ತಾಯಿ ಎ೦ಬ ಪದದ ಅರ್ಥ ತಿಳಿಯಲಾಗದು, ಏಕೆ೦ದರೆ ಅಷ್ಟೊ೦ದು ಆಳವಾಗಿದೆ. ಅಮ್ಮಾ ಅಮ್ಮಾ,
ಎ೦ಬ ಪದದಲ್ಲಿ ಏನೊ ಅಡಗಿದೆ. ದುಖವನ್ನು ದೂರವಿಟ್ಟು ಸ೦ತೋಷವನ್ನು ಸೆಳೆಯುವ ಶಕ್ತಿ ಇದರಲ್ಲಿ ಅಡಗಿಕೊ೦ಡಿದೆ. ತಾಯಿ ಇಲ್ಲದ ಪ್ರಪ೦ಚ ನೀರು ಇಲ್ಲದ ಮರುಭೂಮಿ ಇದ್ದ೦ತೆ, ನೀರಿಲ್ಲದೆ, ಹಸಿರಿಲ್ಲದೆ,ಬರಕಲು ಪ್ರಪ೦ಚವಾಗಿರುತ್ತಿತ್ತು. ತಾಯಿಯ ಪ್ರಿತಿಗೆ ಈ ಪ್ರಪ೦ಚದ ಯಾರ ಪ್ರೀತಿಯು ಸರಿಸಾಟಿಯಾಗಲಾರದು, ಪ್ರಪ೦ಚದಲ್ಲಿ ಬೆಲೆಕಟ್ಟಲಾಗದ ವಸ್ತು ಅ೦ದರೆ ಅದು ತಾಯಿ ಮಾತ್ರ , ಯಾಕೆ೦ದರೆ ಆ ತಾಯಿಯ ಪ್ರೀತಿ ಅಮುಲ್ಯವಾದದ್ದು, ಹಾಗೆ ನಿಶ್ಕಳ೦ಕವಾದದ್ದು ಕೂಡ ತಾಯಿಯ ಪ್ರೀತಿಗೆ ಕೊನೆಯೆ ಇಲ್ಲ ಯಾಕೆ೦ದರೆ ಅದು ಸಮುದ್ರದ೦ತೆ ಆಳವು ಮತ್ತು ವಿಶಾಲವಾದದ್ದು ಆಗಿದೆ, ತಾಯಿಯ ಪ್ರೀತಿ ಕತ್ತಲೆಗೆ ಬೆಳಕಿನ೦ತೆ, ಮರಕ್ಕೆ ಹಸಿರಿನ೦ತೆ, ಚಳಿಯಲ್ಲಿ ನಡುಗುತ್ತಿರುವ ಗುಬ್ಬಚ್ಹಿಗೆ ಬೆಚ್ಹನೆಯ ಗೂಡಿನ೦ತೆ, ಕುರುಡನಿಗೆ ದಾರಿ ತೊರಿಸುವ ಕೋಲು ಈ ತಾಯಿಯ ಪ್ರೀತಿ .

Judgment

ಯಾವುದೇ ವ್ಯಕ್ತಿಯ ಆದಾಯದಲ್ಲಿ ತನ್ನ ಹೆಂಡತಿ ಅಥವಾ ಮಕ್ಕಳ ಹಕ್ಕುಗಳು ಮಾತ್ರವಲ್ಲದೇ, ಆತನ ವಯಸ್ಸಾದ ತಂದೆ ತಾಯಿಗಳಿಗೂ ಕೂಡ ಹಕ್ಕಾಗಿದೆ ಎಂದು ಕೋರ್ಟ್ ಹೇಳಿದೆ. ಈ ಮೂಲಕ ಯಾವುದೇ ವ್ಯಕ್ತಿಯ ಹೆಂಡತಿ ಮತ್ತು ಮಗನಲ್ಲದೇ ಆತನ ಆದಾಯದಲ್ಲಿ ತಂದೆ-ತಾಯಿಗಳ ಹಕ್ಕನ್ನು ಹೊಂದಿರುವುದಾಗಿ ನ್ಯಾಯಾಲಯ ವು ಸ್ಪಷ್ಟಪಡಿಸಿದೆ.ಪ್ರಕರಣವೊಂದರ ವಿಚಾರಣೆ ನಡೆಸಿದ ಟಿಸ್ ಹಜಾರಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗಿರೀಶ್ ಕಠ್ಪಾಲಿಯಾ, ಅವರು ಈ ತೀರ್ಪನು ನೀಡಿದ್ದಾರೆ.

Judgment

ಮಹಿಳೆ ತನ್ನ ಗಂಡನ ಮಾಸಿಕ ಆದಾಯವು 50 ಸಾವಿರ ರೂಪಾಯಿಗಳಿಗಿಂತ ಹೆಚ್ಚಾಗಿದ್ದು, ಅವನ ಮಗುವಿಗೆ ಕೇವಲ ಹತ್ತು ಸಾವಿರ ರೂಪಾಯಿಗಳನ್ನು ಮಾತ್ರ ನೀಡಲಾಗುತ್ತಿದೆ ಅಂತ ಆರೋಪಿಸಿ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟೇಲೆರಿದ್ದಳು.ಸಂಬಳದ ಬಗ್ಗೆ ಮಾಹಿತಿ ಪಡೆದುಕೊಂಡ ನ್ಯಾಯಾಪೀಠ ಅವರ ಆದಾಯ ತೆರಿಗೆ ಖಾತೆಯ ಪ್ರಕಾರ ಅವರ ಮಾಸಿಕ ಆದಾಯ ಕೇವಲ 37 ಸಾವಿರ ರೂಪಾಯಿಗಳಾಗಿದ್ದು, ಇದರ ಜೊತೆಗೆ ಪೋಷಕರ ಜೀವನ ವೆಚ್ಚ ಮತ್ತು ಜೀವನ ವೆಚ್ಚಗಳನ್ನು ಸಹ ಭರಿಸುತ್ತಾರೆ ಎಂದು ಸಲ್ಲಿಸಿದ್ದ ಅಫಿಡವಿಟ್‌ ಅನ್ನು ನೋಡಿ ಇದೇ ವೇಳೇ ಈ ಪ್ರಕರಣವನ್ನು ನ್ಯಾಯಾಲಯ ಪತಿಯ ವೇತನವನ್ನು ಆರು ಭಾಗಗಳಾಗಿ ವಿಂಗಡಿಸಿದನು.

Judgment

ಪ್ರತಿವಾದಿಯು ಅಂದ್ರೆ ಪತಿಗೆ ಎರಡು ಭಾಗಗಳನ್ನು ಕೊಟ್ಟು. ಜೊತೆಗೆ ಪತ್ನಿ, ಮಗ, ತಾಯಿ ಮತ್ತು ತಂದೆ ಗೆ ತಲಾ ಒಂದು ಪಾಲು ನೀಡಿದೆ. ಕುಟುಂಬದ ಆದಾಯ ವು ಒಂದು ಕೇಕ್ ನಂತಿದೆ ಕುಟುಂಬ ಸದಸ್ಯರ ಆದಾಯ ವು ಒಂದು ಕುಟುಂಬದ ಕೇಕ್ ನಂತಿದೆ ಎಂದು ಕೋರ್ಟ್ ತನ್ನ ನಿರ್ಧಾರವನ್ನು ಉದಾಹರಣೆಯಾಗಿ ನೀಡಿದ ಆದೇಶಸಿದ್ದು. ಅದನ್ನು ಸಮ ಭಾಗಗಳನ್ನಾಗಿ ವಿಂಗಡಿಸಿ, ಅದನ್ನು ತಿನ್ನಿರಿ ಅಂತ ಆದಾಯವನ್ನು ಹಂಚಿದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •