ಭಾರತ

ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣಿಸುತ್ತದೆ? ವಿಡಿಯೊ ನೋಡಿ

Home

ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬ ಮನುಷ್ಯನಿಗೂ ಹೊಸತನ್ನು ನೋಡುವ ಇಚ್ಛೆ ಇದ್ದೆ ಇರುತ್ತದೆ, ಅದರಲ್ಲೂ ಎಂದೂ ನೋಡದ ಪ್ರದೇಶ, ಕಾಡು ಮೇಡು, ನೀರಿನ ಸೆಲೆಗಳು, ವಿದೇಶಗಳು, ಅಲ್ಲಿನ ಪರಿಸರ ಜನ ಜೀವನ ಶೈಲಿ ಇತ್ಯಾದಿ ಇತ್ಯಾದಿಗಳನ್ನು ನೋಡುವ ಕುತೂಹಲದಿಂದ ಕಾಯುವ ಈ ಮನುಷ್ಯ ಅಂತರಿಕ್ಷವನ್ನು ಭೂಮಿಯಿಂದ ಹಾಗೂ ಭೂಮಿಯ ಮೇಲಿಂದ ಅಂತರಿಕ್ಷವನ್ನು ನೋಡುವ ಆಸೆಯನ್ನು ಸಹ ಹೊಂದಿರುತ್ತಾನೆ.

ಭೂಮಿಯ ಮೇಲಿಂದ ಆಕಾಶವನ್ನು ಟೆಲಿಸ್ಕೋಪ್ ಗಳ ಸಹಾಯದಿಂದ ನೋಡಬಹುದು ಆದರೆ ಆಕಾಶದಿಂದ ಭೂಮಿಯನ್ನು ನೋಡಬೇಕೆಂದರೆ ಅಂತರಿಕ್ಷಕ್ಕೆ ಹೋಗಬೇಕಾಗುತ್ತದೆ. ಆದರೆ ಅಷ್ಟೊಂದು ಹಣ ವ್ಯಯಿಸಿ ಅಲ್ಲಿಗೆ ಹೋಗುವುದು ಎಲ್ಲರಿಗೂ ಸಾಧ್ಯವಿಲ್ಲ, ಹೀಗಾಗಿ ಅಂತಹ ಆಸಕ್ತಿ ಇರುವವರಿಗಾಗಿಯೇ ನಾವು ಇಲ್ಲೊಂದು ವಿಡಿಯೋ ಹಂಚಿಕೊಂಡಿದ್ದು ಅದರಲ್ಲಿ ಅಂತರಿಕ್ಷದಿಂದ ಭೂಮಿ ಹೇಗೆ ಕಾಣಿಸುತ್ತದೆ ಎಂದು ನೋಡಬಹುದಾಗಿದೆ.

ಇಂಡಿಯಾ ಭಾರತ ಆಗೋದು ಎಂದು ? | News13

ನಮ್ಮ ಕಣ್ಣಳತೆಯಿಂದ ದೂರ ಇರುವುದರ ಬಗ್ಗೆ ಆಸಕ್ತಿ ಜಾಸ್ತಿ ಇರುತ್ತದೆ‌. ನಮಗೆ ಅಂತರಿಕ್ಷ ಕೂಡ ಹೀಗೇಯೇ. ಆ ಬಗ್ಗೆ ತಿಳಿದುಕೊಂಡಷ್ಟೂ ಕಡಿಮೆಯೇ ಹಾಗೂ ತಿಳಿದುಕೊಳ್ಳುವ ಆಸಕ್ತಿ‌ ಕೂಡ ಹೆಚ್ಚಿರುತ್ತದೆ. ಅಂತರಿಕ್ಷದಿಂದ ನಮ್ಮ ಭೂಮಿ ಹೇಗೆ ಕಾಣಿಸಬಹುದು, ಅಥವಾ ಅಲ್ಲಿಂದ ನಮ್ಮ ಭಾರತ ಹೇಗೆ ಕಾಣಿಸಬಹುದು ಎಂದು ನಮಗೆ ತುಂಬಾ ಸಲ ಅನಿಸಿರುತ್ತದೆ‌. ಇದಕ್ಕೆಲ್ಲ ಉತ್ತರವೆಂಬಂತೆ ಈ ವಿಡಿಯೊ ಬಿಡುಗಡೆ ಮಾಡಲಾಗಿದೆ.

ಅದರಲ್ಲೂ ರಾತ್ರಿ ಸಮಯದಲ್ಲಿ ಭಾರತ ಪಾಕಿಸ್ತಾನ ಗಡಿರೇಖೆ ಹೇಗೆ ಕಾಣಿಸುತ್ತದೆ, ಚೀನಾದ ಸುಂದರ ಕರಾವಳಿ ಲಿಯೆವೋನಿಂಗ್ ಹೇಗೆ ಕಾಣಿಸುತ್ತದೆ ಎಂಬುದರ ಬಗ್ಗೆಯು ಈ ವಿಡಿಯೊದಲ್ಲಿ ನೋಡಬಹುದಾಗಿದೆ. ಚಂಡಮಾರುತ ಸಂಭವಿಸಿದಾಗ ಬಾಹ್ಯಾಕಾಶದಿಂದ ನೋಡಲು ಹೇಗಿರುತ್ತದೆ ಎಂದು ಎಂದು ಕೂಡ ನೋಡಬಹುದು, ಗುಡುಗು – ಮಿಂಚು ಇರುವಾಗಿನ ಮೆಕ್ಸಿಕೊದ ಚಿತ್ರಣವಂತೂ ಅದ್ಭುತವಾಗಿದೆ.

ಹೀಗೆ ಹತ್ತಾರು ಥರದ ಚಿತ್ರಣ ಕಟ್ಟಿಕೊಡುವ ಪುಟ್ಟ ವಿಡಿಯೊ ಇಲ್ಲಿದೆ. ನಿಮ್ಮ ನೆಟ್ವರ್ಕ್‌ ಸ್ಲೋ ಇದ್ದರೆ ವಿಡಿಯೊ ಕಾಣಿಸುವುದು ಸ್ವಲ್ಪ ತಡವಾಗುವುದು, ದಯವಿಟ್ಟು ಅರ್ದ ನಿಮಿಷ ಕಾಯಿರಿ. ಆ ವಿಡಿಯೋ ನೋಡಿದ ತಕ್ಷಣ ನಿಮಗೆ ನಮ್ಮ ಭೂಮಿ ಇಷ್ಟೊಂದು ಸುಂದರವಾಗಿದೆಯಾ ಇಂತಹ ಭೂಮಿಯನ್ನಾ ನಾವು ಕೊಳಕು ಮಾಡುತ್ತಿರುವುದು ಎಂದೆನಿಸದೆ ಇರದು.
 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...