ಇಂದಿನ ಯುವಜನತೆ ತಮ್ಮ ಸಂಗಾತಿಯ ಜೊತೆ ನಿಜ ಜೀವನದಲ್ಲಿ ನಡೆಸಬೇಕಾದ ಲೈಂ*ಗಿಕ ಕ್ರಿಯೆಯನ್ನು ತಾವು ತಮ್ಮ ಮನಸ್ಸಿನಲ್ಲಿ ತಮಗೆ ಬೇಕಾದ ಹಾಗೆ ಅಂದುಕೊಂಡು ಸಂತೋಷ ಪಡುತ್ತಿದ್ದಾರೆ.

ಲೈಂ*ಗಿಕ ಚಟುವಟಿಕೆ ಎನ್ನುವುದು ಒಂದು ನೈಸರ್ಗಿಕ ಕ್ರಿಯೆ. ಒಂದು ಗಂಡು ಮತ್ತು ಒಂದು ಹೆಣ್ಣಿನ ನಡುವೆ ನಿಸರ್ಗದತ್ತವಾಗಿ ವಂಶಾಭಿವೃದ್ಧಿಯಲ್ಲಿ ಬಹು ಮುಖ್ಯ ಪಾತ್ರ ವಹಿಸುವ ಒಂದು ಕ್ರಿಯೆ. ಆದರೆ ಇಂದಿನ ಯುವಜನತೆ ಈ ನೈಸರ್ಗಿಕ ಕ್ರಿಯೆಯ ಸ್ವರೂಪವನ್ನು ವಿರುದ್ಧ ರೀತಿಯಲ್ಲಿ ವ್ಯಕ್ತ ಪಡಿಸಲು ಹವಣಿಸುತ್ತಿದ್ದಾರೆ.

ನಿದ್ರಾಹೀನತೆ ಸಮಸ್ಯೆ ಎದುರಾಗಬಹುದು

  • ನಿಮ್ಮ ಸಂಗಾತಿಯ ಜೊತೆ ನಿಜ ಜೀವನದಲ್ಲಿ ನೀವು ಅನುಭವಿಸುವ ಲೈಂ*ಗಿಕ ಸುಖಕ್ಕಿಂತ ಕಲ್ಪನಾ ಲೋಕದಲ್ಲಿ ನಿಮಗೆ ಹೆಚ್ಚು ಲೈಂ*ಗಿಕ ಖುಷಿ ಸಿಗುವ ಕಾರಣದಿಂದ ನಿಮಗೆ ನಿಜ ಜೀವನಕ್ಕಿಂತ ಭ್ರಮಾ ಲೋಕದ ಲೈಂ*ಗಿಕ ಸುಖವೇ ಹೆಚ್ಚಾಗುತ್ತದೆ.
  • ದಿನ ಕಳೆದಂತೆ ಇದು ನಿಮಗೆ ಒಂದು ಚಟವಾಗಿ ಅಂಟಿಕೊಳ್ಳುತ್ತದೆ. ಇದರಿಂದ ನಿಮಗೆ ನಿದ್ರೆಗೆ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ಹಗಲು – ರಾತ್ರಿ ಎನ್ನದೆ ನೀವು ಹೆಚ್ಚು ವರ್ಚುವಲ್ ಲೈಂ*ಗಿಕ ನಲ್ಲಿ ಪಾಲ್ಗೊಳ್ಳುವ ಕಾರಣ ನಿಮ್ಮ ಮಾನಸಿಕ ಸ್ಥಿತಿ ಸಂಪೂರ್ಣವಾಗಿ ಹದಗೆಡುತ್ತದೆ.
  • ನೀವು ಯಾವುದೇ ಒಂದು ವಿಚಾರದ ಮೇಲೆ ಸರಿಯಾಗಿ ಗಮನ ಹರಿಸಲು ಸಾಧ್ಯ ಆಗುವುದಿಲ್ಲ. ಇದು ನಿಮಗೆ ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ತಂದುಕೊಡುತ್ತದೆ ಮತ್ತು ನಿಮ್ಮ ಇಡೀ ಜೀವನ ಹಾಳಾಗುವ ಸಾಧ್ಯತೆ ಇರುತ್ತದೆ.ಮಾನಸಿಕ ಅಸ್ವಸ್ಥತೆಗೆ ಕಾರಣವಾಗಬಹುದು
    • ಭ್ರಮಾ ಲೋಕದಲ್ಲಿ ಲೈಂ*ಗಿಕ ಕ್ರಿಯೆಯಲ್ಲಿ ನಿರತರಾಗಿರುವವರು ತಮ್ಮ ತಲೆಯಲ್ಲಿ ಸಾಕಷ್ಟು ಆಲೋಚನೆಗಳನ್ನು ನಮ್ಮ ಸಂಗಾತಿಯ ಬಗ್ಗೆ ವಿಧ ವಿಧವಾದ ಬಯಕೆಗಳನ್ನು ಹೊಂದಿಕೊಳ್ಳಲು ಪ್ರಾರಂಭ ಮಾಡುತ್ತಾರೆ.
    • ಇದರಿಂದ ಅಂತರ್ಜಾಲದಲ್ಲಿ ವೀಕ್ಷಣೆ ಮಾಡಿದ ರೀತಿ ಮ ಸಂಗಾತಿ ಇರಬೇಕೆಂದು ನೀವು ಬಯಸಬಹುದು. ನಿಮ್ಮ ಮನಸ್ಸಿನಲ್ಲಿ ಏನಿದೆ ಎಂದು ಗೊತ್ತಿಲ್ಲದೆ ಅಥವಾ ನಿಮ್ಮ ಬಯಕೆಗೆ ತಕ್ಕಂತೆ ನಿಮ್ಮ ಸಂಗಾತಿ ನಡೆದುಕೊಳ್ಳಲು ಸಾಧ್ಯವಾಗದೆ ನಿಮ್ಮನ್ನು ನಿರಾಸೆ ಮಾಡಬಹುದು.
    • ಇದರಿಂದ ನಿಮ್ಮ ಸಂಗಾತಿಯ ಮೇಲೆ ನಿಮಗೆ ಕೋಪ – ತಾಪ, ಕಿರಿಕಿರಿ ಎಲ್ಲವೂ ಉಂಟಾಗಬಹುದು. ನಿಜವಾಗಿ ನೀವು ಸಾಕಷ್ಟು ಕುಗ್ಗಬಹುದು.ಆತ್ಮೀಯತೆಯ ಸಮಸ್ಯೆ ಎದುರಾಗಬಹುದು
      • ಕಲ್ಪನಾ ಲೋಕದಲ್ಲಿ ನೀವು ಲೈಂ*ಗಿಕ ಕ್ರಿಯೆ ನಡೆಸಿದಂತೆ ಕನಸು ಕಾಣುತ್ತಿದ್ದರೆ ನಿಮ್ಮ ಹಾಗೂ ನಿಮ್ಮ ಸಂಗಾತಿ ನಡುವೆ ಅಂತರ ಹೆಚ್ಚಾಗಲು ಇದು ಕಾರಣವಾಗುತ್ತದೆ. ಇದರಿಂದ ನಿಮ್ಮ ಕುಟುಂಬದಲ್ಲಿ ಬಿರುಕು ಮೂಡಬಹುದು.
      • ನಿಮ್ಮ ಸಂಗಾತಿ ನಿಮ್ಮ ಎದುರಿಗೆ ಬಂದ ಸಂದರ್ಭದಲ್ಲಿ ನೀವು ಅವರನ್ನು ಮುಟ್ಟಲು ಸಹ ಇಷ್ಟ ಪಡುವುದಿಲ್ಲ. ಇದರಿಂದ ನಿಮ್ಮ ಮಧ್ಯೆ ಇರಬೇಕಾದ ನಿಜವಾದ ಬಾಂಧವ್ಯ ಹದಗೆಡುತ್ತದೆ.
      • ಬಹಳಷ್ಟು ಸಂಬಂಧಗಳು ಕೇವಲ ಈ ರೀತಿಯ ಕಲ್ಪನಾ ಲೋಕದಲ್ಲಿ ತಮ್ಮ ಸಂಗಾತಿಯ ಜೊತೆ ಲೈಂ*ಗಿಕ ಕ್ರಿಯೆ ನಡೆಸುವಂತೆ ಕನಸು ಕಂಡು ನಿಜ ಜೀವನದಲ್ಲಿ ಅದು ನಡೆಯದೆ ಹೋದಾಗ ಮನನೊಂದು ಡೈವರ್ಸ್ ಪಡೆದುಕೊಂಡು ಬೇರೆ ಬೇರೆಯಾದ ಸಾಕಷ್ಟು ಉದಾಹರಣೆಗಳು ಇಂದಿಗೂ ನಮ್ಮ ಕಣ್ಣ ಮುಂದಿವೆ.ಊಹೆಗೂ ಮೀರಿದ ನಿರೀಕ್ಷೆಗಳು ಹೆಚ್ಚಾಗಬಹುದು
        • ಇದು ಹೇಗೆಂದರೆ ನಿಮ್ಮ ಜೀವನ ಒಂದು ಸಿನಿಮಾ ಕಥೆಯ ರೀತಿ ಆಗಿ ಬಿಡುತ್ತದೆ. ಏಕೆಂದರೆ ಸಿನಿಮಾ ಕಥೆಯೇ ಬೇರೆ ನಿಜ ಜೀವನವೇ ಬೇರೆ. ಲೈಂ*ಗಿಕತೆಯ ವಿಷಯ ಬಂದಾಗಲೂ ಅಷ್ಟೇ. ನೀವು ನಿಜವಾಗಲೂ ಲೈಂ*ಗಿಕ ಕ್ರಿಯೆಯಲ್ಲಿ ನಿಮ್ಮ ಸಂಗಾತಿಯ ಜೊತೆ ತೊಡಗುವ ಪರಿಯೇ ಬೇರೆ ಆಗಿರುತ್ತದೆ.
        • ನೀವು ಕಲ್ಪನಾ ಲೋಕದಲ್ಲಿ ನಿಮ್ಮ ಸಂಗಾತಿಯ ಜೊತೆ ಲೈಂ*ಗಿಕ ಕ್ರಿಯೆ ನಡೆಸುತ್ತಿರುವ ರೀತಿ ಕಲ್ಪನೆ ಮಾಡಿಕೊಂಡು ಅನುಭವಿಸುವ ಸುಖವೇ ಬೇರೆ ರೀತಿ ಇರುತ್ತದೆ.
        • ಇದರಿಂದ ನಿಮ್ಮ ಊಹೆಗೂ ಮೀರಿದ ನಿರೀಕ್ಷೆಯನ್ನು ನೀವು ನಿಮ್ಮ ಸಂಗಾತಿಯಿಂದ ನಿಜ ಜೀವನದಲ್ಲಿ ಬಯಸುವ ಸಂದರ್ಭವೇ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡುತ್ತದೆ.
        • ಇದರಿಂದ ಮಾನಸಿಕವಾಗಿ ನಿಮಗೆ ಮತ್ತು ನಿಮ್ಮ ಸಂಗಾತಿಗೆ ಹಿಂಸೆ ಆಗಬಹುದು. ನೀವು ಅಂದುಕೊಂಡ ಮಟ್ಟಿಗೆ ನಿಮ್ಮ ಲೈಂ*ಗಿಕ ಸುಖ ನಿಮಗೆ ಸಿಗದೇ ಇರಬಹುದು.ಲೈಂ*ಗಿಕ ಚಟುವಟಿಕೆಗೆ ಅಡ್ಡಿಯಾಗುತ್ತದೆ
          • ಪುರುಷರು ಮತ್ತು ಮಹಿಳೆಯರು ತಮ್ಮ ಅಗತ್ಯವಾದ ವಯಸ್ಸಿನಲ್ಲಿ ಲೈಂ*ಗಿಕತೆ ಎನ್ನುವುದು ಸಿಗದೇ ಹೋದಾಗ ಈ ರೀತಿಯ ವರ್ಚುವಲ್ ಲೈಂ*ಗಿಕ ಅಥವಾ ಭ್ರಮೆಯಿಂದ ಲೈಂ*ಗಿಕ ಸುಖ ಅನುಭವಿಸುವ ತಂತ್ರಕ್ಕೆ ಜಾರುತ್ತಾರೆ ಎಂದು ಸಂಶೋಧನೆಗಳು ಹೇಳುತ್ತವೆ.
          • ಆರಂಭಿಕ ದಿನಗಳಲ್ಲಿ ಇದರಿಂದ ಯಾವುದೇ ತೊಂದರೆ ಆಗದಿದ್ದರೂ ನಂತರ ದಿನಕಳೆದಂತೆ ಕ್ರಮೇಣವಾಗಿ ಪುರುಷರಲ್ಲಿ ಜನನಾಂಗಗಳ ಅಸ್ವಸ್ಥತೆ ಎದುರಾಗುತ್ತದೆ. ಪುರುಷರಲ್ಲಿ ಇದರ ಜೊತೆಗೆ ಶೀಘ್ರ ಸ್ಖಲನ ಸಹ ಉಂಟಾಗಬಹುದು.
          • ಮಹಿಳೆಯರಲ್ಲಿ ಲೈಂ*ಗಿಕ ಪರಾಕಾಷ್ಠೆ ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಅಥವಾ ಲೈಂ*ಗಿಕ ಪರಾಕಾಷ್ಠೆ ತಲುಪಲು ಸಾಧ್ಯ ಆಗದೇ ಹೋಗಬಹುದು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •