ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಗಳ ಮೇಲೆ ಗ್ರಾಹಕರಿಗೆ ಹಾಕಿದ್ದ ಬಡ್ಡಿಯ ಮೇಲಿನ ಬಡ್ಡಿಯನ್ನು ವಾಪಸ್ ಮಾಡಲು ಬ್ಯಾಂಕ್ ಗಳು ಆರಂಭಿಸಿವೆ. ಈ ವರ್ಷದ ಮಾರ್ಚ್ ಒಂದರಿಂದ ಆರು ತಿಂಗಳ ಕಾಲ ಸಾಲ ಪಾವತಿಯಿಂದ ವಿನಾಯಿತಿ ಘೋಷಿಸಲಾಗಿತ್ತು. ಹೀಗೆ ಮಾಡಲು ಸರ್ಕಾರವು ಸೂಚನೆ ನೀಡಿತ್ತು. ಆ ಸಮಯದಲ್ಲಿ ಬ್ಯಾಂಕ್ ಗಳು ಹಾಕಿದ್ದ ‘ಬಡ್ಡಿಯ ಮೇಲಿನ ಬಡ್ಡಿ’ಯನ್ನು ಗ್ರಾಹಕರ ಖಾತೆಗೆ ಹಿಂತಿರುಗಿಸುವುದಾಗಿ ಸುಪ್ರೀಂ ಕೋರ್ಟ್ ಗೆ ಕೇಂದ್ರದಿಂದ ತಿಳಿಸಲಾಗಿದೆ. ಆ ಹಿಂತಿರುಗಿಸಿದ ಹಣವನ್ನು ಬ್ಯಾಂಕ್ ಗಳಿಗೆ ಸರ್ಕಾರವು ವಾಪಸ್ ನೀಡುತ್ತದೆ. ಎರಡು ಕೋಟಿ ರುಪಾಯಿಯೊಳಗೆ ಸಾಲ ಪಡೆದು, ವಿನಾಯಿತಿ ಅವಧಿಯಲ್ಲೂ ಹಣ ಪಾವತಿಸಿದಲ್ಲಿ ಅಂಥವರಿಗೆ ಕ್ಯಾಶ್ ಬ್ಯಾಂಕ್ ನೀಡಲಾಗುತ್ತದೆ. ಯಾರು ಸಾಲ ವಿನಾಯಿತಿಯನ್ನು ಆಯ್ಕೆ ಮಾಡಿಕೊಂಡಿರಲಿಲ್ಲವೋ ಅಂಥವರು ಸಹ ರೀಫಂಡ್ ನೀಡಲಾಗುತ್ತದೆ.

ಬಡ್ಡಿ-ಮನ್ನಾ

ಕಳೆದ ವಾರ ಎಲ್ಲ ಹಣಕಾಸು ಸಂಸ್ಥೆಗಳಿಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಚನೆ ನೀಡಿತ್ತು. ನವೆಂಬರ್ ಐದನೇ ತಾರೀಕಿನೊಳಗೆ ಬಡ್ಡಿ ಮನ್ನಾ ಯೋಜನೆ ಜಾರಿಗೆ ಬರಬೇಕು ಎಂದು ತಿಳಿಸಲಾಗಿತ್ತು. ಬ್ಯಾಂಕ್ ಹಾಗೂ ನಾನ್ ಬ್ಯಾಂಕಿಂಗ್ ಸಂಸ್ಥೆಗಳಿಗೂ ಈ ಬಗ್ಗೆ ಸೂಚನೆ

ಎಂಎಸ್ ಎಂಇ ಸಾಲಗಳು, ಶಿಕ್ಷಣ ಸಾಲ, ಹೌಸಿಂಗ್ ಲೋನ್, ಗೃಹಪಯೋಗಿ ವಸ್ತುಗಳಿಗಾಗಿ ಪಡೆದ ಸಾಲ, ಕ್ರೆಡಿಟ್ ಕಾರ್ಡ್ ಬಾಕಿ, ವಾಹನ ಸಾಲ, ವೈಯಕ್ತಿಕ ಹಾಗೂ ವೃತ್ತಿಪರರು ತೆಗೆದುಕೊಂಡ ಸಾಲ, ಕನ್ಸಮ್ಷನ್ ಸಾಲ ಹೀಗೆ ಎಂಟು ವಿಭಾಗಗಳನ್ನು ಮಾಡಿ, ಬಡ್ಡಿ ಮನ್ನಾ ಘೋಷಿಸಲಾಗಿದೆ. ಎರಡು ಕೋಟಿ ರುಪಾಯಿಯೊಳಗೆ ಪಡೆದುಕೊಂಡ ಸಾಲಕ್ಕೆ ಇದು ಅನ್ವಯ ಆಗುತ್ತದೆ. ಕ್ರೆಡಿಟ್ ಕಾರ್ಡ್ ಗ್ರಾಹಕರಿಗೂ ಇದು ಅನ್ವಯ ಆಗುತ್ತದೆ. ಅಂದ ಹಾಗೆ ವರದಿಗಳ ಪ್ರಕಾರ, ಬಡ್ಡಿ ಮನ್ನಾ ಯೋಜನೆಯಿಂದಾಗಿ 6500 ಕೋಟಿ ರುಪಾಯಿ ಹೊರೆ ಆಗಲಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •