ನಮಸ್ಕಾರ ಸ್ನೇಹಿತರೇ ನಾವು ಈ ದಿನದ ಮಾಹಿತಿಯಲ್ಲಿ ತಿಳಿದು ಕೊಳ್ಳೋಣ ಪ್ರತಿದಿನ 1ಬಾಳೆಹಣ್ಣು ತಿನ್ನುವುದರಿಂದ ಏನೆಲ್ಲ ಆಗುತ್ತದೆ ಅಂತ ಈಗಾಗಲೇ ಸಾಕಷ್ಟು ಮಾಹಿತಿ ತಿಳಿಸಿದ್ದೇವೆ ಬಾಳೆ ಹಣ್ಣನ್ನು ತಿನ್ನುವುದರಿಂದ ಏನೆಲ್ಲಾ ಆಗುತ್ತದೆ ಅಂತ ಹಾಗೆ ಬಾಳೆ ಹಣ್ಣನ್ನು ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ ಪ್ರತಿಯೊಬ್ಬರಿಗೂ ಕೂಡ ನೀಡಬಹುದಾದ ಬಾಳೆಹಣ್ಣನ್ನು ನಾವು ತಪ್ಪದೆ ಸೇವಿಸಬೇಕು ಆಗ ಆರೋಗ್ಯ ಇನ್ನೂ ಹೆಚ್ಚುತ್ತದೆ. ಬಾಳೆ ಹಣ್ಣನ್ನು ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ನಾವು ದೂರ ಇಡಬಹುದು ಇಡೀ ವರುಷ ದೊರೆಯುವ ಈ ಬಾಳೆಹಣ್ಣು ಎಲ್ಲಾ ಕಡೆಯಲ್ಲಿಯೂ ಕೂಡ ದೊರೆಯುತ್ತದೆ.

ಬಾಳೆಹಣ್ಣನ್ನು ಸಲಾಡ್ ಜ್ಯೂಸ್ ಸ್ಮೂತಿ ಮಾಡಿ ತಿನ್ನುತ್ತಾರೆ ಇನ್ನು ಬಾಳೆಹಣ್ಣನ್ನು ರಸಾಯನ ಮಾಡಿ ಪಂಚಾಮೃತ ಮಾಡಿ ದೇವರಿಗೆ ನೈವೇದ್ಯ ಮಾಡುವುದು ಕೂಡ ಉಂಟು ಬಾಳೆಹಣ್ಣು ಮಾತ್ರವಲ್ಲ ಬಾಳೆಹಣ್ಣಿನ ಗಿಡದಲ್ಲಿ ಎಲ್ಲವೂ ಕೂಡ ಪ್ರಯೋಜನಕಾರಿ. ಮೂಲವ್ಯಾಧಿಗೆ ಉತ್ತಮ ಈ ಬಾಳೆಹಣ್ಣು ಹೌದು ಬಾಳೆ ಹಣ್ಣಿನಲ್ಲಿ ಸಾಕಷ್ಟು ವಿಧವಿದ್ದು ಬಾಳೆಹಣ್ಣಿನಲ್ಲಿ ಚುಕ್ಕಿ ಬಾಳೆಹಣ್ಣು ಮತ್ತು ಪಚ್ಚಬಾಳೆ ಹಣ್ಣು ದೇಹಕ್ಕೆ ತಂಪು ಮಾಡುತ್ತದೆ ಮತ್ತು ಈ ಬಾಳೆ ಹಣ್ಣನ್ನು ಸೇವನೆ ಮಾಡಿದ್ದಲ್ಲಿ ಮೂಲವ್ಯಾಧಿ ಎಂಬುದನ್ನ ಬೇಗ ಪರಿಹಾರ ಮಾಡಿಕೊಳ್ಳಬಹುದು ಮೂಲವ್ಯಾಧಿಯಿಂದ ಬಳಲುವವರು ಇರುವವರು ದಿನಕ್ಕೆ 1ಬಾಳೆಹಣ್ಣನ್ನು ತಿನ್ನುತ್ತಾ ಬಂದರೆ ಕ್ರಮೇಣವಾಗಿ ಮೂಲವ್ಯಾಧಿ ಮತ್ತು ಮಲಬದ್ಧತೆ ನಿವಾರಣೆಯಾಗುತ್ತದೆ.

ಬಾಳೆಹಣ್ಣನ್ನು ತಿಂದು ತೂಕವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳಬಹುದು ಹಾಗೆ ಬಾಳೆ ಹಣ್ಣನ್ನು ತಿನ್ನುವುದರಿಂದ ತೂಕವನ್ನು ಹೆಚ್ಚು ಮಾಡಿಕೊಳ್ಳಬಹುದು ಆದರೆ ಸಣ್ಣ ಆಗಲು ಬಯಸುವವರು ತಿನ್ನುವುದರಿಂದ ಯಾವುದೇ ಪ್ರಯೋಜನ ಇರುವುದಿಲ್ಲ ಆದರೆ ಬಾಳೆ ಹಣ್ಣನ್ನು ತಿಂದರೆ ತೂಕವನ್ನು ಇಳಿಸಿ ಕೊಳ್ಳುವುದಕ್ಕಿಂತ ತೂಕವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳಬಹುದು ಅಷ್ಟೆ.

ಬಾಳೆಹಣ್ಣನ್ನು ಫೇಸ್ ಪ್ಯಾಕ್ ಆಗಿ ಕೂಡ ಬಳಸುತ್ತಾರೆ ಹೌದು ಬಾಳೆಹಣ್ಣನ್ನು ಫೇಸ್ ಪ್ಯಾಕ್ ಆಗಿ ಬಳಸಿದಾಗ ತ್ವಚೆಯ ಕಾಂತಿ ಹೆಚ್ಚುತ್ತದೆ ಮತ್ತು ಬಾಳೆ ಹಣ್ಣನ್ನು ಮುಖಕ್ಕೆ ಲೇಪನ ಮಾಡಿಕೊಂಡು ಮುಖದ ಮೇಲೆ ಇರುವ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.

ಇನ್ನೂ ಬಾಳೆಹಣ್ಣನ್ನು ಮೊಡವೆ ನಿವಾರಣೆ ಗಾಗಿ ಕೂಡ ಬಳಸಬಹುದು ಬಾಳೆಹಣ್ಣನ್ನು ಚೆನ್ನಾಗಿ ಪೇಸ್ಟ್ ಮಾಡಿಕೊಂಡು ಅದಕ್ಕೆ ಅರಿಶಿನವನ್ನು ಬೆರೆಸಿ ಮುಖದ ಮೇಲೆ ಮೊಡವೆ ಆಗಿರುವ ಭಾಗದಲ್ಲಿ ಲೇಪನ ಮಾಡಿಕೊಳ್ಳುವುದರಿಂದ ಮೊಡವೆ ಕರೆಗಳು ಬೇಗ ಪರಿಹಾರ ಆಗುತ್ತದೆ. ಅಷ್ಟೇ ಅಲ್ಲ ಬಾಳೆಹಣ್ಣಿನ ಸಿಪ್ಪೆ ಕೂಡ ಪ್ರಯೋಜನಕಾರಿ ಬಾಳೆಹಣ್ಣಿನ ಸಿಪ್ಪೆಯನ್ನು ಹುಳ ಕಡಿದ ಭಾಗದಲ್ಲಿ ನಿಧಾನವಾಗಿ ಸವರುವುದರಿಂದ ನೋವು ಮತ್ತು ಬಾವು ಎರಡು ಕೂಡ ಕಡಿಮೆಯಾಗುತ್ತದೆ ಆದಕಾರಣ.

ಪ್ರಯೋಜನಕಾರಿಯಾದ ಬಾಳೆಹಣ್ಣನ್ನು ಪ್ರತಿಯೊಬ್ಬರು ಕೂಡ ಸೇವಿಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ. 1ಚಿಕ್ಕ ಬಾಳೆಹಣ್ಣು ಆರೋಗ್ಯವನ್ನು ತುಂಬಾ ಮೇಲು ಮಾಡುತ್ತದೆ ಆದ್ದರಿಂದ ಬಾಳೆಹಣ್ಣನ್ನು ಕಂಡರೆ ಯಾರೂ ಮುಖ ಮುರಿಯುತ್ತಾರೆ ಅಂತಹವರು ತಪ್ಪದೆ ಬಾಳೆ ಹಣ್ಣಿನ ಮಹತ್ವವನ್ನು ತಿಳಿದು ಬಾಳೆ ಹಣ್ಣನ್ನು ಸೇವಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •