ಪುರುಷರ ಶಕ್ತಿ ವರ್ಧಕ ಹಲಸಿನಹಣ್ಣು, ಎಷ್ಟೆಲ್ಲ ಔಷದಿ ಗುಣಗಳಿವೆ!

ಹಲಸಿನಹಣ್ಣು ಒಂದು ಸೀಸನ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಹಣ್ಣಿನಲ್ಲಿ ಯಾವೆಲ್ಲ ಪ್ರಯೋಜನಕಾರಿ ಅಂಶಗಳಿವೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ. ಹಲಸಿನಹಣ್ಣು ಮೂಲತಃ ಭಾರತೀಯ ಹಣ್ಣಾಗಿದ್ದು ಇದನ್ನು ಇಂಗ್ಲಿಷ್ ನಲ್ಲಿ ಜಾಕ್ ಪ್ರುಟ್ ಎಂಬುದಾಗಿ ಕರೆಯಲಾಗುತ್ತದೆ.

ಹಲಸಿನ ಹಣ್ಣಿನಲ್ಲಿರುವಂತ ಔಷದಿ ಗುಣಗಳು: ಚೀನಾದಲ್ಲಿ ಹಲಸಿನಹಣ್ಣನ್ನು ಶಕ್ತಿ ವರ್ಧಕ ಟಾನಿಕ್ ಆಗಿ ಬಳಸಲಾಗುತ್ತದೆ, ಇನ್ನು ಹಲಸಿನ ಹಣ್ಣು ಮಧ್ಯ ಸೇವನೆಯ ದುಷ್ಪರಿಣಾಮಗಳನ್ನು ಕಡಿಮೆ ಗೊಳಿಸುತ್ತದೆ ಎಂಬುದನ್ನು ಸಂಶೋಧನೆಯ ಮೂಲಕ ತಿಳಿಯಲಾಗಿದೆ.

ಹಲಸಿನ ಬೀಜಗಳನ್ನು ಹುರಿದು ಬೆಲ್ಲದ ಜತೆ ಸೇವಿಸಿದರೆ ವೀರ್ಯ ವೃದ್ಧಿಯಾಗುವದು, ಅಷ್ಟೇ ಅಲ್ಲದೆ ಹಲಸಿನ ಎಲೆಯನ್ನು ಸುತ್ತು ಕರಕು ಮಾಡಿ ಕೊಬ್ಬರಿ ಎಣ್ಣೆ ಜತೆ ಮಿಶ್ರಮಾಡಿ ಹಚ್ಚಿದರೆ ಗಾಯಗಳು ಒಣಗುತ್ತವೆ.

ಜ್ವರ ಹಾಗು ಭೇದಿಯ ಸಂದರ್ಭಗಳಲ್ಲಿ ಹಲಸಿನ ಬೇರಿನ ಕಷಾಯವನ್ನು ಸೇವಿಸಿದರೆ ಒಳ್ಳೆಯದು. ಹಲಸಿನ ಎಲೆಯನ್ನು ಬಿಸಿಮಾಡಿ ಕುರು ಗದ್ದೆ ಮುಂತಾದುವುಗಳ ಮೇಲೆ ಕಟ್ಟಿದರೆ ಅವು ಬೇಗ ಒಡೆಯುತ್ತದೆ ಗಯಾ ಮಾಯುತ್ತದೆ. ಹೀಗೆ ಹತ್ತಾರು ಪ್ರಯೋಜನಗಳನ್ನು ಹಲಸಿನಿಂದ ಪಡೆಯಬಹುದು. ಆರೋಗ್ಯದ ದೃಷ್ಟಿಯಿಂದ ಹಲಸಿನಹಣ್ಣು ತಿನ್ನುವುದು ಒಳ್ಳೆಯದು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •