ಮದುವೆ ಆದ ಮಹಿಳೆಯರು,ಗಂಡನ ಮನೆಗೆ ತವರು ಮನೆಯಿಂದ ಇವುಗಳನ್ನು ತೆಗೆದುಕೊಂಡು ಹೋಗಬಾರದು,ಒಳ್ಳೇದಲ್ಲ..!!!

Home Kannada News/ಸುದ್ದಿಗಳು

ಹೆಣ್ಣು ಮಗಳು ಒಮ್ಮೆ ತಂದೆ ಮನೆಯಿಂದ ಗಂಡನ ಮನೆಗೆ ಹೋದರೆ ಆಕೆ ಗಂಡನ ಮನೆಯ ಸೊತ್ತು ಆಗಿರುತ್ತಾಳೆ, ಅಂದರೆ ಕೊಟ್ಟ ಹೆಣ್ಣು ಕುಲದಿಂದ ಹೊರಗೆ ಎಂಬ ಗಾದೆ ಮಾತಿನಂತೆ ಆಕೆ ತನ್ನ ತವರಿಗೆ ಬಂದಾಗ ತವರಿನಿಂದ ಗಂಡನ ಮನೆಗೆ ಕೆಲವೊಂದು ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು ಇದರಿಂದ ತಂದೆ ಮನೆಗೂ ಸಹ ದಾರಿದ್ರ್ಯ ಮತ್ತು ಆ ವಸ್ತುಗಳನ್ನು ಆಕೆಯ ಗಂಡನ ಮನೆಗೆ ತೆಗೆದುಕೊಂಡು ಹೋದರೆ ಅದು ಗಂಡನ ಮನೆಗೂ ಸಹ ದಾರಿದ್ರ್ಯವನ್ನು ಉಂಟುಮಾಡುತ್ತದೆ

ಇಬ್ಬರ ಮನೆಗೂ ಸಹ ಏಳಿಗೆ ಆಗುವುದಿಲ್ಲ ಆದ್ದರಿಂದ ಶಾಸ್ತ್ರಗಳೇ ಹೇಳುವಂತೆ ಕೆಲವೊಂದು ವಸ್ತುಗಳನ್ನು ತವರು ಮನೆಯಿಂದ ಗಂಡನ ಮನೆಗೆ ತೆಗೆದು ಕೊಂಡು ಹೋಗಬಾರದೆಂದು ಹೇಳಲಾಗುತ್ತದೆ ಆದರೆ ಇವತ್ತಿನ ಕಾಲಮಾನದಲ್ಲಿ ಎಷ್ಟೋ ಜನರಿಗೆ ಈ ವಿಚಾರಗಳೇ ತಿಳಿದಿರುವುದಿಲ್ಲ.ಹಿಂದೆಲ್ಲಾ ಹಿರಿಯರು ಕಿರಿಯರ ಜೊತೆ ಕೆಲವೊಂದು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಇದ್ದರು ಇದರಿಂದ ಪದ್ಧತಿಗಳು ಸಹ ತಲತಲಾಂತರವಾಗಿ ಕಿರಿಯರಿಗೆ ಕೊಡುಗೆಯಾಗಿ ಬಂದಿರುತ್ತದೆ

ಆದರೆ ಇವತ್ತಿನ ದಿವಸಗಳಲ್ಲಿ ಯುವಕರು ಹಿರಿಯರ ಜೊತೆ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳದೆ ಕೆಲವೊಂದು ವಿಚಾರಗಳೇ ಕಿರಿಯರಿಗೆ ತಿಳಿದಿರುವುದಿಲ್ಲ ಇವತ್ತಿನ ಮಾಹಿತಿಯಲ್ಲಿ ನಾವು ತಿಳಿಸಿಕೊಡುತ್ತೇವೆ ನಮ್ಮ ಪದ್ಧತಿಯ ಕೆಲವೊಂದು ವಿಚಾರಗಳ ಬಗ್ಗೆ ಅದರಲ್ಲಿಯೂ ಹೆಣ್ಣು ಮಕ್ಕಳು ತನ್ನ ತಂದೆ ಮನೆಯಿಂದ ಯಾವ ಕೆಲವೊಂದು ವಸ್ತುಗಳನ್ನು ತರಲೇಬಾರದು ಎಂಬುದರ ಮಾಹಿತಿ ನೀಡುತ್ತೇವೆ ಸಂಪೂರ್ಣವಾಗಿ ಲೇಖನವನ್ನು ತಿಳಿಯಿರಿ.

ಮೊದಲನೆಯ ವಸ್ತು ಅಂದರೆ ಅದು ಚೂರಿ ಚಾಕು ಅಥವಾ ಮಚ್ಚು ಕೊಡಲಿ ಇಂತಹ ವಸ್ತುಗಳನ್ನು ತವರು ಮನೆಯಿಂದ ಗಂಡನ ಮನೆಗೆ ತೆಗೆದುಕೊಂಡು ಹೋಗಬಾರದೆಂದು ಹೇಳಲಾಗುತ್ತದೆ. ಯಾಕೆ ಅಂದರೆ ಈ ರೀತಿ ಚೂಪಾದ ವಸ್ತುಗಳು ಸಂಬಂಧವನ್ನು ಹಾಳು ಮಾಡುತ್ತದೆ ಎಂಬ ಕಾರಣದಿಂದಾಗಿ ಹಿರಿಯರು ಈ ಕೆಲವೊಂದು ವಸ್ತುಗಳನ್ನು ತಮ್ಮ ಮನೆಯ ಹೆಣ್ಣುಮಕ್ಕಳಿಗೆ ನೀಡುತ್ತಾ ಇರಲಿಲ್ಲ ಹಾಗೂ ಅವುಗಳನ್ನು ಗಂಡನ ಮನೆಗೆ ತೆಗೆದುಕೊಂಡು ಹೋಗುತ್ತಾರೋ ಅಲ್ಲೆಲ್ಲ ಎರಡನೆಯದಾಗಿ ರಂಗೋಲಿಹಿಟ್ಟು ದೇವರ ಸಾಮಾಗ್ರಿಗಳು ಇಂತಹ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು ಎಂದು ಹೇಳಲಾಗುತ್ತದೆ.

ಕೆಲವರು ಹೋದ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಸುಲಭ ಆಗಲಿ ಎಂದು ಮಸಾಲೆ ಪದಾರ್ಥಗಳನ್ನ ಕೊಟ್ಟು ಕಳಿಸುತ್ತಾರೆ ಆದರೆ ಈ ರೀತಿ ಮಸಾಲ ಪದಾರ್ಥಗಳನ್ನು ಹೆಣ್ಣುಮಕ್ಕಳಿಗೆ ತವರಿನಿಂದ ಗಂಡನ ಮನೆಗೆ ಕೊಟ್ಟು ಕಳಿಸಬಾರದು. ಇದರಿಂದ ಸಹ ತವರುಮನೆ ಮತ್ತು ಗಂಡನ ಮನೆಗೆ ದಾರಿದ್ರ್ಯ ಉಂಟಾಗುತ್ತದೆ. ಆದರೆ ಹೆಣ್ಣುಮಕ್ಕಳು ತಮ್ಮ ಈ ರೀತಿ ಮಸಲ ಪದಾರ್ಥಗಳನ್ನಾಗಲಿ ಅಥವಾ ಲಕ್ಷ್ಮಿ ಸ್ವರೂಪರಾಗಿರುವ ಈ ಪೊರಕೆ ಯನ್ನಾಗಲೀ ತೆಗೆದುಕೊಂಡು ಹೋಗುವಾಗ ಸುಮ್ಮನೆ ತೆಗೆದುಕೊಂಡು ಹೋಗಬಾರದು. ಅದಕ್ಕೆ ತಕ್ಕ ಬೆಲೆಯನ್ನು ನೀಡಿ ನಂತರ ಇಂತಹ ವಸ್ತುಗಳನ್ನು ತೆಗೆದುಕೊಂಡು ಹೋಗುವುದರಿಂದ ಯಾವುದೇ ತಪ್ಪಿಲ್ಲ ಎಂದು ಹೇಳಲಾಗಿದೆ.

ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ತವರಿಂದ ಕೆಲವೊಂದು ಉಡುಗೊರೆ ತಮಗೂ ಕೂಡಾ ಸಿಗಬೇಕೆಂದು ಹೆಣ್ಣುಮಕ್ಕಳು ಆಸೆ ಪಡುತ್ತಾ ಇರುತ್ತಾರೆ ಆದರೆ ಕೆಲವೊಂದು ವಸ್ತುಗಳನ್ನು ಅಥವಾ ಲಕ್ಷ್ಮೀ ಪ್ರತೀಕವಾಗಿರುವ ವಸ್ತುಗಳನ್ನು ತವರು ಮನೆಯಿಂದ ಹೆಣ್ಣು ಮಕ್ಕಳು ತನ್ನ ಗಂಡನ ಮನೆಗೆ ತೆಗೆದುಕೊಂಡು ಹೋಗಬಾರದು.

ಈ ರೀತಿ ಮಾಡುವುದರಿಂದ ತವರುಮನೆಯ ಸೌಭಾಗ್ಯ ಗಂಡನ ಮನೆಗೆ ಹೋದಂತೆ ಲೆಕ್ಕ ಬರುತ್ತದೆ ಇದರಿಂದ ತವರು ಮನೆಗೂ ಸಹ ಒಳ್ಳೆಯದಾಗುವುದಿಲ್ಲ ಗಂಡನ ಮನೆಗೂ ಸಹ ಒಳಿತಾಗುವುದಿಲ್ಲ, ನೀವು ಕೂಡ ಈ ವಿಚಾರವನ್ನು ತಿಳಿದು ಈ ಪದ್ದತಿಯನ್ನು ತಪ್ಪದೆ ಪಾಲಿಸಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...