ಪರಸ್ಪರ ನೆರೆಹೊರೆಯವರು. ವೃಂದಾ ಮತ್ತು ಅಂಕುರ್ ಅವರು ಅಂಬಾಲಾ ಕಾನ್ವೆಂಟ್ ಜೀಸಸ್ ಮತ್ತು ಮೇರಿ ಶಾಲೆಯಿಂದ 10 ನೇ ತರಗತಿವರೆಗೂ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು. ವೃಂದಾ ಹೆಚ್ಚಿನ ಅಧ್ಯಯನಕ್ಕಾಗಿ ಅಮೆರಿಕಕ್ಕೆ ಹೋದರು, ಅಂಕುರ್ ಭಾರತದಲ್ಲಿಯೇ ಇದ್ದು ಎಂಜಿನಿಯರಿಂಗ್ ಪದವಿ ಪಡೆದರು.

ಮತ್ತೆ ಈ ರೀತಿ ಭೇಟಿಯಾದರು :
ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ವೃಂದಾ ಶುಕ್ಲಾ ಅಮೆರಿಕದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು, ಅಂಕುರ್ ಅಗ್ರವಾಲ್ ಇಂಜಿನಿಯರಿಂಗ್ ಮಾಡಿದ ನಂತರ ಬೆಂಗಳೂರಿನಲ್ಲಿ ಕೆಲಸವನ್ನು ಪ್ರಾರಂಭಿಸಿದರು. ಒಂದು ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡಿದ ನಂತರ ಅವರು ಕೂಡ ಅಮೆರಿಕಾಗೆ ತೆರಳಿದರು ಮತ್ತು ಅದೃಷ್ಟವು ಇಬ್ಬರನ್ನು ಮತ್ತೆ ಒಂದು ಮಾಡಿಸಿತು! ಅಲ್ಲಿಯೇ ಮತ್ತೊಂದು ಮೈಲುಗಲ್ಲು ತಲುಪುವ ಕನಸು ಜನ್ಮ ತಳೆಯಿತು. ಅಂದರೆ UPSC ಪಾಸ್ ಮಾಡುವ ಕನಸು.

ಯುಪಿಎಸ್ ಸಿ ತಯಾರಿ ಅಮೆರಿಕದಲ್ಲಿ ಆರಂಭ :
ಅಂಕುರ್ ಅಗರವಾಲ್ ಮತ್ತು ವೃಂದಾ ಶುಕ್ಲಾ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾಗ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು. ಇದರ ನಂತರ ವೃಂದಾ ಎರಡನೇ ಪ್ರಯತ್ನದಲ್ಲಿಯೇ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆದರು. ಹೀಗಾಗಿ ಅವರು ಮೊದಲು ಐಪಿಎಸ್ ಅಧಿಕಾರಿಯಾದರು ಮತ್ತು ನಾಗಾಲ್ಯಾಂಡ್ ಕೇಡರ್ ಪಡೆದರು. ಎರಡು ವರ್ಷಗಳ ನಂತರ ಅಂಕುರ್ ಮೊದಲ ಪ್ರಯತ್ನದಲ್ಲೇ ನಾಗರಿಕ ಸೇವೆಗಳಲ್ಲಿ ಆಯ್ಕೆಯಾದರು ಮತ್ತು ಐಪಿಎಸ್ ಅಧಿಕಾರಿಯಾದರು. ಅವರಿಗೆ ಬಿಹಾರ ಕೇಡರ್ ಸಿಕ್ಕಿತು.

ಇಬ್ಬರೂ 2019 ರಲ್ಲಿ ವಿವಾಹವಾದರು :
ವೃಂದಾ ಶುಕ್ಲಾ ಮತ್ತು ಅಂಕುರ್ ಅಗರ್ವಾಲ್ ಅವರ ಬಾಲ್ಯದ ಸ್ನೇಹ ಪ್ರೀತಿಗೆ ತಿರುಗಿತ್ತು. ಐಪಿಎಸ್ ಆದ ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು ಮತ್ತು ಫೆಬ್ರವರಿ 2019 ರಲ್ಲಿ ವಿವಾಹವಾದರು. ಹೀಗೆ ಪ್ರಾಥಮಿಕ ಶಾಲೆಯಿಂದ ಹಿಡಿದು IPS ಅಧಿಕಾರಿಯಾಗುವ ತನಕ ಅನೇಕ ಸ್ಥಳಗಳಲ್ಲಿ ಇಬ್ಬರೂ ಒಟ್ಟಿಗೇ ಇರುವ ಅವಕಾಶ ಬಹುಶ ಇವರಷ್ಟು ಮತ್ಯಾರಿಗೂ ಸಿಕ್ಕಿಲ್ಲ ಅನಿಸುತ್ತದೆ, ಒಂಥರಾ ಅದೃಷ್ಟವಂತ ಪ್ರತಿಭಾಶಾಲಿಗಳು ಇವರು, ಅಲ್ವಾ?

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...