ಮುಂಬೈ: ಟಾಲಿವುಡ್ ಚೆಲುವೆ ಕಾಜಲ್ ಅಗರ್ವಾಲ್ ಇಂದು ಗೆಳೆಯ ಗೌತಮ್ ಕಿಟ್ಜು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ವರ ಗೌತಮ್ ಶೇರ್ವಾನಿ, ರುಮಾಲು ಸುತ್ತಿ ಮಿಂಚಿದ್ರೆ ವಧು ಕಾಜಲ್ ಡಿಸೈನರ್ ಲೆಹೆಂಗಾ ಧರಿಸಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು. ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ನಲ್ಲಿ ಮದುವೆ ನಡೆದಿದ್ದು, ಎರಡೂ ಕುಟುಂಬಗಳ ಆಪ್ತರು ಮಾತ್ರ ಭಾಗಿಯಾಗಿದ್ದರು.

Kajal-Aggarwal

ಕೊರೊನಾ ವೈರಸ್ ಹಿನ್ನೆಲೆ ಮದುವೆಗೆ ಹೆಚ್ಚಿನ ಜನರನ್ನು ಆಹ್ವಾನಿಸಿರಲಿಲ್ಲ. ಕೇವಲ ಕುಟುಂಬಸ್ಥರು ಮತ್ತು ಅತ್ಯಾಪ್ತರು ಸ್ಟಾರ್ ಜೋಡಿಯ ಮದುವೆಗೆ ಸಾಕ್ಷಿಯಾದರು. ಕಳೆದ ಎರಡು ದಿನಗಳಿಂದ ಕಾಜಲ್ ಸೋಶಿಯಲ್ ಮೀಡಿಯಾದಲ್ಲಿ ಮದುವೆ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •