ಎಷ್ಟೋ ಜನರು ಪ್ರೀತಿಸಿ ವಿವಾಹವಾಗುತ್ತಾರೆ. ಹಾಗೆಯೇ ದೊಡ್ಡವರಿಂದ ಮಾತುಕತೆಯಾಗಿ ವಿವಾಹ ಕೂಡ ಆಗಬಹುದು. ಆದರೆ ವಿವಾಹ ಆಗಿ ಎಷ್ಟು ವರ್ಷಗಳು ಕಳೆದರೂ ಮಕ್ಕಳಾಗುವುದಿಲ್ಲ. ಇದಕ್ಕೆ ಕಾರಣ ಸ್ಪೆರ್ಮ್ ಕೌಂಟ್ ಕೊರತೆ ಆಗಿದೆ. ಸ್ಪೆರ್ಮ್ ಕೌಂಟ್ ಗಳನ್ನು ವೃದ್ಧಿಸಿಕೊಳ್ಳಲು ಹಲವಾರು ಮನೆಮದ್ದುಗಳು ಇವೆ. ಆದ್ದರಿಂದ ನಾವು ಇಲ್ಲಿ ಇದರ ಮನೆಮದ್ದಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮನೆಯಲ್ಲಿ ಎಷ್ಟೋ ವಸ್ತುಗಳು ಮನೆಮದ್ದಿಗೆ ಬರುತ್ತವೆ. ಮೊದಲು ಈರುಳ್ಳಿಯನ್ನು ತೆಗೆದುಕೊಂಡು ಚಿಕ್ಕದಾಗಿ ತುಂಡು ಮಾಡಿಕೊಳ್ಳಬೇಕು. ಅದಕ್ಕೆ 20ಗ್ರಾಮ್ ಹಸುವಿನ ತುಪ್ಪವನ್ನು ಹಾಕಿ ತುಪ್ಪದಲ್ಲಿ ಈ ಈರುಳ್ಳಿಯನ್ನು ಚೆನ್ನಾಗಿ ಹೊಂಬಣ್ಣ ಬರುವವರೆಗೆ ಹುರಿಯಬೇಕು. ಅದಕ್ಕೆ 20ಗ್ರಾಮ್ ಕಲ್ಲು ಸಕ್ಕರೆ ಹಾಕಿ ತಿನ್ನಬೇಕು. ಇದನ್ನು ಬೆಳಿಗ್ಗೆ ಮತ್ತು ಸಂಜೆ ದಿನನಿತ್ಯ ತಿನ್ನಬೇಕು. ಇದನ್ನು 45 ರಿಂದ 65 ದಿನಗಳವರೆಗೆ ಅನುಸರಿಸಲೇಬೇಕು. ಇದರಿಂದ ಒಳ್ಳೆಯ ಪ್ರಯೋಜನ ಉಂಟಾಗುತ್ತದೆ ಎಂದು ಹೇಳಬಹುದು.

ಹಾಗೆಯೇ ಇನ್ನೊಂದು ಮನೆಮದ್ದು ಎಂದರೆ ಸುಮಾರು 20ಎಂಎಲ್ ಹಾಲನ್ನು ತೆಗೆದುಕೊಳ್ಳಬೇಕು. ಅದಕ್ಕೆ ಅರ್ಧ ಕಿಲೋಗ್ರಾಮ್ ಉದ್ದಿನಬೇಳೆ ಬೇಕಾಗುತ್ತದೆ. ಮೊದಲು ಒಂದು ಚಮಚ ತುಪ್ಪ ಹಾಕಿ ಅದಕ್ಕೆ ಅರ್ಧ ಕಿಲೋಗ್ರಾಮ್ ಉದ್ದಿನಬೇಳೆ ಹಾಕಿ ಚೆನ್ನಾಗಿ ಹುರಿದು ಅದನ್ನು ಪುಡಿ ಮಾಡಿಕೊಳ್ಳಬೇಕು. ಹಾಗೆಯೇ ಕಲ್ಲುಸಕ್ಕರೆಯನ್ನು ಪುಡಿ ಮಾಡಬೇಕು. 200ಎಂಎಲ್ ಹಾಲಿನ ಲೋಟಕ್ಕೆ 3ಚಮಚ ಉದ್ದಿನಬೇಳೆ ಪುಡಿ ಮತ್ತು ಒಂದು ಚಮಚ ಸಕ್ಕರೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಬೇಕು.

ಇದನ್ನು ರಾತ್ರಿ ಊಟ ಮಾಡಿದ ಒಂದು ಗಂಟೆಯ ನಂತರ ಸೇವಿಸಬೇಕು. ಹಾಗೆಯೇ ಇದನ್ನು ಸಹ 45 ರಿಂದ 60 ದಿನಗಳವರೆಗೆ ದಿನನಿತ್ಯ ಸೇವನೆ ಮಾಡಬೇಕು. ಆದರೆ ಒಂದು ವಿಶೇಷ ಸೂಚನೆ ಇದರಲ್ಲಿ ಇದೆ. ಅದೇನೆಂದರೆ ಔಷಧಿ ಸೇವನೆ ಮಾಡುವಷ್ಟು ದಿನ ಗಂಡ ಮತ್ತು ಹೆಂಡತಿ ಇಬ್ಬರು ಬ್ರಹ್ಮಚರ್ಯವನ್ನು ಪಾಲಿಸಬೇಕು. ಆಗ ಇದು ಸರಿಯಾಗಿ ಪರಿಣಾಮ ಬೀರುತ್ತದೆ. ಹಾಗೆಯೇ ಹೆಚ್ಚಾಗಿ ಬಾಳೆಹಣ್ಣು, ಬೇಯಿಸಿದ ಮೊಟ್ಟೆ, ಕಾಫಿ ಚಾಕಲೇಟ್ ಗಳು ಮತ್ತು ಪಾಲಕ್ ಸೊಪ್ಪು ಇವುಗಳನ್ನು ಹೆಚ್ಚಾಗಿ ತಿನ್ನಬೇಕು. ಈ ಮನೆ ಮದ್ದುಗಳನ್ನು ಸರಿಯಾಗಿ ಮಾಡುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ.

………….
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •