ಜಗತ್ತಿನಾದ್ಯಂತ ಕೊರೊನಾ ಕೇಕೆಯ ಅಬ್ಬರ ಹೆಚ್ಚಾಗುತ್ತಲೇ ಇದೆ. ಈ ಕರೊನಾಕ್ಕೆ ಬಲಿಯಾದವರ ಸಂಖ್ಯೆ ಲೆಕ್ಕವಿಲ್ಲ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಂತೂ ಪರಿಸ್ಥಿತಿ ಕೈ ಮೀರಿ ಹೋಗಿದೆ. ಇಡೀ ಬೆಂಗಳೂರಿನಲ್ಲಿರುವ ಯಾವುದೇ ಆಸ್ಪತ್ರೆಯಲ್ಲೂ ಬೆಡ್ ಖಾಲಿ ಇಲ್ಲ ಎಂಬ ಸುದ್ದಿ ಎಲ್ಲೆಡೆ ಮಿಂಚಿನಂತೆ ಓಡಾಡುತ್ತಿದೆ.

ಅದರಲ್ಲೂ ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಹೇಳತೀರದಾಗಿದೆ. ಒಂದು ಕಡೆ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೇ ರೋಗಿಗಳು ಆಸ್ಪತ್ರೆಯ ಬಾಗಿಲಿನಲ್ಲೇ ಪ್ರಾಣ ಬಿಡುತ್ತಿದ್ದರೆ, ಮತ್ತೊಂದು ಕಡೆ ತಮ್ಮ ಕುಟುಂಬದ ಸದಸ್ಯರನ್ನು ಐಸಿಯೂ ನಲ್ಲಿ ಅಡ್ಮಿಟ್ ಮಾಡಿ ಅವರನ್ನು ನೋಡಲೂ ಆಗದೇ, ಅವರ ಆರೋಗ್ಯದ ಬಗ್ಗೆ ಸೂಕ್ತ ಮಾಹಿತಿಯೂ ಲಭ್ಯವಾಗದೇ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಸೂಕ್ತ ಸಮಯಕ್ಕೆ ಬೆಡ್ ಸಿಕ್ಕಿ, ಚಿಕಿತ್ಸೆ ಲಭಿಸಿದ್ದರೆ ನನ್ನ ಗಂಡ ಬದುಕುಳಿಯುತ್ತಿದ್ದರು. ಆದರೆ ಈಗ ಯಾರಿಗೆ ಹೇಳಲಿ ನನ್ನ ಕಷ್ಟವನ್ನು? ನನ್ನ ಗಂಡನನ್ನು ಬದುಕಿಸಿ ಕೊಡುವವರು ಯಾರಿದ್ದಾರೆ? ಎಂದು ತಲೆ ಚಚ್ಚಿಕೊಂಡು ಆಸ್ಪತ್ರೆ ಮುಂದೆ ಹೆಂಡತಿ ಗೋಳಾಡುತ್ತಿರುವ ದೃಶ್ಯ ನಿಜಕ್ಕೂ ಎಂಥಹ ಕಲ್ಲು ಹೃದಯವರನ್ನು ಕರಗಿಸದೇ ಇರದು. ಇದು ನಮ್ಮ ಬೆಂಗಳೂರಿನ ಆಸ್ಪತ್ರೆಗಳ ಸ್ಥಿತಿಗತಿ. ನಿಜಕ್ಕೂ ಯಾವ ಶತ್ರುವಿಗೂ ಇಂತಹ ಶಿಕ್ಷೆ ನೀಡಬೇಡ ಭಗವಂತ ಎಂದು ಪ್ರಾರ್ಥಿಸುವಂತಿದೆ ಇವರ ಸಂಕಟ.

ನಿಮಗೂ ನಿಮ್ಮ ಕುಟುಂಬಕ್ಕೂ ಇಂತಹ ಸ್ಥಿತಿ ಬರಬಾರದು ಎಂದರೆ ಮನೆಯಿಂದ ಹೊರ ಹೋಗುವಾಗ ತಪ್ಪದೇ ಮಾಸ್ಕ್ ಧರಿಸಿ, ಆಗಾಗ್ಗೆ ಸಾಬೂನು ಅಥವಾ ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ. ಇಡೀ ಜಗತ್ತಿನಲ್ಲೇ ಹರಡುತ್ತಿರುವ ಈ ಮಹಾಮಾರಿಯ ಚೈನ್ ಲಿಂಕ್ ಅನ್ನು ಅನಿವಾರ್ಯವಾಗಿಯಾದರೂ ತುಂಡರಿಸಲೇಬೇಕಿದೆ. ಕೊರೊನಾ ತಡೆಗಟ್ಟುವುದು ಕೇವಲ ಸರ್ಕಾರದ ಕೆಲಸವಲ್ಲ, ಅದಕ್ಕೆ ಸಾರ್ವಜನಿಕರ ಸಹಕಾರವೂ ಅತ್ಯಂತ ಅಗತ್ಯವಾಗಿದೆ. ಹಾಗಾಗಿ ನಿಮ್ಮ ಎಚ್ಚರಿಕೆಯಿಂದ ನೀವು ಇರಿ. ಸ್ವಲ್ಪ ಅಜಾಗರೂಕತೆಯೂ ನಿಮ್ಮ ಪ್ರಾಣವನ್ನೇ ತೆಗೆದುಕೊಳ್ಳಬಹುದು. ಇದರಿಂದ ನಿಮ್ಮ ಇಡೀ ಕುಟುಂಬವೇ ಬೀದಿ ಪಾಲಾಗುವ ಸಾಧ್ಯತೆ ಇರುತ್ತದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •