ಚೈತ್ರದ ಪ್ರೇಮಾಂಜಲಿ, ಶರಂಗಾರ ಕಾವ್ಯ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ನಟ ರಘುವೀರ್‌ ಅವರು ಗಾಂಧಿನಗರದಲ್ಲಿ ಸಂಚಲನವನ್ನೇ ಸೃಷ್ಟಿಮಾಡಿದ್ದರು. ಈ ವೇಳೆಗೆ ಚಿತ್ರರಂಗದಲ್ಲಿ ಮಿಂಚುತ್ತಿದ್ದ ಘಟಾನುಘಟಿ ನಾಯಕರೇ ರಘುವೀರ್‌ ಅವರ ಯಶಸ್ಸನ್ನು ನೋಡಿ ದಂಗಾಗುವಂತೆ ಮಾಡಿದ್ದರು. ಅಷ್ಟರಮಟ್ಟಿಗೆ ರಘುವೀರ್‌ ಅವರು ಸಿಸಿಮಾ ಕ್ಷೇತ್ರದ್ಲಲಿ ಹೆಸರು ಮಾಡಿದ್ದರು.

 

 

ರಘುವೀರ್‌ ಅವರದ್ದು ಮೂಲತಃ ಶ್ರೀಮಂತ ಕುಟುಂಬ ಆದರೂ ಯಾವುದೇ ಶ್ರೀಮಂತಿಕೆಯ ಸೋಂಕಿಲ್ಲದೇ, ಬಡತನದಲ್ಲೇ ಜೀವನ ಕಳೆದವರು. ತನ್ನವರು ಎನಿಸಿಕೊಳ್ಳಲು ಯಾರೂ ಬರಲಿಲ್ಲ. ಕೈಯಲ್ಲಿ ಹಣವಿದ್ದಾಗ ಮೋಜು, ಮಸ್ತಿಗಾಗಿ ಜೊತೆಯಲ್ಲಿ ನಿಂತರೇ ಹೊರತು ಕಷ್ಟ ಎಂದಾಗ ಯಾರೂ ಜೊತೆಗೆ ನಿಲ್ಲಲಿಲ್ಲ ಎಂದು ತಮ್ಮ ಬದುಕಿನ ಕೊನೆ ಕ್ಷಣಗಳಲ್ಲಿ ಹೇಳಿಕೊಂಡಿದ್ದರು.

 

ರಘುವೀರ್‌ ಅವರು ನಿಧನರಾಗಿ ಇಂದಿಗೆ ಸುಮಾರು ಏಳು ವರ್ಷ ಕಳೆದಿದೆ. ರಘುವೀರ್‌ ಮತ್ತು ನಟಿ ಸಿಂಧೂ ಅವರಿಗೆ ಒಬ್ಬ ಮಗಳು ಇದ್ದಳು. ಆದರೆ ದುರಾದೃಷ್ಟವಶಾತ್‌ ಆಕೆ ತನ್ನ ತಂದೆ ಮತ್ತು ತಾಯಿ ಇಬ್ಬರನ್ನು ಕಳೆದುಕೊಂಡ ಬಳಿಕ ಆಕೆಯ ಬಗ್ಗೆ ಮಾಹಿತಿಯೇ ಇರಲಿಲ್ಲ. ಈಗ ರಘುವೀರ್‌ ಅವರ ಮಗಳ ಬಗ್ಗೆ ತಿಳಿಸಿಕೊಡುತ್ತೇವೆ ನೋಡಿ.
ನಟ ರಘುವೀರ್‌ ಅವರ ಬದುಕಿನಲ್ಲಿ ನಡೆದ ಕೆಲವು ದುರಂತ ಘಟನೆಗಳಿಂದಾಗಿ ಅವರು ದುರಂತ ನಾಯಕರಾಗಿ ಬಿಟ್ಟರು.

ಸಿಂಧು ಜೊತೆಗಿನ ವಿವಾಹ, ತಂದೆ ಜೊತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಜೀವನದಲ್ಲಿ ಸಾಕಷ್ಟು ನೋವನ್ನು ಅನುಭವಿಸಬೇಕಾಯಿತು. ಅಲ್ಲದೇ, ನಟಿ ಹಾಗೂ ಪತ್ನಿ ಸಿಂಧು ಅವರ ಸಾವು ರಘುವೀರ್‌ ಅವರನ್ನು ಮತ್ತಷ್ಟು ಹೈರಾಣವಾಗಿಸಿತು. ಇದೇ ವೇಳೆ ಅವರು ನಟಿಸಿದ್ದ ಸಿನಿಮಾಗಳು ಸೋಲನ್ನು ಅನುಭವಿಸಲು ಪ್ರಾರಂಭವಾಯಿತು. ಈ ವೇಳೆ ಗೌರಿ ಅವರು ರಘುವೀರ್‌ ಅವರನ್ನು ಕೈಹಿಡಿದರು. ಎರಡನೇ ಮದುವೆಯಾದ ನಂತರ ಗೌರಿ ಅವರಿಗೂ ಒಬ್ಬ ಮಗಳು ಹುಟ್ಟಿದಳು.

 

 

ನಟಿ ಸಿಂಧೂ ಅವರ ಜೊತೆಗಿನ ದಾಂಪತ್ಯದಲ್ಲೂ ಒಬ್ಬ ಮಗಳಿದ್ದು ಪ್ರಸ್ತುತ ಆಕೆ ಚೆನ್ನೈನಲ್ಲಿ ವಾಸವಾಗಿದ್ದಾರೆ. ಈಕೆಯ ಫೋಟೊವೊಂದು ಲಭ್ಯವಾಗಿದೆ. ಅದನ್ನು ಹೊರತುಪಡಿಸಿ ಬೇರೆ ಮಾಹಿತಿ ಲಭ್ಯವಾಗಿಲ್ಲ.
ಇತ್ತ ಗೌರಿ ಅವರ ಮಗಳು ಮೋಕ್ಷ ಅವರು ತನ್ನ ತಾಯಿ ಜೊತೆಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಮೋಕ್ಷ ಅವರು ಪ್ರಸ್ತುತ ೧೦ನೇ ತರಗತಿಯನ್ನು ಓದುತ್ತಿದ್ದಾರೆ. ದುರಂತ ನಾಯಕ ರಘುವೀರ್‌ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್‌ ನಲ್ಲಿ ತಿಳಿಸಿ..

 

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •