ರೈತರಿಗೆ ಬಡ್ಡಿಯಿಲ್ಲದೆ ಸಾಲ

ರೈತರಿಗೆ ಬಡ್ಡಿಯಿಲ್ಲದೆ ಸಾಲ,ಇಲ್ಲಿದೆ ಸಿಹಿಸುದ್ದಿ ಈಗಲೇ ನೋಡಿಕೊಳ್ಳಿ…

Home Kannada News/ಸುದ್ದಿಗಳು ಸರ್ಕಾರೀ ಉಚಿತ ಯೋಜನೆಗಳು

2020-2021 ನೇ ಸಾಲಿನಲ್ಲಿ ರಾಜ್ಯದ ರೈತರಿಗೆ ಪತ್ತಿನ ಸಹಕಾರಿ ಸಂಸ್ಥೆಗಳ ಮೂಲಕ ರಿಯಾಯಿತಿ ಬಡ್ಡಿ ದರದಲ್ಲಿ ನೀಡಲಾಗಿದ್ದ ಅಲ್ಪಾವಧಿ, ಮಧ್ಯಮಾವಧಿ ಮತ್ತು ಧೀರ್ಘಾವಧಿ ಕೃಷಿ ಸಾಲ ಯೋಜನೆಯಡಿ ಸರ್ಕಾರವು ಹೊರಡಿಸಿರುವ ಷರತ್ತುಗಳನ್ನು ಸಡಿಲಿಸಿ ಪರಿಷ್ಕೃತ ಆದೇಶವನ್ನು ಹೊರಡಿಸಿದೆ. 2020-2021 ನೇ ಸಾಲಿಗೆ ಸಹಕಾರ ಸಂಸ್ಥೆಗಳು ಕ್ರಮವಾಗಿ ಶೂನ್ಯ ಬಡ್ಡಿ ದರ ಅನ್ವಯವಾಗುವಂತೆ ರೈತರಿಗೆ 3 ಲಕ್ಷ ರೂ.ವರೆಗೆ ಅಲ್ಪಾವಧಿ ಬೆಳೆ ಸಾಲ ಯೋಜನೆ ಮತ್ತು ಶೇ.3 ರ ಬಡ್ಡಿ ದರ ಅನ್ವಯವಾಗುವಂತೆ 10 ಲಕ್ಷ ರೂ.ಗಳ ವರೆಗೆ ಮಧ್ಯಮಾವಧಿ, ದೀರ್ಘಾವಧಿ ಕೃಷಿ, ಕೃಷಿ ಸಂಬಂಧಿತ ಸಾಲ ವಿತರಿಸುವ ಯೋಜನೆಗಳನ್ನು ಕೆಲವೊಂದು ಷರತ್ತುಗಳನ್ನು ವಿಧಿಸಿ ಆದೇಶ ಹೊರಡಿಸಲಾಗಿತ್ತು.

ಅದರಂತೆ ಈ ಯೋಜನೆಯು ಒಂದು ಕುಟುಂಬಕ್ಕೆ ಗರಿಷ್ಠ 3 ಲಕ್ಷ ರೂ.ವರೆಗಿನ ಅಲ್ಪಾವಧಿ ಬೆಳೆ ಸಾಲ ಹಾಗೂ 10 ಲಕ್ಷ ರೂ.ವರೆಗಿನ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲ ನೀಡುವಂತೆಯೂ, ಸರ್ಕಾರಿ/ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ನೌಕರನಾಗಿದ್ದು, ಮಾಸಿಕ 20 ಸಾವಿರ ರೂ.ವೇತನ ಅಥವಾ ಪಿಂಚಣಿದಾರರು ಹಾಗೂ ಆದಾಯ ತೆರಿಗೆ ಪಾವತಿದಾರರು ಯೋಜನೆಗೆ ಒಳಪಡುವುದಿಲ್ಲವೆಂದು ಹಾಗೂ ಮಧ್ಯಮಾವದಿ/ಧೀರ್ಘಾವಧಿ ಕೃಷಿ ಸಾಲಕ್ಕೆ ಸಂಬಂಧಿಸಿದಂತೆ 2004 ರಿಂದ ತಹಲ್‍ವರೆಗಿನ ಅವಧಿಯಲ್ಲಿ ರಿಯಾಯಿತಿ ಬಡ್ಡಿ ದರದಡಿ ಸಾಲ ಪಡೆದ ಬಾಪ್ತು ಈಗಾಗಲೇ 4 ಲಕ್ಷ ರೂ.

ಬಡ್ಡಿ ರಿಯಾಯಿತಿಯನ್ನು ಪಡೆದಿದ್ದಲ್ಲಿ ಅಂತಹ ರೈತರಿಗೆ ಯೋಜನೆಯ ಪ್ರಯೋಜನ ದೊರೆಯದೆಂದು ಷರತ್ತುಗಳನ್ನು ವಿಧಿಸಿದೆ. ಈ ಆದೇಶದಲ್ಲಿನ ಷರತ್ತುಗಳ ಹಿನ್ನಲೆಯಲ್ಲಿ, ರಿಯಾಯಿತಿ ಬಡ್ಡಿ ದರದಲ್ಲಿ ಕೃಷಿ ಸಾಲವನ್ನು ಪಡೆಯುತ್ತಿರುವ ಜಿಲ್ಲೆಯ ರೈತರಿಗೆ ಅನಾನುಕೂಲವಾಗಲಿದೆ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ ಗಣಪತಿ ಅವರು ತಿಳಿಸಿದ್ದಾರೆ.

ಸುತ್ತೋಲೆ ರೈತರಿಗೆ ಮಾರಕವಾಗಿರುವುದಾಗಿ ಜಿಲ್ಲೆಯ ಜನಪ್ರತಿನಿಧಿಗಳ ಮೂಲಕ ಈಗಾಗಲೇ ಹೊರಡಿಸಲಾಗಿರುವ ಸರ್ಕಾರಿ ಷರತ್ತುಗಳನ್ನು ಕೈಬಿಡದಿದ್ದಲ್ಲಿ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ಪಡೆಯುತ್ತಿರುವ ರೈತರಿಗೆ ತೊಂದರೆಯಾಗುವುದೆಂದು ಸರ್ಕಾರದ ಗಮನವನ್ನು ಸೆಳೆದ ಹಿನ್ನೆಲೆಯಲ್ಲಿ ಸರ್ಕಾರವು ದಿನಾಂಕ 05.09.2020 ಮತ್ತು 07.10.2020 ರಂದು ಹೊರಡಿಸಿರುವ ಸರ್ಕಾರಿ ಆದೇಶದಲ್ಲಿನ ಷರತ್ತುಗಳನ್ನು ಸಂಪೂರ್ಣ ಕೈಬಿಟ್ಟು ಪರಿಷ್ಕೃತ ಆದೇಶ ಹೊರಡಿಸಿದೆ. ಇದಕ್ಕೆ ಕಾರಣರಾದವರೆಲ್ಲರಿಗೂ ಕೃತಜ್ಞತೆ ಸಲ್ಲಿಸಲಾಗಿದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...