ದ್ರೌಪದಿ ಮೊದಲ ಜನ್ಮದಲ್ಲಿ ಮಾಕಲಿ ಮುನಿಯಿಂದ ಹೆಂಡತಿಯಾಗಿದ್ದಳು ಆಕೆಯ ಹೆಸರು ಇಂದ್ರಸೇನಾ ಮಾಕಲಿಯ ಮುನಿಗಳು ಐದು ಶರೀರಗಳನ್ನು ಹೊಂದಿದ್ದರು. ಇನ್ನೂ ದ್ರೌಪದಿ ಎರಡನೇ ಜನ್ಮದಲ್ಲಿ ಕಾಶಿ ರಾಜನ ಪುತ್ರಿಯಾಗಿ ಜನಿಸಿದರು ಎಷ್ಟೋ ವರ್ಷದವರೆಗೆ ಕನ್ಯೆಯಾಗಿದ್ದ ಆಕೆ ಶಿವನಿಗಾಗಿ ತಪಸ್ಸನ್ನು ಆಚರಿಸಿದಳು ಆಗ ಶಿವನು ಪ್ರತ್ಯಕ್ಷನಾದಗ ಪತಿಯನ್ನು ವರವಾಗಿ ಕೇಳುತ್ತಾಳೆ ಆ ಶಿವನು ಇಂದ್ರನ ಐದು ಮನುಷ್ಯ ರೂಪದ ಪತಿಯನ್ನು ವರವಗಿ ನೀಡುತ್ತಾನೆ. ಇನ್ನೂ ಮೂರನೆಯ ಜನ್ಮದಲ್ಲಿ ದ್ರೌಪದಿ ದೃಪದನ ಪುತ್ರಿಯಾಗಿ ಜನಿಸಿ ಪಂಚ ಪಾಂಡವರನ್ನು ಪಡೆಯುತ್ತಾಳೆ. ಇನ್ನೂ ಗಂಡನನ್ನು ಹೆಂಡತಿ ವಶಪಡಿಸಿ ಕೊಳ್ಳುವುದು ಸಾಮಾನ್ಯ ವಿಷಯವಲ್ಲ ಅದರಲ್ಲೂ ದ್ರೌಪದಿ ತನ್ನ ಐದು ಪತಿಯರನ್ನು ವಶಪಡಿಸಿಕೊಂಡಿದ್ದಳು ಅದು ಹೇಗೆ ಸಾಧ್ಯ ಎಂಬುದು ಪ್ರತಿಯೊಬ್ಬ ಪತ್ನಿಯು ಕೂಡ ತಿಳಿದು ಕೊಳ್ಳಲೇಬೇಕು.

ಒಂದು ಬಾರಿ ಕೃಷ್ಣ ಮತ್ತು ಸತ್ಯಭಾಮ ಪಾಂಡವರು ವನವಾಸದಲ್ಲಿ ಇದ್ದಾಗ ಅವರು ಇರುವ ಕಾಡಿಗೆ ಬಂದು ಕೃಷ್ಣನು ಅಲ್ಲಿರುವ ಮಾರ್ಕಂಡೇಯ ಮಹಾ ಮುನಿಗಳೊಂದಿಗೆ ಹಾಗೂ ಬ್ರಾಹ್ಮಣರರೊಂದಿಗೆ ಮಾತನಾಡುತ್ತಿದ್ದರು. ಆಗ ಸತ್ಯಭಾಮ ದ್ರೌಪದಿಯ ಬಳಿ ಹೋದಳು ಕುಟುಂಬದ ಕೆಲವು ವಿಷಯದ ಬಗ್ಗೆ ಚರ್ಚಿಸುತ್ತ ಇರುವಾಗ ಸತ್ಯಭಮ ದ್ರೌಪದಿಯನ್ನು ಒಂದು ವಿಚಿತ್ರವಾದ ಪ್ರಶ್ನೆಯನ್ನು ಕೇಳುತ್ತಾಳೆ. ಆ ಪ್ರಶ್ನೆ ಏನೆಂದರೆ ಮದುವೆಯಾಗಿ ಇಷ್ಟೊಂದು ವರ್ಷಗಳು ಆದರೂ ಕೂಡ ಐದು ಜನ ಗಂಡಂದಿರು ಈಗಿನವರೆಗೂ ನಿನಗೆ ಅದೇ ರೀತಿಯ ಪ್ರೀತಿಯನ್ನು ನಿನ್ನ ಮೇಲೆ ತೋರಿಸುತ್ತಾರೆ. ಆ ರೀತಿಯ ಪ್ರೀತಿಯನ್ನು ನೀನು ಈ ದಿನದವರೆಗೂ ಪಡೆಯುತ್ತಿದ್ದಿಯಾ ಅದು ಹೇಗೆ ಸಾಧ್ಯ ಆಯಿತು ಎಂದು ಪ್ರಶ್ನೆ ಮಾಡುತ್ತಾಳೆ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •