ಸುಂದರವಾಗಿ ಕಾಣುವ ಜಪಾನಿ ಹುಡುಗಿಯರು – ಮಹಿಳೆಯರ ಸೌಂದರ್ಯದ ರಹಸ್ಯವೇನು?? ಇಲ್ಲಿದೆ ಉತ್ತರ

Home Kannada News/ಸುದ್ದಿಗಳು

ಜಪಾನ್ ಬಹಳ ಸುಂದರವಾದ ದೇಶವಾಗಿದೆ. ಅಲ್ಲಿನ ಜನರು ಅವರ ಸ್ವಭಾವ, ವೈವಿಧ್ಯಮಯ ಸಂಸ್ಕೃತಿ, ನೀಲಿ ಸಮುದ್ರ, ಬೀದಿ ಬದಿಯಲ್ಲಿ ಆಹಾರ ಗಳಂತಹ ವಿಚಾರಗಳು ಈ ದೇಶದ ಸೌಂದರ್ಯವನ್ನು ದುಪ್ಪಟ್ಟು ಗೊಳಿಸಿದೆ. ಈ ದೇಶದ ಮತ್ತೊಂದು ಪ್ರಮುಖ ವಿಶೇಷತೆಯ ಅಥವಾ ಆಕರ್ಷಣೆ ಎಂದರೆ ಇಲ್ಲಿನ ಜನರ ಫಿಟ್ನೆಸ್ ಆಗಿದೆ. ಜಪಾನ್ ದೇಶದಲ್ಲಿ ಐವತ್ತು ವರ್ಷದ ಮಹಿಳೆಯರು 30 ವರ್ಷದವರಂತೆ ಕಾಣುತ್ತಾರೆ. ಇದು ಮಹಿಳೆಯರಲ್ಲಿ ಮಾತ್ರವಲ್ಲ ಪುರುಷರು ಕೂಡಾ ಅವರ ವಯಸ್ಸಿಗಿಂತ ಚಿಕ್ಕವರಂತೆ ಕಾಣುತ್ತಾರೆ. ಹಾಗಾದರೆ ಜಪಾನಿನ ಜನರು ಅಷ್ಟೊಂದು ಸುಂದರವಾಗಿ ಕಾಣಲು ಕಾರಣವೇನು?? ಎನ್ನುವುದಾದರೆ ಅದಕ್ಕೆ ಸಂಬಂಧಪಟ್ಟ ಕೆಲವು ವಿಚಾರಗಳು ಇಲ್ಲಿವೆ.ಜಪಾನಿನ ಹುಡುಗಿಯರು ತಮ್ಮ ಸೌಂದರ್ಯವನ್ನು ದೀರ್ಘಕಾಲದವರೆಗೆ ಹೇಗೆ ಉಳಿಸಿಕೊಳ್ಳುತ್ತಾರೆ? - Quora

ಗ್ರೀನ್ ಟೀ : ಜಪಾನಿನ ಯಾವುದೇ ಮನೆಗೆ ಹೋದರೂ ಅಲ್ಲಿ ನಮಗೆ ತಪ್ಪದೇ ಗ್ರೀನ್ ಟೀ ಸಿಗುತ್ತದೆ. ಇಲ್ಲಿನ ಜನರು ಹೆಚ್ಚಾಗಿ ಗ್ರೀನ್ ಟೀ ಯನ್ನು ಕುಡಿಯುತ್ತಾರೆ. ಉತ್ತಮ ಗುಣಮಟ್ಟದ ಟೀ ಎಲೆಗಳನ್ನು ಒಣಗಿಸಿ ಇದನ್ನು ತಯಾರು ಮಾಡಲಾಗುತ್ತದೆ. ಗ್ರೀನ್ ಟೀ ಕುಡಿಯುವುದರಿಂದ ಅದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದು ಮಾತ್ರವಲ್ಲದೇ ದೇಹದ ತೂಕವನ್ನು ಕೂಡಾ ಕಡಿಮೆ ಮಾಡುತ್ತದೆ. ಆದ್ದರಿಂದಲೇ ಜಪಾನಿನಲ್ಲಿ ಸಾಮಾನ್ಯವಾಗಿ ಜನರು ಹೆಚ್ಚು ದಪ್ಪವಾಗಿರುವುದಿಲ್ಲ.

ಹುಗುವಿಕೆ ಅಥವಾ ಫರ್ಮೆಂಟೆಡ್ ಆಹಾರ : ಅಂದರೆ ಯೀಸ್ಟ್ ಬಳಕೆ ಮಾಡಿಕೊಂಡು ಸಕ್ಕರೆ ಅಂಶವನ್ನು ಆಲ್ಕೋಹಾಲ್ ಆಗಿ ಬದಲಾಯಿಸುವ ಪ್ರಕ್ರಿಯೆ. ಈ ರೀತಿ ಆಹಾರಗಳನ್ನು ಜಪಾನ್ ಮಂದಿ ಹೆಚ್ಚಾಗಿ ಸೇವನೆ ಮಾಡುತ್ತಾರೆ. ಇತರ ಆಹಾರಗಳಿಗಿಂತ ಹೆಚ್ಚಿನ ಪೋಷಕಾಂಶಗಳು, ಖನಿಜಗಳು ಮತ್ತು ಪ್ರೋಟೀನ್‌ಗಳನ್ನು ಹೊಂದಿರುತ್ತದೆ. ಇಂತಹ ಆಹಾರ ಪದಾರ್ಥಗಳು ನೈಸರ್ಗಿಕ ಪೋಷಕಾಂಶಗಳನ್ನು ರಕ್ಷಣೆ ಮಾಡುವ ಜೊತೆಗೆ ನಮ್ಮ ಜೀರ್ಣಶಕ್ತಿಯನ್ನು ಸಹಾ ವೃದ್ಧಿಸುತ್ತದೆ. ಇದು ತೂಕವನ್ನು ಇಳಿಸಲು ಸಹಾಯವಾಗುತ್ತದೆ ಮತ್ತು ಇಂತಹ ಆಹಾರಗಳಲ್ಲಿ ವೈನ್ ಕೂಡ ಸೇರಿದೆ.

10 Japanese Actresses Whose Visuals Are Famous Even In Korea - Koreaboo

ಸಮುದ್ರ ಆಹಾರ ಸೇವನೆ ಅಥವಾ ಸೀಫುಡ್ ಬಳಕೆ : ಅನ್ಯ ದೇಶಗಳಿಗೆ ಹೋಲಿಕೆ ಮಾಡಿದಾಗ ಜಪಾನಿನ ಜನರು ಸೀಫುಡ್ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಈ ಆಹಾರವನ್ನು ಸೇವನೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಬಹುದಾಗಿದೆ. ಇವರು ಆಹಾರದ ಭಾಗವಾಗಿ ಮೀನುಗಳನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಅನೇಕ ಉಪಯೋಗಗಳಿವೆ. ಸಮುದ್ರದ ಆಹಾರ ದೇಹಕ್ಕೆ ಹಲವು ರೀತಿಯ ಪ್ರೋಟೀನ್ ಗಳನ್ನು ಪೂರೈಕೆ ಮಾಡುತ್ತದೆ. ವಿಶೇಷವಾಗಿ ಇದರಲ್ಲಿ ಒಮೆಗಾ 3 ಲಭ್ಯವಿದ್ದು, ಇದು ದೇಹದ ಕೊಬ್ಬನ್ನು ಕರಗಿಸುವುದು ಮಾತ್ರವಲ್ಲದೇ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

ಮಿತವಾದ ಆಹಾರ ಸೇವನೆ : ಮಿತವಾಗಿ ಆಹಾರವನ್ನು ಸೇವನೆ ಮಾಡುವುದು ಜಪಾನಿಯರ ಸಂಸ್ಕೃತಿಯ ಒಂದು ಭಾಗವಾಗಿದೆ. ಅವರು ಸಣ್ಣ ಬಟ್ಟಲಿನಲ್ಲಿ ಆಹಾರವನ್ನು ಸೇವನೆ ಮಾಡುತ್ತಾರೆ. ಆದ್ದರಿಂದಲೇ ಸಣ್ಣ ಬಟ್ಟಲಿನಲ್ಲಿ ಆಹಾರ ಸೇವನೆ ಮಾಡಿದರೂ ಅದು ಹೆಚ್ಚು ಎನ್ನುವಂತೆ ಕಾಣುತ್ತದೆ. ಅವರು ಆಹಾರ ಸೇವನೆಗೆ ಚಮಚಗಳ ಬದಲಾಗಿ ಚಾಪ್ ಸ್ಟಿಕ್ ಗಳನ್ನು ಬಳಸುತ್ತಾರೆ. ಚಾಪ್ ಸ್ಟಿಕ್ ನಲ್ಲಿ ಕಡಿಮೆ ಆಹಾರ ಬರುತ್ತದೆ ಇದರಿಂದ ನಿಧಾನವಾಗಿ ಆಹಾರ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆಯ ಉತ್ತಮವಾಗಿ ನಡೆಯುತ್ತದೆ.

20 Most Beautiful and Hot Japanese Girls in 2021 | Women&Travel

ಕಡ್ಡಾಯವಾದ ವಾಕಿಂಗ್ : ಸಾಮಾನ್ಯವಾಗಿ ನಮ್ಮ ದೇಶಗಳಲ್ಲಿ ಜನರು ತಮ್ಮ ದೇಹದ ತೂಕ ಹೆಚ್ಚಾದರೆ, ಆರೋಗ್ಯಕ್ಕೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳು ಎದುರಾದಾಗ ವಾಕಿಂಗ್ ಮಾಡಲು ಪ್ರಾರಂಭಿಸುತ್ತಾರೆ. ಆದರೆ ಜಪಾನಿಯರ ಜೀವನ ಶೈಲಿಯಲ್ಲಿ ವಾಕಿಂಗ್ ಎನ್ನುವುದು ನಿತ್ಯ ಜೀವನದ ಒಂದು ಅಭ್ಯಾಸವಾಗಿದೆ. ವಾಕಿಂಗ್ ಮಾಡುವುದು ಕೂಡಾ ಒಂದು ಉತ್ತಮ ವ್ಯಾಯಾಮ ಆಗಿರುವುದರಿಂದ, ಇದನ್ನು ನಿಯಮಿತವಾಗಿ ಪಾಲಿಸಿಕೊಂಡು ಬರುತ್ತಿರುವ ಅವರಿಗೆ ಹೃದಯ ಸಂಬಂಧಿ ಕಾಯಿಲೆಗಳು ತೊಂದರೆಯನ್ನು ನೀಡುವುದಿಲ್ಲ.

ಸರಿಯಾದ ಸಮಯಕ್ಕೆ ಆಹಾರ ಸೇವನೆ : ದೇಹದ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಲು ನಿಗದಿತ ಸಮಯಗಳಲ್ಲಿ ಆಹಾರವನ್ನು ಸೇವನೆ ಮಾಡುವುದು ಅತ್ಯಗತ್ಯವಾಗಿರುತ್ತದೆ. ಜಪಾನಿನ ಜನರು ಇದನ್ನು ಸರಿಯಾಗಿ ಪಾಲಿಸುತ್ತಾರೆ. ಜಪಾನಿನಲ್ಲಿ ಬರ್ಗರ್ ಹಾಗೂ ಕೂಲ್ ಡ್ರಿಂಕ್ ಗಳು ಕಾಣುವುದು ಬಹಳ ಅಪರೂಪ. ಇಲ್ಲಿನ ಜನರು ಕೆಲಸ ಮಾಡುವ ವೇಳೆಯಲ್ಲೇ ಆಗಲೀ ಅಥವಾ ಟಿವಿಯನ್ನು ನೋಡುವ ಸಮಯದಲ್ಲೇ ಆಗಲಿ ಯಾವುದೇ ಕಾರಣಕ್ಕೂ ಆಹಾರವನ್ನು ಸೇವನೆ ಮಾಡುವುದಿಲ್ಲ.

Pin on Teen(Girls)

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...