ಕೋವಿಡ್ 19 ಚೇತರಿಕೆ ಹಂತದಲ್ಲಿ ಹೊಸ ಉದ್ಯೋಗಗಳ ಸೃಷ್ಟಿದೆ ಹೊಸ ಆತ್ಮನಿರ್ಭರ ಭಾರತ ರೋಜ್‌ಗಾರ್ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಪ್ರಕಟಿಸಿದ್ದಾರೆ. ಜಿಎಸ್‌ಟಿ ಸಂಗ್ರಹ, ಬ್ಯಾಂಕ್ ಕ್ರೆಡಿಟ್, ಎಫ್‌ಡಿಐ ಒಳಹರಿವು ಸೇರಿದಂತೆ ಇತರೆ ಸೂಚ್ಯಂಕಗಳ ಬೆಳವಣಿಗೆ ಮೂಲಕ ಆರ್ಥಿಕತೆಯು ಪ್ರಬಲ ಚೇತರಿಕೆ ಕಂಡಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಎಪಿಎಫ್‌ಒ ನೋಂದಾಯಿತ ಪ್ರತಿ ಸಂಸ್ಥೆಗಳಲ್ಲಿ ಮಾರ್ಚ್ 1 ಮತ್ತು ಸೆಪ್ಟೆಂಬರ್ 30 ನಡುವೆ ಕೆಲಸ ಕಳೆದುಕೊಂಡಿದ್ದರೆ ಅಥವಾ ಹೊಸದಾಗಿ ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದರೆ ಆ ಉದ್ಯೋಗಿಗಳಿಗೆ ಪ್ರಯೋಜನಗಳು ಸಿಗಲಿವೆ.

ಆದಾಯ ತೆರಿಗೆ ಮರುಪಾವತಿ ಬಗ್ಗೆ ಮಾತನಾಡಿದ ಸೀತಾರಾಮನ್, 1,32,800 ಕೋಟಿ ರೂ ಮೊತ್ತವನ್ನು 39.7 ಲಕ್ಷ ತೆರಿಗೆ ಪಾವತಿದಾರರಿಗೆ ಮರಳಿ ಪಾವತಿಸಲಾಗಿದೆ ಎಂದು ತಿಳಿಸಿದರು. ಮುಂದೆ ಓದಿ.

modi-money

ಹೊಸ ಉದ್ಯೋಗಗಳ ಸೃಷ್ಟಿ ಪ್ರಧಾನ ಮಂತ್ರಿ ರೋಜ್‌ಗಾರ್ ಪ್ರೋತ್ಸಾಹನ್ ಯೋಜನಾ (ಪಿಎಂಆರ್‌ವೈ) ಅನ್ನು ಹೊಸ ಉದ್ಯೋಗಗಳ ಸೃಷ್ಟಿಗಾಗಿ ಜಾರಿಗೊಳಿಸಲಾಗಿದೆ. ಇದರ ಅಡಿ 1,21,69,960 ಫಲಾನುಭವಿಗಳನ್ನು ಒಳಗೊಂಡ 1,52,899 ಸಂಸ್ಥೆಗಳಿಗೆ ಒಟ್ಟು 8,300 ಕೋಟಿ ರೂ ನೀಡಲಾಗಿದೆ.

ಉದ್ಯೋಗ ಕಳೆದುಕೊಂಡವರಿಗೆ ಮಾಸಿಕ ವೇತನ 15,000 ರೂ.ಗಿಂತ ಕಡಿಮೆ ಸಂಬಳ ಇರುವ ಇಪಿಎಫ್‌ಓ ನೋಂದಾಯಿತ ಸಂಸ್ಥೆಗಳಿಗೆ ಹೊಸದಾಗಿ ಕೆಲಸಕ್ಕೆ ಸೇರಿಕೊಂಡವರಿಗೆ ಈ ಪ್ರಯೋಜನ ಸಿಗಲಿದೆ.

ಮಾರ್ಚ್ 1ರಿಂದ ಸೆಪ್ಟೆಂಬರ್ 30ರ ಅವಧಿಯಲ್ಲಿ ಉದ್ಯೋಗ ಕಳೆದುಕೊಂಡ ಮತ್ತು ಅಕ್ಟೋಬರ್ 1ರ ಬಳಿಕ ಉದ್ಯೋಗಕ್ಕೆ ಸೇರಿಕೊಂಡ ಮಾಸಿಕ 15,000 ರೂ ವೇತನ ಇರುವ ಇಪಿಎಫ್ ಸದಸ್ಯರಿಗೆ ಇದರಿಂದ ಅನುಕೂಲ ಸಿಗಲಿದೆ.

ಹೊಸ ಉದ್ಯೋಗಿಗಳ ನೇಮಕಕ್ಕೂ ಅನ್ವಯ ಸೆಪ್ಟೆಂಬರ್ 2020ರ ಒಳಗೆ ರೆಫೆರೆನ್ಸ್ ಆಧಾರದಲ್ಲಿ ಹೊಸ ಉದ್ಯೋಗಿಗಳನ್ನು ಸಂಸ್ಥೆ ನೇಮಕ ಮಾಡಿಕೊಂಡಿದ್ದರೂ ಆತ್ಮನಿರ್ಭರ ಭಾರತ್ ರೋಜ್‌ಗಾರ್ ಯೋಜನೆ ಅರ್ಹತೆ ಪಡೆದುಕೊಳ್ಳಲಿದೆ. 50 ಅಥವಾ ಕಡಿಮೆ ಉದ್ಯೋಗಿಗಳನ್ನು ಒಳಗೊಂಡ ಸಂಸ್ಥೆಯಲ್ಲಿ ಕನಿಷ್ಠ ಇಬ್ಬರನ್ನು ಹೊಸದಾಗಿ ಉದ್ಯೋಗಕ್ಕೆ ತೆಗೆದುಕೊಂಡಿರಬೇಕು. 50 ಅಥವಾ ಹೆಚ್ಚಿನ ಉದ್ಯೋಗಿಗಳಿರುವಲ್ಲಿ ಕನಿಷ್ಠ ಐದು ಹೊಸ ಉದ್ಯೋಗಿಗಳನ್ನು ರೆಫರೆನ್ಸ್ ಆಧಾರದಲ್ಲಿ ತೆಗೆದುಕೊಂಡಿರಬೇಕು.

ತುರ್ತು ಸಾಲ ಖಾತರಿ ವಿಸ್ತರಣೆ ಈ ಯೋಜನೆಯು 2021ರ ಜೂನ್ 30ರವರೆಗೂ ಜಾರಿಯಲ್ಲಿರಲಿದ್ದು, ಈ ಯೋಜನೆ ಜಾರಿಯಾದ ಬಳಿಕ ಇಪಿಎಫ್‌ಓಗೆ ನೋಂದಣಿ ಮಾಡಿಕೊಳ್ಳುವ ಸಂಸ್ಥೆಗಳಲ್ಲಿ ಎಲ್ಲ ಉದ್ಯೋಗಿಗಳಿಗೆ ಸಬ್ಸಿಡಿ ಸಿಗಲಿದೆ. ಆತ್ಮನಿರ್ಭರ ಅಭಿಯಾನ ಯೋಜನೆಯಡಿ 3 ಲಕ್ಷ ಕೋಟಿ ತುರ್ತು ಸಾಲ ಖಾತರಿ ಯೋಜನೆಯನ್ನು ಪ್ರಕಟಿಸಲಾಗಿತ್ತು, ಅದನ್ನು ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •