ಹಾಸ್ಟೆಲ್ ಮತ್ತು ಪಿಜಿಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿನಿಯರು ಮತ್ತು ಕೆಲಸವನ್ನು ಮಾಡುವ ಹುಡುಗಿಯರು ಇತ್ತೀಚಿನ ದಿನಗಳಲ್ಲಿ ಇರುವುದು ಹೆಚ್ಚಾಗಿದೆ. ಉದ್ಯೋಗವನ್ನು ಅರಸಿ ಒಂದು ಊರಿನಿಂದ ಮತ್ತೊಂದು ಊರಿಗೆ ಪ್ರಯಾಣವನ್ನು ಮಾಡಿ ಪಿಜಿ ಮತ್ತು ಹಾಸ್ಟೆಲ್ ಸಹಾಯದಿಂದ ಆಶ್ರಯ ಪಡೆದು ಜೀವನವನ್ನು ಸಾಗಿಸುತ್ತಿದ್ದಾರೆ ಹುಡುಗಿಯರು.
ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ ಹುಡುಗಿಯರಿಗೆ ಸಪರೇಟ್ ಹಾಸ್ಟೆಲ್ ಮತ್ತು ಹುಡುಗರಿಗೇ ಬೇರೆಯ ಹಾಸ್ಟೆಲ್ ವ್ಯವಸ್ಥೆಗಳು ಎಲ್ಲಾ ನಗರಗಳಲ್ಲಿ ಮತ್ತು ಊರುಗಳಲ್ಲಿಯೂ ಇದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದು ಎಂಬ ಕಾರಣಕ್ಕೆ ಹುಡುಗ ಮತ್ತು ಹುಡುಗಿಯರು ಇಬ್ಬರಿಗೂ ಸಹ ಭಿನ್ನ ವಿಭಿನ್ನ ಹಾಸ್ಟೆಲ್ ಗಳ ಸೌಲಭ್ಯವನ್ನು ಈ ಹಿಂದಿನಿಂದಲೂ ಸಹ ಮಾಡಲಾಗಿದೆ.
ಹುಡುಗಿಯರು ಹಾಸ್ಟೆಲ್ ಮತ್ತು ಪಿಜಿ ಸೇಫ್ ಎಂಬ ಕಾರಣಕ್ಕೆ ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಪಡೆದುಕೊಂಡಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಹಾಸ್ಟೆಲ್ ಮತ್ತು ಪಿಜಿಗಳು ಅಷ್ಟೇನು ಸೇಫ್ ಅಲ್ಲ ಎಂಬಂತಾಗಿದೆ. ಹೌದು ಹಾಸ್ಟೆಲ್ ಮತ್ತು ಪಿಜಿಗಳ ಸಹ ಹುಡುಗಿಯರಿಗೆ ಅಷ್ಟೇನು ಸೆಕ್ಯೂರಿಟಿ ಇರುವ ಸ್ಥಳ ಅಲ್ಲ ಎಂಬುದು ಇತ್ತೀಚೆಗೆ ನಡೆಯುತ್ತಿರುವ ಕೆಲ ಅಹಿತಕರ ಘಟನೆಗಳಿಂದ ಸಾಬೀತಾದಂತೆ ಕಾಣುತ್ತಿದೆ.
ಬೆಂಗಳೂರಿನ ಹಲವಾರು ಪಿಜಿ ಮತ್ತು ಹಾಸ್ಟೆಲ್ಗಳಲ್ಲಿ ಈ ಹಿಂದೆ ಸಾಕಷ್ಟು ಬಾರಿ ಮಧ್ಯರಾತ್ರಿ ಕಿಡಿಗೇಡಿಗಳು ನುಗ್ಗಿದ್ದ ವರದಿಯಾಗಿದೆ. ಇನ್ನು ಇತ್ತೀಚೆಗಷ್ಟೇ ಹಾಸನದ ಬಾಲಕಿಯರ ಮೆಟ್ರಿಕ್ ನಂತರ ವಸತಿ ನಿಲಯದಲ್ಲಿ ಯುವಕನೋರ್ವ ಮಧ್ಯರಾತ್ರಿ ಸುಮಾರು 2.43 ಗಂಟೆಗೆ ಹಾಸ್ಟೆಲ್ ಒಳಗಡೆ ಬಂದು ಹೋಗಿದ್ದಾನೆ. ಈ ಕಿಡಿಗೇಡಿ ರಾತ್ರಿ ಸಮಯದಲ್ಲಿ ಬಂದಿದ್ದನ್ನು ಕಂಡ ಹುಡುಗಿಯರು ಕಿರುಚಿದ್ದಾರೆ. ತಕ್ಷಣವೇ ಆತ ಪಕ್ಕದಲ್ಲಿಯೇ ಇದ್ದ ಟವರ್ ಮುಖಾಂತರ ಇಳಿದು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಇನ್ನು ಹುಡುಗಿಯರು ಈ ರೀತಿ ಮಧ್ಯರಾತ್ರಿ ಕಿಡಿಗೇಡಿ ಎಂಬ ಬಂದಿದ್ದ ಎಂದು ವರದಿ ಮಾಡಿದ ನಂತರ ಬೆಳಗ್ಗೆ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ವ್ಯಕ್ತಿಯೋರ್ವ ಹಾಸ್ಟೆಲ್ಗೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ತದನಂತರ ಟವರ್ ಮೂಲಕ ಇಳಿದು ಹೋಗಿರುವುದು ಸೆರೆಯಾಗಿದೆ. ಇನ್ನು ಅಷ್ಟು ರಾತ್ರಿಯಲ್ಲಿ ಆ ವ್ಯಕ್ತಿ ಲೇಡಿಸ್ ಹಾಸ್ಟೆಲ್ ಒಳಗಡೆ ಯಾಕೆ ಬಂದ ಎಂಬುದು ಯಾರಿಗೂ ಸಹ ತಿಳಿದಿಲ್ಲ. ಅಲ್ಲದೆ ಕೆಲ ಹಾಸ್ಟೆಲ್ ಒಳಗೆ ನುಗ್ಗಿ ಹುಡುಗಿಯರ ಜೊತೆ ಅನುಚಿತವಾಗಿ ವರ್ತಿಸುವ ವರದಿಗಳು ಸಹ ಇತ್ತೀಚೆಗೆ ಹೆಚ್ಚಾಗಿದೆ.
ಇನ್ನು ಹಾಸನದ ಈ ಹಾಸ್ಟೆಲ್ ನಲ್ಲಿ ನಡೆದ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು ಆದಷ್ಟು ಬೇಗ ಆ ವ್ಯಕ್ತಿಯನ್ನು ಸೆರೆ ಹಿಡಿಯುವ ಭರವಸೆ ನೀಡಿದ್ದಾರೆ. ಹಾಸ್ಟೆಲ್ ಎಂದ ಮೇಲೆ ರಾತ್ರಿ ಪೂರ್ತಿ ಕಾವಲು ಇರಬೇಕು , ಕಾವಲು ಇದ್ದರೂ ಸಹ ಈ ರೀತಿ ಹಾಸ್ಟೆಲ್ ಒಳಗಡೆ ವ್ಯಕ್ತಿಯೋರ್ವ ಬಂದು ಹೋಗುತ್ತಾನೆ ಎಂದರೆ ಅದು ಯಾವ ರೀತಿಯ ಸೆಕ್ಯುರಿಟಿ ಎಂದು ಇದೀಗ ವಿದ್ಯಾರ್ಥಿನಿಯರು ಆತಂಕ ವ್ಯಕ್ತಪಡಿಸಿದ್ದಾರೆ.