ಇದು 21 ನೇ ಶತಮಾನ ದಲ್ಲಿ ಹೆಣ್ಣುಮಕ್ಕಳು ಕೂಡ ಗಂಡು ಮಕ್ಕಳ ಜೊತೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳು ಯಾವ ಗಂಡುಮಗುಗಿಂತಲೂ ಕಡಿಮೆ ಇಲ್ಲ ಎಂದು ಹಲವಾರು ಸಲ ಸಾಬೀತಾಗಿದೆ. ಮಹಾರಾಷ್ಟ್ರದ ರಾಜ್ಯದ ನಿಗೋಜ್ ಗ್ರಾಮದ ಶ್ರದ್ಧಾ ಧವನ್ ಎಂಬ 22 ವರ್ಷ ವಯಸ್ಸಿನ ಹುಡುಗಿ ಎಂಬತ್ತು ಎಮ್ಮೆಗಳ ಜೊತೆ ಮಾಡುವ ಕೆಲಸವನ್ನು ನೋಡಿದರೆ ಗಂಡುಮಕ್ಕಳೇ ಒಂದು ಸೆಕೆಂಡ್ ಆಶ್ಚರ್ಯ ಚಕಿತರಾಗುತ್ತಾರೆ . ಶ್ರದ್ಧಾ ಕಳೆದ ಹತ್ತು ವರ್ಷಗಳಿಂದ ಎಮ್ಮೆಗಳ ಡೇರಿ ಫಾರಂ ನಡೆಸುತ್ತಿದ್ದಾಳೆ.

2013 ರಲ್ಲಿ ಶ್ರದ್ಧಾಳಿಗೆ ಅವಳ ತಂದೆ ಕೃಷಿ ಕೆಲಸಗಳನ್ನು ವಹಿಸಿದಾಗ ಶ್ರದ್ಧಾ ಹಿಂಜರಿಯಲಿಲ್ಲ. ಆ ಸಮಯದಲ್ಲಿ ಶ್ರದ್ಧಾಳ ಮನೆಯಲ್ಲಿ ಕೇವಲ 5 ಎಮ್ಮೆಗಳಿದ್ದವು. ಬೆಳಿಗ್ಗೆ ಬೇಗ ಎದ್ದು ಶ್ರದ್ಧಾ ಎಮ್ಮೆಗಳನ್ನು ಸ್ನಾನ ಮಾಡಿಸಿ, ಹಾಲನ್ನು ಕರೆದು ನಂತರ ಸ್ಕೂಟರ್ ಮೇಲೆ ಹಾಲನ್ನು ತೆಗೆದುಕೊಂಡು ಹೋಗಿ ಮಾರುತ್ತಿದ್ದಳು. ಎಮ್ಮೆಗಳಿಗೆ ಮೇವು ಹಾಕಲು ಒಬ್ಬಳೇ ಕಾಡಿಗೆ ಹೋಗಿ ಹಸಿಹುಲ್ಲು ಗಳನ್ನು ಕೂಡ ತರುತ್ತಿದ್ದಳು. ಶ್ರದ್ಧಾ ಹತ್ತನೇ ತರಗತಿಯಲ್ಲಿರುವಾಗಲೇ ಈ ಕೆಲಸಗಳನ್ನು ಮಾಡಲು ಪ್ರಾರಂಭ ಮಾಡಿದ್ದಳು.

2013 ರಲ್ಲಿ ಕೇವಲ 5 ಎಮ್ಮೆಗಳನ್ನು ಹೊಂದಿದ್ದ ಶ್ರದ್ಧಾ ಕುಟುಂಬ ಇದೀಗ ಎಂಬತ್ತು ಎಮ್ಮೆಗಳನ್ನು ಸಾಕುತ್ತಿದ್ದಾರೆ . ದಿನಕ್ಕೆ ಶ್ರದ್ಧಾ ಸರಾಸರಿ ಇಪ್ಪತ್ತು ಎಮ್ಮೆಗಳ ಹಾಲನ್ನು ಕರೆಯುತ್ತಾಳೆ. ದಿನಕ್ಕೆ 450 ಲೀಟರ್ ಗೂ ಹೆಚ್ಚು ಹಾಲನ್ನು ಇವರು ಮಾರಾಟ ಮಾಡುತ್ತಾರೆ. ಶ್ರದ್ಧಾಳ ತಿಂಗಳಿನ ಆದಾಯ 6 ಲಕ್ಷ ಗಿಂತಲೂ ಹೆಚ್ಚು. ಎಮ್ಮೆ ಗಳು ವಾಸಿಸಲು ಶ್ರದ್ಧಾ 2 ಅಂತಸ್ತಿನ ಮನೆಯನ್ನು ಕಟ್ಟಿಸಿದ್ದಾಳೆ. ಹಾಲಿನಲ್ಲಿರುವ ಕೊ ಬ್ಬಿನ ಅನುಪಾತ ಮತ್ತು ಗುಣಮಟ್ಟವನ್ನು ಹೇಗೆ ನಿರ್ವಹಿಸಬೇಕೆಂದು ಶ್ರದ್ಧಾ ಕಲಿತುಕೊಂಡಿದ್ದಾಳೆ.

ಶಿಕ್ಷಣದ ಜೊತೆ ಜೊತೆಗೆ ಶ್ರದ್ಧಾ ಡೇರಿ ಫಾರ್ಮ್ ನಡೆಸುತ್ತಾಳೆ. ಶ್ರದ್ಧಾ 2020 ರಲ್ಲಿ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಮತ್ತು ಇದೀಗ ಸ್ನಾತಕೋತ್ತರ ಪದವಿ ಪಡೆಯಲು ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾಳೆ. ಅಷ್ಟೇ ಅಲ್ಲ ಡೇರಿ ಫಾರಂ ನಿಭಾಯಿಸುವುದರೊಟ್ಟಿಗೆ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಅತಿಥಿ ಉಪನ್ಯಾಸಗಳನ್ನು ಸಹ ಆಯೋಜಿಸುತ್ತಾಳೆ. ಶ್ರದ್ಧಾಳ ಕುಟುಂಬದವರು ಎಮ್ಮೆಗೆ ಸಾವಯವ ಮೇವನ್ನು ಮಾತ್ರ ನೀಡುತ್ತಾರೆ. ಎಮ್ಮೆಗಳು ವಾಸಿಸುವ ಶೆಡ್ ಅನ್ನು ದಿನಕ್ಕೆರಡು ಬಾರಿ ಸ್ವಚ್ಛಗೊಳಿಸುತ್ತಾರೆ. ಮತ್ತು ಎಲ್ಲಾ ಎಮ್ಮೆಗಳಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸುತ್ತಾರೆ.

ಎಮ್ಮೆಗಳ ಕೊಟ್ಟಿಗೇಲಿ ಕೆಲಸಮಾಡುವುದು ನಾಚಿಗೇಡಿನ ಸಂಗತಿ ಅಲ್ಲ. ನನ್ನ ಫ್ಯಾಮಿಲಿ ನನಗೆ ಕೊಟ್ಟ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತಿದ್ದೇನೆ. ನನಗೆ ನನ್ನ ಯಶಸ್ಸನ್ನು ಸಾಧಿಸಲು ಯಾವುದೇ ರೀತಿಯ ಕೌಶಲ್ಯದ ಅಡೆತಡೆಯಿಲ್ಲ. ಈ ಕ್ಷೇತ್ರದಲ್ಲಿ ಕೆಲಸ ಮಾಡುವುದರಿಂದ ಉತ್ತಮ ಪ್ರಮಾಣದ ಅನುಭವ ಹಾಗೂ ಜ್ಞಾನವನ್ನು ಸಂಪಾದನೆ ಮಾಡಿದ್ದೆನೆ. ನನ್ನ ತಂದೆ ನನಗೆ ನೀಡಿದ ಜವಾಬ್ದಾರಿಯಿಂದ ಹಿಂದೆ ಸರಿದಿದ್ದರೆ ಇಂದು ಈ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ವಾಗಿತ್ತು. ಭಯವನ್ನು ಮೆಟ್ಟಿ ನಿಂತು ನಾನು ಜಯಶಾಲಿಯಾಗಿ ದ್ದೇನೆ..ಎಂದು ಹೇಳಿದ ಶ್ರದ್ಧಾ ಧವನ್ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!