ಕಾರ್ಮಿಕ ಕಾರ್ಡ್ ಅನ್ನು ನಾವೆಲ್ಲರೂ ಕೇಳಿರುತ್ತೇವೆ. ಹಾಗಿದ್ದರೆ ಕಾರ್ಮಿಕ ಕಾರ್ಡ್ ಅನ್ನು ಹೇಗೆ ಮಾಡಿಸಿಕೊಳ್ಳಬೇಕು, ಕಾರ್ಮಿಕ ಕಾರ್ಡ್ ಮಾಡಲು ಬೇಕಾಗುವ ದಾಖಲಾತಿಗಳು ಯಾವುವು, ಕಾರ್ಮಿಕ ಕಾರ್ಡ್ ನಿಂದ ಏನಾದರೂ ಪ್ರಯೋಜನಗಳಿವೆಯೆ, ಸರ್ಕಾರದಿಂದ ಕಾರ್ಮಿಕ ಕಾರ್ಡ್ ಹೊಂದಿದವರಿಗೆ ಏನೆಲ್ಲಾ ಪ್ರಯೋಜನಗಳಿವೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಕಾರ್ಮಿಕ ಕಾರ್ಡ್ ಮಾಡಿಸಲು ಮೊದಲು ನೋಂದಣಿ ಮಾಡಿಸಬೇಕು ನೋಂದಣಿ ಮಾಡಲು 20 ರೂಪಾಯಿ ಕೊಡಬೇಕಾಗುತ್ತದೆ. ವಯಸ್ಸಿನ ದೃಢೀಕರಣ ಮತ್ತು ಅಡ್ರೆಸ್ ಪ್ರೂಫ್ ಗಾಗಿ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ, ಇತ್ತೀಚಿನ ಮೂರು ಭಾವಚಿತ್ರ, ಬ್ಯಾಂಕ್ ಅಕೌಂಟ್ ಪಾಸ್ ಬುಕ್ ನ ಪ್ರತಿ ಜೊತೆಗೆ ಅಪ್ಲಿಕೇಷನ್ ಫಾರ್ಮ್ ಭರ್ತಿಮಾಡಿ ಅದರೊಂದಿಗೆ ಕಾರ್ಮಿಕರು ಈಗಾಗಲೆ ಕಾಮಗಾರಿಯಲ್ಲಿ ತೊಡಗಿಸಿಕೊಂಡಿರುವುದರ ಬಗ್ಗೆ ಅಥವಾ ಕೆಲಸ ಮಾಡುತ್ತಿರುವ ಬಗ್ಗೆ ದೃಢೀಕರಿಸಲು ಮಾಲೀಕರಿಂದ ಅಥವಾ ಗುತ್ತಿಗೆದಾರರಿಂದ ಕಾಮಗಾರಿಯಲ್ಲಿ ಆ ಕಾರ್ಮಿಕ ತೊಡಗಿರುವ ಬಗ್ಗೆ ಕಾರ್ಮಿಕರಿಗೆ ನೀಡುವ ಫಾರ್ಮ್ ನಂಬರ್ 5a ಅರ್ಜಿಯನ್ನು ಭರ್ತಿಮಾಡಿ ಅಟ್ಯಾಚ್ ಮಾಡಬೇಕು. ಜೊತೆಗೆ ಕಾರ್ಮಿಕ ನಿರ್ಮಾಣ ಕೆಲಸದಲ್ಲಿ ತೊಡಗಿರುವ ಬಗ್ಗೆ ದೃಢೀಕರಿಸಲು ರಿಜಿಸ್ಟರ್ ಆಗಿರುವ ಕಾರ್ಮಿಕ ಸಂಘದವರು ನೀಡುವ ಫಾರ್ಮ್ ನಂಬರ್ 5b ಅರ್ಜಿಯನ್ನು ಭರ್ತಿ ಮಾಡಿಕೊಂಡು ಕಾರ್ಮಿಕ ಸಂಘದವರಿಂದ ಸಹಿ ಮತ್ತು ಸೀಲ್ ಹಾಕಿಸಿಕೊಂಡ ಅರ್ಜಿಯನ್ನು ಸಲ್ಲಿಸಬೇಕು.

ಒಂದು ವೇಳೆ ಹಳ್ಳಿಗಳಲ್ಲಿ ಅಥವಾ ಗ್ರಾಮ ಪಂಚಾಯತಿಯಡಿಯಲ್ಲಿ ಕಟ್ಟಡ ನಿರ್ಮಾಣ ಅಥವಾ ಬೇರೆ ಯಾವುದೆ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡಿದರೆ ಮಾತ್ರ ಗ್ರಾಮ ಪಂಚಾಯತಿಯಡಿಯಲ್ಲಿ ಕೆಲಸ ಮಾಡಿರುವ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಥವಾ ಕಾರ್ಯದರ್ಶಿ ನೀಡುವ ಉದ್ಯೋಗ ಪ್ರಮಾಣ ಪತ್ರ ಫಾರ್ಮ್ ನಂಬರ್ 5d ಅರ್ಜಿಯನ್ನು ಭರ್ತಿ ಮಾಡಿ ಗ್ರಾಮ ಪಂಚಾಯಿತಿ ಅಧಿಕಾರಿ ಅಥವಾ ಕಾರ್ಯದರ್ಶಿ ಅವರಿಂದ ಸಹಿ ಮತ್ತು ಸೀಲ್ ಹಾಕಿಸಿ ಫಾರ್ಮ್ ಸಲ್ಲಿಸಬೇಕು. ಈ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ತಾಲೂಕು ಅಥವಾ ಜಿಲ್ಲೆಯಲ್ಲಿರುವ ಕಾರ್ಮಿಕ ಭವನ ಅಥವಾ ಲೇಬರ್ ಆಫೀಸ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು ನಂತರ 15 ದಿನದಿಂದ 45 ದಿನಗಳ ಒಳಗೆ ಕಾರ್ಮಿಕರ ಸ್ಮಾರ್ಟ್ ಕಾರ್ಡ್ ನಿಮಗೆ ಸಿಗುತ್ತದೆ. ಕಾರ್ಮಿಕ ಕಾರ್ಡ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಕಾರ್ಮಿಕ ಭವನ ಅಥವಾ ಕಚೇರಿಗೆ ಭೇಟಿ ನೀಡಿದರೆ ಹೆಚ್ಚಿನ ಮಾಹಿತಿ ಪಡೆಯಬಹುದು. ಕಾರ್ಮಿಕ ಕಾರ್ಡ್ ಪಡೆಯಲು ಕೆಲವು ಅರ್ಹತೆಗಳನ್ನು ಹೇಳಲಾಗಿದೆ ಕೆಲವು ಕಾಮಗಾರಿಗಳಲ್ಲಿ ತೊಡಗಿಕೊಂಡ ಕಾರ್ಮಿಕರಿಗೆ ಮಾತ್ರ ಕಾರ್ಮಿಕ ಕಾರ್ಡ್ ದೊರೆಯುತ್ತದೆ. ಕಟ್ಟಡ ನಿರ್ಮಾಣ ಮಾಡುವ ಕಾರ್ಮಿಕರು, ರಸ್ತೆ, ಚರಂಡಿ, ಬೀದಿ, ರೈಲ್ವೆ, ನೀರಾವರಿ ಕಾರ್ಮಿಕರು, ವಿದ್ಯುತ್ ರಿಪೇರಿ ಮಾಡುವ ಕಾರ್ಮಿಕರು, ಅಣೆಕಟ್ಟು ನಿರ್ಮಾಣ ಮಾಡುವ ಕಾರ್ಮಿಕರು, ಹಳ್ಳಿಗಳಲ್ಲಿ ಗ್ರಾಮಪಂಚಾಯತ್ ನಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು, ಜಲ ಕಾಮಗಾರಿ ಮಾಡುವ ಕಾರ್ಮಿಕರು ಇನ್ನು ಅನೇಕ ಕಾರ್ಮಿಕರು ಕಾರ್ಮಿಕ ಕಾರ್ಡ್ ಮಾಡಿಕೊಳ್ಳಬಹುದು.

ಕಾರ್ಮಿಕ ಕಾರ್ಡ್ ಮಾಡಿಸಿಕೊಂಡರೆ ಕೆಲವು ಪ್ರಯೋಜನಗಳಿವೆ ಅವುಗಳೆಂದರೆ ಕಾರ್ಮಿಕ ಕಾರ್ಡ್ ಹೊಂದಿದವರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ಸ್ಕಾಲರ್ ಶಿಪ್ ಪ್ರತಿವರ್ಷ ಸಿಗುತ್ತದೆ ಮತ್ತು ಮಕ್ಕಳ ಮದುವೆಗೆ 1 ಲಕ್ಷದವರೆಗೆ ಧನಸಹಾಯ ಸಿಗುತ್ತದೆ. ಕಾರ್ಮಿಕ ಕಾರ್ಡ್ ಹೊಂದಿದವರಿಗೆ 60 ವರ್ಷ ಆದ ನಂತರ ಪಿಂಚಣಿ ಸೌಲಭ್ಯ ಸಿಗುತ್ತದೆ. ಕಾರ್ಮಿಕ ಕಾರ್ಡ್ ಹೊಂದಿದವರು ಒಂದುವೇಳೆ ಅಪಘಾತವಾದರೆ 2 ಲಕ್ಷದವರೆಗೆ ಪರಿಹಾರ ಧನವನ್ನು ಪಡೆಯಬಹುದು. ಕಾರ್ಮಿಕ ಕಾರ್ಡ್ ಹೊಂದಿದ ಮಹಿಳೆಯರು ಹೆರಿಗೆಯ ಸಮಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರೆ ರೂ20,000, ಹೆಣ್ಣುಮಗುವಿಗೆ ಜನ್ಮ ನೀಡಿದರೆ ರೂ30,000 ಧನಸಹಾಯ ಪಡೆಯಬಹುದು. ಕಾರ್ಮಿಕ ಕಾರ್ಡ್ ಹೊಂದಿದವರಿಗೆ ಇಷ್ಟೆ ಅಲ್ಲದೆ ಇನ್ನು ಅನೇಕ ಪ್ರಯೋಜನಗಳಿವೆ. ಕಾರ್ಮಿಕರು ಕಾರ್ಮಿಕ ಕಾರ್ಡ್ ಮಾಡಿಸಿಕೊಂಡ ನಂತರ ಪ್ರತಿವರ್ಷ ಕಾರ್ಡ್ ಅನ್ನು ರಿನ್ಯೂವಲ್ ಮಾಡಿಸಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ಕಾರ್ಮಿಕರಿಗೂ ತಿಳಿಸಿ, ಕಾರ್ಮಿಕ ಕಾರ್ಡ್ ಮಾಡಿಸಿಕೊಂಡು ಸರ್ಕಾರದಿಂದ ಪ್ರಯೋಜನಗಳನ್ನು ಪಡೆದುಕೊಳ್ಳಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •