ಮದುವೆಯಾದ ಕೇವಲ ಮೂರು ವರ್ಷದಲ್ಲೇ ಆತನ ಪ್ರೇಯಸಿಯೊಂದಿಗೆ ಗಂಡನ ಮದುವೆ ಮಾಡಿಸಿದ ಹೆಂಡತಿ! ಕಾರಣ ಕೇಳಿದರೆ…

ಗಂಡ ಹೆಂಡತಿ ಮತ್ತು ಮತ್ತೊಬ್ಬಳು ಅವರ ಮಧ್ಯೆ ಬಂದ ಕಥೆಗಳನ್ನು ನಾವು ಬಹಳಷ್ಟು ಕೇಳಿದ್ದೇವೆ‌. ಅದರ ಬಗ್ಗೆ ಸಮಸ್ಯೆಗಳು ಉಂಟಾಗಿ ಎಷ್ಟೋ ಜನ ತಮ್ಮ ಜೀವನ ಹಾಳು ಮಾಡಿಕೊಂಡು ಕೋರ್ಟು ಕಛೇರಿ ಅಲೆಯುವುದನ್ನು ಕೂಡಾ ನೋಡಿದ್ದೇವೆ.  ಮಧ್ಯಪ್ರದೇಶದ ಭೂಪಾಲ್ ನಲ್ಲಿ ಇಂತಹುದೊಂದು ಘಟನೆ ಊಹೆ ಮಾಡಿರದ ತಿರುವನ್ನು ಕಂಡಿದೆ. ಮೂರು ವರ್ಷದ ಹಿಂದೆ ಮದುವೆಯಾಗಿದ್ದ ತನ್ನ ಗಂಡ ಮತ್ತಾರನ್ನೋ ಪ್ರೀತಿಸುತ್ತಿದ್ದಾನೆ ಎಂದು ತಿಳಿದ ಆತನ ಪತ್ನಿ ಅದನ್ನು ವಿರೋಧ ಮಾಡಿಲ್ಲ, ಬದಲಾಗಿ ಆಕೆ ಆತ ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಆತನ ಗೆಳತಿಯೊಂದಿಗೆ ಆತನ ಪತ್ನಿಯೇ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ.

ಕುಟುಂಬ ವ್ಯಾಜ್ಯಗಳ ಕೋರ್ಟ್ನ ವಕೀಲೆಯಾಗಿರುವ ರಜನಿ ರಜಾನಿ ಅವರು ಈ ಒಂದು ವಿಚಿತ್ರ ಎನಿಸುವ ಕೇಸ್ ಬಗ್ಗೆ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಅವರ ಬಳಿಗೆ ಒಬ್ಬ ಪುರುಷ ಹಾಗೂ ಒಬ್ಬ ಮಹಿಳೆ ಕೌನ್ಸಿಲಿಂಗ್ ಗಾಗಿ ಬಂದಿದ್ದರಂತೆ. ಅದರಲ್ಲಿ ಆ ಪುರುಷ ವಕೀಲೆಯ ಬಳಿ ನನಗೂ ನನ್ನ ಪತ್ನಿಗೂ ಮದುವೆಯಾಗಿ ಮೂರು ವರ್ಷಗಳಾಗಿವೆ. ಆದರೆ ಕಳೆದ ಒಂದು ವರ್ಷದಿಂದ ಒಬ್ಬ ಮಹಿಳೆಯೊಂದಿಗೆ ಭಾವನಾತ್ಮಕ ಸಂಬಂಧ ಏರ್ಪಟ್ಟಿದೆ. ಆ ಮಹಿಳೆಯೊಂದಿಗಿನ ಸಂಬಂಧ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಆಕೆ ಮದುವೆಯಾಗಲಿಲ್ಲ ಎನ್ನುವ ಕಾರಣಕ್ಕೆ ಆತ್ಮಹ ತ್ಯೆಗೆ ಕೂಡಾ ಪ್ರಯತ್ನ ಮಾಡಿದ್ದಾಳೆ ಎಂದು ಆತ ಎಲ್ಲವನ್ನೂ ಕೂಡಾ ವಿವರಿಸಿ ಹೇಳಿದ್ದಾನೆ.

ಅನಂತರ ಆತ ತನಗೆ ತನ್ನ ಗೆಳತಿಯನ್ನು ಬಿಟ್ಟಿರುವುದು ಸಾಧ್ಯವಿಲ್ಲ ಎಂದು ತನ್ನ ಪತ್ನಿಯ ಬಗ್ಗೆ ತನಗೆ ಯಾವುದೇ ಅಸಮಾಧಾನ ಇಲ್ಲವೆಂದೂ, ಆಕೆ ತನ್ನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದು, ಆಕೆಯನ್ನು ಕೂಡಾ ಸದಾ ಸಂತೋಷವಾಗಿ ನೋಡಿಕೊಳ್ಳುವ, ಆಕೆಯನ್ನು ಬಿಟ್ಟು ಬಿಡುವ ಆಲೋಚನೆ ಇಲ್ಲವೆಂದು ತಿಳಿಸಿದ್ದಾರೆ. ಆಗ ವಕೀಲೆ ರಜನಿ ಅವರು ಆತನಿಗೆ ಕಾನೂನಿನ ಪ್ರಕಾರ ಹೀಗೆ ಇಬ್ಬರು ಮಹಿಳೆಯರ ಜೊತೆಗೆ ಜೀವನ ನಡೆಸುವುದಕ್ಕೆ ಅವಕಾಶವಿಲ್ಲ ಎಂದೂ ಅವರ ಜೊತೆ ಬಂದಿದ್ದ ಆತನ ಗೆಳತಿಗೆ ಕೂಡಾ ರಜನಿ ಅವರು ಆಕೆ ಒಂದು ಸಂಸಾರ ಹಾಳು ಮಾಡುವುದು ಸರಿಯಲ್ಲ ಎಂದು ಬುದ್ಧಿ ಹೇಳಿದ್ದಾರೆ.

Husband's-marriage

ಮರುದಿನ ವಕೀಲೆ ಆ ವ್ಯಕ್ತಿ ಮತ್ತು ಅವರ ಪತ್ನಿಯನ್ನು ಕೌನ್ಸಿಲಿಂಗ್ ಗಾಗಿ ಕರೆಸಿದ್ದಾರೆ. ಆಗ ವಕೀಲೆ ಆತನ ಪತ್ನಿಗೆ ಆತ ಏನನ್ನು ಬಯಸುತ್ತಿದ್ದಾನೆ ಎಂಬುದನ್ನು ವಿವರಿಸಿ ಹೇಳಿದ್ದಾರೆ.‌

ಇದನ್ನು ಕೇಳಿದ ಆಕೆ ಸಾಕಷ್ಟು ಬೇಸರ ಪಟ್ಟಿದ್ದು ಮಾತ್ರವಲ್ಲದೇ ಆಕೆ ಕಣ್ಣೀರು ಹಾಕಿದ್ದಾರೆ.‌ ಅನಂತರ ಸಾಕಷ್ಟು ಮಾತುಕತೆಯ ನಂತರ ಒಂದು ದಿನದ ಅವಕಾಶವನ್ನು ನೀಡುವಂತೆ ಆಕೆ ಮನವಿ ಮಾಡಿದ್ದಾರೆ. ಮರು ದಿನ ಆಕೆ ತನ್ನ ಪತಿಯೊಡನೆ ಕೋರ್ಟ್ ಗೆ ಬಂದು, ತಾನು ಇಷ್ಟೆಲ್ಲಾ ಪ್ರೀತಿ ತೋರಿದ ಮೇಲೂ ತನ್ನ ಗಂಡ ಬೇರೆಯವರನ್ನು ಪ್ರೀತಿಸಿದ್ದಾರೆ ಎಂದ ಮೇಲೆ ನಾನು ಅವರ ಜೊತೆ ಇನ್ನು ಜೀವನ ನಡೆಸಲಾರೆ ಎಂದು ತನ್ನ ನಿರ್ಧಾರವನ್ನು ತಿಳಿಸಿದ್ದಾರೆ.

ಎಲ್ಲಾ ಕಾನೂನಿನ ನಿಯಮಗಳ ಪಾಲನೆ ಮಾಡುವ ಮೂಲಕ ತಾನು ಪತಿಗೆ ವಿಚ್ಛೇದನ ನೀಡುವುದಾಗಿ ಆಕೆ ತಿಳಿಸಿದ್ದಾರೆ‌. ಇನ್ನು ಆಕೆ  ವಿಚ್ಛೇದನಕ್ಕೆ ಒಪ್ಪಿಗೆ ನೀಡದ ಮೇಲೆ ಆಕೆಯ ಪತಿ ಆಕೆಗೆ ಜೀವನಾಂಶ ನೀಡಲು ತನ್ನ ಆಸ್ತಿಯಲ್ಲಿ ಭಾಗ ನೀಡುವುದಾಗಿ ಹೇಳಿದಾಗ ಆಕೆ ತಾನು ಸಂಬಂಧಕ್ಕೆ ಹಾಗೂ ತಮ್ಮ ಆತ್ಮ ಗೌರವಕ್ಕೆ ಅವ ಮಾನ ಮಾಡಲು ಬಯಸುವುದಿಲ್ಲ ಎಂದು ತನಗೆ ಅದಾವುದೂ ಬೇಡ ಎಂದು ಆಕೆ ಆತನಿಗೆ ವಿಚ್ಛೇದನವನ್ನು ನೀಡುವ ಮೂಲಕ ಪತಿಯ ಎರಡನೆಯ ಮದುವೆಯ ದಾರಿಯನ್ನು ಸುಗಮವಾಗುವಂತೆ ಮಾಡಿದ್ದಾರೆ.‌

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •