ಈ ರಾಶಿಯ ಹುಡುಗಿಯರನ್ನು ವಿವಾಹವಾದರೆ ಪತಿಗೆ ಜಾಕ್‌ಪಾಟ್…

Home Kannada News/ಸುದ್ದಿಗಳು

ಜ್ಯೋತಿಷ್ಯ ಶಾಸ್ತ್ರದನುಸಾರ 12 ರಾಶಿಗಳಿದ್ದು, ಒಂದೊಂದು ಬೇರೆ ಬೇರೆ ಪ್ರಭಾವವನ್ನು ಹೊಂದಿರುತ್ತವೆ. ಪ್ರತಿ ರಾಶಿಯ ಗುಣ-ಸ್ವಭಾವಗಳು ಭಿನ್ನವಾಗಿರುತ್ತವೆ. ಎಲ್ಲ ರಾಶಿಗೆ ಒಂಭತ್ತು ಗ್ರಹಗಳಲ್ಲಿ ಯಾವುದಾದರೂ ಒಂದು ಅಧಿಪತಿಯಾಗಿರುತ್ತವೆ. ಆ ಗ್ರಹಗಳ ಪ್ರಭಾವ ರಾಶಿಯ ಮೇಲಾಗುತ್ತದೆ. ಹಾಗಿರುವಾಗ ಪ್ರತಿ ವ್ಯಕ್ತಿಯ ಸ್ವಭಾವ, ವ್ಯಕ್ತಿತ್ವ, ಕಾರ್ಯಕ್ಷಮತೆ ಭಿನ್ನವಾಗಿರುತ್ತವೆ. ಇನ್ನು ಅದೃಷ್ಟದ ಬಗ್ಗೆ ಹೇಳಬೇಕೆಂದರೆ ಹಲವು ರೀತಿ ಇರುತ್ತದೆ. ಆದರೆ, ಈ ನಾಲ್ಕು ರಾಶಿಯವರಲ್ಲಿ ಒಬ್ಬರನ್ನು ವಿವಾಹವಾದರೆ ಅಂಥ ಪತಿಗೆ ಅದೃಷ್ಟವು ಒಲಿದು ಬರಲಿದ್ದು,

ಆ ರಾಶಿಗಳು ಯಾವುವು ಎಂಬ ಬಗ್ಗೆ ನೋಡೋಣ. ಅದೃಷ್ಟ ಎಂಬುದು ಕೆಲವರಿಗೆ ಹುಟ್ಟಿನಿಂದ ಬಂದರೆ ಮತ್ತೆ ಕೆಲವರಿಗೆ ಯಾವಾಗಲೋ ಒಮ್ಮೆ ಬರುತ್ತದೆ. ಹಲವರಿಗೆ ಒಂದು ಹಂತದ ವಯಸ್ಸು ದಾಟಿದ ಮೇಲೆ ಬರುತ್ತದೆ. ಇನ್ನು ಬಹಳಷ್ಟು ಮಂದಿ ಎಷ್ಟೇ ಪ್ರಯತ್ನಪಟ್ಟರೂ ಅವರಿಗೆ ಅವರಿಗೆ ಯಾವುದೇ ರೀತಿ ಧನಲಾಭ, ಸಂಪತ್ತು ವೃದ್ಧಿಯಾಗುವುದೇ ಇಲ್ಲ. ಇದಕ್ಕೆ ಕಾರಣ ಅವರ ಪರಿಶ್ರಮಕ್ಕೆ ಅದೃಷ್ಟ ಎನ್ನುವುದು ಸಾಥ್ ನೀಡದೇ ಇರುವುದು. ಇನ್ನು ಈ ಅದೃಷ್ಟ ಎಂಬುದು ಆಯಾ ವ್ಯಕ್ತಿಯ ರಾಶಿ ಚಕ್ರದ ಮೇಲೂ ಅವಲಂಬಿತವಾಗಿರುತ್ತದೆ.

ಕೆಲವು ರಾಶಿ ಚಕ್ರದವರಿಗೆ ಅದೃಷ್ಟ ಎಂಬುದು ಹಿಂಬಾಲಿಸಿಕೊಂಡು ಬರುತ್ತಲೇ ಇರುತ್ತದೆ. ಹೀಗಾಗಿ ರಾಶಿ, ನಕ್ಷತ್ರಗಳು ಸಹ ವ್ಯಕ್ತಿಯ ಅದೃಷ್ಟವನ್ನು ನಿರ್ಧರಿಸುತ್ತವೆ. ಬಹಳಷ್ಟು ಮಂದಿಗೆ ಅದೃಷ್ಟಕ್ಕೆ ಗ್ರಹಗತಿಗಳು ತೊಂದರೆ ಕೊಡುತ್ತಲೇ ಇರುತ್ತವೆ. ಅವರಿಗೆ ಮದುವೆಯಾದ ಮೇಲೆ ಪತ್ನಿಯ ಜಾತಕದ ಪ್ರಭಾವದಿಂದಲೂ ಅದೃಷ್ಟ ಬರಬಹುದು. ಈ ನಾಲ್ಕು ರಾಶಿಯ ಹೆಣ್ಣುಮಕ್ಕಳನ್ನು ವಿವಾಹವಾದರೆ ಅದೃಷ್ಟ ಒಲಿಯಲಿದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಹಾಗಾದರೆ ಯಾವ ರಾಶಿ ಎಂಬುದರ ಬಗ್ಗೆ ಗಮನಿಸೋಣ

ಕರ್ಕಾಟಕ ರಾಶಿ: ಈ ರಾಶಿಯ ಹೆಣ್ಣುಮಕ್ಕಳು ತಮ್ಮ ಸಂಗಾತಿಗೆ ಭಾಗ್ಯವನ್ನು ತರುವ ಮಹಾಲಕ್ಷ್ಮಿಯರಾಗುತ್ತಾರೆ. ಈ ರಾಶಿಯವರನ್ನು ವಿವಾಹ ಮಾಡಿಕೊಂಡು ಮನೆಗೆ ಕರೆತಂದರೆ ಆ ಮನೆಯಲ್ಲಿ ಸದಾ ಖುಷಿಯ ವಾತಾವರಣ ನೆಲೆಸಿರುತ್ತದೆ. ಅಷ್ಟರ ಮಟ್ಟಿಗೆ ಅವರು ಮನೆಯವರ ಸಂತೋಷಕ್ಕೆ ಕಾರ್ಯನಿರ್ವಹಿಸುತ್ತಾರೆ. ಇವರು ಕಾಲಿಟ್ಟ ಮನೆಯಲ್ಲಿ ಧನ-ಧಾನ್ಯ ವೃದ್ಧಿಸುತ್ತದೆ. ಈ ರಾಶಿಯವರು ಪತಿಯನ್ನು ತುಂಬಾ ಪ್ರೀತಿಸುತ್ತಾರೆ. ಜೊತೆಗೆ ಎಂದೂ ಸಹ ತಮ್ಮ ಪತಿಯು ಖುಷಿ ಖುಷಿಯಾಗಿ ಇರುವುದನ್ನು ಕಾಣಲು ಇವರು ಬಯಸುತ್ತಾರೆ. ಪತಿಯ ಎಲ್ಲ ಸುಖ-ದುಃಖಗಳಲ್ಲಿ ಇವರು ಭಾಗಿಯಾಗಿರುತ್ತಾರೆ. ಈಕೆ ತನ್ನ ಸ್ವಭಾವದಿಂದ ಪತಿಯ ಕುಟುಂಬದ ಎಲ್ಲರ ಮನವನ್ನು ಸುಲಭವಾಗಿ ಗೆಲ್ಲುತ್ತಾಳೆ.

ಮಕರ ರಾಶಿ: ಈ ರಾಶಿಯ ಹೆಣ್ಣುಮಕ್ಕಳನ್ನು ಮದುವೆಯಾಗುವವರು ಅದೃಷ್ಟವನ್ನು ತಮ್ಮ ಜೊತೆಗೆ ಮನೆಗೆ ಕರೆದೊಯ್ದಂತೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಕುಟುಂಬದಲ್ಲಿ ಭಾಗ್ಯದ ಬಾಗಿಲು ತೆರೆದುಕೊಳ್ಳುತ್ತದೆ. ಗಂಡನ ಮನೆಯಲ್ಲಿ ಸಕ್ರಿಯವಾಗಿ ಕೆಲಸದಲ್ಲಿ ತೊಡಗುವ ಇವರು ಜವಾಬ್ದಾರಿಯಿಂದ ನಿಭಾಯಿಸುತ್ತಾರೆ. ಪತಿಯ ಮನೋಭಾವವನ್ನು ಅರ್ಥೈಸಿಕೊಳ್ಳುವ ಇವರು ಅವರ ಆಲೋಚನೆ, ಚಿಂತನೆಗಳಿಗೆ ಸಾಥ್ ಕೊಡುತ್ತಾರೆ. ಪತಿಯ ಜೀವನವನ್ನು ಸುಖ-ಸಮೃದ್ಧಗೊಳಿಸಲು ಸದಾ ಶ್ರಮವಹಿಸುತ್ತಾರೆ. ತಾವು ಖುಷಿಯಾಗಿರುವುದರ ಜೊತೆಗೆ ಪತಿಯ ಮನೆಯಲ್ಲಿ ಎಲ್ಲರೂ ಖುಷಿಯಾಗಿರುವಂತೆ ನೋಡಿಕೊಳ್ಳುತ್ತಾರೆ.

ಕುಂಭ ರಾಶಿ: ಕುಂಭ ರಾಶಿಯ ಹುಡುಗಿಯರು ಹೆಚ್ಚು ಶ್ರಮ ಜೀವಿಗಳು. ಸಂಗಾತಿ ಮತ್ತು ಪತಿಯ ಮನೆಯ ಯಶಸ್ಸಿಗೆ ಹಾಗೂ ಅಭಿವೃದ್ಧಿಗೆ ಜೊತೆಗೇ ನಿಲ್ಲುತ್ತಾರೆ. ಪತಿಯ ಬಗ್ಗೆ ಬಹಳಷ್ಟು ಕಾಳಜಿ ವಹಿಸುವ ಇವರು, ಹೆಚ್ಚಿನ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಪತಿಯ ಧೈರ್ಯವನ್ನು ಹೆಚ್ಚಿಸುವಲ್ಲಿಯೂ ಇವರು ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ. ಯಾವುದೇ ಸಂದರ್ಭದಲ್ಲಿಯೂ ಪತಿಗೆ ಒಬ್ಬಂಟಿ ಭಾವ ಬರಲು ಬಿಡದೆ, ಬೆನ್ನಿಗೆ ನಿಲ್ಲುವ ಗುಣವನ್ನು ಹೊಂದಿರುತ್ತಾರೆ. ಸದಾ ಕುಟುಂಬದ ಖುಷಿ ಬಗ್ಗೆಯೇ ವಿಚಾರ ಮಾಡುತ್ತಾರೆ.ಈ ರಾಶಿಯ ಹುಡುಗಿಯರು ನಿಮಗೆ ಅದೃಷ್ಟ ತರುವುದಂತೂ ಖಂಡಿತ. | ಮಾಹಿತಿ ಗುರು

ಮೀನ ರಾಶಿ: ಈ ರಾಶಿಯ ಹೆಣ್ಣುಮಕ್ಕಳು ಸಂವೇದನೆಯನ್ನು ಉಳ್ಳವರಾಗಿದ್ದು, ಸೂಕ್ಷ್ಮಮತಿಗಳಾಗಿರುತ್ತಾರೆ. ಪತಿಯ ಮನೆಯವರನ್ನು ಬಹಳ ಕಾಳಜಿ ವಹಿಸುವ ಇವರು, ತಮ್ಮ ಜೀವನ ಸಂಗಾತಿಯನ್ನು ಸದಾ ಖುಷಿಯಲ್ಲಿಡಲು ಪ್ರಯತ್ನ ಪಡುತ್ತಾರೆ. ಇವರ ರಾಶಿ ಪ್ರಭಾವದಿಂದ ಪತಿಯ ಭಾಗ್ಯವು ವೃದ್ಧಿಯಾಗುತ್ತದೆ. ಮದುವೆಯಾದವರನ್ನು ಉತ್ತಮವಾಗಿ ನೋಡಿಕೊಳ್ಳುತ್ತಾರೆ. ಇವರ ಮೂಲಕ ಪತಿಗೆ ಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯುವ ಭಾಗ್ಯವು ಒದಗಿ ಬರಲಿದೆ. ಪತಿಯಾದವರಿಗೆ ಅದೃಷ್ಟವನ್ನು ಇವರು ಹೊತ್ತು ತರುತ್ತಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...