ಹೌದು ಈಗಾಗಲೇ ಬಾಲಿವುಡ್ನ ಕೆಲ ನಟಿಯರು, ತಮ್ಮ ಮೇಲೆ ಎಸಗಿದ್ದ ಲೈಂ*ಗಿಕ ದೌರ್ಜನ್ಯ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು.ಇದರ ಬೆನ್ನಲ್ಲೇ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರ ಮೊದಲ ಹೆಂಡತಿಯ ಪುತ್ರಿ, ಇರಾ ಖಾನ್ ಅವರು ಕೂಡ ತಮ್ಮ ಮೇಲೆ ಆಗಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ಬಹಿರಂಗವಾಗಿ ಇನ್ಸ್ಟಾಗ್ರಾಮ್ ಮೂಲಕ ಶಾಕಿಂಗ್ ಸತ್ಯವೊಂದನ್ನು ಎಲ್ಲರ ಮುಂದೆ ಬಹಿರಂಗಪಡಿಸಿದ್ದಾರೆ.
ಹೌದು ಇರಾ ಖಾನ್ ಅವರು ಹೇಳಿದ ಹಾಗೆ, ‘ನನಗೆ ಆಗ 14 ವರ್ಷ, ನನ್ನ ಮೇಲೆಯೂ ಕೂಡ ಲೈಂಗಿಕ ದೌರ್ಜನ್ಯ ನಡೆದಿತ್ತು. ಆದರೆ ಉದ್ದೇಶಪೂರ್ವಕವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂಬುದು ಬಳಿಕ ಗೊತ್ತಾಯಿತು. ನಾನು ನನ್ನ ಪೋಷಕರಿಗೆ ಮೇಲ್ ಮೂಲಕ ಈ ವಿಚಾರವನ್ನು ತಿಳಿಸಿದ್ದೆ. ಅವರು ಕೂಡ ಮುಂದೆಂದು ಈ ರೀತಿ ಆಗುವುದಿಲ್ಲ ಎಂದು ಭರವಸೆ ನೀಡಿದ್ದರು. ಈ ಕಹಿ ಘಟನೆಯನ್ನು ನಾನು ಬೇಗನೆ ಮರೆತು ಜೀವನದಲ್ಲಿ ಮುಂದೆ ಸಾಗಿದೆ’ ಎನ್ನುವ ನಿಟ್ಟಿನಲ್ಲಿ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಹೌದು ಇರ ಖಾನ್ ಅವರಿಗೆ ಈ ರೀತಿಯ ಕೆಟ್ಟ ಅನುಭವವಾಗಿದ್ದನ್ನು ಹಂಚಿಕೊಂಡಿದ್ದಾರೆ. ಆದರೆ ದೌರ್ಜನ್ಯ ಮಾಡಿದ್ದ ಆ ವ್ಯಕ್ತಿಯ ಹೆಸರನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ಮತ್ತು ಆ ವ್ಯಕ್ತಿ ಯಾರು ಎಂಬುದಾಗಿ ಹೇಳಿಲ್ಲ. ಜೊತೆಗೆ ತಂದೆ ಅಮೀರ್ ಖಾನ್ ತಾಯಿಯ ಜೊತೆ ಮಾಡಿಕೊಂಡಿದ್ದ ವಿಚ್ಛೇದನದ ಬಗ್ಗೆಯೂ ಕೂಡ ಸಕರಾತ್ಮಕ ಮಾತುಗಳನ್ನು ಆಡಿ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ ಜೊತೆಗೆ ತಪ್ಪದೇ ಶೇರ್ ಮಾಡಿ ಧನ್ಯವಾದಗಳು..