ನಾವು ಎಷ್ಟೇ ಬದಲಾದರೂ ನಮ್ಮ ದೇಶ ಬದಲಾಗುತ್ತಾ ಹೋದರು ಈ ನತದೃಷ್ಟ ಊರು ಮಾತ್ರ ಇನ್ನು ಬದಲಾಗಲೇ ಇಲ್ಲ. ಒಂದು ಕಾಲದಲ್ಲಿ ವೇಶ್ಯಾವಾಟಿಕೆಯಾಗಿ ಗುರುತಿಸಿಕೊಂಡಿದ್ದ ಈ ಜಾಗವನ್ನು ಕಾಮಾಟಿಪುರ ಎಂದು ಕರೆಯುತ್ತಾರೆ. ಇದು ಮುಂಬೈನಲ್ಲಿ ಹೆಸರುವಾಸಿಯಾಗಿರುವ ಊರು. ನಮ್ಮ ದೇಶದಲ್ಲಿ ಬೇರೆ ಬೇರೆ ಕಡೆ ವೇಶ್ಯಾವಾಟಿಕೆ ನಡೆದರೆ ಅದನ್ನು ಮೊದಲು ಹೋಲಿಕೆ ಮಾಡುವುದು ಕಾಮಾಟಿಪುರಕ್ಕೆ. ಸುಮಾರು 200 ವರ್ಷಕ್ಕೂ ಮುಂಚಿನಿಂದಲೂ ಈ ಒಂದು ನಗರ ವೇಶ್ಯಾವಾಟಿಕೆಯ ಊರು ಎಂದೆನಿಸಿಕೊಂಡಿದೆ.

kamatipura

ಜಗತ್ತಿನಲ್ಲಿ ಏನೇನೋ ಬದಲಾಗಿ ಹೋಗುತ್ತಿದ್ದರು ಈ ವೇಶ್ಯಾವಾಟಿಕೆಯ ಕಾಮಟಿಪುರ ಮಾತ್ರ ಬದಲಾಗಲೇ ಇಲ್ಲ. ಇಲ್ಲಿ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ 200 ವರ್ಷಗಳ ಹಿಂದೆ ಸ್ತ್ರೀ ಯರನ್ನು ಮಾರಾಟ ಮಾಡುತ್ತಿದ್ದರು. ಇಲ್ಲಿ ಲೈಂಗಿಕ ಕಿರುಕುಳಕ್ಕೆ ಸ್ತ್ರೀ ಯರು ಒಳಗಾಗುತ್ತಿದ್ದರು. ಇದೇ ಕಾರಣದಿಂದ ಹೆಣ್ಣು ಮಕ್ಕಳು ವೇಶ್ಯಾವಾಟಿಕೆಗೆ ಬಲಿಯಾದರು. ಈಗಲೂ ಈ ನಗರಕ್ಕೆ ಒಮ್ಮೆ ನೀವು ಭೇಟಿ ಕೊಟ್ಟರೆ ಇಲ್ಲಿರುವವರು ಅವರವರ ಮನೆ ಬಾಗಿಲಲ್ಲಿ ನಿಂತು ಹುಡುಗರನ್ನು ಮಾತನಾಡಿಸಲು ಮತ್ತು ಅವರ ವೈಯಾರದಿಂದ ನಿಮ್ಮನ್ನು ಮೋಹಗೊಳಿಸಿ ಕರೆಯುತ್ತಾರೆ.

ಇಲ್ಲಿರುವ ಹೆಣ್ಣುಮಕ್ಕಳು ಬೇರೆಬೇರೆ ದೇಶಗಳಿಂದ ವಿವಿಧ ಊರುಗಳಿಂದ ವೈವಿಧ್ಯತೆ ವಾಗಿ ಇಲ್ಲಿ ಬಂದು ಸೇರುತ್ತಾರೆ. ಹಿಂದೆ ಉಳಿಗಮಾನ್ಯ ಪದ್ಧತಿ ಇದ್ದು, ಬಡಕುಟುಂಬದ ಜನರು ತಮ್ಮ ಹೆಂಡತಿ ಮಕ್ಕಳು ಸಮೇತ ಬಂದು ಅವರ ಮನೆಯಲ್ಲಿ ಜೀತಕ್ಕೆ ಉಳಿಯುತ್ತಿದ್ದರು. ಆಗ ಜೀತ ಕ್ಕಿಳಿಸಿಕೊಳ್ಳುತ್ತಿದ್ದ ಮಾಲಿಕ ಅವರ ಹೆಣ್ಣುಮಕ್ಕಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದರು. ಇದೇ ರೀತಿಯಾಗಿ ಈ ಒಂದು ಪದ್ಧತಿಯು ಮುಂದುವರೆಯಿತು.

kamatipura

ಒಂದೊಮ್ಮೆ ಬ್ರಿಟಿಷ್ ಕಾಲದಲ್ಲಿ ಕಾಮಾಠೀಪುರ ಏರಿಯಾ ಸಂಗೀತ ತವಾಯಫ್ ಮನರಂಜನೆಗೆ ಪ್ರಸಿದ್ಧಿ ಪಡೆದಿದ್ದರೆ ನಂತರದ ದಿನಗಳಲ್ಲಿ ವೇಶ್ಯಾವಾಟಿಕೆಗೆ ಕುಖ್ಯಾತಿ ಹೊಂದಿದೆ. ಕಾಮಾಠೀಪುರದ ಹಲವಾರು ಗಲ್ಲಿಗಳಲ್ಲಿ ವೇಶ್ಯಾಗೃಹಗಳು ಇವೆ. ರಸ್ತೆಗಳಲ್ಲಿ ಹೋಗುವವರನ್ನು ಕೆಲವು ವೇಶ್ಯೆಯರು ಕಿಟಕಿಗಳಿಂದ ಕರೆದರೆ ಇನ್ನು ಕೆಲವರು ರಸ್ತೆಗಳಲ್ಲಿ ನಿಂತು ಗ್ರಾಹಕರ ನಿರೀಕ್ಷೆಯಲ್ಲಿರುತ್ತಾರೆ.

18 -19ನೇ ಶತಮಾನದಲ್ಲಿ ಬರಿತಿಸಹರು ಮುಂಬೈ ಅನ್ನು ಯೂರೋಪಿಯನ್ನರಿಗೆ ಮಾರಿದ್ದರು. ಆಗ ಅಲ್ಲಿದ್ದ 7 ದ್ವೀಪಗಳು ಒಟ್ಟು ಗೂಡಿಸಲು ಕೆಲಸ ಆರಂಭಿಸಬೇಕಿತ್ತು. ಆಗ ದಕ್ಷಿಣ ಭಾರತದಿಂದ ಹಲವರು ಕೆಲಸಕ್ಕಾಗಿ ಸಂಸಾರ ಸಮೇತ ಮುಂಬೈಗೆ ಬಂದರು. ಇಲ್ಲಿಗೆ ಆಂಧ್ರ ಪ್ರದೇಶದ ಕಮಾಟಿಪುರದಿಂದ ಬಂದ ಸಂಸಾರಗಳೇ ಹೆಚ್ಚು, ಹಾಗಾಗಿ ಈ ಊರು ಕಾಮಾಟಿಪುರ ೆಂದು ಕರೆಯಲಾಯ್ತು. ಅವರು ಉಳಿದುಕೊಂಡಿದ್ದ ಜಾಗವೇ ಈಗಿನ ಕಾಮಾಟಿಪುರ.

kamatipuraದಿನ ಕಳೆದಂತೆ ಬ್ರಿಟಿಷರು, ಯೂರೋಪಿಯನ್ನರು ಅವರಿಗೆ ನೀಡುತ್ತಿದ್ದ ಕೂಲಿ ಜೀವನ ನಿರ್ವಹಣೆಗೆ ಕಷ್ಟವಾಗುತ್ತಿತ್ತು. ಆಗ ಹೆಣ್ಣು ಮಕ್ಕಳು ಜೀವನ ನಿರ್ವಹಿಸಲು ಮೈ ಮಾರಿಕೊಳ್ಳಲು ಶುರು ಮಾಡಿದರು. ಇದರಿಂದ ಬಂದ ಹಣದಿಂದ ಮನೆ ನಡೆಸಿದರು. ಇದನ್ನು ಕಂಡ ಇನ್ನಷ್ಟು ಹೆಣ್ಣುಮಕ್ಕಳು ಸಹ ಈ ದಂಧೆಗೆ ಮೊರೆ ಹೋದರು. ಬ್ರಿಟೀಷರು ಈ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳುತ್ತಿದ್ದರು.

ಹೀಗೆ 200 ವರ್ಷದಿಂದ ಇಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದು, ಬ್ರಿಟೀಷರು ನಮ್ಮ ದೇಶವನ್ನು ತೊರೆದ ಮೇಲೆ ಬೇರೆ ಬೇರೆ ನಗರಗಳಲ್ಲಿ ಕೆಲಸ ಮಾಡಲು ಕೆಲಸ ಸಿಗದೆ ಬಡತನದಿಂದ ಕಾಮಾಟಿಪುರಕ್ಕೆ ಬರುತ್ತಾರೆ.  ಹೊಟ್ಟೆಪಾಡಿಗಾಗಿ ಈ ರೀತಿಯ ಕೆಲಸಗಳಿಗೆ ಇಳಿದುಬಿಡುತ್ತಾರೆ. ಇನ್ನು ಕೆಲವರು ತಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳನ್ನು ಸಹಿಸಲಾರದೆ ಜೀವನದಲ್ಲಿ ಏನು ಮಾಡಬೇಕೆಂದು ತಿಳಿಯದೆ ಈ ಒಂದು ಕೆಲಸಕ್ಕೆ ತಿಳಿಯುತ್ತಾರೆ ಹಾಗಾಗಿ ಇದೇ ರೀತಿ ನಡೆದುಕೊಂಡು ಬಂದು ಸೇರಿದ ಎಲ್ಲ ಮಹಿಳೆಯರು ಕಾಮಾಟಿಪುರಕ್ಕೆ ಹೋಗುತ್ತಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •